2023ಕ್ಕೆ ನನ್ನ ಸ್ಪರ್ಧೆ ಖಚಿತ: ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ
Team Udayavani, Dec 19, 2021, 1:35 PM IST
ನಾಗಮಂಗಲ: 2023ಕ್ಕೆ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ನಾನು ಸ್ಪರ್ಧಿಸ ಲಿದ್ದು,ಮುಂಬರುವ ಸಂಕ್ರಾಂತಿಯ ನಂತರ ತಾಲೂಕಿ ನಾದ್ಯಾಂತ ಪ್ರವಾಸ ಹಮ್ಮಿ ಕೊಳ್ಳು ತ್ತೇನೆ ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಹೇಳಿದರು.
ನಾಗಮಗಲ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನಲ್ಲಿ 2 ಬಾರಿ ಶಾಸಕನಾಗಿ, ಒಂದು ಬಾರಿ ಸಂಸದನಾಗಿ ಆಯ್ಕೆಯಾಗಿ ಜನಸೇವೆ ಮಾಡಿ ದ್ದೇನೆ. ತಾಲೂಕಿನಲ್ಲಿ ಜೆಡಿಎಸ್ ಕಾರ್ಯಕರ್ತರ ಹಿತ ಕಾಯುವ ದೃಷ್ಟಿಯಿಂದ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿತನಾಗಿದ್ದು, ಜೆಡಿಎಸ್ ನಿಂದಲೇ ಕಣಕ್ಕಿಳಿಯುತ್ತೇನೆ. ತಾಲೂಕಿನ ಜನತೆಯ ನಾಡಿ ಮಿಡಿತ ನನಗೆ ಚೆನ್ನಾಗಿ ಗೊತ್ತಿದೆ. ತಾಲೂಕಿನ ಜನತೆಯ ಹಿತ ಕಾಯಲು ನನ್ನ ಸ್ಪರ್ಧೆ ಅನಿವಾರ್ಯವೆಂದರು.
ವಿಶ್ವಾಸವಿದೆ: 2023ಕ್ಕೆ ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಖಂಡಾತುಂಡಾಗಿ ತಿಳಿಸಿದರಲ್ಲದೇ, 2023ಕ್ಕೆ ನನ್ನ ಸ್ಪರ್ಧೆಯ ವಿಷಯವನ್ನು ಈಗಾಗಲೇ ನಮ್ಮ ವರಿಷ್ಠರಾದ ದೇವೇಗೌಡರು, ಕುಮಾರಣ್ಣನವರ ಗಮನಕ್ಕೆ ತಂದಿದ್ದು, ಟಿಕೆಟ್ ಕೊಡುವ ಸಂಪೂರ್ಣ ವಿಶ್ವಾಸ ನನಗಿದೆ ಎಂದರು.
ಷಡ್ಯಂತ್ರದಿಂದ ಅಪ್ಪಾಜಿಗೌಡರ ಸೋಲು: ಅಪ್ಪಾಜಿಗೌಡರ ಸೋಲು ಜೆಡಿಎಸ್ ಸೋಲಲ್ಲ. ಜೆಡಿಎಸ್ ಬೆಂಬಲಿತ ಮತದಾರರು 1900 ಮಾತ್ರ ಇತ್ತು. ಅಷ್ಟೂ ಮತಗಳನ್ನು ನಾವು ಪಡೆದುಕೊಂಡಿದ್ದೇವೆ. ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಲೇ ಬೇಕು ಎಂದುಪಣ ತೊಟ್ಟು ಕಾಂಗ್ರೆಸ್, ಬಿಜೆಪಿ, ರೈತ ಸಂಘಮಾಡಿಕೊಂಡ ಒಳ ಒಪ್ಪಂದದ ಷಡ್ಯಂತ್ರದಿಂದ ಅಪ್ಪಾಜಿಗೌಡರಿಗೆ ಸೋಲಾಯಿತು ಎಂದರು.
ಅಭಿವೃದ್ಧಿ ಕೆಲಸ: ರಾಜಕೀಯ ಮುತ್ಸದಿ ಅಪ್ಪಾಜಿಗೌಡ: ನಾನು ನನ್ನ ರಾಜಕೀಯ ಜೀವನದಲ್ಲಿ ಕಂಡಂತೆ ಅತ್ಯಂತ ಶಿಸ್ತು ಮತ್ತು ನಿಷ್ಟಾವಂತರು ಯಾರಾದರೂ ಇದ್ದರೆ ಅದು ಅಪ್ಪಾಜಿಗೌಡರು ಮಾತ್ರ. ಅವರು ತಮ್ಮ ಅಧಿಕಾರಾವಧಿಯಲ್ಲಿ ಯಾರ ಮನಸ್ಸಿಗೂನೋವುಂಟು ಮಾಡಿಲ್ಲ. ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಮತದಾರರು ಜೆಡಿಎಸ್ ಬಿಟ್ಟು ಎಲ್ಲೂ ಹೋಗಲ್ಲ. ಕಾಂಗ್ರೆಸ್‌ಗೆಲ್ಲಿಸಿದ್ದೇವೆ, ಇನ್ನೇನು ಜೆಡಿಎಸ್ ಕಥೆ ಮುಗಿದೇಹೋಯಿತು ಎಂದು ವಿರೋಧಿಗಳು ಬೀಗಬೇಕಾಗಿಲ್ಲ. ಜಿಲ್ಲೆಯಲ್ಲಿ ಜೆಡಿಎಸ್ ಈಗಲೂಬಲಿಷ್ಟವಾಗಿದ್ದು, ಮುಂಬರುವ ತಾಪಂ,ಜಿಪಂನಲ್ಲಿ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ಅಧಿಕಾರ ಹಿಡಿಯಲಿದ್ದೇವೆಂದರು.
ದಿನೇಶ್‌ಗೂಳಿಗೌಡ ನನ್ನ ಸ್ನೇಹಿತನಾದರೂ ಅವರಿಗೆ ರಾಜಕೀಯದ ಗಂಧ ಗಾಳಿ ಗೊತ್ತಿಲ್ಲ, ರಾಜಕೀಯದ ಅನುಭವ ಮೊದಲೇ ಇರಲಿಲ್ಲ. ಒಬ್ಬ ಸಚಿವರ ಹತ್ತಿರ ಆಪ್ತ ಸಹಾಯಕರಾಗಿದ್ದ ಅಧಿಕಾರಿಯನ್ನು ಕರೆದುಕೊಂಡು ಬಂದು ಒಬ್ಬ ರಾಜಕೀಯ ಮುತ್ಸದ್ಧಿ ಅಪ್ಪಾಜಿಗೌಡರನ್ನು ಸೋಲಿಸಿದ್ದಾರೆ. ಹಣ ಬೆಂಬಲದಿಂದ ಕಾಂಗ್ರೆಸ್ ಗೆದ್ದಿದೆಯೇ ಹೊರತು ಜನಬೆಂಬಲದಿಂದ ಅಲ್ಲ. –ಎಲ್.ಆರ್.ಶಿವರಾಮೇಗೌಡ, ಮಾಜಿ ಸಂಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.