ಭೂಮಿ ಹಕ್ಕಿಗಾಗಿ ನಿರಂತರ ಹೋರಾಟ
ಅರಣ್ಯ ಭೂಮಿ ಹಕ್ಕಿಗಾಗಿ 8 ವರ್ಷಗಳಿಂದ ನಿರಂತರ ಹೋರಾಟ: ಸ್ಪಂದಿಸದ ಜಿಲ್ಲಾಡಳಿತ
Team Udayavani, Oct 8, 2021, 5:58 PM IST
ರಾಮನಗರ: ಹಂದಿಗೊಂದಿ ಅರಣ್ಯ ಪ್ರದೇಶದಲ್ಲಿ ಇರುಳಿಗ ಬುಡಕಟ್ಟು ಸಮುದಾಯದ ಕುಟುಂಬಗಳು ನಡೆಸುತ್ತಿರುವ ಧರಣಿ ಪ್ರತಿ ಭಟನೆ ಗುರುವಾರ 227ನೇ ದಿನಕ್ಕೆ ಕಾಲಿಟ್ಟಿದೆ.
8 ವರ್ಷದಿಂದ ಹೋರಾಟ: ಈ ವಿಚಾರದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ, ಗ್ರಾಮ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಕೃಷ್ಣ ಮೂರ್ತಿ 2006ರ ಅರಣ್ಯ ಹಕ್ಕು ಕಾಯ್ದೆ ಪ್ರಕಾರ, ಸುಮಾರು 8 ವರ್ಷಗಳಿಂದ ಅರಣ್ಯ ಭೂಮಿಯ ಹಕ್ಕು ಪತ್ರಕ್ಕಾಗಿ ಹೋರಾಟನಡೆಸುತ್ತಿದ್ದರು. ಜಿಲ್ಲಾಡಳಿತ ಸ್ಪಂದಿಸಿಲ್ಲ ಎಂದು ಆರೋಪಿಸಿದರು.
ಮೂಲ ಸ್ಥಳದಲ್ಲೇ ಭೂಮಿಗೆ ಬೇಡಿಕೆ: 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ರಾಷ್ಟ್ರೀಯ ಉದ್ಯಾನ ಹಾಗೂಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರನ್ನು ಬೇರೆ ಕಡೆ ಭೂಮಿ ಕೊಟ್ಟು ಸ್ಥಳಾಂತರಿಸಬೇಕೆಂಬ ಆದೇಶವಿತ್ತು. ಇದನ್ನೆ, ಅಸ್ತ್ರವಾಗಿ ಬಳಸಿಕೊಂಡು ಅರಣ್ಯ ಇಲಾಖೆ ರಾಜ್ಯ ಮತ್ತು ಸಾಮಾನ್ಯ ಅರಣ್ಯ ಪ್ರದೇಶದಿಂದಲೂ ಬುಡಕಟ್ಟು ಜನಾಂಗದವರನ್ನು ಒಕ್ಕಲೆಬಿಸಲಾಗಿತ್ತು.
ನಂತರ 2006ರ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದಿದೆ. ಅರಣ್ಯ ಹಕ್ಕು ಕಾಯ್ದೆ ಸೆಕ್ಷನ್ 3(1)ಎಂ ಪ್ರಕಾರ ಹಿಂದೆ ಅರಣ್ಯ ಪ್ರದೇಶದಿಂದ ಒಕ್ಕಲೆಬಿಸಿರುವ ಜಾಗದಲ್ಲಿಯೇ ಅರಣ್ಯ ಭೂಮಿ ಒಳಗೊಂಡಂತೆ ಅಲ್ಲಿಯೇ ಪುನರ್ ವಸತಿ ಕಲ್ಪಿಸಲು ಅವಕಾಶವಿದೆ.
ಅರಣ್ಯ ಇಲಾಖೆ ಆಕ್ಷೇಪಣೆ: ಈ ವಿಚಾರದಲ್ಲಿ ಸರ್ವೆ ಕಾರ್ಯ ನಡೆಸಿ ವಿಶೇಷ ಗ್ರಾಮಸಭೆಯಲ್ಲಿ ಫಲಾನುಭವಿಗಳು ಆಯ್ಕೆಯಾದರು ಸಹ ಅರಣ್ಯ ಇಲಾಖೆ ತಕರಾರು ಮಾಡುತ್ತಿದೆ. 2019ರಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶ ಸಹ ಬುಡಕಟ್ಟು ಸಮುದಾಯಕ್ಕೆ ಭೂಮಿ ನೀಡುವಂತೆ ತೀರ್ಪು ನೀಡಿದೆ. ಅದಕ್ಕೂ ಅರಣ್ಯ ಇಲಾಖೆ ಮಾನ್ಯ ಮಾಡುತ್ತಿಲ್ಲ ಎಂದು ದೂರಿದರು.
ಇದನ್ನೂ ಓದಿ:- ಒತ್ತಡಗಳಿಗೆ ಮಣಿಯದೆ ಕ್ರಮ ಕೈಗೊಳ್ಳಲಾಗುವುದು : ಸಿಎಂ ಯೋಗಿ ಆದಿತ್ಯನಾಥ್
ವಾದ-ವಿವಾದ ಜಟಿಲ: ಭೂಮಿ ಹಕ್ಕಿಗಾಗಿ ಹೋರಾಟ ಮಾಡುತ್ತಿರುವ ಕುಟುಂಬಗಳು, ತಾವು ಅರಣ್ಯದಲ್ಲಿ ವಾಸ ಮಾಡುತ್ತಿದ್ದ ಸ್ಥಳ, ಅಲ್ಲಿನ ಬದುಕು, ಒರಳುಕಲ್ಲು, ಪೂಜಾ ಸ್ಥಳ ಮುಂತಾದ ಸಾಕ್ಷ್ಯಗಳನ್ನು ನೀಡಿದೆ. 1993-94ರಲ್ಲಿ ರಾಮನಗರ ತಹಶೀಲ್ದಾರ್ ಕಚೇರಿಯ ಹಿಂಬರಹ, ಹಾಗೂ ಸ್ಮಶಾನ ಮುಂತಾದ ಸಾಕ್ಷಗಳಿವೆ. ಆದರೆ ರಾಮನಗರ ವಲಯ ಅರಣ್ಯಾಧಿಕಾರಿಗಳು ಈ ಒಪ್ಪಂದ ಕಾನೂನು ಬಾಹಿರ ಎಂದು ಹಿಂಬರಹ ನೀಡಿದ್ದಾರೆ. ಇದನ್ನು ಪ್ರಶ್ನಿಸಿ ರಾಮನಗರ ಉಪವಿಭಾಗ ಮಟ್ಟದ ಅರಣ್ಯ ಹಕ್ಕು ಸಮಿತಿಗೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ದಿನಾಂಕ 23ರ ಫೆಬ್ರವರಿ 2021ರಂದು ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ , ಪಂಚಾಯತ್ ರಾಜ್ ಇಲಾಖೆ ಹಾಗೂ ಗ್ರಾಮಮಟ್ಟದ ಅರಣ್ಯ ಹಕ್ಕು ಸಮಿತಿ ಜೊತೆಯಲ್ಲಿ ಸ್ಥಳ ಪರಿಶೀಲಿಸಲು ತಿಳಿಸಿತ್ತು.
ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ನಿಗದಿತ ದಿನಾಂಕದಂದು ಬಂದಿದ್ದರು. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಬರಲಿಲ್ಲ. ಹೀಗಾಗಿ ಅಂದಿನಿಂದ ಅದೇ ಸ್ಥಳದಲ್ಲಿ ಅಹೋರಾತ್ರಿ ಧರಣಿ ಪ್ರತಿಭಟನೆ ನಡೆಸುತ್ತಿ ರುವುದಾಗಿ ವಿವರಿಸಿದರು.
ಮತ್ತೆ ಅದೇ ಚಾಳಿ: ದಿನಾಂಕ ಜುಲೈ 17, 2021ರಂದು ಉಪವಿಭಾಗ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ಅರಣ್ಯ ಭೂಮಿ ಮಂಜೂರು ಮಾಡಲು ತೀರ್ಮಾನಕ್ಕೆ ಬರಲಾಗಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತೆ ಸ್ಥಳ ಪರಿಶೀಲಿಸಿ ಸಹಿ ಮಾಡುವುದಾಗಿ ಹೇಳಿದರು. ಈ ಹಿನ್ನೆಲೆಯಲ್ಲಿ ಉಪವಿಭಾಗ ಅಧಿಕಾರಿಗಳು ಜುಲೈ 31, 2021 ಸ್ಥಳ ಪರಿಶೀಲನೆಗೆ ದಿನಾಂಕ ನಿಗದಿಪಡಿಸಿದರು. ಆದರೆ ಮತ್ತೆ ಅರಣ್ಯ ಇಲಾಖೆ ತಮ್ಮ ಹಳೆಯ ಚಾಳಿಯನ್ನೇ ಮುಂದುವರೆಸಿದ್ದಾರೆ. ತಮ್ಮ ಪ್ರತಿಭಟನೆ 227ನೇ ದಿನಕ್ಕೆ ಕಾಲಿಟ್ಟರು ಸಹ ಜಿಲ್ಲಾಡಳಿತ ಸ್ಪಂದಿಸಿಲ್ಲ ಎಂದು ಕೃಷ್ಣಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.