ಅರಣ್ಯ ಸಿಬ್ಬಂದಿ- ರೈತರ ಜಟಾಪಟಿ
Team Udayavani, Jul 2, 2022, 5:02 PM IST
ನಾಗಮಂಗಲ: ತಾಲೂಕಿನ ಹಂದೇನಹಳ್ಳಿ ಗ್ರಾಮದ ಸರ್ವೇ ನಂ.45 ರಲ್ಲಿ ಅರಣ್ಯ ಇಲಾಖೆ ಮತ್ತು ಗ್ರಾಮಸ್ಥರ ನಡುವೆ ಗೋಮಾಳ ಮತ್ತು ಅರಣ್ಯ ಇಲಾಖೆ ಜಾಗದ ಕುರಿತು ವ್ಯಾಜ್ಯ ನಡೆಯುತ್ತಿದ್ದು, ಶುಕ್ರವಾರ ಅರಣ್ಯ ಅಧಿಕಾರಿಗಳು ಸಸಿ ನೆಡಲು ಮುಂದಾದ್ದರಿಂದ ಗ್ರಾಮಸ್ಥರು ತಡೆಯೊಡ್ಡಿದರು.
ರೈತರು ಸಹಕರಿಸಬೇಕು: ಅಧಿಕಾರಿಗಳು ಸಸಿ ನೆಡಲು ಮುಂದಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿ ದ ಗ್ರಾಮಸ್ಥರು, ಸಸಿ ನೆಡದಂತೆ ತಡೆದರು. ಕಂದಾಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆತಂದು ತಹ ಶೀಲ್ದಾರ್, ಉಪವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ಸರ್ವೇ ನಡೆಸಿ ಅರಣ್ಯ ಇಲಾಖೆ ಜಾಗವನ್ನು ಅರಣ್ಯ ಇಲಾಖೆಗೆ ನೀಡಲು ನಮ್ಮದು ತಕರಾರು ಇಲ್ಲ. ಆದರೆ, ಗೋಮಾಳದ ಜಮೀನನ್ನು ಗುರ್ತಿಸಿ 53ನಲ್ಲಿ ಅರ್ಜಿ ಸಲ್ಲಿಸಿರುವ ರೈತರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಅರಣ್ಯ ಅಧಿಕಾರಿಗಳ ಮುಂದೆ ಪಟ್ಟು ಹಿಡಿದರು.
ಆದರೆ, ಅರಣ್ಯ ಅಧಿಕಾರಿಗಳು ಸರ್ವೆ ನಂ.45ರಲ್ಲಿ 203 ಎಕರೆ ಮೀಸಲು ಅರಣ್ಯ, 336ಎಕರೆ ಪರಿಭಾವಿತ ಅರಣ್ಯ ಪ್ರದೇಶವಿದೆ ರೈತರು ಸಹಕರಿಸಬೇಕು ಎಂದು ದಾಖಲೆ ತೋರಿಸಿ ದರೂ ರೈತರು ಕೇಳಲಿಲ್ಲ.
ರೈತರು ಮನವಿ ಮಾಡಿದ್ದಾರೆ: ಸುದ್ದಿಗಾರ ರೊಂದಿಗೆ ಮಾತ ನಾಡಿದ ಎಸಿಎಫ್ ಶಂಕರೇ ಗೌಡ, ಸರ್ವೇ ಯಲ್ಲಿ ಇರುವ 2 ನಕ್ಷೆಯಲ್ಲೂ ಸರ್ವೇ ನಂಬರ್ 45ರಲ್ಲಿ ಮೀಸಲು ಅರಣ್ಯ ಹೊರತು ಪಡಿಸಿ ನಮ್ಮ ಇಲಾಖೆ ಅನುಭವದಲ್ಲಿರುವುದು ಕೇವಲ 111 ಎಕರೆ ಮಾತ್ರ. ಆದರೆ, ಇಲಾಖೆಗೆ ಹಸ್ತಾಂತರವಾಗಿರುವುದು 336 ಎಕರೆ. ಉಳಿದಂತೆ 220 ಎಕರೆ ಭೂಮಿ ಕಡಿಮೆಯಿದೆ. ಈಗ ಕೆಲಸ ಮಾಡು ತ್ತಿರುವ ಸ್ಥಳದಲ್ಲಿ 1979 ರಲ್ಲಿ ನೀಲಗಿರಿ ಮರ ನೆಡ ಲಾಗಿತ್ತು. ನಂತರ ಇಲಾಖೆ ಮಾರ್ಗಸೂಚಿಯಂತೆ ಕಡಿದು ಸ್ಥಳೀಯ ಜಾತಿ ಸಸ್ಯ ನೆಡಲು ಕ್ರಮ ವಹಿಸಲಾಗುತ್ತಿದೆ. ಆದರೆ ಜನ ಇದೇ ಸರ್ವೇ ನಂ.ನಲ್ಲಿ ಅರ್ಜಿ ಸಲ್ಲಿಸಿದ್ದು ನಮ್ಮ ಜಾಗ ಎಂದು ಹೇಳುತ್ತಿದ್ದಾರೆ. ಜತೆಗೆ ಕಾಲಾ ವಕಾಶ ಕೇಳುವ ಮೂಲಕ ಕಂದಾಯ ಅಧಿಕಾರಿಗಳ ಮುಂದಾಳತ್ವದಲ್ಲಿ ಸಮಸ್ಯೆ ಬಗೆಹರಿಸಿ ಎಂದು ಮನವಿ ಮಾಡಿದ್ದಾರೆ ಎಂದು ತಿಳಿಸಿದರು.
ದಸಂಸ ಮುಖಂಡ ನಾಗರಾಜ್ ಮಾತ ನಾಡಿ, ಕಂದಾಯ ಅಧಿಕಾರಿಗಳು ಬಂದು ಕ್ರಮವಹಿಸುವ ವರೆಗೂ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ನಂತರ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ವಾಪಸ್ ಆದರು.
ಉಪವಲಯ ಅರಣ್ಯಾಧಿಕಾರಿ ಪ್ರಕಾಶ್, ಆರ್‌ಎಫ್ಒಗಳಾದ ಸತೀಶ್, ಪುಟ್ಟಸ್ವಾಮಿ, ಗಂಗಾಧರ್, ಡಿಆರ್‌ಎಫ್ಒ ಮಂಜು, ಅರಣ್ಯ ರಕ್ಷಕರಾದ ದಿಲೀಪ್, ಅರಣ್ಯ ಸಿಬ್ಬಂದಿ, ಗ್ರಾಮಸ್ಥರಾದ ಪ್ರಕಾಶ್, ರಾಮಚಂದ್ರು, ಶಶಾಂಕ್, ಯೋಗೇಶ್, ಬಸವಯ್ಯ, ಕುಮಾರ್, ರವಿಕುಮಾರ್, ಚಂದ್ರಯ್ಯ, ಜೈರಾಮು, ಬಸವಯ್ಯ, ಮರಿಸ್ವಾಮಿ, ಕುಮಾರ್, ನಿಂಗಯ್ಯ, ಗಂಗಾಧರ್, ರಾಜಯ್ಯ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್”
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 143: ದೇಹ-ಆತ್ಮ ಬೇರೆ: ಶ್ರುತಿ ಪ್ರಾಮಾಣ್ಯ
ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ
Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್ ಆಸ್ಪತ್ರೆ
Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ
ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.