ನಾಲೆ ಅವ್ಯವಸ್ಥೆಯಿಂದ ರೈತರಿಗೆ ಸಂಕಷ್ಟ
Team Udayavani, Jul 31, 2023, 3:03 PM IST
ಕೆ.ಆರ್.ಪೇಟೆ: ರಾಜಕೀಯ ನಾಯಕರ ಇಚ್ಛಾಶಕ್ತಿ ಕೊರತೆ ಮತ್ತು ನೀರಾವರಿ ಇಲಾಖೆ ಎಂಜಿನಿಯರ್ ಗಳ ನಿರ್ಲಕ್ಷ್ಯದ ಪರಿಣಾಮ ಹೇಮಾವತಿ ಎಡದಂಡೆ ಮುಖ್ಯ ಕಾಲುವೆಗೆ ಸೇರಿದ 54ನೇ ವಿತರಣಾ ನಾಲೆಯು ಅವ್ಯವಸ್ಥೆಯಿಂದ ಕೂಡಿದೆ. ಇದರಿಂದ ರೈತರು ಕೃಷಿ ಬದುಕನ್ನೇ ಕಳೆದುಕೊಳ್ಳುವ ಭೀತಿಗೆ ಒಳಗಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ.
ಹೇಮಾವತಿ ಜಲಾಶಯ ವ್ಯಾಪ್ತಿಗೆ ಸೇರಿದ ಎಡದಂಡೆ ಮುಖ್ಯ ನಾಲೆ ಮೂಲಕ ರೈತರ ಕೃಷಿ ಜಮೀನುಗಳಿಗೆ ನೀರುಣಿಸಲು ಒಟ್ಟು 17 ವಿತರಣಾ ನಾಲೆಗಳಿವೆ. ಕಳೆದ ಐದು ವರ್ಷಗಳ ಹಿಂದೆ ಸುಮಾರು 9,800 ಕೋಟಿ ರೂ. ವೆಚ್ಚದಲ್ಲಿ ಮುಖ್ಯನಾಲೆಯ ಆಧುನೀಕರಣ ಕಾಮಗಾರಿ ಮಾಡಲಾಗಿದೆ. ಮುಖ್ಯ ನಾಲೆಯ ಅಧುನೀಕರಣಕ್ಕೆ ನೀಡಿದ ಪ್ರಮುಖ್ಯತೆಯನ್ನು ರಾಜ್ಯ ಸರ್ಕಾರ ರೈತರ ಜಮೀನುಗಳಿಗೆ ನೀರು ಹರಿಸುವ ಜೀವನಾಡಿಗಳಾದ ವಿತರಣಾ ನಾಲೆಗಳ ಆಧುನೀಕರಣಕ್ಕೆ ನೀಡಲಿಲ್ಲ. ಇದರ ಪರಿಣಾಮ ವಿತರಣಾ ನಾಲೆಗಳು ಹೂಳು ಮತ್ತು ಗಿಡಗಂಟೆಗಳಿಂದ ಆವೃತ್ತವಾಗಿವೆ ಎಂಬ ಆರೋಪ ರೈತರಿಂದ ಕೇಳಿ ಬರುತ್ತಿದೆ.
5,300 ಎಕರೆ ಪ್ರದೇಶಕ್ಕೆ ನೀರು: ತಾಲೂಕಿನ ಕುಂದೂರು ಬಳಿಯಿದ ಮಾಕವಳ್ಳಿ ಎಲ್ಲೆಯವರೆಗೆ ಸುಮಾರು 30 ಕಿ.ಮೀ ಸಾಗುವ ವಿತರಣಾ ನಾಲೆ, ಸುಮಾರು 5,300 ಎಕರೆ ಪ್ರದೇಶಕ್ಕೆ ನೀರುಣಿಸುತ್ತದೆ. ಇದೀಗ ಮಳೆಗಾಲ ಆರಂಭವಾಗಿದೆ. ಹೇಮಾವತಿ ಜಲಾಶಯಕ್ಕೆ ಸಾಕಷ್ಟು ನೀರು ಹರಿದು ಬರುತ್ತಿದೆ. ಹೇಮಾವತಿ ಕಾಲುವೆಗೆ ನೀರು ಹರಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ. ರೈತರ ಒತ್ತಡ ಹೆಚ್ಚುತ್ತಿದೆ. ಇದರಿಂದ ಯಾವುದೇ ಕ್ಷಣದಲ್ಲಾದರೂ, ಹೇಮಾವತಿ ಜಲಾಶಯದಿಂದ ಮುಖ್ಯ ನಾಲೆಗೆ ನೀರು ಹರಿಸಬಹುದು. ಆದರೆ, ನಾಲೆಯಲ್ಲಿ ನೀರು ಹರಿದರೂ ವಿತರಣಾ ನಾಲೆ ಆಧುನೀಕರಣದ ಹೆಸರಿನಲ್ಲಿ ಹಾಳು ಮಾಡಿರುವುದರಿಂದ ಈ ವ್ಯಾಪ್ತಿಯ ರೈತರು ಬೆಳೆ ವಂಚಿತರಾಗುವ ಆತಂಕದಲ್ಲಿ ಸಿಲುಕಿದ್ದಾರೆ.
8 ಕೆರೆಗೆ ನೀರಿನ ಅಭಾವ: ನಾಲೆ ಪ್ರಾರಂಭವಾದ ಕೆಲ ವರ್ಷಗಳ ಕಾಲ ನೀರು ಹರಿದು ಆನಂತರ ನೀರಿನ ಹರಿಯುವಿಕೆ ಕಡಿಮೆಯಾಗಿದೆ. 31.25 ಕಿ. ಮೀ ಉದ್ದದ ನಾಲೆಯ ವಿಸ್ತರಣೆಯಲ್ಲಿ ಕೇವಲ 18 ಕಿ.ಮೀ ಮಾತ್ರ ನೀರು ಹರಿಯುತ್ತಿದೆ. ಇದರ ಪರಿಣಾಮ 18 ಕಿ.ಮೀ ನಂತರದ ಜಮೀನಿಗೆ ನೀರು ಸಿಗದೆ ಈ ಜಮೀನುಗಳು ನೀರಾವರಿ ವಂಚಿತವಾಗಿವೆ. ಇದರಿಂದ ಒಟ್ಟು 5,300 ಎಕರೆ ಅಚ್ಚುಕಟ್ಟು ಪ್ರದೇಶದಲ್ಲಿ ಕೇವಲ 2,698 ಎಕರೆಗೆ ಮಾತ್ರ ನೀರು ಕಲ್ಪಿಸಲಾಗುತ್ತಿದೆ. ಇನ್ನು ಉಳಿದ 2,602 ಎಕರೆ ಪ್ರದೇಶ ನೀರಾವರಿ ವಂಚಿತವಾಗಿದೆ. ಅದರ ಜೊತೆಗೆ ನಾಲಾ ವ್ಯಾಪ್ತಿಯ 15 ಕೆರೆಗಳಲ್ಲಿ 8 ಕೆರೆಗೆ ನೀರಿನ ಅಭಾವ ಉಂಟಾಗಿವೆ. ಇದರಿಂದ ಈ ಕೆರೆ ಅವಲಂಬಿಸಿರುವ ಗ್ರಾಮಗಳ ಜನಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಅಚ್ಚುಕಟ್ಟು ಪ್ರದೇಶಕ್ಕೆ ನೀರಿಲ್ಲ: ವಿತರಣಾ ನಾಲೆಯು ಒಟ್ಟು 97 ಸಿಡಿ ಕಾಮಗಾರಿಗಳಿದ್ದು, ಅವುಗಳಲ್ಲಿ 2 ಸೂಪರ್ ಪ್ಯಾಸೇಜ್‌ಗಳು, 13 ರಸ್ತೆ ಸೇತುವೆಗಳು, 32 ಗಾಡಿ ಸೇತುವೆಗಳು ಒಳಗೊಂಡಿವೆ. ಈ ಎಲ್ಲ ಕಾಮಗಾರಿಗಳನ್ನು ಸೈಜುಗಲ್ಲಿನಿಂದ ನಿರ್ಮಿಸಲಾಗಿರುತ್ತದೆ. ಈ ಕಲ್ಲು ಕಟ್ಟಡಗಳು ಪೂರ್ಣವಾಗಿ ಶಿಥಿಲಗೊಂಡಿದೆ. ಹೀಗಾಗಿ, ನಾಲೆಯ ಏರಿಯು ಶಿಥಿಲಗೊಂಡಿದೆ. ಇದರಿಂದ ನಾಲೆಯ ನೀರು ಸಾಕಷ್ಟು ಪ್ರಮಾಣದಲ್ಲಿ ಪೋಲಾಗುತ್ತಿದೆ. ಆದ್ದರಿಂದ ಅಂತಿಮ ಭಾಗದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ.
ಪೈಪ್‌ಗ್ಳಲ್ಲಿ ಹರಿಯುತ್ತಿಲ್ಲ ನೀರು: ವಿತರಣಾ ನಾಲೆಯಲ್ಲಿ ಎಲ್ಲ ಕಾಮಗಾರಿಗಳನ್ನು ಪೈಪ್‌ಗ್ಳಿಂದ ನಿರ್ಮಿಸಿದ್ದು, ಪೈಪ್‌ಗಳಲ್ಲಿ ಸರಿಯಾಗಿ ನೀರು ಹರಿಯುತ್ತಿಲ್ಲ. ಪೈಪ್‌ಗಳ ಹತ್ತಿರ ನೀರಿನಲ್ಲಿ ತೇಲಿ ಬರುವ ಮರದ ತುಂಡುಗಳು, ಗಿಡಗಂಟೆಗಳು ಸೇರಿಕೊಂಡು ನಾಲೆಯಲ್ಲಿ ಸರಾಗವಾಗಿ ನೀರು ಹರಿಸಲು ತೊಂದರೆಯಾಗಿದೆ. ಇದರಿಂದ ನೀರಿನ ಹರಿವಿನ ವೇಗ ಕಡಿಮೆಯಾಗಿದೆ. ಅಲ್ಲದೆ, ನೀರು ಹೆಚ್ಚು ವಸ್ತುಗಳು ಶೇಖರಣೆಯಾಗಿ ಹೆಚ್ಚಾದ ನೀರು ನಾಲೆ ಏರಿಯ ಮೇಲೆ ಹರಿದು ನಾಲೆಯು ಶಿಥಿಲವಾಗುತ್ತಿದೆ.
ನಾಲೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ರೈತರ ಒತ್ತಡಕ್ಕೆ ಮಣಿದು ಚುನಾವಣಾ ಪೂರ್ವದಲ್ಲಿ ಮಾಜಿ ಸಚಿವ ನಾರಾಯಣಗೌಡ ಅವರು 54ನೇ ವಿತರಣಾ ನಾಲೆಯ ಆಧುನೀಕರಣಕ್ಕೆ ಮುಂದಾಗಿದ್ದರು. ಇದಕ್ಕಾಗಿ ಸುಮಾರು 955 ಕೋಟಿ ರೂ. ಅಂದಾಜು ವೆಚ್ಚದ ಯೋಜನೆ ರೂಪಿಸಿ, ತರಾತುರಿಯಲ್ಲಿ ಟೆಂಡರ್ ಕರೆದು ಪಿ.ಕೆ.ಶಿವರಾಮು ಎಂಬ ಗುತ್ತಿಗೆದಾರರಿಗೆ ವಹಿಸಲಾಯಿತು. ಉದ್ಘಾಟನೆಗೆ ತೋರಿದ ಉತ್ಸಾಹ ಕಾಮಗಾರಿ ಮುಕ್ತಾಯಕ್ಕೆ ತೋರಿಸಲಿಲ್ಲ. ಕಾಮಗಾರಿ ಟೆಂಡರ್ ಪಡೆದ ಗುತ್ತಿಗೆದಾರ ಅಲ್ಲಲ್ಲಿ ಕಾಮಗಾರಿ ಹೆಸರಿನಲ್ಲಿ ವಿತರಣಾ ನಾಲೆ ಕಿತ್ತುಹಾಕಿ ಆಮೆಗತಿಯಲ್ಲಿ ಕಾಮಗಾಡಿ ಸಾಗುತ್ತಿದೆ. ಈ ಕಾಮಗಾರಿಗೆ ವೇಗ ನೀಡಿ ಶೀಘ್ರದಲ್ಲೇ ಪೂರ್ಣಗೊಳಿಸಿ, ರೈತರ ಬಳಕೆಗೆ ನೀಡಬೇಕು ಎಂದು ಪ್ರಗತಿಪರ ರೈತರಾದ ಕುಂದನಹಳ್ಳಿ ಕುಮಾರಸ್ವಾಮಿ, ಹಿರೀಕಳಲೆ ಬಸವರಾಜು, ಗಣೇಶ್ ಆಗ್ರಹಿಸಿದ್ದಾರೆ.
ಸಕಾಲಕ್ಕೆ ಕಾಮಗಾರಿ ಪೂರ್ಣಗೊಳಿಸುವ ಶಕ್ತಿ ಇಲ್ಲದವರು ನಾಲೆಯನ್ನು ಕಿತ್ತು ಹಾಕಿದ್ದಾದರೂ ಏಕೆ?. ರಾಜಕೀಯ ಹಿತಕ್ಕಾಗಿ ನಾಲೆಯನ್ನು ಕಿತ್ತು ರೈತರಿಗೆ ತೊಂದರೆ ನೀಡಲಾಗಿದೆ. ನಾಲೆಯಲ್ಲಿ ನೀರು ಹರಿಸಿದರೂ ಸಿಗದ ಸ್ಥಿತಿಗೆ 54ನೇ ವಿತರಣಾ ನಾಲಾ ವ್ಯಾಪ್ತಿ ರೈತರು ಸಿಲುಕಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ರೈತರ ಹಿತರಕ್ಷಣೆಗೆ ಮುಂದಾಗಬೇಕು. ●ಕಾರಿಗನಹಳ್ಳಿ ಪುಟ್ಟೇಗೌಡ, ಅಧ್ಯಕ್ಷ, ತಾಲೂಕು ರೈತ ಸಂಘ, ಕೆ.ಆರ್.ಪೇಟೆ
ಮುಂದಿನ ಬೇಸಿಗೆಯವರೆಗೆ ನಾಲೆಯ ಲೈನಿಂಗ್ ಕಾಮಗಾರಿ ನಡೆಸಿ ಪೂರ್ಣಗೊಳಿಸುವುದು ಸಾಧ್ಯವಿಲ್ಲ. ಆದರೆ, ಎಲ್ಲೆಲ್ಲಿ ನೀರು ಪೋಲಾಗುತ್ತದೆಯೋ ಅಲ್ಲ ತಾತ್ಕಾಲಿಕ ಕಾಮಗಾರಿ ನಡೆಸಿ, ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ● ಗುರುಪ್ರಸಾದ್, ಎಂಜಿನಿಯರ್, ಹೇಮಾವತಿ ನಾಲಾ ವಿಭಾಗ
-ಅರುಣ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್”
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆರಳ ತುದಿಯಲ್ಲೇ ಸಿಗಲಿದೆ ಕನ್ನಡ ರಂಗಭೂಮಿ ಮಾಹಿತಿ; ಇಂದು ಜಾಲತಾಣಕ್ಕೆ ಸಿಎಂ ಚಾಲನೆ
Ticket price hike: ಬಿಜೆಪಿ ಕೋಪ : ಜನರ ಕ್ಷಮೆ ಕೇಳಿ ಪ್ರತಿಭಟನೆ!
Mangaluru; ಸದ್ಯ ಖಾಸಗಿ ಬಸ್ ಟಿಕೆಟ್ ದರ ಏರಿಕೆ ಇಲ್ಲ
Kasaragod:ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; 10 ಮಂದಿಗೆ ಅವಳಿ ಜೀವಾವಧಿ ಸಜೆ
Bus ಪ್ರಯಾಣ ದರ ಏರಿಕೆ; ಮೊದಲು ಉದ್ದೇಶ ಅರಿಯಲಿ: ಖಾದರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.