ಕೃಷಿಯಿಂದ ರೈತರ ಬದುಕು ಹಸನು
Team Udayavani, Dec 7, 2020, 8:05 PM IST
ಮಂಡ್ಯ: ಕೃಷಿಯಿಂದ ರೈತರ ಬದುಕು ಹಸನಾಗಲು ಸಾಧ್ಯವಿದೆ ಎಂಬುದನ್ನು ರೈತರು ಅರಿತುಕೊಳ್ಳಬೇಕು. ಕೃಷಿ ಖುಷಿ ಕೊಡುತ್ತದೆ. ಕೃಷಿ ವಿಧಾನದಿಂದ ಮಾಡಬೇಕಾದ ರೀತಿಯಲ್ಲಿ ಮಾಡಿದರೆ ಕೈಹಿಡಿಯಲಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ನಗರದ ರೈತ ಸಭಾಂಗಣದಲ್ಲಿ ಕೆ.ಬಸವರಾಜೇ ಗೌಡರ ಆಪ್ತ ಬಳಗ, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ನಿವೃತ್ತ ಕಾರ್ಯ ಪಾಲಕ ಅಭಿಯಂತರ ಕೆ.ಬಸವರಾಜೇಗೌಡ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಪ್ರಸಿದ್ಧ ವಿಜಾnನಿ ಐನ್‌ಸ್ಟೈನ್ ಅವರು ದೊಡ್ಡ ವ್ಯಕ್ತಿ ಯಾಗುವುದಕ್ಕಿಂತ ಸಣ್ಣ ರೈತನ ಮಗನಾಗಿ ಹುಟ್ಟಬೇಕು ಎಂದು ಹೇಳಿದ್ದರು. ಅದಕ್ಕೂ ಮುಂಚೆ ರಾಷ್ಟ್ರಕವಿಕುವೆಂಪುಈಮಾತನ್ನು ಹೇಳಿದ್ದರು. ಅದರಂತೆ ನಾವು ಬದುಕುವ ರೀತಿ ನೆಮ್ಮದಿ ತರಬೇಕು. ಯಾವುದಕ್ಕೂ ಅಂಜದೆ, ಅಳುಕದೆ ಜೀವನ ನಡೆಸಬೇಕು ಎಂದರು. ಅದೇ ರೀತಿ ಬಸವರಾಜೇಗೌಡ ಅವರು ಕೃಷಿಯೆ ಡೆಗೆ ಹೋಗಲು ನಿರ್ಧರಿಸಿರುವುದು ಒಳ್ಳೆಯ ವಿಚಾರವಾಗಿದೆ. ಒಳ್ಳೆಯವರು ಎಂದಿಗೂ ಸಮಾಜಕ್ಕೆ ಒಳಿತನ್ನು ಬಯಸುತ್ತಾರೆ. ಅದರಲ್ಲಿ ಬಸವರಾಜೇಗೌಡರು ಒಬ್ಬರು ಎಂದು ಪ್ರಶಂಸಿದರು.
ಒಳ್ಳೆಯ ಕೆಲಸಕ್ಕೆ ಕೈಜೋಡಿಸಿ: ರೈತರು ಬೆಳೆದಂತಹ ಭತ್ತ, ರಾಗಿಯನ್ನು ಭಿಕ್ಷೆ ಬೇಡಿ ಚುಂಚನಗಿರಿ ಮಠಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅಂಥ ವ್ಯಕ್ತಿತ್ವ ಅವರದ್ದು. ಅವರ ಪತ್ನಿಯೂ ಸಹ ಅನ್ಯೋನ್ಯತೆಯಿಂದ ಅವರ ಸಾಧನೆಗೆ ಕೈಜೋಡಿಸುವ ಮೂಲಕ ಸಮಾಜದ ಒಳ್ಳೆಯ ಕೆಲಸಕ್ಕೆ ಕೈಜೋಡಿಸಿದ್ದಾರೆ ಎಂದರು.
ಸಮಾಜಕ್ಕೆ ಕೆಟ್ಟದ್ದನ್ನು ಬಯಸಬೇಡಿ: ಬಸವರಾಜೇ ಗೌಡರ ಒಳ್ಳೆಯ ಕೆಲಸಗಳಿಗೆ ಜನರು ಬೆಂಬಲಿಸಿದ್ದಾರೆ. ಜೀವನ ಪ್ರೀತಿ,ಕುಟುಂಬ ಪ್ರೀತಿಯ ಜತೆಗೆ ಸಮಾಜದಮೇಲಿನ ವಾತ್ಸಲ್ಯ ಹೆಚ್ಚಿದೆ. ಅದಕ್ಕಾಗಿ ಜನರು ಅವರನ್ನು ಇಷ್ಟಪಡುತ್ತಾರೆ. ಸಮಾಜಕ್ಕೆ ಕೆಟ್ಟದ್ದನ್ನು ಬಯಸಬಾರದು. ಸಾಯುವ ಸಂದರ್ಭದಲ್ಲಿ ಕೆಟ್ಟದ್ದನ್ನು ಬಯಸಿದರೆ, ಮುಂದಿನ ಜನ್ಮದಲ್ಲೂ ಅದೇ ಮನಸ್ಥಿತಿ ಬರಲಿದೆ. ಸಾಯುವ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ಸಾವನ್ನಪ್ಪಿದರೆ ಮುಂದಿನ ಜನ್ಮ ದಲ್ಲೂ ಒಳ್ಳೆಯವನಾಗಿಯೇ ಹುಟ್ಟುತ್ತಾನೆ. ಆದ್ದರಿಂದ ಪ್ರತಿಯೊಬ್ಬರೂ ಸಮಾಜಕ್ಕೆ ಕೊಡುಗೆ ನೀಡಲು ಮುಂದಾಗಬೇಕು ಎಂದು ಹೇಳಿದರು.
ಓದಿಸಲು ಸಾಧ್ಯವಾಗುತ್ತಿರಲಿಲ್ಲ: ಅಭಿನಂದನೆ ಸ್ವೀಕರಿಸಿದ ಕೆ.ಬಸವರಾಜೇಗೌಡ ಮಾತನಾಡಿ, ನಮ್ಮ ತಂದೆ ರೈತರಾಗಿದ್ದರು. ಆದರೆ, ಅವರಿಗೆ ನನ್ನನ್ನು ಇಂಜಿ ನಿಯರ್ ಓದಿಸಬೇಕು ಎಂಬ ಬಯಕೆ ಇತ್ತು. ಆದರೆ,ಓದಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೂ ನಾನು ಓದಿ ಇಂಜಿನಿಯರ್ ಆಗಿದ್ದೇನೆ. ನನ್ನ ಏಳಿಗೆಗೆ ಕಾರಣಕರ್ತರಾದ ಕೆ.ವಿ.ಶಂಕರಗೌಡ ಹಾಗೂ ಜಿ. ಮಾದೇಗೌಡರನ್ನು ಸ್ಮರಿಸುತ್ತೇನೆ ಎಂದರು.
ನಿವೃತ್ತ ಕಾರ್ಯಪಾಲಕ ಅಭಿಯಂತರ ಕೆ.ಬಸವ ರಾಜೇಗೌಡ ದಂಪತಿಯನ್ನು ಅಭಿನಂದಿಸಲಾಯಿತು. ಮಾಜಿ ಸಂಸದ ಜಿ.ಮಾದೇಗೌಡ, ಕಾವೇರಿ ನೀರಾವರಿನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಜೈಪ್ರಕಾಶ್, ವಿಶ್ರಾಂತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರೇಗೌಡ, ಮೈಸೂರಿನ ಉಪ ಪೊಲೀಸ್ ಆಯುಕ್ತ ಡಾ.ಪ್ರಕಾಶ್ ಗೌಡ, ನಿವೃತ್ತ ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಕೃಷ್ಣ, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
MUST WATCH
ಹೊಸ ಸೇರ್ಪಡೆ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.