ರೈತರ ಹಾಲಿನ ಖರೀದಿ ದರ 2 ರೂ. ಇಳಿಕೆ
ಇಂದಿನಿಂದ ಜಾರಿಗೆ ಬರುವಂತೆ ಮನ್‌ಮುಲ್ ಆದೇಶ ಪ್ರತಿದಿನ ಹಾಲಿನ ಶೇಖರಣೆ ಹೆಚ್ಚಳ
Team Udayavani, Nov 11, 2021, 5:36 PM IST
ಮಂಡ್ಯ: ಮನ್‌ಮುಲ್ ಹಾಲು ಉತ್ಪಾದಕ ರೈತರಿಂದ ಖರೀದಿಸುವ ಹಾಲಿನ ದರ ನ.11ರಿಂದ ಜಾರಿಗೆ ಬರುವಂತೆ ದರವನ್ನು 2 ರೂ. ಪರಿಷ್ಕರಿಸಿ ಆದೇಶ ಹೊರಡಿಸಿದೆ. ಅಲ್ಲದೆ, ಮುಂದಿನ ಆದೇಶದವರೆಗೂ ಈ ದರ ಜಾರಿಯಲ್ಲಿರಲಿದೆ ಎಂದು ತಿಳಿಸಿದೆ.
ಪ್ರಸ್ತುತ ರೈತರಿಂದ ಖರೀದಿಸುವ ಕನಿಷ್ಠ ಜಿಡ್ಡಿನಾಂಶ ಶೇ.3.5ರಷ್ಟು ಹಾಗೂ ಜಿಡ್ಡೇತರ ಘನಾಂಶ ಶೇ.8.50 ಅಂಶವುಳ್ಳ ಪ್ರತಿ ಲೀಟರ್ ಹಾಲಿಗೆ 26.90 ರೂ. ನೀಡಲಾಗುತ್ತಿತ್ತು. ಅದರಲ್ಲಿ 2 ರೂ. ಕಡಿತಗೊಳಿಸಿದ್ದು, 24.90 ರೂ. ಇಳಿಕೆಯಾಗಿದೆ. ಸಂಘದ ಉತ್ಪಾದಕರಿಗೆ ಕನಿಷ್ಠ ಜಿಡ್ಡಿನಾಂಶವಿರುವ ಪ್ರತಿ ಲೀಟರ್‌ಗೆ 26 ರೂ. ನೀಡಲಾಗುತ್ತಿತ್ತು. ಅದರಲ್ಲಿ 2 ರೂ. ಕಡಿತಗೊಳಿಸಿ 24 ರೂ.ಗೆ ಇಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.
ದಾಸ್ತಾನು: ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಪ್ರತಿದಿನ ಹಾಲಿನ ಶೇಖರಣೆ ಹೆಚ್ಚಾಗಿದೆ. ಅಲ್ಲದೆ, ಬೇಡಿಕೆಗಳಿಗನುಗುಣವಾಗಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಪೂರೈಸಲಾಗುತ್ತಿದೆ. ಆದರೆ ಹೆಚ್ಚುವರಿ ಹಾಲನ್ನು ಹಾಲಿನ ಪುಡಿ ಹಾಗೂ ಬೆಣ್ಣೆಯಾಗಿ ಪರಿವರ್ತಿಸಿ ದಾಸ್ತಾನಿಡಲಾಗುತ್ತಿದೆ. ಸೆಪ್ಟೆಂಬರ್‌ನಿಂದ ಪ್ರತಿದಿನ 8.91 ಲಕ್ಷ ಲೀ.ಸಂಗ್ರಹವಾಗುತ್ತಿದೆ. ಅದರಲ್ಲಿ 2.93 ಲಕ್ಷ ಲೀ.ಹಾಲು, 48 ಸಾವಿರ ಲೀ.ಮೊಸರು, 3738 ಲೀ.ಹಾಲಿನ ಉತ್ಪನ್ನ, 49 ಸಾವಿರ ಲೀ.ಹಾಲನ್ನು ಯುಎಚ್‌ಟಿ ತಯಾರಿಸಲು ಬಳಸಲಾಗುತ್ತಿದೆ.
ಇದನ್ನೂ ಓದಿ:- ತುಳುನಾಡಿನ SUPERSTAR ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಜೊತೆ …
ಉಳಿದ 1.40 ಲಕ್ಷ ಲೀ. ಹಾಲನ್ನು ಅಂತರ್ ರಾಜ್ಯ ಡೇರಿ ಹಾಗೂ ಹೊರ ರಾಜ್ಯಗಳಿಗೆ ಮಾರಾಟ ಸೇರಿದಂತೆ ಒಟ್ಟು ಸರಾಸರಿ 3.38 ಲಕ್ಷ ಲೀ.ಹಾಲನ್ನು ಪರಿವರ್ತನೆ ಮಾಡಲಾಗುತ್ತಿದೆ.
15 ಮೆಟ್ರಿಕ್ ಟನ್ ತುಪ್ಪ ದಾಸ್ತಾನು: ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚುವರಿ ಹಾಲು ಸಂಗ್ರಹಣೆ ಯಾಗುತ್ತಿರುವುದರಿಂದ ಒಕ್ಕೂಟದಲ್ಲಿ 3,662 ಮೆಟ್ರಿಕ್ ಟನ್ ಕೆನೆರಹಿತ ಹಾಲಿನಪುಡಿ, 1,913 ಮೆಟ್ರಿಕ್ ಟನ್ ಬೆಣ್ಣೆ, 316 ಮೆಟ್ರಿಕ್ ಟನ್ ಕೆನೆಭರಿತ ಹಾಲಿನಪುಡಿ, 15 ಮೆಟ್ರಿಕ್ ಟನ್ ತುಪ್ಪ ದಾಸ್ತಾನಿದೆ. ಪ್ರಸ್ತುತ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಹಸಿರು ಮೇವು ಹೆಚ್ಚಾಗಲಿದೆ. ಇದರಿಂದ ಹಾಲಿನ ಸಂಗ್ರಹಣೆ ಮುಂದಿನ ದಿನಗಳಲ್ಲಿ 10 ಲಕ್ಷ ಲೀ.ಪ್ರತಿದಿನ ಸಂಗ್ರಹವಾಗುವ ನಿರೀಕ್ಷೆ ಇದೆ.
ಕೊರೊನಾ ಸೋಂಕಿನ ಪರಿಣಾಮ ಲಾಕ್‌ಡೌನ್ ಆಗಿದ್ದರಿಂದ ಸಭೆ, ಸಮಾರಂಭಗಳು ನಡೆಯದ ಪರಿಣಾಮ ಹಾಲು ಹಾಗೂ ಹಾಲಿನ ಉತ್ಪನ್ನಗಳಿಗೆ ಸೂಕ್ತ ಬೆಲೆ ಹಾಗೂ ಬೇಡಿಕೆ ಕುಸಿತವಾಗಿರುವುದರಿಂದ ಸೆಪ್ಟೆಂಬರ್ ತಿಂಗಳಿಗೆ ಸುಮಾರು 33.12 ಕೋಟಿ ರೂ. ಒಕ್ಕೂಟಕ್ಕೆ ನಷ್ಟವಾಗಿದೆ. ಆದ್ದರಿಂದ ಒಕ್ಕೂಟ ಹಾಗೂ ಸಂಘಗಳ ಹಿತದೃಷ್ಟಿಯಿಂದ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಸಮತೋಲನದಲ್ಲಿಡಲು ನ.11ರ ಬೆಳಗ್ಗೆಯಿಂದ ಖರೀದಿ ದರ 2 ರೂ. ಕಡಿಮೆ ಮಾಡಿ ದರ ಪರಿಷ್ಕರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.
“ಪ್ರತಿದಿನ ಹಾಲಿನ ಸಂಗ್ರಹಣೆ ಹಾಗೂ ಹಾಲಿನ ಉತ್ಪನ್ನಗಳ ಸಂಗ್ರಹ ಹೆಚ್ಚಾಗಿರುವುದರಿಂದ ಖರೀದಿ ದರ 2 ರೂ. ಕಡಿತಗೊಳಿಸಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಹಾಲು ಉತ್ಪಾದಕರ ಒಕ್ಕೂಟಗಳಲ್ಲೂ ದರ ಕಡಿಮೆ ಮಾಡಲಾಗಿದೆ. ಅದರಂತೆ ನಮ್ಮ ಒಕ್ಕೂಟದಲ್ಲೂ ಕಡಿಮೆ ಮಾಡಲಾಗಿದೆ.” – ಬಿ.ಆರ್.ರಾಮಚಂದ್ರು, ಅಧ್ಯಕ್ಷರು, ಮನ್‌ಮುಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ
Maddur; ಕೆಲಸದ ಒತ್ತಡ: ಎಂಜಿನಿಯರ್ ಆತ್ಮಹ*ತ್ಯೆ
Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.