ಬಿಲ್ ಪಾವತಿಸದ ಕಚೇರಿಗಳಿಗೆ ವಿದ್ಯುತ್ ಕಟ್
Team Udayavani, Jan 3, 2020, 12:29 PM IST
ನಾಗಮಂಗಲ: ಒಂದು ವರ್ಷದಿಂದ ಬಿಲ್ ಪಾವತಿಸಲಿಲ್ಲವೆಂದು ಮಿನಿ ವಿಧಾನಸೌಧದ ಕಟ್ಟಡದಲ್ಲಿರುವ ಕಂದಾಯ, ಆಹಾರ ಇಲಾಖೆ ಕಚೇರಿಗಳಿಗೆ ಸ್ಥಳೀಯ ಸೆಸ್ಕ್ ವಿದ್ಯುತ್ ಕಡಿತಗೊಂಡು ನೌಕರರ ಜೊತೆಗೆ ಸಾರ್ವಜನಿಕರು ಪರದಾಡುವಂತಾಯಿತು.
ಮಿನಿ ವಿಧಾನಸೌದದ ಮೂರನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ: 207, 208, 209 ಮತ್ತು ಆಹಾರ ಇಲಾಖೆ ಕಚೇರಿಗಳಲ್ಲಿ ವಿದ್ಯುತ್ ಕಡಿತಗೊಂಡಿದ್ದು, ಗಣಕ ಯಂತ್ರಗಳ ಮುಂದೆ ಕೆಲ ನೌಕರರು ಸುಮ್ಮನೆ ಕುಳಿತಿದ್ದರೆ, ಇನ್ನೂ ಕೆಲವರು ಕಾರಿಡಾರಿನಲ್ಲಿ ಓಡಾಡು ತ್ತಿದ್ದರು. ಆಹಾರ ಇಲಾಖೆ ನೌಕರರು, ಬರುವ ಸಾರ್ವಜನಿಕರಿಗೆ ಉತ್ತರ ನೀಡಬೇಕೆಂದು ಲ್ಯಾಪ್‌ಟಾಪ್ ಹಿಡಿದು ಖಾಸಗಿ ಸೈಬರ್ ಸೆಂಟರ್‌ಗಳಿಗೆ ಮೊರೆ ಹೋಗಿದ್ದರು.
ಘಟನೆ ಹಿನ್ನೆಲೆ: ಈ ಮೊದಲು ಕಂದಾಯ ಇಲಾಖೆ ಅಧೀನದಲ್ಲಿರುವ ಆಹಾರ ಇಲಾಖೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು 2017ರಲ್ಲಿ ತನ್ನ ಕಾರ್ಯ ಬೇರೊಂದು ಕೋಣೆಗೆ ವರ್ಗಾಯಿಸಿಕೊಂಡಿದ್ದು ಮೇಲಿನ ಕೋಣೆಗಳಲ್ಲಿ ಆರ್ ಆರ್‌ಟಿ ಮತ್ತು ಸರ್ವೆ ಇಲಾಖೆ ಕಾರ್ಯ ನಿರ್ವಹಿಸುತ್ತಿರುವುದರಿಂದ ಅಂದಿನಿಂದ ಇಂದಿನವರೆಗೆ ಬರೋಬ್ಬರಿ 61 ಸಾವಿರ ರೂ.ಗಳಿಗೂ ಹೆಚ್ಚಿನ ಹಣ ಬಾಕಿ ಉಳಿಸಿಕೊಂಡಿದೆ. ವಿಶೇಷವೆಂದರೇ ಆ ಬಿಲ್ ಬರುತ್ತಿರುವುದು ಕಂದಾಯ ಇಲಾಖೆ ಹೆಸರಿನಲ್ಲಿ,ಅವರು ಕಟ್ಟಲಿ ಎಂದು ಇವರು, ಇವರು ಕಟ್ಟಲಿ ಎಂದು ಯಾವ ಇಲಾಖೆ ಯವರೂ ಬಿಲ್ ಕಟ್ಟಿಲ್ಲವೆನ್ನಲಾಗಿದೆ. ವಿದ್ಯುತ್ ಕಡಿತಗೊಳಿಸಿರುವುದು ಇದೇ ಮೊದಲೇನಲ್ಲ. ಈಗಾಗಲೇ ಎರಡು ಬಾರಿ ಈ ಮೂರು ಕೋಣೆಗಳ ವಿದ್ಯುತ್ ಕಡಿತಗೊಳಿಸಿದ್ದು, ವಿಷಯ ಶಾಸಕ ಸುರೇಶ್ ಗೌಡರ ಬಳಿಗೂ ಹೋಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಸೆಸ್ಕ್ ಅಧಿಕಾರಿಗಳಿಗೆ ಹೇಳಿ ಕಡಿತಗೊಳಿಸದಂತೇ ತಡೆ ಹಿಡಿದಿದ್ದರು. ಆದರೇ ಈಗ ಮತ್ತೆ ಪುನರಾವರ್ತನೆಯಾಗಿದೆ.
ಕಂದಾಯ ಅಧಿಕಾರಿಗಳನ್ನು ಕೇಳಿದರೆ ಶ್ರೀರಂಗ ಪಟ್ಟಣದಲ್ಲೂ ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇಲ್ಲಿನ ಸಮಸ್ಯೆಗಳ ಬಗ್ಗೆ ಗಮನಹರಿಸಲಾಗುತ್ತಿಲ್ಲ. ವಿದ್ಯುತ್ ಕಡಿತದಿಂದ ಮೂರು ಇಲಾಖೆ ಗಣಕ ಯಂತ್ರಗಳು ಕೆಲಸವಿಲ್ಲದೆ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಪರದಾಡುವಂತಾಯಿತು. ಪಡಿತರ ಚೀಟಿ ಪಡೆಯಲೆಂದು ಮತ್ತು ಅದರ ಮಾಹಿತಿ ಕೇಳಲು ಬರುವವರಿಗೆ ಉತ್ತರ ನೀಡಲಾಗದೆ ಆಹಾರ ನಿರೀಕ್ಷಕರು ಖಾಸಗಿ ಸೈಬರ್ ಕೇಂದ್ರಗಳತ್ತ ಮುಖ ಮಾಡಿ ನಾಮಕಾವಸ್ಥೆಗೆ ಬಂದ ಅರ್ಜಿಗಳನ್ನು ಪಡೆದುಕೊಳ್ಳಲು ಒಬ್ಬರನ್ನು ಕೂರಿಸಿದ್ದರು. ಆರ್‌ಆರ್‌ಟಿ ಮತ್ತು ಸರ್ವೆ ಇಲಾಖೆ ನೌಕರರು ಬಂದವರಿಗೆ ಉತ್ತರ ನೀಡಲಾಗದೆ ಪರದಾಡುತ್ತಿದ್ದುದು ಕಂಡು ಬಂದಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.