ಸ್ಫೋಟಕ ಗಣಿಗಾರಿಕೆಯಿಂದ ಅಂತರ್ಜಲಕ್ಕೆ ಧಕ್ಕೆ
ಪಾತಾಳಕ್ಕಿಳಿಯುತ್ತಿರುವ ಗಣಿಗಾರಿಕೆ ಆಳ ! ಕೃಷಿ ಚಟುವಟಿಕೆಗಳ ಮೇಲೂ ದುಷ್ಪರಿಣಾಮ
Team Udayavani, Jul 14, 2021, 6:09 PM IST
ಮಂಡ್ಯ: ಅತಿಯಾದ ಸ್ಫೋಟ ಹಾಗೂ ಭೂಮಿಯ ಆಳಕ್ಕೆ ಹೋಗಿ ಗಣಿಗಾರಿಕೆ ನಡೆಸುವುದರಿಂದ ಅಂತರ್ಜಲಕ್ಕೆ ತೊಂದರೆಯಾಗಲಿದೆ. ಸ್ಫೋಟದಿಂದ ಅಂತರ್ಜಲದ ಝೊನ್‌ಗೆ ಹಾನಿಯಾಗಲಿದೆ.
ಪಾಂಡವಪುರದ ಬೇಬಿಬೆಟ್ಟ ಹಾಗೂಶ್ರೀರಂಗಪಟ್ಟಣವ್ಯಾಪ್ತಿ ಯಲ್ಲಿ ಅತಿ ಹೆಚ್ಚು ಸ್ಫೋಟ ಹಾಗೂ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದ ರಿಂದ ಅಲ್ಲಿನ ಜನರಿಗೆ ಅಂತರ್ಜಲ ಕುಸಿತದ ಆತಂಕ ಎದುರಾಗಿದೆ. ಈಗಾಗಲೇ ಮಂಡ್ಯ, ಶ್ರೀರಂಗ ಪಟ್ಟಣತಾಲೂಕುವ್ಯಾಪ್ತಿಹಾಗೂಪಾಂಡವ ಪುರ ಬೇಬಿಬೆಟ್ಟದಲ್ಲಿ ಅತಿಯಾಗಿ ಆಳಕ್ಕೆ ಹೋಗಿ ಕಲ್ಲು ತೆಗೆದಿರುವುದರಿಂದ ದೊಡ್ಡ ದೊಡ್ಡಹೊಂಡದಂಥ ಬಾವಿಗಳು ಸೃಷ್ಟಿಯಾಗಿದ್ದು, ನೀರು ಬರುತ್ತಿದೆ. ಶ್ರೀರಂಗಪಟ್ಟಣದಕೋಡಿ ಶೆಟ್ಟಿಪುರ, ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ, ಚೆನ್ನನಕರೆ, ಹಂಗರಹಳ್ಳಿವ್ಯಾಪ್ತಿಯಲ್ಲಿಅಂತರ್ಜಲ ಕುಸಿಯುತ್ತ ಬಂದಿದೆ.
500ರಿಂದ 600 ಅಡಿಗೆ ನೀರು: ಶ್ರೀರಂಗಪಟ್ಟಣ ತಾಲೂ ಕಿನ ಕೋಡಿಶೆಟ್ಟಿಪುರ, ಚೆನ್ನನಕೆರೆ ವ್ಯಾಪ್ತಿಯ ಗ್ರಾಮಗಳ ಬಳಿ ನಡೆಯುತ್ತಿರುವ ಕೆಲವು ಕಲ್ಲು ಕ್ವಾರೆಗಳಲ್ಲಿ ಅಂತರ್ಜಲ ಕಾಣುವಂತಾಗಿದೆ. ಕೆಲವು ಗಣಿಗಳಲ್ಲಿ ನೀರು ಬಂದ ತಕ್ಷಣ ನೀರನ್ನು ಹೊರ ತೆಗೆದು ಕಲ್ಲು ಹೊಡೆಯಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಇನ್ನೂ ಕೆಲವರು ಕಲ್ಲು ತೆಗೆದ ನಂತರ ಮುಚ್ಚುತ್ತಿದ್ದಾರೆ. ಹಿಂದೆ ನಮ್ಮ ಗ್ರಾಮದ ಸುತ್ತಮುತ್ತ 250 ಅಡಿಯಲ್ಲೆ ನೀರು ಸಿಗು ತ್ತಿತ್ತು. ಈಗ 500ರಿಂದ 600 ಅಡಿಕೊಳವೆಬಾವಿತೆಗೆಸಿದರೂ ನೀರು ಸಿಗುತ್ತಿಲ್ಲ ಎಂದು ಗ್ರಾಮಸ್ಥರೊಬ್ಬರು ಹೇಳುತ್ತಾರೆ. ಕೆಲವೊಂದು ಭಾಗಗಳಿಗೆ ನಾಲೆ ನೀರು ಬರುತ್ತದೆ. ಕೆಲವು ಕೊಳವೆ ಬಾವಿಗಳು ಅಸರೆಯಾಗಿವೆ. ಆದರೆ ಗಣಿಗಾರಿಕೆಯಿಂದ ಕೊಳವೆ ಬಾವಿಗಳಲ್ಲೂ ನೀರು ಕಡಿಮೆಯಾಗಿದೆ. ಸ್ಫೋಟ ಸಿಡಿಯುವುದರಿಂದ ನಾಲೆಯಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತಿವೆ. ಸ್ಫೋಟದ ದೂಳು, ಕ ಲ್ಲು ಪುಡಿಗಳಿಂದ ಕೃಷಿ ಜಮೀನು ಹಾಳಾಗುವುದಲ್ಲದೆ, ಬೆಳೆಗಳು ಕೈ ಸೇರುವುದಿಲ್ಲ ಎಂದು ರೈತರೊಬ್ಬರು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.