ಕಬ್ಬು ಬಾಕಿ ಪಾವತಿಗೆ ಆಗ್ರಹಿಸಿ ಅಹೋರಾತ್ರಿ ಧರಣಿ
ಚಾಂಷುಗರ್ ಕಾರ್ಖಾನೆ ವಿರುದ್ಧ ರೊಚ್ಚಿಗೆದ್ದ ರೈತರು • ಮುಖ್ಯದ್ವಾರದ ಬಳಿ ಕಾರ್ಮಿಕರನ್ನು ಒಳಬಿಡದೆ ಆಕ್ರೋಶ
Team Udayavani, May 8, 2019, 3:42 PM IST
ಭಾರತೀನಗರ: ರೈತರು ಸರಬರಾಜು ಮಾಡಿದ ಕಬ್ಬು ಬಾಕಿ ಪಾವತಿಸಲು ಆಗ್ರಹಿಸಿ ಚಾಂಷುಗರ್ ಕಾರ್ಖಾನೆ ವಿರುದ್ಧ ರೊಚ್ಚಿಗೆದ್ದ ರೈತರು ಕಾರ್ಮಿ ಕರನ್ನು ಕೆಲಸಕ್ಕೆ ತೆರಳದಂತೆ ಅಡ್ಡಗಟ್ಟಿ ಮುಖ್ಯದ್ವಾರದ ಬಳಿ ಅಹೋರಾತ್ರಿ ಧರಣಿ ನಡೆಸಿದರು.
ರೈತರು ಬಾಕಿ ಹಣಕ್ಕಾಗಿ ಹಲವಾರು ಪ್ರತಿಭಟನೆ ನಡೆಸಿದರೂ ಕ್ರಮ ಕೈಗೊಳ್ಳದೆ ರೈತರನ್ನು ಸತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ವಿರುದ್ಧ ರೊಚ್ಚಿಗೆದ್ದ ರೈತರು ಕಾರ್ಮಿಕರು ಕೆಲಸಕ್ಕೆ ತೆರಳುವ ವೇಳೆ ಮುಖ್ಯದ್ವಾರದ ಬಳಿ ಅಡ್ಡಗಟ್ಟಿ ಆಡಳಿತ ಮಂಡಳಿ ಬಾಕಿ ಹಣ ನೀಡುವವರೆಗೂ ಒಳಪ್ರವೇಶಿಸದಂತೆ ತಡೆದು ಕಬ್ಬು ಬೆಳೆಗಾರರು ಅಹೋರಾತ್ರಿ ಧರಣಿ ಕುಳಿತರು.
ರೈತರ ಅಲೆದಾಟ: ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿ ಆರೇಳು ತಿಂಗಳು ಕಳೆದಿದೆ. 35 ಕೋಟಿ ರೂ. ಬಾಕಿ ಹಣ ಪಾವತಿಸಬೇಕಿದೆ. ಬಾಕಿ ಪಾವತಿಸದ ಕಾರಣ ರೈತರು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದಾರೆ.
ರೈತರು ಪ್ರತಿಭಟಿಸಿದಾಗಲೆಲ್ಲಾ ನಾಲ್ಕೈದು ಬಾರಿ ಕಾಲಾವಕಾಶ ಕೇಳಿಕೊಂಡಿದ್ದರು. ಆದರೂ ತಿಂಗಳುಗಳು ಉರುಳಿದರೂ ಬಾಕಿ ಮಾತ್ರ ಪಾವತಿಯಾಗಿಲ್ಲ. ಸಾಲ ಮಾಡಿ ಕಬ್ಬು ಬೆಳೆದು ಕಾರ್ಖಾನೆಗೆ ಸರಬರಾಜು ಮಾಡಿ ಹಣಕ್ಕಾಗಿ ಅಲೆಯುವಂತಾಗಿದೆ. ಆಡಳಿತ ಮಂಡಳಿ ರೈತರನ್ನು ಗೋಳಾಡಿಸುತ್ತಿದೆ.
ರೈತರ ಸಹನೆ, ತಾಳ್ಮೆ ಮೀರಿ ಹೋಗಿದೆ. ಹಣ ಕೊಡುವವರೆಗೂ ಕಾರ್ಖಾನೆ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಕುಳಿತರು.
ಹೊರಗುಳಿದ ನೌಕರರು: ರೈತರು ಕಾರ್ಖಾನೆಗೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತಿದ್ದುದರಿಂದ 500ಕ್ಕೂ ಹೆಚ್ಚು ಕಾರ್ಮಿಕರು (ನೌಕರರು) ಒಳಗೆ ಹೋಗಲಾಗದೆ ಹೊರಗೆ ಉಳಿಯುವಂತಾಯಿತು. ಇದರಿಂದ ಕಾರ್ಮಿಕರು ಕಾರ್ಖಾನೆಯ ರಸ್ತೆ ಬದಿಯಲ್ಲೇ ಸಂಜೆಯವರೆಗೂ ನಿಲ್ಲುವಂತಾಯಿತು.
ಪ್ರತಿಭಟನೆಯಲ್ಲಿ ಶೆಟ್ಟಹಳ್ಳಿ ಹೊನ್ನೇಗೌಡ, ಬೋರಾಪುರ ಪ್ರಕಾಶ್, ಕರಡಕೆರೆ ಹನುಮಂತು, ಗೌಡಯ್ಯನದೊಡ್ಡಿ ಭರತ್, ಕಲ್ಲಳ್ಳಿ ಶಿವಣ್ಣ, ಕುಳ್ಳೇಗೌಡ ಪರಿಮಳ, ಸ್ವಾಮಿ, ಸಂಪತ್, ನಾರಾಯಣ್ ಸುತ್ತಮುತ್ತಲ ಗ್ರಾಮಗಳ ರೈತರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.