ಕುಟುಂಬ ರಾಜಕಾರಣಕೆ ಬೇಸತ್ತು ಕೈಗೆ ಬೆಂಬಲ


Team Udayavani, Feb 4, 2023, 3:58 PM IST

tdy-16

ಮಂಡ್ಯ: ಜೆಡಿಎಸ್‌ ಪಕ್ಷ ಒಂದು ಕುಟುಂಬಕ್ಕೆ ಸೀಮಿತವಾಗಿದೆ. ಪಕ್ಷದ ಕುಟುಂಬ ರಾಜಕಾರಣಕ್ಕೆಬೇಸತ್ತು ಪಕ್ಷದಿಂದ ಹೊರ ಬಂದು ಕಾಂಗ್ರೆಸ್‌ಬೆಂಬಲಿಸಲು ಮುಂದಾಗಿದ್ದೇವೆ ಎಂದು ಮನ್‌ ಮುಲ್‌ ಮಾಜಿ ಅಧ್ಯಕ್ಷ ಜವರೇಗೌಡ ಹೇಳಿದರು.

45 ವರ್ಷಗಳಿಂದ ಜೆಡಿಎಸ್‌ ಪಕ್ಷಕ್ಕಾಗಿ ದುಡಿದುಕೊಂಡು ಬಂದಿದ್ದೇವೆ. ಆದರೆ, ಅಲ್ಲಿ ಹಿರಿಯರೆಂಬ ಯಾವುದೇ ಗೌರವ ಇಲ್ಲ. ಕುಟುಂಬ ರಾಜಕಾರಣದಲ್ಲೇ ಮುಳುಗಿದೆ. ಅವರ ಮಕ್ಕಳು,ಮೊಮ್ಮಕ್ಕಳಿಗೆ ಜೀತ ಮಾಡಲು ನಾವು ಸಿದ್ಧರಿಲ್ಲ. ಆದ್ದರಿಂದ ನಾನು, ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷಬೆಟ್ಟೇಗೌಡರು, ತಾಪಂ ಮಾಜಿ ಅಧ್ಯಕ್ಷ ದಾಸೇಗೌಡಮೂವರು ಸಹ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದೇವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುರೇಶ್‌ಗೌಡ ಬೆಳೆಯಲು ಚಲುವರಾಯಸ್ವಾಮಿ ಕಾರಣ: ನನ್ನ ಹಾಗೂ ಚಲುವರಾಯಸ್ವಾಮಿ ನಡುವೆ ಬಿನ್ನಾಭಿಪ್ರಾಯವಿತ್ತು. ಆದರೆ, ಅವರು ಜಿಲ್ಲೆಯಲ್ಲಿಜೆಡಿಎಸ್‌ ಕಟ್ಟಿ ಬೆಳೆಸಿದ್ದರು. ಈಗ ಕಾಂಗ್ರೆಸ್‌ಗೆ ಬಂದು ಇಲ್ಲಿಯೂ ಸಹ ಪಕ್ಷವನ್ನು ಸದೃಢವಾಗಿ ಕಟ್ಟುವ ಕೆಲಸಮಾಡುತ್ತಿದ್ದಾರೆ. ಜೆಡಿಎಸ್‌ನ ಶಾಸಕ ಸುರೇಶ್‌ಗೌಡಬೆಳೆಯಲು ಇದೇ ಚಲುವರಾಯಸ್ವಾಮಿ ಕಾರಣರಾಗಿದ್ದಾರೆ ಎಂದರು.

ಜಿಲ್ಲೆಗೆ ಜೆಡಿಎಸ್‌ ಕೊಡುಗೆ ಶೂನ್ಯ: ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷ ಬೆಳೆಸಿದ್ದೇವೆ. ಆದರೆ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಗೂ ಮಾಜಿ ಸಿಎಂಎಚ್‌.ಡಿ.ಕುಮಾರಸ್ವಾಮಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿಲ್ಲ. ಕೇವಲ ಮತ ಗಳಿಕೆಗಾಗಿ ಹಾಗೂನಮ್ಮಂಥ ಹಿರಿಯ ನಾಯಕರನ್ನು ಪಕ್ಷಕ್ಕಾಗಿ ದುಡಿಸಿಕೊಳ್ಳಲು ಇಟ್ಟುಕೊಂಡಿದ್ದಾರೆ. ಜೆಡಿಎಸ್‌ನಿಂದ ಜಿಲ್ಲೆಗೆ ಅನ್ಯಾಯವೇ ಆಗಿದೆ ಎಂದು ಕಿಡಿಕಾರಿದರು.

ಸುರೇಶ್‌ಗೌಡರಿಂದ ಹಣ ನೀಡದೆ ಮೋಸ: 2018ರ ಚುನಾವಣೆಯಲ್ಲಿ ಸುರೇಶ್‌ಗೌಡ ಗೆಲುವಿಗೆ ಫೈಟರ್‌ ರವಿ ಹಣ ನೀಡಿದ್ದರಿಂದ ಸಾಧ್ಯವಾಯಿತು. ಅದೇರೀತಿ 2008ರ ಚುನಾವಣೆಯಲ್ಲಿ ಎಚ್‌.ಟಿ. ಕೃಷ್ಣೇಗೌಡರಿಂದ 32 ಲಕ್ಷ ರೂ. ಹಣ ಪಡೆದು ಚುನಾವಣೆ ನಡೆಸಿ ನಂತರ ಹಣ ನೀಡದೆ ಮೋಸ ಮಾಡಿದ್ದಾರೆ. 2004ರಲ್ಲಿ ಎಲ್‌.ಆರ್‌.ಶಿವರಾಮೇಗೌಡರು ಸುರೇಶ್‌ಗೌಡರನ್ನು ನಾಗಮಂಗಲಕ್ಕೆ ಕರೆತಂದು ರಾಜಕೀಯವಾಗಿ ಪರಿಚಯ ಮಾಡಿಸಿದರು. ಆದರೆ,ವಿಧಾನ ಪರಿಷತ್‌ ಚುನಾವಣೆಯಲ್ಲಿ ಎಲ್‌.ಆರ್‌.ಶಿವರಾಮೇಗೌಡ ವಿರುದ್ಧ ಮಾಡಿದರು. ಕಳೆದ ವರ್ಷ ನಡೆದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ಚುನಾವಣೆಯಲ್ಲಿ ಅಪ್ಪಾಜಿಗೌಡರನ್ನು ಸಹ ಸೋಲಿಸಿದರು ಎಂದು ಆರೋಪಿಸಿದರು.

ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ: ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. 2018ರ ಬಳಿಕ ಏಜೆಂಟರುಗಳದ್ದೇ ಕಾರು ಬಾರು. ಲಂಚಕ್ಕೆ ಮಿತಿ ಇಲ್ಲದಂತಾಗಿದೆ. ರೈತರು, ಜನಸಾಮಾನ್ಯರ ಕೆಲಸಗಳು ಹಣ ಇಲ್ಲದೆ ಆಗುತ್ತಿಲ್ಲ. ಇಡೀಕಚೇರಿಯ ಕಂಬಗಳು ಹಣ ಕೇಳುವಂತಾಗಿದೆ.ಸರ್ವೆಯರ್‌ಗಳಿಗೆ ಎಕರೆ ಒಂದಕ್ಕೆ 25 ಸಾವಿರ ರೂ. ಫಿಕ್ಸ್‌ ಮಾಡಲಾಗಿದೆ. ಇದರಿಂದ ಎಕರೆಗೆ 60 ಸಾವಿರರೂ.ನಿಂದ 1 ಲಕ್ಷದವರೆಗೂ ವ್ಯಾಪಾರ ನಡೆಯುತ್ತಿದೆ.ಹಣ ಕೊಡದಿದ್ದಕ್ಕೆ ನನ್ನ ಅರ್ಜಿಯನ್ನೇ ವಿಳಂಬಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಈಬಗ್ಗೆ ಲೋಕಾಯುಕ್ತ ತನಿಖೆಗೆ ಒತ್ತಾಯಿಸಲಾಗುವುದು ಎಂದು ಹೇಳಿದರು.

ಜಿಲ್ಲೆಗೆ ಬಂದಿದ್ದ ಯೋಜನೆ ಹಾಸನಕ್ಕೆ ಶಿಫ್ಟ್‌: ಜಿಲ್ಲೆಯಲ್ಲಿ ಕುಮಾರಸ್ವಾಮಿ ಅವರ ಮಾತಿಗೆ ಏಳುಮಂದಿ ಶಾಸಕರನ್ನು ಗೆಲ್ಲಿಸಲಾಯಿತು. ಆದರೆ,ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಯಿತು.ಮನ್‌ಮುಲ್‌ ಮಂಜೂರಾಗಿದ್ದ ಪಶು ಆಹಾರಉತ್ಪಾದನಾ ಘಟಕ, ಹಾಲಿನ ಪೌಡರ್‌ ಘಟಕವನ್ನು ಹಾಸನಕ್ಕೆ ತೆಗೆದುಕೊಂಡು ಹೋಗಲಾಯಿತು. ಹಾಸನಕ್ಕೆ ಐಐಟಿ, ಏರ್‌ಪೋರ್ಟ್‌ ಯೋಜನೆಕೊಂಡೊಯ್ದು ಮಂಡ್ಯ ಜಿಲ್ಲೆಗೆ ಶೂನ್ಯ ಕೊಡುಗೆ ನೀಡಿದ್ದಾರೆ. ಇರುವ ಏಕೈಕ ಮೈಷುಗರ್‌ ಕಾರ್ಖಾನೆಯನ್ನು ಆರಂಭಿಸಲಿಲ್ಲ ಎಂದುಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೃಷ್ಣೇಗೌಡ, ರಾಜೇಗೌಡ, ಬಾಲಕೃಷ್ಣ, ಸತ್ಯ, ಜಯಣ್ಣ, ಆನಂದಣ್ಣ ಹಾಜರಿದ್ದರು.

ಮತಕ್ಕಾಗಿ ಕಾರ್ಯಕರ್ತರ ಬಳಕೆ : ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸದ ಜೆಡಿಎಸ್‌ ಪಕ್ಷಕೇವಲ ಜಿಲ್ಲೆಯ ಜನರನ್ನು ಮತಕ್ಕಾಗಿ ಹಾಗೂಪಕ್ಷದ ಕಾರ್ಯಕರ್ತರನ್ನು ದುಡಿಯಲುಇಟ್ಟುಕೊಂಡಿದ್ದಾರೆ. ಆದ್ದರಿಂದ ಬೇಸತ್ತು ನಾವೆಲ್ಲರೂ ಕಾಂಗ್ರೆಸ್‌ ಪಕ್ಷ ಸೇರುತ್ತಿದ್ದೇವೆ. ಇನ್ನೂಗ್ರಾಪಂ, ತಾಪಂ, ಜಿಪಂ ಮಾಜಿ ಸದಸ್ಯರು ಸಹ ಸೇರ್ಪಡೆಗೆ ಮುಂದಾಗಿದ್ದಾರೆ ಎಂದು ಮನ್‌ ಮುಲ್‌ ಮಾಜಿ ಅಧ್ಯಕ್ಷ ಜವರೇಗೌಡ ತಿಳಿಸಿದರು.

ಟಾಪ್ ನ್ಯೂಸ್

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya-Temple

Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

Ashok-Mandya

Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್‌. ಅಶೋಕ್‌ ಆಗ್ರಹ

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.