ಕಾಡಾನೆಗಳ ದಾಳಿಗೆ ಲಕ್ಷಾಂತರ ರೂ. ಬೆಳೆ ನಾಶ
Team Udayavani, Jan 26, 2019, 9:32 AM IST
ಮಳವಳ್ಳಿ: ತಾಲೂಕಿನ ಬೆಳಕವಾಡಿ ಸಮೀಪದ ಹೊಸಹಳ್ಳಿ ಗ್ರಾಮದ ಹಲವು ರೈತರ ಜಮೀನುಗಳ ಮೇಲೆ ಗುರುವಾರ ರಾತ್ರಿ ಐದು ಕಾಡಾನೆ ದಾಳಿ ನಡೆಸಿ ಕಬ್ಬು, ಹಿಪ್ಪುನೇರಳೆ, ಸೌತೆ ಹಾಗೂ ಬಾಳೆ ಬೆಳೆಗಳನ್ನು ನಾಶಮಾಡಿವೆ.
ಗ್ರಾಮ ನಾಗೇಂದ್ರ 1.35 ಕುಂಟೆಯಲ್ಲಿದ್ದ ಕಬ್ಬು, ಮರಿಸ್ವಾಮಿ ಅವರಿಗೆ ಸೇರಿದ ಎರಡು ಎಕರೆ ಹಿಪ್ಪುನೇರಳೆ, ಮಹದೇವಪ್ಪಗೆ ಸೇರಿದ 1.5 ಎಕರೆಯಲ್ಲಿದ್ದ ಸೌತೆ, ಹಿಪ್ಪುನೇರಳೆ ಬೆಳೆ ಹಾಗೂ ನಟರಾಜುಗೆ ಸೇರಿದ 1.5 ಎಕರೆ ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ಬಾಳೆ ಗಿಡಗಳು ಆನೆಗಳ ದಾಳಿಯಿಂದ ಸಂಪೂರ್ಣ ನಾಶವಾಗಿವೆ.
ಅಲ್ಲದೆ ಪಂಪ್‌ಸೆಟ್ ಸ್ಟಾರ್ಟರ್ ಹಾಗೂ ಜಮೀನಿನಲ್ಲಿ ಅಳವಡಿಸಿದ್ದ ಪೈಪ್‌ಗ್ಳನ್ನು ತುಳಿದು ಒಡೆದು ಹಾಕಿವೆ. ರೈತರು ಬೆಳೆದ ಬೆಳೆಗಳನ್ನು ಸೇವಿಸಿದ ಬಳಿಕ ಐದು ಆನೆಗಳಲ್ಲಿ ಮೂರು ಆನೆ ಕಾಡಿನತ್ತ ತೆರಳಿದ್ದರೆ, ಎರಡು ಆನೆ ಗ್ರಾಮದ ಶಿವಕುಮಾರ ಸ್ವಾಮೀಜಿ ಕಾಲೇಜಿನ ಹಿಂಭಾಗದಲ್ಲಿದ್ದ ಕಬ್ಬಿ ನಗದ್ದೆಯಲ್ಲಿ ಸೇರಿಕೊಂಡಿದ್ದವು.
ಆನೆಗಳ ದಾಳಿಯ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆಮಾಡಿ ತಿಳಿಸಿದರೂ ಅ—ಕಾರಿಯೊಬ್ಬ ಸ್ಥಳಕ್ಕೆ ಬಂದು ಸಿಬ್ಬಂದಿಯ ಕೊರತೆಯಿದೆ. ಸಂಜೆಯ ನಂತರ ಬೇರೆಡೆಯಿಂದ ಸಿಬ್ಬಂದಿ ಕರೆತಂದು ಕಾಡಿನತ್ತ ಓಡಿಸಲು ಕಾರ್ಯಾಚರಣೆ ನಡೆಸಲಾಗುವುದು ಎಂದಾಗ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಬೆಳಕವಾಡಿ ಪೊಲೀಸರ ಸಹಕಾರ ಪಡೆದ ಗ್ರಾಮದ ಹತ್ತಾರು ಯುವಕರು ಪಟಾಕಿ ಸಿಡಿಸಿ ಸವನಗಹಳ್ಳಿ ಗುಡ್ಡದತ್ತ ಅಟ್ಟಿದ್ದಾರೆ. ಕಳೆದ ಎರಡು ತಿಂಗಳಿಂದ ನಿರಂತರವಾಗಿ ಸಮೀಪದ ಶಿಂಷಾ ಅರಣ್ಯ ಪ್ರದೇಶದಿಂದ ಆನೆಗಳು ನಾಡಿನತ್ತ ಬಂದು ರೈತರ ಬೆಳೆಗಳನ್ನು ನಾಶ ಮಾಡುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಸಮಸ್ಯೆ ಇದೇ ರೀತಿ ಮುಂದುವರಿದರೆ ಗ್ರಾಮಸ್ಥರೆಲ್ಲ ಒಗ್ಗೂಡಿ ತಾಲೂಕು ಕಚೇರಿ ಮತ್ತು ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ
Power Scarcity: ಕೊರತೆ ನೀಗಿಸಲು ದೀರ್ಘಾವಧಿ ವಿದ್ಯುತ್ ಖರೀದಿಗೆ ನಿರ್ಧಾರ: ಜಾರ್ಜ್
Fraud Case: ಐಶ್ವರ್ಯಗೌಡ ವಂಚನೆ; ಸಂತಸ್ತರಿಗೆ ನ್ಯಾಯದ ಭರವಸೆ ನೀಡಿದ ಎಚ್‌ಡಿಕೆ
Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.