6 ಕೋಟಿ ರೂ. ವೆಚ್ಚದಲ್ಲಿ ಶಾಲೆಗಳ ಅಭಿವೃದ್ಧಿ
ತಡಗವಾಡಿ, ದೊಡ್ಡಪಾಳ್ಯ ಶಾಲೆಗಳಿಗೆ ಬೇಕಿದೆಕಾಯಕಲ್ಪ
Team Udayavani, Dec 9, 2020, 5:21 PM IST
ದೊಡ್ಡಪಾಳ್ಯ ಶಾಲೆಯನ್ನು ತೆರವು ಮಾಡಿರುವ ದೃಶ್ಯ
ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ದೊಡ್ಡಪಾಳ್ಯ, ಅರೆಕೆರೆ ಹಾಗೂ ತಡಗವಾಡಿ ಗ್ರಾಮದ ಸರ್ಕಾರಿ ಶಾಲೆಗಳನ್ನು ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ದತ್ತು ಪಡೆದಿದ್ದು, ಸುಮಾರು 6 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮಾದರಿ ಶಾಲೆ ಮಾಡಲು ಪಣತೊಟ್ಟಿದ್ದಾರೆ.
2020-21ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಅರೆಕೆರೆ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಗೆ3.70ಕೋಟಿ ರೂ., ತಡಗವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 1.45 ಕೋಟಿ ರೂ . ಹಾಗೂ ದೊಡ್ಡಪಾಳ್ಯದಸರ್ಕಾರಿ ಹಿರಿಯಪ್ರಾಥಮಿಕ ಶಾಲೆಯನ್ನು2.50 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ.
886 ವಿದ್ಯಾರ್ಥಿಗಳು: ಮೂರು ಶಾಲೆಗಳಲ್ಲಿ ಸುಮಾರು 886 ವಿದ್ಯಾರ್ಥಿಗಳು ವ್ಯಾಸಂಗಮಾಡುತ್ತಿದ್ದಾರೆ. ಅರಕೆರೆ ಶಾಲೆಯಲ್ಲಿ 1ರಿಂದ 12ನೇ ತರಗತಿವರೆಗೆ 576, ತಡಗವಾಡಿ ಶಾಲೆಯಲ್ಲಿ 1ರಿಂದ7ನೇ ತರಗತಿವರೆಗೆ 127 ಹಾಗೂ ದೊಡ್ಡಪಾಳ್ಯ ಶಾಲೆಯಲ್ಲಿ1ರಿಂದ8ನೇ ತರಗತಿವರೆಗೆ186 ಮಕ್ಕಳು ದಾಖಲಾಗಿದ್ದಾರೆ.
ದೊಡ್ಡಪಾಳ್ಯ ಶಾಲೆಗೆಬೇಕಿದೆ ನೂತನ ಕಟ್ಟಡ: ಮೂರು ಶಾಲೆಗಳ ಪೈಕಿ ದೊಡ್ಡಪಾಳ್ಯದ ಶಾಲೆಯ ಕಟ್ಟಡ ಹಳೆಯದಾಗಿದ್ದರಿಂದ ಈಗಾಗಲೇ ನೆಲಸಮಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ. ಸುಮಾರು 10 ಕೊಠಡಿಗಳ ಅಗತ್ಯವಿದೆ. ಶಾಲೆಯನ್ನು ಪ್ರೌಢಶಾಲೆಗೆ ಸ್ಥಳಾಂತರಗೊಂಡಿದೆ. ತಡಗವಾಡಿ ಶಾಲೆಯ ಎಲ್ಲ ಕೊಠಡಿಗಳು ಶಿಥಿಲಗೊಂಡಿದ್ದು, ದುರಸ್ತಿ ಯಾಗಬೇಕಿದೆ.ಹೆಂಚಿನಕಟ್ಟಡವಾಗಿರುವುದರಿಂದ ಮಳೆ ಬಂದರೆ ನೀರು ಸೋರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಅರೆಕೆರೆ ಗ್ರಾಮದ ಶಾಲೆಯಕಟ್ಟಡ ಉತ್ತಮವಾಗಿದೆ.
ಮೂರು ಶಾಲೆಗಳಿಗಿಲ್ಲ ಕಾಂಪೌಂಡ್: ಮೂರು ಶಾಲೆಗಳಿಗೆ ಕಾಂಪೌಂಡ್‌ಗಳಿಲ್ಲ.ಕಾಂಪೌಂಡ್ ನಿರ್ಮಾಣಕ್ಕಾಗಿ ಅನುದಾನದಅಗತ್ಯವಿದೆ. ಕುಡಿಯುವ ನೀರಿನ ಸೌಲಭ್ಯವಿದ್ದು, ದೊಡ್ಡಪಾಳ್ಯ ಶಾಲೆಗೆ ಯಾವುದೇ ಶೌಚಾಲಯವಿಲ್ಲ.ಹೈಟೆಕ್ ಶೌಚಾಲಯ ಅಗತ್ಯವಿದೆ. ದೊಡ್ಡಪಾಳ್ಯ ಹಾಗೂತಡಗವಾಡಿ ಶಾಲೆಗೆ ಸಂಪೂರ್ಣವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾಗಿದೆ.
ಶಿಕ್ಷಕರ ಕೊರತೆ: ತಡಗವಾಡಿ ಗ್ರಾಮದ ಶಾಲೆಗೆ ಶಿಕ್ಷಕರಕೊರತೆ ಇದೆ. 5 ಮಂದಿ ಇದ್ದರು. ಅದರಲ್ಲಿ ಇಬ್ಬರುಶಿಕ್ಷಕರು ವರ್ಗಾವಣೆಯಾಗಿದ್ದಾರೆ. ಕೊರೊನಾ ಸಂದರ್ಭದಲ್ಲಿ ಶಾಲೆಗಳು ತೆರೆಯದಹಿ ನ್ನೆಲೆಯಲ್ಲಿ ತೊಂದರೆಯಾಗಿಲ್ಲ.ಇಲ್ಲದಿದ್ದರೆತೊಂ ದರೆಯಾಗುತ್ತಿತ್ತು. ಅರೆಕೆರೆ ಹಾಗೂ ದೊಡ್ಡಪಾಳ್ಯ ಶಾಲೆಗಳಿಗೆ ಶಿಕ್ಷಕರಕೊರತೆ ಇಲ್ಲ. ಮೂರು ಶಾಲೆಗಳಲ್ಲಿ ಗುಣಮಟ್ಟದಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಅದರಂತೆ ಅರೆಕೆರೆಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮವಾಗಿದೆ.
ಕ್ರೀಡಾಂಗಣ ಅಭಿವೃದ್ಧಿ ಅಗತ್ಯ: ದೊಡ್ಡಪಾಳ್ಯ ಹಾಗೂ ತಡಗವಾಡಿಶಾಲೆಗಳಿಗೆ ಕ್ರೀಡಾಂಗಣದ ಕೊರತೆಇದೆ. ಇದರಿಂದ ಮಕ್ಕಳ ಕ್ರೀಡಾಚಟುವಟಿಕೆಗಳಿಗೆ ತೊಂದರೆಯಾಗಿದೆ. ಕ್ರೀಡಾಂಗಣ ಇದ್ದರೂ ಅಭಿವೃದ್ಧಿಯಾಗಿಲ್ಲ. ತಡಗವಾಡಿ ಶಾಲೆಗೆದೈಹಿಕ ಶಿಕ್ಷಕರಿಲ್ಲ. ದೊಡ್ಡಪಾಳ್ಯ ಶಾಲೆಗೆದೈಹಿಕ ಶಿಕ್ಷಕರಿದ್ದರೂ ಕ್ರೀಡಾಂಗಣವಿಲ್ಲ. ಅರಕೆರೆಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗ್ರಂಥಾಲಯವಿದ್ದರೆ, ತಡಗವಾಡಿ ಹಾಗೂ ದೊಡ್ಡಪಾಳ್ಯ ಶಾಲೆಗಳಿಗೆಯಾವುದೇ ಗ್ರಂಥಾಲಯವಿಲ್ಲ. ಈ ಎರಡು ಶಾಲೆಗಳಿಗೆ ಗ್ರಂಥಾಲಯ ಅಗತ್ಯವಾಗಿದೆ.
ಎಸ್‌ಡಿಎಂಸಿ ಸಕ್ರಿಯ: ಮೂರು ಶಾಲೆಗಳಲ್ಲಿ ಎಸ್ ಡಿಎಂಸಿ ಇದ್ದು, ಸಕ್ರಿಯವಾಗಿವೆ. ಶಾಲೆಯ ಮಕ್ಕಳ ಶಾಲೆಯ ಪ್ರತಿಯೊಂದು ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಸಹಕಾರ ನೀಡುತ್ತಿದ್ದಾರೆ.ಮೂರು ಶಾಲೆಗಳಲ್ಲಿ ಬಿಸಿಯೂಟದ ವ್ಯವಸ್ಥೆಉತ್ತಮವಾಗಿದೆ. ಆದರೆ, ಮಕ್ಕಳ ಊಟ ತಯಾರಿಕೆಗೆ ಅಡುಗೆಗೆ ಪ್ರತ್ಯೇಕ ಕೊಠಡಿಗಳ ಅಗತ್ಯವಿದೆ. ಪ್ರತಿ ದಿನ ಮಕ್ಕಳಿಗೆ ಗುಣಮಟ್ಟದ ಊಟ ನೀಡಲಾಗುತ್ತಿದೆ.
ಮಾದರಿ ಶಾಲೆಯಾಗಿ ಅಭಿವೃದ್ಧಿಗೆ ಕ್ರಮ : ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಮೂರುಶಾಲೆಗಳನ್ನು ಅಭಿವೃದ್ಧಿಪಡಿಸಲು ಅನುದಾನದ ಅಂದಾಜು ಮೊತ್ತದಪಟ್ಟಿ ತಯಾರಿಸಿ, ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರ ಶೀಘ್ರ ಅನುದಾನ ಮಂಜೂರು ಮಾಡಿದರೆ ಶಾಲೆಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ಮೂರು ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಮಾದರಿ ಶಾಲೆ ಮಾಡಲು ಪಣತೊಟ್ಟಿದ್ದೇವೆ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದ್ದಾರೆ.
–ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.