ಜಿಲ್ಲೆಯ ರೈತರ ಪರ ನಿಲ್ಲುವುದು ನಮ್ಮ ಕರ್ತವ್ಯ
Team Udayavani, Mar 6, 2021, 3:20 PM IST
ಶ್ರೀರಂಗಪಟ್ಟಣ: ಜಿಲ್ಲೆಯ ರೈತರ ಪರ ನಿಲ್ಲುವುದು ನಮ್ಮ ಕರ್ತವ್ಯವಾಗಿದೆ ಎಂದು ಸಂಸದೆ ಸುಮಲತಾ ಹೇಳಿದರು.
ತಾಲೂಕಿನ ಕರೀಘಟ್ಟದ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಸಂಬಂಧಿಕರ ವಿವಾಹ ಮಹೋತ್ಸವಕ್ಕೆ ಆಗಮಿಸಿದ್ದ ವೇಳೆ ಮಾತನಾಡಿ, ರೈತರಿಗೆ ಬೇಸಿಗೆ ಬೆಳೆಗೆ ಕಟ್ಟು ನೀರನ್ನು ನಾಲೆಗಳಿಗೆ ಹರಿಸುವ ವಿಚಾರದಲ್ಲಿ ಕಾವೇರಿ ನೀರಾವರಿ ಸಲಹ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಚರ್ಚೆ ಮಾಡುತ್ತೇವೆ. ಜಿಲ್ಲೆಯ ಅನ್ನದಾತರ ಪರ ನಿಲ್ಲುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಒಂದು ದೇಶ ಒಂದು ಚುನಾವಣೆ ಮಾಹಿತಿ ಇಲ್ಲ: ಸದನದಲ್ಲಿ ಚರ್ಚೆ ಮಾಡುತ್ತಿರುವ ಒಂದು ದೇಶ, ಒಂದು ಚುನಾವಣೆ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿಗಳಿಲ್ಲ. ವರದಿ ನೋಡಿ ತಿಳಿಸುತ್ತೇನೆ. ಸದನದಲ್ಲಿ ಸರ್ಕಾರ ಹಾಗೂ ವಿರೋಧ ಪಕ್ಷದ ಶಾಸಕರು ಚರ್ಚೆ ನಡೆಸಿ, ಪರ- ವಿರೋಧಗಳು ಕೇಳಿ ಬರುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಳುನನಗೆ ಲಭ್ಯವಿಲ್ಲ. ವರದಿಗಳ ಮಾಹಿತಿ ಕಲೆ ಹಾಕಿ ಮಾತನಾಡುತ್ತೇನೆ ಎಂದು ತಿಳಿಸಿದರು.
ಗಣಿಗಾರಿಕೆ ವಿರುದ್ಧ ಹೋರಾಟ: ಶ್ರೀರಂಗಪಟ್ಟಣ, ಕೆಆರ್‌ಎಸ್ ಅಣೆಕಟ್ಟೆ ಸುತ್ತಮುತ್ತಲಿನ ಪ್ರದೇಶಗಳಿಗೆ ಅಕ್ರಮ ಗಣಿಗಾರಿಕೆ ಕುರಿತ ವಿಚಾರದಲ್ಲಿ ಈಗಾಗಲೇ ಗಣಿ ಮತ್ತು ಭೂವಿಜ್ಞಾನ ಇಲಾಖೆಯಕೇಂದ್ರ ತಂಡಗಳ ತಜ್ಞರು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವರದಿ ಪಡೆದು, ಏನೇ ಆದರೂ ಅಕ್ರಮ ಗಣಿಗಾರಿಕೆ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದರು.
ಆಟೋ ಸಂಘದ ಮನವಿ: ಕರೀಘಟ್ಟದಿಂದ ಪ್ರವಾಸಿ ಮಂದಿರಕ್ಕೆ ಹೋಗುವ ಮಾರ್ಗ ಮಧ್ಯೆ ಶ್ರೀರಂಗಪಟ್ಟಣ- ಗಂಜಾಂ ರಸ್ತೆಯಲ್ಲಿರುವ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ಪದಾಧಿಕಾರಿಗಳು ಸಂಸದರನ್ನು ಭೇಟಿ ಮಾಡಿ, ಆಟೋ ನಿಲ್ದಾಣದಲ್ಲಿ ನೆರಳಿಗೆ ಸೀಟ್‌ಹಾಕಿರುವುದನ್ನು ಪುರಸಭೆಯಿಂದ ತೆರವು ಮಾಡಲಾಗಿದೆ. ಇದರಿಂದ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ತಾತ್ಕಾಲಿಕವಾಗಿ ಸೀಟ್ ಹಾಕಿ ನೆರಳು ಮಾಡಿಕೊಳ್ಳಲು ಪುರಸಭೆ ಅಧಿಕಾರಿಗಳಿಗೆ ಸೂಚನೆಮಾಡಬೇಕು ಎಂದು ಸಂಘದ ಸದಸ್ಯರು ಸಂಸದರಿಗೆ ಮನವಿ ನೀಡಿದರು.
ಅಂಬಿ ಆಪ್ತರಾದ ಮದನ್‌ಕುಮಾರ್, ದರ್ಶನ್ ಲಿಂಗರಾಜು, ಪುರಸಭಾ ಮಾಜಿ ಸದಸ್ಯ ಈ.ಕುಮಾರ್, ವಿಕಾಶ್ ಆಟೋ ಸಂಘದ ಅಧ್ಯಕ್ಷಜಿ.ಎಲ್.ರವಿ, ಸದಸ್ಯರಾದ ಶಿವಕುಮಾರ್, ಚೇತು ಬಾಳೆಕಾಯಿ ಸಿದ್ದಪ್ಪ ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.