ಎಲ್ಲಾ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಯಲಿ
Team Udayavani, Apr 7, 2021, 1:39 PM IST
ಸಾಂದರ್ಭಿಕ ಚಿತ್ರ
ಮಂಡ್ಯ: ಕೋವಿಡ್ ಸೋಂಕಿನ 2ನೇ ಅಲೆ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ 1 ರಿಂದ 9ನೇ ತರಗತಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಉತ್ತೀರ್ಣ ಮಾಡುವ ಬಗ್ಗೆ ವಿವಿಧಚರ್ಚೆಗಳು ನಡೆಯುತ್ತಿದ್ದು, ಅದರಂತೆ ಮಂಡ್ಯ ಜಿಲ್ಲೆಯಲ್ಲಿಯೂ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.
ಪರೀಕ್ಷೆ ಇಲ್ಲದೆ ಮಕ್ಕಳನ್ನು ಉತ್ತೀರ್ಣಮಾಡಿದರೆ ಓದುವ ಮಕ್ಕಳ ಮೇಲೆದುಷ್ಪರಿಣಾಮ ಬೀರಲಿದೆ. ಅಲ್ಲದೆ, ಓದದೇಇರುವ ಮಕ್ಕಳಿಗೆ ಇನ್ನೂ ಓದಿನ ಮೇಲೆನಿರ್ಲಕ್ಷ್ಯ ಹೆಚ್ಚಾಗಲಿದೆ. ಓದಿರುವ ಮಕ್ಕಳು ಇಷ್ಟು ದಿನ ಓದಿದ್ದು ವ್ಯರ್ಥ ಎಂಬ ಮನೋಭಾವಬರಲಿದೆ. ಇದರಿಂದ ಓದಿನ ಮೇಲಿನ ನಿರ್ಲಕ್ಷ್ಯಕಡಿಮೆಯಾಗಲಿದೆ. ಅಲ್ಲದೆ, ಕೆಲವು ಮಕ್ಕಳುಓದಿದ್ದರೂ ಪರೀಕ್ಷೆ ಇಲ್ಲದೆ, ಪಾಸ್ ಆದೆವು ಎಂಬಮನೋಭಾವ ಉಂಟಾದರೆ, ಕೆಲವು ಮಕ್ಕಳಲ್ಲಿಪರೀಕ್ಷೆ ಇಲ್ಲದೆ ಪಾಸ್ ಆದ ಬ್ಯಾಚ್ ಎಂಬ ಹಣೆಪಟ್ಟಿಗೆ ಒಳಗಾದೆವು ಎಂಬ ಬೇಸರ ಉಂಟಾಗಲಿದೆ ಎಂಬುದು ಪಾಲಕರು ಹಾಗೂಖಾಸಗಿ, ಸರ್ಕಾರಿ ಶಾಲೆಗಳ ಕೆಲವು ಶಿಕ್ಷಕರ ಅಭಿಪ್ರಾಯವಾಗಿದೆ.
2ನೇ ಅಲೆ ಹೆಚ್ಚಾಗಿರುವುದರಿಂದ ಈಗಾಗಲೇಕಿರು ಪರೀಕ್ಷೆ ನಡೆಸಲಾಗಿದ್ದು, ಅದಮೌಲ್ಯಮಾಪನ ಆಧಾರದ ಮೇಲೆ ಉತ್ತೀರ್ಣಮಾಡಬಹುದು. ಪರೀಕ್ಷೆಗಳಿಗಿಂತ ಮಕ್ಕಳ ಆರೋಗ್ಯಮುಖ್ಯ. ವಾರ್ಷಿಕ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಆಯಾ ತಿಂಗಳು ಹೊರಡಿಸಿರುವುದರಿಂದಅದರಂತೆ ಮಕ್ಕಳಿಗೆ ಪಾಠ ಪ್ರವಚನ ನಡೆಸಲಾಗಿದೆ.ಇದರ ನಡುವೆ ಕಿರು ಪರೀಕ್ಷೆ, ಸೆಮಿ ಪರೀಕ್ಷೆನಡೆಸಿರುವುದರಿಂದ ಅದರ ಆಧಾರದ ಮೇಲೆ ಉತ್ತೀರ್ಣ ಮಾಡಬಹುದಾಗಿದೆ.
ಅಲ್ಲದೆ, ದೇಶದಲ್ಲಿ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿಸಂಪೂರ್ಣವಾಗಿ ಎಲ್ಲಾ ಮಕ್ಕಳಿಗೂ ಶಿಕ್ಷಣನೀಡಲು ವಿಫಲವಾಗಿದೆ. ಎಷ್ಟೋ ಮಕ್ಕಳುದಾಖಲಾತಿ ಪಡೆದಿಲ್ಲ. ಶಾಲೆಗೂ ಬರುತ್ತಿಲ್ಲ.ಹೀಗಿರುವಾಗ ಸಂಪೂರ್ಣವಾಗಿ ಉತ್ತೀರ್ಣಮಾಡುವುದು ಉತ್ತಮ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.
ಫೈನಲ್ ಪರೀಕ್ಷೆ ಅಗತ್ಯವಿಲ್ಲ :
ಕೋವಿಡ್ ಹಿನ್ನೆಲೆ ಮಕ್ಕಳಿಗೆ ಜನವರಿಯಿಂದ ಏಪ್ರಿಲ್‌ವರೆಗೂವಾರ್ಷಿಕ ಶೈಕ್ಷಣಿಕ ಕ್ಯಾಲೆಂಡರ್‌ಅನ್ನು ಕನ್ನಡ, ಇಂಗ್ಲಿಷ್‌ನಲ್ಲಿ ಹೊರಡಿಸಲಾಗಿದ್ದು, ಅದರಂತೆಈಗಾಗಲೇ ಮಕ್ಕಳಿಗೆ ಕಲಿಕಾಂಶ,ಬೋಧನಾ ಚಟುವಟಿಕೆ,ಮೌಲ್ಯಮಾಪನದಲ್ಲಿಯೇಸೇರಿಸಲಾಗಿದೆ. ಕಿರುಪರೀಕ್ಷೆಗಳಲ್ಲಿಅವರು ಪಡೆದಿರುವ ಅಂಕಗಳಆಧಾರದ ಮೇಲೆಯೇ ನಿರ್ಧಾರಆಗುವುದರಿಂದ ಫೈನಲ್ ಪರೀಕ್ಷೆಅಗತ್ಯವಿಲ್ಲ. ಅಂತಿಮಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆಯುವಅನಿವಾರ್ಯತೆ ಇಲ್ಲ. ಹೀಗಾಗಿಸಂಪೂರ್ಣವಾಗಿ ಉತ್ತೀರ್ಣಮಾಡಬಹುದು ಎಂದು ಶಿಕ್ಷಣಪರಿವೀಕ್ಷಕರಾದ ಲೋಕೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ನಾವು ಎಲ್ಲ ಮಕ್ಕಳಿಗೂ ಉತ್ತಮ ಶಿಕ್ಷಣನೀಡಿದ್ದೇವೆ. ಹೀಗಾಗಿ ಪರೀಕ್ಷೆನಡೆಸಬೇಕು. ಇಲ್ಲದಿದ್ದರೆ ಎಷ್ಟು ಓದಿದರೂ ವ್ಯರ್ಥಎಂಬ ಮನೋಭಾವ ಕಾಡಲಿದೆ. ಅಲ್ಲದೆ, ಓದದೇಇರುವ ಮಕ್ಕಳು ಇನ್ನಷ್ಟೂ ಶಿಕ್ಷಣದ ಮೇಲೆ ಆಸಕ್ತಿಕಳೆದುಕೊಳ್ಳಲಿದ್ದಾರೆ. ಹೀಗಾಗಿ ಪರೀಕ್ಷೆ ನಡೆಸುವುದು ಉತ್ತಮ. ●ಸುಜಾತಕೃಷ್ಣ, ಕಾರ್ಯದರ್ಶಿ, ಡ್ಯಾಫೋಡಿಲ್ಸ್ ಶಾಲೆ
ನಮ್ಮ ಮಗುವಿಗೆ ಆನ್‌ಲೈನ್ ಶಿಕ್ಷಣ ನೀಡಲಾಗಿದೆ.ಶಿಕ್ಷಕರು ಆನ್‌ಲೈನ್ ಮೂಲಕ ಪ್ರತಿನಿತ್ಯ ಬೋಧನೆ ಮಾಡಿದ್ದಾರೆ. ಇದರಿಂದ ಮನೆಯಲ್ಲಿಯೇಕಲಿಯುವ ಪ್ರಯತ್ನ ನಡೆದಿದೆ. ಇದರ ಅಂತಿಮ ಫಲಿತಾಂಶ ಬರಲು ಪರೀಕ್ಷೆ ನಡೆಸುವುದು ಒಳ್ಳೆಯದು. ●ರೋಹಿಣಿ ಹೆಗ್ಗಡೆ, ಪೋಷಕರು, ಮಂಡ್ಯ
ನಾವು ಮಕ್ಕಳಿಗೆ ಶಿಕ್ಷಣ ಇಲಾಖೆ ನಿಗದಿಪಡಿಸಿದಂತೆ ಪಾಠ, ಪ್ರವಚನ, ಬೋಧನೆ ಮಾಡಿದ್ದೇವೆ. ಸರ್ಕಾರವೇ ಹೇಳಿರುವಂತೆ ಪ್ರಶ್ನೆ ಪತ್ರಿಕೆ ಸರಳೀಕರಣಗೊಳಿಸಿರುವುದರಿಂದ ಮಕ್ಕಳಿಗೆ ಯಾವುದೇ ಗೊಂದಲ ಇರಲ್ಲ. ●ಶಿವಣ್ಣ, ಶಿಕ್ಷಕರು, ಮದ್ದೂರು
ಕೋವಿಡ್ ದಿಂದಾಗಿ ಎಲ್ಲಾ ಮಕ್ಕಳಿಗೂಸಂಪೂರ್ಣವಾಗಿ ಶಿಕ್ಷಣ ನೀಡಲು ಸಾಧ್ಯವಾಗಿಲ್ಲ.ಎಷ್ಟೋ ಮಕ್ಕಳು ದಾಖಲಾತಿಯಾಗಿಲ್ಲ. ಕೆಲವುಮಕ್ಕಳು ದಾಖಲಾತಿ ಆಗಿದ್ದರೂ ಶಾಲೆಗೆ ಬರಲುಸಾಧ್ಯವಾಗಿಲ್ಲ. ಆನ್‌ಲೈನ್ ಶಿಕ್ಷಣವೂ ಮಕ್ಕಳ ಮನಸ್ಸಿಗೆಮುಟ್ಟಿಲ್ಲ. ಹೀಗಾಗಿ ಪರೀಕ್ಷೆ ಇಲ್ಲದೆ ಉತ್ತೀರ್ಣ ಮಾಡುವುದು ಒಳ್ಳೆಯದು. ●ಲೋಕೇಶ್ ಚಂದಗಾಲು, ಶಿಕ್ಷಕರು
ಕೋವಿಡ್ ಮುಂಜಾಗ್ರತೆಯೊಂದಿಗೆ ಮಕ್ಕಳನ್ನುಶಾಲೆಗೆ ಕಳುಹಿಸಿದ್ದೇವೆ. ಲಾಕ್‌ಡೌನ್ ಸಂದರ್ಭದಲ್ಲಿಪಾಠವಿಲ್ಲದೆ, ಆಟದಲ್ಲಿಯೇ ಮುಳುಗಿದ್ದ ಮಕ್ಕಳು ಶಾಲೆಗೆಕಳುಹಿಸಿದ ನಂತರ ಓದಿನ ಕಡೆ ಗಮನಹರಿಸಿದ್ದಾರೆ. ಈಗ ಪರೀಕ್ಷೆ ನಡೆಸದಿದ್ದರೆ ತೊಂದರೆಯಾಗಲಿದೆ.●ಸವಿತಾ, ಪೋಷಕರು, ಮಂಡ್ಯ
ಕೋವಿಡ್ ಮುಂಜಾಗ್ರತೆ ಅನುಸರಿಸಿ ಪರೀಕ್ಷೆನಡೆಸಬಹುದು. ಇಲ್ಲದಿದ್ದರೆ ನಡೆದಿರುವ ಕಿರುಪರೀಕ್ಷೆಗಳ ಆಧಾರದ ಮೇಲೆ ಮೌಲ್ಯಂಕನ ಮಾಡಬಹುದು. ಪರೀಕ್ಷೆ ನಡೆಸಿದರೆ ಓದಿನ ಆಸಕ್ತಿ ಹೆಚ್ಚಲಿದೆ. ●ಕೆ.ಟಿ.ಶಿವಕುಮಾರ್, ಶಿಕ್ಷಕರು, ಮದ್ದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್”
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.