Fraud: 25 ಕೋಟಿ ಕೊಡುವೆ ಎಂದು 1.1 ಕೋಟಿ ರೂ. ದೋಚಿದ!
Team Udayavani, Jan 24, 2024, 3:34 PM IST
ಮಂಡ್ಯ: ಒಂದು ಕೋಟಿ ರೂ. ಕೊಟ್ಟರೆ ಅದಕ್ಕೆ ಪ್ರತಿಯಾಗಿ ನಿಮ್ಮ ಟ್ರಸ್ಟ್‌ಗೆ 25 ಕೋಟಿ ರೂ. ದೇಣಿಗೆ ನೀಡುತ್ತೇನೆ ಎಂದು ನಂಬಿಸಿದ ವಂಚಕನೊಬ್ಬ 1.1 ಕೋಟಿ ರೂ. ದೋಚಿಕೊಂಡು ಪರಾರಿಯಾಗಿರುವ ಘಟನೆ ಮಳವಳ್ಳಿ ತಾಲೂಕಿನ ಹಲಗೂರು ಹೋಬಳಿಯ ಶಿಂಷಾಪುರದ ಕ್ರೆçಸ್ತ ಶಿಕ್ಷಣ ಸಂಸ್ಥೆಯಲ್ಲಿ ನಡೆದಿ ರು ವುದು ತಡವಾಗಿ ಬೆಳಕಿಗೆ ಬಂದಿದೆ.ಮಂಗ ಳೂರಿನ ಸೂರ್ಯ ಎಂಬಾತ ವಂಚನೆ ಮಾಡಿರುವ ಆರೋಪಿಯಾಗಿದ್ದು, ಈತನ ವಿರುದ್ಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನಿಂದ ಬಂದಿದ್ದ ಮೇರಿನ್ ಪಿಂಟೋ ಅವರು ಮಳವಳ್ಳಿ ತಾಲೂಕಿನ ಶಿಂಷಾಪುರದಲ್ಲಿ ಕಳೆದ 10 ವರ್ಷಗಳಿಂದ ಶ್ಯಾಲೋಮ್ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ ಶಿಕ್ಷಣ ಸಂಸ್ಥೆ ಆರಂಭಿಸಿದ್ದರು. ಸಂಸ್ಥೆಗೆ ಹತ್ತಿರವಾಗಿದ್ದ ಸ್ವಾಮೀಜಿ ಯೊಬ್ಬರು ತಮಗೆ ಪರಿಚಿತವಿರುವ ಸೂರ್ಯ ಎಂಬ ವ್ಯಕ್ತಿಯನ್ನು ಪರಿಚಯಿಸಿ ನಿಮ್ಮ ಟ್ರಸ್ಟ್‌ಗೆ ಏನಾದರೂ ಸಹಾಯ ಅಗತ್ಯವಿದ್ದಲ್ಲಿ ಇವರು ನಿಮಗೆ ನೆರವಾಗುತ್ತಾರೆ ಎಂದು ತಿಳಿಸಿದ್ದರು. ಸ್ವಾಮೀಜಿ ಹೇಳಿದ ಮಾತನ್ನು ನಂಬಿ ಪರಿಚಿತನಾದ ವ್ಯಕ್ತಿಯಿಂದ ಸ್ಥಳೀಯವಾಗಿ ಸಣ್ಣಪುಟ್ಟ ಸಹಾಯವನ್ನು ಪಡೆದುಕೊಂಡಿದ್ದಾರೆ. ನಂತರ, ಶಿಕ್ಷಣ ಸಂಸ್ಥೆ ದೊಡ್ಡದಾಗಿ ನಿರ್ಮಾಣ ಮಾಡುವ ಉದ್ದೇಶದಿಂದ ಸೂರ್ಯನ ಬಳಿ ಹೇಳಿಕೊಂಡಿದ್ದಾರೆ.
ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೂರ್ಯ, “ನಿಮಗೆ ನಾನು ದಾನಿಗಳಿಂದ 25 ಕೋಟಿ ರೂ. ದೇಣಿಗೆ ಕೊಡಿಸುತ್ತೇನೆ. ಆದರೆ, ನೀವು ನನಗೆ 1 ಕೋಟಿ ರೂ. ಹಣ ನೀಡಬೇಕು’ ಎಂದು ಪುಸಲಾಯಿಸಿದ್ದಾನೆ. ಈತನ ಮಾತು ನಂಬಿದ ಟ್ರಸ್ಟ್‌ನ ಖಜಾಂಚಿ ಮೇರಿ, ಅಧ್ಯಕ್ಷೆ ಮೇರಿನೋ ಪಿಂಟೋ, ಕಾರ್ಯದರ್ಶಿ ಎಂಎಲ್ಡಾ ಪಿಂಟೋ ಸೇರಿದಂತೆ ಸದಸ್ಯರು ಸಭೆ ನಡೆಸಿ ದಾನಿಗಳಿಂದ ಒಂದು ಕೋಟಿ ರೂ. ಹಣವನ್ನು ಸಾಲದ ರೂಪದಲ್ಲಿ ಪಡೆದು 25 ಕೋಟಿ ರೂ. ಬಂದ ನಂತರ ಸಾಲ ವಾಪಸ್ ನೀಡುವ ಬಗ್ಗೆ ಚರ್ಚೆ ನಡೆಸಿದ್ದರು.
ಅದರಂತೆ ದಾನಿಗಳಿಂದ 1.10 ಕೋಟಿ ರೂ. ಹಣ ಹೊಂದಿಸಿ, ಹಣ ಇರುವ ಬ್ಯಾಗ್‌ನ ಫೋಟೋ ತೆಗೆದು ಸೂರ್ಯನಿಗೆ ಕಳುಹಿಸಿದ್ದಾರೆ. ಬಳಿಕ ಜ.20ರಂದು ಸೂರ್ಯನಿಗೆ ಬರುವಂತೆ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ವಂಚಕ ಸೂರ್ಯ “ಸಣ್ಣ ಕಾರ್ಯಕ್ರಮ ಇಟ್ಟುಕೊಳ್ಳಿ, ನಾನು ಮತ್ತು ನನ್ನ ಜೊತೆ 25 ಮಂದಿ ಬರುತ್ತೇವೆ’ ಎಂದು ತಿಳಿಸಿದ್ದಾನೆ. ಆತನ ಮಾತು ನಂಬಿದ ಟ್ರಸ್ಟ್‌ನವರು ಶಿಂಷಾಪುರದಲ್ಲಿ ಎಲಿಜಬೆತ್ ಎಂಬುವರ ಮನೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾರೆ.
ಜ.20ರಂದು ಟ್ರಸ್ಟಿ ಮನೆಗೆ ಹೋದ ಸೂರ್ಯ ಟ್ರಸ್ಟ್ ಖಜಾಂಚಿ ಮೇರಿ ಅವರು ಸಿದ್ಧಪಡಿಸಿದ್ದ 1 ಕೋಟಿ ರೂ. ಹಣ ಎಲ್ಲಿದೆ ಎಂದು ಕೇಳಿದ್ದಾನೆ. ಆಗ ಅವರು ಹಣವನ್ನು ತೋರಿಸಿದ್ದಾರೆ.
ಇನ್ನು ಸೂರ್ಯ ಕೂಡ ಕಾರಿನಲ್ಲಿ ತಂದಿದ್ದ ಒಂದು ಪ್ಲಾಸ್ಟಿಕ್ ಚೀಲವನ್ನು ತಂದು ಇದರಲ್ಲಿ 25 ಕೋಟಿ ರೂ. ಹಣವಿದೆ ಎಂದು ಇಟ್ಟಿದ್ದಾರೆ. ನಂತರ ಸೂರ್ಯ ತಾನು ತಂದಿದ್ದ ಜ್ಯೂಸ್ ಅನ್ನು ನನಗೆ ಹಾಗೂ ಅಧ್ಯಕ್ಷರಿಗೆ ಕುಡಿಯಲು ಕೊಟ್ಟರು. ಜ್ಯೂಸ್ ಕುಡಿದ ನಂತರ ನಾವು ಪ್ರಜ್ಞೆ ತಪ್ಪಿದೆವು. ನಂತರ ಸಂಜೆ 4 ಗಂಟೆಗೆ ಎಚ್ಚರಗೊಂಡಾಗ ಪಕ್ಕದಲ್ಲಿದ್ದ ಸೂರ್ಯ ಅಲ್ಲಿರಲಿಲ್ಲ. ಅಲ್ಲದೆ, ರೂಮಿನಲ್ಲಿದ್ದ 1.10 ಕೋಟಿ ರೂ. ಹಣವೂ ಇರಲಿಲ್ಲ. ಆಗ ಸೂರ್ಯ ತಂದಿದ್ದ ಚೀಲವನ್ನು ಬಿಚ್ಚಿ ನೋಡಿದಾಗ ಬಿಳಿ ಪೇಪರ್ ಬಂಡಲ್‌ಗಳಿದ್ದವು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯ ಬಳಿಕ ತಾವು ಮೋಸ ಹೋಗಿರುವುದಾಗಿ ಎಚ್ಚೆತ್ತುಕೊಂಡ ಖಜಾಂಚಿ ಮೇರಿ ಅವರು ಸ್ಥಳೀಯ ಬೆಳಕವಾಡಿ ಠಾಣೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಂಚಕನ ಪತ್ತೆಗೆ ಬಲೆ ಬೀಸಿದ್ದಾರೆ.
ಜ್ಯೂಸ್ ಕುಡಿಸಿ ಪ್ರಜ್ಞೆ ತಪ್ಪಿಸಿ ಹಣ ಪಡೆದು ಪರಾರಿ!:
ಮಳವಳ್ಳಿಯಲ್ಲಿ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದ ಕ್ರೈಸ್ತ ಸಂಸ್ಥೆಯಾದ ಶ್ಯಾಲೋಮ್ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್‌ಗೆ ವಂಚಕ ಸೂರ್ಯ ಎಂಬಾತ ಪರಿಚಯವಾಗಿದ್ದ. ಈತನ ಟ್ರಸ್ಟ್‌ಗೆ ಸಣ್ಣಪಟ್ಟ ಸಹಾಯ ಮಾಡಿಕೊಟ್ಟು ನಂಬಿಕೆ ಉಳಿಸಿಕೊಂಡಿದ್ದ. ಈ ನಡುವೆ, ಶಿಕ್ಷಣ ಸಂಸ್ಥೆಯನ್ನು ದೊಡ್ಡಮಟ್ಟದಲ್ಲಿ ಬೆಳೆಸುವುದಾಗಿ ಟ್ರಸ್ಟ್‌ನವರು ಈತನ ಬಳಿ ಚರ್ಚಿಸಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕ ಸೂರ್ಯ, “ನೀವು ನನಗೆ 1 ಕೋಟಿ ರೂ. ಕೊಟ್ಟರೆ ಅದಕ್ಕೆ ಪ್ರತಿಯಾಗಿ ನಾನು ದಾನಿಗಳಿಂದ 25 ಕೋಟಿ ರೂ.ಕೊಡುತ್ತೇನೆ’ ಎಂದು ನಂಬಿಸಿದ್ದ. ಅದರಂತೆ ಟ್ರಸ್ಟ್‌ನವರು 1.10 ಕೋಟಿ ರೂ. ಸಿದ್ಧಪಡಿಸಿಕೊಂಡು ಜ.20ರಂದು ಸಣ್ಣ ಕಾರ್ಯಕ್ರಮ ಆಯೋಜಿಸಿ ಸೂರ್ಯನನ್ನು ಕರೆಸಿಕೊಂಡಿದ್ದರು. ಕಾರ್ಯಕ್ರಮಕ್ಕೆ ಬಂದಿದ್ದ ಸೂರ್ಯ, ತಾನು ಮೊದಲೇ ಯೋಚಿಸಿದಂತೆ ತಂದಿದ್ದ ಮತ್ತು ಬರುವ ಜ್ಯೂಸ್ ಅನ್ನು ಟ್ರಸ್ಟ್‌ನ ಅಧ್ಯಕ್ಷರು ಹಾಗೂ ಖಜಾಂಚಿಗೆ ಕುಡಿಸಿದ್ದಾನೆ. ಇವರು ಪ್ರಜ್ಞೆ ತಪ್ಪಿದಾಗ, 1.10 ಕೋಟಿ ರೂ. ಇದ್ದ ಬ್ಯಾಗನ್ನು ದೋಚಿಕೊಂಡು ಪರಾರಿಯಾಗಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್”
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.