ಸುರಕ್ಷಾ ಕ್ರಮ ಅನುಸರಿಸಿ: ಡಿಎಚ್‌ಒ
Team Udayavani, May 18, 2020, 7:07 AM IST
ಮಂಡ್ಯ: ಲಾಕ್‌ಡೌನ್ ಸಡಿಲಿಕೆ ನಂತರವೂ ಸುರಕ್ಷತಾ ಕ್ರಮಗಳ ಮೂಲಕ ಎಚ್ಚರಿಕೆ ವಹಿಸಿ ಕೊರೊನಾ ತೀವ್ರತೆ ತಡೆಗಟ್ಟಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಚೇಗೌಡ ಸಲಹೆ ನೀಡಿದರು.
ನಗರದಲ್ಲಿ ಡಿ.ದೇವರಾಜ ಅರಸು ವೇದಿಕೆ, ಸಾಂಜೋ ಆಸ್ಪತ್ರೆ ಮತ್ತು ಸಾಂಥೋಂ ಸಂಸ್ಥೆ ಆಯೋಜಿಸಿದ್ದ ಕೊರೊನಾ ಮತ್ತು ಕಾಯಕ ಸಮಾಜಗಳ ಸ್ಥಿತಿಗತಿ ಕುರಿತ ಅವಲೋಕನ ಕಾರ್ಯಕ್ರಮದಲ್ಲಿ ವಿವಿಧ ಹಿಂದುಳಿದ ಸಮಾಜಗಳಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದರು. ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾವಿನ ಸಂಖ್ಯೆ ಕಡಿಮೆ ಇದೆ.
ಆದರೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಎಚ್ಚರಿಕೆ ಅಗತ್ಯ. ಲಾಕ್‌ಡೌನ್‌ನಲ್ಲಿ ಕೆಲವು ಸಡಿಲಿಕೆ ಸಿಕ್ಕರೂ ಸಾಮಾಜಿಕ ಅಂತರ, ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆಯಂತಹ ಸುರಕ್ಷತಾ ಕ್ರಮಗಳನ್ನು ಮುಂದುವರಿಸಬೇಕು ಎಂದರು. ಕೊರೊನಾ ವೈರಸ್‌ಗೆ ಇದುವರೆಗೂ ಯಾವುದೇ ಔಷಧ-ಚುಚ್ಚುಮದ್ದು ಕಂಡು ಹಿಡಿಯದ ಕಾರಣ ಕೊರೊನಾ ಜೊತೆ ಬದುಕುವ ಸ್ಥಿತಿ ಬಂದಿದೆ. ಕೊರೊನಾ ವಿರುದ್ದ ಹೋರಾಡುತ್ತಲೇ ನಮ್ಮ ಜೀವ ರಕ್ಷಿಸಿಕೊಳ್ಳಬೇಕು.
ವಿಶೇಷವಾಗಿ ಮಕ್ಕಳು, ಬಾಣಂತಿಯರು, ವೃದಟಛಿರು ಹೆಚ್ಚಿನ ಕಾಳಜಿ ಹೊಂದಬೇಕು ಎಂದರು. ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಸಂದೇಶ್, ಸಾಂಥೋಂ ಸಮಾಜ ಸೇವಾ ವಿಭಾಗದ ಮುಖ್ಯಸ್ಥ ಜೋಷ್ ಕುಟ್ಟಿ, ಹಿಂದುಳಿದ ಸಮಾಜದ ಮುಖಂಡರಾದ ಕೃಷ್ಣ, ದಾಸ್‌ಪ್ರಕಾಶ್, ಸಿದ್ದಶೆಟ್ಟಿ, ಕಲಾವಿದ ಪ್ರಕಾಶ್, ಕಾಂತರಾಜು, ಸೋಮಣ್ಣ, ವೈರಮುಡಿ,ಪ್ರದೀಪ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.