ಕ್ಷೇತ್ರ ವಿಂಗಡಣೆ: ಗರಿಗೆದರಿದ ರಾಜಕೀಯ
Team Udayavani, Apr 5, 2021, 1:49 PM IST
ಮಂಡ್ಯ: ಮುಂದಿನ ಮೇ ತಿಂಗಳಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಗಳ ಆಡಳಿತ ಅವಧಿ ಮುಗಿಯಲಿದ್ದು, ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇರುವುದರಿಂದ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.
ಜಿಲ್ಲೆಯಲ್ಲಿ ಜಿಪಂ ಹಾಗೂ ತಾಪಂ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಮೂರುಪಕ್ಷಗಳು ಜಿಲ್ಲೆಯಲ್ಲಿ ಅತಿ ಹೆಚ್ಚು ಸದಸ್ಯರ ಗೆಲುವಿಗಾಗಿ ಪೈಪೋಟಿ ಜೋರಾಗಲಿದೆ. ಕಳೆದ ಬಾರಿ ಜಿಪಂನಲ್ಲಿ ಜೆಡಿಎಸ್ ಅಧಿಕಾರ ಹಿಡಿದಿದ್ದರೆ, 7 ತಾಲೂಕುಗಳಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಅಧಿ ಕಾರ ಹಿಡಿದಿದ್ದವು. ಆದರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿಕಮಲ ಅರಳಿರುವುದರಿಂದ ಜಿಪಂ,ತಾಪಂ ಚುನಾವಣೆಯಲ್ಲೂ ಪೈಪೋಟಿ ನೀಡಲು ಸಜಾjಗಿದೆ.
ಆಕಾಂಕ್ಷಿಗಳಲ್ಲಿ ತಳಮಳ: ಈಗಾಗಲೇ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು 41ರಿಂದ 45ಕ್ಕೇರಿಸಲಾಗಿದ್ದು, 5 ಕ್ಷೇತ್ರಗಳನ್ನುಹೆಚ್ಚುವರಿಯಾಗಿ ವಿಂಗಡಣೆ ಮಾಡಲಾಗಿದೆ. ಅಲ್ಲದೆ,ಕೆಲವು ಕ್ಷೇತ್ರಗಳು ಬದಲಾವಣೆಯಾಗಿದ್ದು, ಕಳೆದಬಾರಿ ಇದ್ದ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳು ಸಹ ಬೇರೆಬೇರೆ ಕ್ಷೇತ್ರಗಳಿಗೆ ಸೇರಿಕೊಂಡಿರುವುದರಿಂದ ಆಕಾಂಕ್ಷಿಗಳಲ್ಲಿ ತಳಮಳ ತಂದೊಡ್ಡಿದೆ.
ಇತ್ತ 155 ತಾಲೂಕು ಪಂಚಾಯಿತಿ ಕ್ಷೇತ್ರಗಳ ಪೈಕಿ 29ಕ್ಷೇತ್ರಗಳನ್ನು ಕಡಿತಗೊಳಿಸಿ, 126ಕ್ಕಿಳಿಸಲಾಗಿದೆ.ಇದರಿಂದ ಗ್ರಾಮ, ಕ್ಷೇತ್ರಗಳು ಬದಲಾವಣೆಯಾಗಿರುವುದು ಆಕಾಂಕ್ಷಿತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಮೀಸಲಾತಿಯತ್ತ ಚಿತ್ತ: ಕ್ಷೇತ್ರಗಳ ವಿಂಗಡಣೆಯಿಂದ ತಮ್ಮ ಕ್ಷೇತ್ರಗಳ ವ್ಯಾಪ್ತಿ ಕೈತಪ್ಪಿರುವುದರಿಂದಮೀಸಲಾತಿಯೂ ತಲೆನೋವಾಗಿ ಪರಿಣಮಿಸಿದೆ. ಯಾವ ಕ್ಷೇತ್ರಗಳಿಗೆ ಮೀಸಲಾತಿ ನಿಗದಿ ಮಾಡುತ್ತಾರೋ ಎಂಬ ನಿರೀಕ್ಷೆಯಲ್ಲಿದ್ದಾರೆ. ಕ್ಷೇತ್ರಗಳ ವಿಂಗಡಣೆಯಿಂದ ಮೀಸಲಾತಿಯೂ ಸಹ ವ್ಯತ್ಯಾಸಗಳು ಉಂಟಾಗಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.
ನಾಯಕರ ಮೇಲೆ ಒತ್ತಡ: ಕ್ಷೇತ್ರಗಳ ವಿಂಗಡಣೆಯಿಂದ ವಿಚಲಿತರಾಗಿರುವ ತಮ್ಮ ಹಿಡಿತಇರುವ ಕ್ಷೇತ್ರಗಳಲ್ಲಿ ಮೀಸಲಾತಿಯನ್ನು ತರಲು ಹಾಲಿಹಾಗೂ ಮಾಜಿ ಜನಪ್ರತಿನಿ ಧಿಗಳ ಮೇಲೆ ಒತ್ತಡಗಳುಹೆಚ್ಚಾಗಿದೆ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಟಿಕೆಟ್‌ಪಡೆಯಬೇಕಾದರೆ ಮೀಸಲಾತಿಯೂಇರಬೇಕಾಗುತ್ತದೆ. ಆ ನಿಟ್ಟಿನಲ್ಲಿ ಮೀಸಲಾತಿ ತರಲು ರಾಜಕೀಯ ಸದ್ದಿಲ್ಲದೆ ನಡೆಯುತ್ತಿವೆ. ತಮ್ಮ ಪಕ್ಷದನಾಯಕರ ಮೇಲೆ ಒತ್ತಡ ಹಾಕುವ ಮೂಲಕ ಮೀಸಲಾತಿ ತರುವ ಪ್ರಯತ್ನಗಳು ನಡೆಯುತ್ತಿದೆ.
ಪಕ್ಷಗಳ ಚಿಹ್ನೆಯಡಿ ಸ್ಪರ್ಧೆ :
ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷಗಳ ಹೊರತುಪಡಿಸಿ ನಡೆದರೂ, ಒಂದು ರೀತಿಯಲ್ಲಿ ಬೆಂಬಲಿತ ಅಭ್ಯರ್ಥಿಗಳೇ ಆಗಿದ್ದರು. ಆದರೆ ಜಿಪಂ ಹಾಗೂ ತಾಪಂ ಚುನಾವಣೆ ರಾಜಕೀಯ ಪಕ್ಷಗಳಚಿಹ್ನೆಯಡಿ ನಡೆಯುವುದರಿಂದ ಪಕ್ಷಗಳ ಟಿಕೆಟ್ ಪಡೆಯಲು ಲಾಬಿನಡೆಸಲಾಗುತ್ತಿದೆ. ಮೀಸಲಾತಿ ಪ್ರಕಟ ನಂತರ ಇದು ಜೋರಾಗುವಸಾಧ್ಯತೆ ಇದೆ. ಜಿಲ್ಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಸಾಂಪ್ರದಾಯಿಕ ಎದುರಾಳಿಗಳಾಗಿ ಪ್ರತಿ ಚುನಾವಣೆಯಲ್ಲಿ ಪೈಪೋಟಿ ನಡೆಯುತ್ತಿತ್ತು. ಆದರೆ ಕಳೆದ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿಯಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಈಗ ಜಿಪಂ ಹಾಗೂ ತಾಪಂ ಚುನಾವಣೆಯಲ್ಲೂ ತನ್ನ ಸಾಮರ್ಥ್ಯ ಪ್ರದರ್ಶಿಸಲು ಬಿಜೆಪಿ ಸಜಾjಗಿದೆ.
ಪಕ್ಷಗಳಲ್ಲಿ ಪೈಪೋಟಿ : ಈಗಾಗಲೇ ಜಿಪಂ ಹಾಗೂ ತಾಪಂ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ಪಕ್ಷಗಳು ಅತಿ ಹೆಚ್ಚು ಸದಸ್ಯರ ಗೆಲ್ಲಲು ಇನ್ನಿಲ್ಲದ ಕಸರತ್ತು, ರಾಜಕೀಯಲೆಕ್ಕಾಚಾರ ಹಾಕುತ್ತಿವೆ. ಅಲ್ಲದೆ,ಸಮರ್ಥ ಅಭ್ಯರ್ಥಿಗಳ ಆಯ್ಕೆಗೂಮುಂದಾಗಿವೆ. ಆಕಾಂಕ್ಷಿಗಳು ತಮ್ಮ ಪಕ್ಷದ ನಾಯಕರ ಮೇಲೆ ಈಗಾಗಲೇ ಟಿಕೆಟ್‌ಗಾಗಿ ದುಂಬಾಲು ಬಿದ್ದಿದ್ದಾರೆ.
– ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೆಕೆಆರ್‌ಡಿಬಿಯಲ್ಲಿ ಕಾಂಗ್ರೆಸ್ ಮುಖಂಡರಿಗೆ ಮಾತ್ರ ಅವಕಾಶ: ಪ್ರತಿಪಕ್ಷ ಸದಸ್ಯರ ಬೇಸರ
Rain: 5 ವಿದ್ಯುತ್ ನಿಗಮ ವ್ಯಾಪ್ತಿಯಲ್ಲಿ 156 ಕೋಟಿರೂ. ಸೌಕರ್ಯ ಹಾನಿ: ಕೆ.ಜೆ. ಜಾರ್ಜ್
Winter Session: ಸರ್ಕಾರದ ವರ್ತನೆಗೆ ವಿಪಕ್ಷ ಸದಸ್ಯರ ಆಕ್ರೋಶ: ಸಭಾಪತಿ ಹೊರಟ್ಟಿ ಎಚ್ಚರಿಕೆ
Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.