ಪ್ಲಾಸ್ಮಾ ದಾನ ಮಾಡಿ; ಸೋಂಕಿತರ ಜೀವ ಉಳಿಸಿ
Team Udayavani, Apr 29, 2021, 2:36 PM IST
ಮಂಡ್ಯ: ಕೋವಿಡ್ ಸೋಂಕಿನ 2ನೇ ಅಲೆ ಜಿಲ್ಲೆಯಲ್ಲಿ ಹೆಚ್ಚುತ್ತಿದ್ದು, ಸೋಂಕಿನಿಂದ ಮೃತರ ಸಂಖ್ಯೆಯೂ ಹೆಚ್ಚುತ್ತಿದೆ. ತೀರಾ ಅಗತ್ಯ ಎನಿಸುವ ಸೋಂಕಿತರಿಗೆ ಪ್ಲಾಸ್ಮಾ ಅಗತ್ಯವಾಗಿದೆ. ಐಸಿಯು, ವೆಂಟಿಲೇಟರ್‌ನಲ್ಲಿರುವ ಸೋಂಕಿತರಿಗೆ ಪ್ಲಾಸ್ಮಾ ಅವಶ್ಯಕ.
ಕಳೆದ ವರ್ಷ ಕೊರೊನಾದಿಂದ ಮೃತಪಡುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪ್ಲಾಸ್ಮಾ ಸಂಗ್ರಹಿಸಲು ಕ್ರಮ ಕೈಗೊಂಡಿತ್ತು. ಆದರೆ ಈ ಬಾರಿ ಹೆಚ್ಚಿನ ಸಾವಿನ ಪ್ರಕರಣ ದಾಖಲಾಗುತ್ತಿವೆ. ಜಿಲ್ಲೆಯಲ್ಲಿ ಸುಮಾರು 14 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಸೋಂಕಿತ ಕೆಲವರು ವೆಂಟಿಲೇಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ಪ್ಲಾಸ್ಮಾ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮೂಲಕ ಸೋಂಕನ್ನು ಗುಣಪಡಿಸಬಹುದಾಗಿದೆ.
ಬೇಡಿಕೆ: ಮಿಮ್ಸ್ ರಕ್ತನಿಧಿ ಕೇಂದ್ರಕ್ಕೆ ಪ್ಲಾಸ್ಮಾ ಗಾಗಿ ಬೇಡಿಕೆ ಹೆಚ್ಚಿದೆ. ಪ್ರತಿದಿನ ಸುಮಾರು 20 ಫೋನ್ ಬರುತ್ತಿವೆ. ನಮ್ಮ ಜಿಲ್ಲೆ ಅಲ್ಲದೆ, ಬೇರೆ ಜಿಲ್ಲೆಗ ಳಿಂದಲೂ ಬೇಡಿಕೆ ಹೆಚ್ಚಾಗಿದೆ. ಆದರೆ, ಪ್ಲಾಸ್ಮಾ ಸಂಗ್ರಹವಿಲ್ಲದ ಕಾರಣ ಒದಗಿಸಲು ಸಾಧ್ಯ ವಾಗುತ್ತಿಲ್ಲ.
220 ಮಂದಿಗೆ ಪ್ಲಾಸ್ಮಾ: ಇದುವರೆಗೆ ಮಂಡ್ಯ ಮಿಮ್ಸ್‌ನ ರಕ್ತನಿಧಿ ಕೇಂದ್ರದಿಂದ 220 ಮಂದಿಗೆ ಪ್ಲಾಸ್ಮಾ ನೀಡಲಾಗಿದೆ. ಇದುವರೆಗೂ 110 ಮಂದಿ ಪ್ಲಾಸ್ಮಾ ದಾನ ಮಾಡಿದ್ದಾರೆ. ಒಂದು ಪ್ಲಾಸ್ಮಾದಿಂದ ಇಬ್ಬರಿಗೆ ನೀಡಬಹುದಾಗಿದೆ.
ಪ್ಲಾಸ್ಮಾ ಸಂಗ್ರಹಿಸಲು ಸೌಲಭ್ಯ: ಮಿಮ್ಸ್‌ನಲ್ಲಿ ಪ್ಲಾಸ್ಮಾಸಂಗ್ರಹಕ್ಕೆ ಸಕಲ ಸೌಲಭ್ಯವಿದೆ. ಅಕ್ಕಪಕ್ಕದ ಜಿಲ್ಲೆಗಳಲ್ಲಿ ಈ ಸೌಲಭ್ಯವಿಲ್ಲ. ಕೊರೊನಾದಿಂದ ಗುಣಮುಖರಾದವರು 15 ದಿನಗಳ ನಂತರ ಬಂದು ಪ್ಲಾಸ್ಮಾ ನೀಡಿದರೆ, ಜೀವ ಉಳಿಸಬಹುದಾಗಿದೆ.
ಪ್ಲಾಸ್ಮಾ ದಾನಕ್ಕೆ ಹಿಂದೇಟು: 2ನೇ ಅಲೆ ತೀವ್ರವಾಗುತ್ತಿರುವುದರಿಂದ ಪ್ಲಾಸ್ಮಾ ಸಂಗ್ರಹಕ್ಕೆ ಹಿನ್ನೆಡೆಯಾಗಿದೆ. ಕೊರೊನಾದಿಂದ ಚೇತರಿಸಿಕೊಂಡಿರುವ ಯಾರೂ ಪ್ಲಾಸ್ಮಾ ದಾನಕ್ಕೆ ಮುಂದಾಗುತ್ತಿಲ್ಲ. ಚಿಕಿತ್ಸೆ ಪಡೆದು ಗುಣಮುಖರಾದವರಿಗೆ 15 ದಿನಗಳನಂತರ ಬಂದು ಪ್ಲಾಸ್ಮಾ ದಾನ ಮಾಡುವಂತೆ ಮನವಿ ಮಾಡಿದರೂ ಮುಂದೆ ಬರುತ್ತಿಲ್ಲ.
15 ದಿನಗಳ ನಂತರ ರೋಗ ನಿರೋಧಕ ಶಕ್ತಿ
ಕೊರೊನಾ ಸೋಂಕಿನಿಂದ ಐಸಿಯು,ವೆಂಟಿಲೇಟರ್‌ಗಳಲ್ಲಿ ಚಿಕಿತ್ಸೆ ಪಡೆಯುವವರಿಗೆ ಪ್ಲಾಸ್ಮಾ ನೀಡಿ ಜೀವ ಉಳಿಸಲು ಸಾಧ್ಯವಿದೆ. ಸಂಪೂರ್ಣ ವಾಗಿ ಆಗದಿದ್ದರೂ ಗುಣಪಡಿಸಲು ಪ್ರಯತ್ನಿಸಬಹುದು. ಕೊರೊನಾದಿಂದ ಗುಣಮುಖರಾದವರು 15 ದಿನಗಳ ನಂತರ ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲಿದೆ. ಅದರ ಆಧಾರದ ಮೇಲೆ ಅವರು ಪ್ಲಾಸ್ಮಾ ದಾನ ಮಾಡಬಹುದು.
ಡಾ.ಮುರಳೀಧರ್,ರಕ್ತನಿಧಿ ಕೇಂದ್ರ, ಮಿಮ್ಸ್, ಮಂಡ್ಯ
ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.