ಸಚಿವರ ಮುಂದೆ ವಿಷದ ಬಾಟಲ್ ಇಟ್ಟು ಆತ್ಮಹತ್ಯೆ ಬೆದರಿಕೆ ಹಾಕಿದ ರೈತ
Team Udayavani, Aug 12, 2021, 8:42 PM IST
ಮಂಡ್ಯ: ಜಮೀನು ಖಾತೆ ಮಾಡಿಕೊಡದೆ ಉಳುಮೆ ಮಾಡದಂತೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದ್ದರಿಂದ ನನ್ನ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು. ಇಲ್ಲದಿದ್ದರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತನೊಬ್ಬ ಸಚಿವ ನಾರಾಯಣಗೌಡ ಮುಂದೆ ವಿಷದ ಬಾಟಲ್ ಇಟ್ಟು ಆತಂಕ ತಂದ ಘಟನೆ ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದಿದೆ.
ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ಗ್ರಾಮದ ಮಂಜುನಾಥ್ ವಿಷ ಕುಡಿಯುವುದಾಗಿ ಹೇಳಿ ಪೊಲೀಸರ ಅತಿಥಿಯಾಗಿದ್ದಾನೆ. ಪ್ರವಾಸಿ ಮಂದಿರಕ್ಕೆ ಸಮಸ್ಯೆ ಹೇಳಿಕೊಳ್ಳಲು ಬಂದ ಕೆಲವು ರೈತರು ಕಳೆದ ೪೦ ವರ್ಷಗಳಿಂದ ಭೂಮಿಯಲ್ಲಿ ಅನುಭವದಾರರಾಗಿದ್ದು, ಖಾತೆ ಮಾಡಿಕೊಡುವಂತೆ ಸಾಕಷ್ಟು ಬಾರಿ ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳಿಗೆ ಕೇಳಿಕೊಂಡರೂ ಸ್ಪಂದಿಸಿಲ್ಲ.
ಈಗ ಏಕಾಏಕಿ ಜಮೀನಿನಲ್ಲಿ ಉಳುಮೆ ಮಾಡದಂತೆ ಅಧಿಕಾರಿಗಳು ತಡೆಯಲು ಮುಂದಾಗಿದ್ದಾರೆ. ಇದರಿಂದ ಇಲ್ಲಿ ಅನುಭವವದಲ್ಲಿರುವ ರೈತರೆಲ್ಲರೂ ಸಂಕಷ್ಟಕ್ಕೊಳಗಾಗಲಿದ್ದಾರೆ. ಅರ್ಧ, ಒಂದು ಎಕರೆಯಷ್ಟು ಜಮೀನಿನಲ್ಲಿ ಸೊಪ್ಪು, ತರಕಾರಿ, ರಾಗಿ ಬೆಳೆದುಕೊಂಡು ಜೀವನ ಕಂಡುಕೊಂಡಿದ್ದಾರೆ. ಈಗ ವ್ಯವಸಾಯ ಮಾಡದಂತೆ ತೊಂದರೆ ನೀಡಿದರೆ ಎಲ್ಲಿಗೆ ಹೋಗುವುದು. ಆದ್ದರಿಂದ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತ ಮಂಜುನಾಥ್, ಅಧಿಕಾರಿಗಳ ಬಳಿ ತಿರುಗಿ ಸಾಕಾಗಿದೆ. ಇದುವರೆಗೂ ಸಮಸ್ಯೆ ಬಗೆಹರಿಸಿಲ್ಲ. ಆದ್ದರಿಂದ ಈ ಸಮಸ್ಯೆ ಬಗೆಹರಿಸದಿದ್ದರೆ ನಾನು ಇದೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವಿಷದ ಬಾಟಲ್‌ನಲ್ಲಿ ಸಚಿವ ನಾರಾಯಣಗೌಡ ಮುಂದಿಟ್ಟನು. ತಕ್ಷಣ ಸಚಿವರು ಸೇರಿದಂತೆ ಅಲ್ಲಿದ್ದವರು ಗಾಬರಿಗೊಂಡರು.
ಸ್ಥಳಕ್ಕೆ ಪೊಲೀಸರನ್ನು ಸ್ಥಳಕ್ಕೆ ಕರೆಸಿದ ಸಚಿವ ನಾರಾಯಣಗೌಡ, ಆತನನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳಿ. ಅವರ ಕುಟುಂಬದವರನ್ನು ಕರೆಸಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ನಂತರ ಬಿಡುಗಡೆ ಮಾಡಿ, ನಾಳೆ ಒಂದು ವೇಳೆ ಆತ್ಮಹತ್ಯೆ ಮಾಡಿಕೊಂಡರೆ ಎಲ್ಲರಿಗೂ ತೊಂದರೆಯಾಗಲಿದೆ. ಅಲ್ಲದೆ, ಜಮೀನಿಗೆ ಸಂಬAಧಿಸಿದAತೆ ಕೂಡಲೇ ಸಮಸ್ಯೆ ಬಗೆಹರಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ರೈತ ಮಂಜುನಾಥ್‌ನನ್ನು ವಶಕ್ಕೆ ಪಡೆದ ನಗರದ ಪಶ್ಚಿಮ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.