ಅಗ್ನಿ ಸುರಕ್ಷಾ ಕ್ರಮ ಅನುಸರಿಸಿ: ಶಿವಕುಮಾರ್
Team Udayavani, Apr 18, 2021, 4:27 PM IST
ಮದ್ದೂರು: ಅಮೂಲ್ಯ ಜೀವಕ್ಕಾಗಿ ಅಗ್ನಿ ಸುರಕ್ಷಾ ಕ್ರಮಗಳನ್ನು ಅನುಸರಿಸಿ ನಡೆಯುತ್ತಿರುವ ಅಗ್ನಿ ಅವ ಘಡಗಳನ್ನು ತಪ್ಪಿಸಬೇಕೆಂದು ಮದ್ದೂರು ಅಗ್ನಿಶಾಮಕ ಠಾಣಾಧಿಕಾರಿ ಶಿವಕುಮಾರ್ ತಿಳಿಸಿದರು. ಪಟ್ಟಣದ ವಿವಿಧ ಸ್ಥಳಗಳಲ್ಲಿ ಅಗ್ನಿಶಾಮಕ ಠಾಣೆ ವತಿಯಿಂದ ಆಯೋಜಿಸಿದ್ದ ಅಗ್ನಿಶಾಮಕ ಸೇವಾ ಸಪ್ತಾಹ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, 14-4-1944 ರಂದು ಮುಂಬೈನ ವಿಕ್ಟೋರಿಯಾ ಡಾಕ್ ಬಂದರಿನಲ್ಲಿ ಸ್ಫೋಟಕ ವಸ್ತುಗಳನ್ನು ಸಾಗಿಸು ತ್ತಿದ್ದ ವೇಳೆ ಆಕಸ್ಮಿಕ ಬೆಂಕಿ ತಗುಲಿದ ಹಿನ್ನೆಲೆಯಲ್ಲಿ ಬೆಂಕಿ ನಂದಿಸಲು ಮುಂಬೈನ ಅಗ್ನಿಶಾಮಕ ಅಧಿಕಾರಿಗಳು, ಸಿಬ್ಬಂದಿಗಳು ತೆರಳಿದ್ದ ವೇಳೆ ಹಡಗು ಸ್ಫೋಟಗೊಂಡು 66 ಮಂದಿ ವೀರ ಮರಣ ಹೊಂದಿದ ಹಿನ್ನೆಲೆಯಲ್ಲಿ ಹುತಾತ್ಮರ ನೆನಪಿಗಾಗಿ ಪ್ರತಿ ವರ್ಷ ಆ ದಿನವನ್ನು ಅಗ್ನಿ ಶಾಮಕ ಸೇವಾ ಸಪ್ತಾಹವನ್ನಾಗಿ ಆಚರಿಸುತ್ತಿರುವುದಾಗಿ ತಿಳಿಸಿದರು.
ಕೈಜೋಡಿಸಿ: ಇತ್ತೀಚಿನ ದಿನಗಳಲ್ಲಿ ಬೆಂಕಿ ಅವಘಡಗಳಿಂದ ಅಪಾರ ಪ್ರಮಾಣದ ಸಾವು, ನೋವುಗಳು ಸಂಭವಿಸುತ್ತಿರುವುದು ವಿಷಾದ ನೀಯ ಸಂಗತಿಯಾಗಿದ್ದು, ಇದನ್ನರಿತು ಪ್ರತಿಯೊಬ್ಬರು ಅಗ್ನಿ ಅನಾಹುತ ಮುಕ್ತ ಭಾರತಕ್ಕಾಗಿ ಶ್ರಮಿಸುವ ಮೂಲಕ ಇಲಾಖೆಯೊಟ್ಟಿಗೆ ಕೈಜೋಡಿಸಿ ಇತರರಿಗೂ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕೆಂದರು.
ಮರಳು ಬಳಸಿ: ಹುಲ್ಲಿನ ಮೆದೆ, ಮರದ ರಾಶಿ, ಮನೆಗಳು ಬೆಂಕಿಗಾಹುತಿಯಾದಾಗ ಅಧಿಕ ಪ್ರಮಾಣದ ಮರಳು ಮತ್ತು ನೀರನ್ನು ಸುರಿಯುವ ಜತೆಗೆ ಪೆಟ್ರೋಲ್, ಸಿಮೆಎಣ್ಣೆ ಹಾಗೂ ಇತರೆ ಎಣ್ಣೆ ಪದಾರ್ಥಗಳಿಗೆ ಬೆಂಕಿ ತಗುಲಿದಾಗ ನೀರನ್ನು ಬಳಸದೆ ಹೆಚ್ಚು ಮರಳನ್ನು ಬಳಸುವ ಮೂಲಕ ಬೆಂಕಿ ನಂದಿಸಲು ಮುಂದಾಗಬೇಕೆಂದರು. ಅಪಾಯಕಾರಿ ವಸ್ತುಗಳನ್ನು ಮನೆಯಲ್ಲಿ ಶೇಖರಿಸುವುದರಿಂದ ಬೆಂಕಿ ಅನಾಹುತಗಳು ಸಂಭವಿಸಿ ಅಪಾರ ಪ್ರಮಾಣದ ಸಾವು, ನೋವು, ಮನೆ ಜಖಂ ಪ್ರಕರಣ ಕಂಡುಬರುತ್ತಿದ್ದು ಇದನ್ನರಿತು ವಿದ್ಯಾರ್ಥಿಗಳು ಸಂಘ, ಸಂಸ್ಥೆಗಳ ಪದಾಧಿಕಾರಿಗಳು ತಮ್ಮ ಗ್ರಾಮದಲ್ಲಿ ಅಗ್ನಿ ಸುರಕ್ಷತೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗುವಂತೆ ಮನವಿ ಮಾಡಿದರು.
ಏ.14ರ ಬುಧವಾರದಿಂದ ಏ.20ರ ವರೆಗೆ ತಾಲೂಕಿನಾದ್ಯಂತ ಅಗ್ನಿಶಾಮಕ ಸೇವಾ ಸಪ್ತಾಹ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದಾಗಿ ತಿಳಿಸಿದರಲ್ಲದೇ ಪಟ್ಟಣದ ತಾಲೂಕು ಕಚೇರಿ, ಬಸ್ ನಿಲ್ದಾಣ, ಸಂಜಯ ವೃತ್ತ, ನಗರಕೆರೆ ವೃತ್ತ ಇನ್ನಿತರೆಡೆ ಸೇವಾ ಸಪ್ತಾಹ ಕಾರ್ಯಕ್ರಮ ಕೈಗೊಳ್ಳುವ ಮೂಲಕ ಸ್ಥಳೀಯ ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಈ ವೇಳೆ ಅಗ್ನಿಶಾಮಕ ಠಾಣೆ ಸಿಬ್ಬಂದಿಗಳಾದ ಅಂಜನಿ, ಶ್ರೀನಿವಾಸ್, ಬಾಬು, ಪ್ರೀತಮ್, ಅಕ್ಷರದಾಸೋಹ ನಿರ್ದೇಶಕಿ ಡಾ.ಮಂಗಳಮ್ಮ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.