ಸೂಳೆಕೆರೆ ಅಭಿವೃದ್ಧಿ ಕಾಮಗಾರಿಗೆ ಹಣ ಮಂಜೂರು
Team Udayavani, Feb 11, 2023, 1:27 PM IST
ಭಾರತೀನಗರ: ಇಲ್ಲಿಗೆ ಸಮೀಪದ ಮುಟ್ಟನಹಳ್ಳಿ ಬಳಿಯ ಸೂಳೆಕೆರೆ ದಕ್ಷಿಣ ನಾಲೆಯ ಅಕ್ವಡಕ್ಟ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಕಲ್ಪಿಸಲು ಶಾಸಕ ಡಿ.ಸಿ.ತಮ್ಮಣ್ಣ ಚಾಲನೆ ನೀಡಿದರು.
ನಂತರ ಮಾತನಾಡಿ, ಕಳೆದ 4-5 ತಿಂಗಳ ಹಿಂದೆ ಸುರಿದ ಮಳೆಯಿಂದ ಸೂಳೆಕೆರೆ ಕೋಡಿ ಮತ್ತು ದಕ್ಷಿಣ ನಾಲೆ ಕೊಚ್ಚಿಹೋಗಿ ಕೆರೆ ಅಪಾಯ ಮಟ್ಟದಲ್ಲಿತ್ತು. ಕೆರೆ ಉಳಿಸುವ ದೃಷ್ಟಿಯಿಂದ ಸರ್ಕಾರ ಮಟ್ಟದಲ್ಲಿ ಹೋರಾಟ ನಡೆಸಿ, ಸೂಳೆಕೆರೆ ಅಭಿವೃದ್ಧಿಗೆ 98 ಲಕ್ಷ ಹಣ ಮಂಜೂರು ಮಾಡಿಸಿ, ದಕ್ಷಿಣ ನಾಲೆಯ ಅಕ್ವಡಕ್ಟ್ ಕಾಮಗಾರಿಗೆ 48 ಲಕ್ಷ ಸೂಳೆಕೆರೆ ಕೋಡಿ ಅಭಿವೃದ್ಧಿಗೆ 50 ಲಕ್ಷ ನೀಡುಯುವಂತೆ ಮಾಡಲಾಯಿತು ಎಂದರು.
ಈ ದಕ್ಷಿಣನಾಲೆ ಅಭಿವೃದ್ಧಿಯಿಂದ ಸುಮಾರು 3725 ಎಕರೆ ಅಚ್ಚುಕಟ್ಟು ಪ್ರದೇಶದ ಮುಟ್ಟನಹಳ್ಳಿ, ದೊಡ್ಡರಸಿನಕೆರೆ, ಕಾರ್ಕಹಳ್ಳಿ, ದೇವರಹಳ್ಳಿ, ಆಲಭುಜನಹಳ್ಳಿ, ಅಣ್ಣೂರು, ಕುರಿಕೆಂಪನದೊಡ್ಡಿ ಗ್ರಾಮಗಳಿಗೆ ನಿರೋದಗಿಸಿ, ರೈತರ ಬೆಳೆಗಳಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು.
ಸರ್ಕಾರದಿಂದ ಮಲತಾಯಿ ಧೋರಣೆ: ಸರ್ಕಾರ ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡುತ್ತಿದ್ದಾರೆ ಹೊರತು, ಹಳೆ ಮೈಸೂರು ಭಾಗಕ್ಕೆ ಅನುದಾನ ಬಿಡುಗಡೆಗೊಳಿಸದೆ ರೈತರನ್ನು ವಂಚಿಸುತ್ತಿದ್ದಾರೆ. ವಿಶಾಲ ಕರ್ನಾಟಕ ಮನೊಭಾವನೆಯನ್ನು ತೋರದೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ. ಸರ್ಕಾರ ಉತ್ತರ ಕರ್ನಾಟಕ ಭಾಗಕ್ಕೆ ಕ್ಯಾಬಿನೆಟ್‌ನಲ್ಲಿ ಒಂದೇ ಭಾರಿ 6 ಸಾವಿರ ಕೋಟಿಯನ್ನು ನೀರಾವರಿಗೆ ಮಂಜೂರು ಮಾಡಿದರು.
ಆದರೆ, ಮದ್ದೂರು ಕೆರೆ, ಸೂಳೆಕೆರೆಗೆ 550 ಕೋಟಿ ಬಿಡುಗಡೆಗೊಳಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದೆ. ಸಿಎಂ ಬಸವರಾಜು ಬೊಮ್ಮಾಯಿ ಅವರು ಹಣ ಬಿಡುಗಡೆಗೊಳಿಸುತ್ತಾರೆಂಬ ನಂಬಿಕೆ ಇತ್ತು. ಆದರೆ, ಆರ್ಥಿಕ ಸಲಹಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿದ ಕಾರಣ, ಹಣಬಿಡುಗಡೆ ಗೊಳಿಸಿಲ್ಲ. ಹಳೆ ಮೈಸೂರು ಭಾಗವನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಭಿವೃದ್ಧಿಗಾಗಿ ಹೋರಾಟ: ಸರ್ಕಾರ ರೈತರನ್ನು ಉಳಿಸಬೇಕಾದರೆ ನೀರಾವರಿಗೆ ಆದ್ಯತೆ ನೀಡಬೇಕು. ಮದ್ದೂರು ಕೆಮ್ಮಣ್ಣು ಕೆರೆ ಮತ್ತು ಸೂಳೆಕೆರೆ ಈ ಎರಡು ಕೆರೆಗಳು ಈ ಭಾಗದ ರೈತರಿಗೆ ಮಿನಿ ಅಣೆಕಟ್ಟೆ ಇದ್ದಂತೆ. ಕೆಆರ್‌ಎಸ್ ಅಣೆಕಟ್ಟೆ ಬಿಟ್ಟರೆ ಇದು ರೈತರಿಗೆ ಎರಡನೇ ಅಣೆಕಟ್ಟೆ ಇದಾಗಿದೆ. ಹೀಗಾಗಿ, ಈ ಎರಡು ಕೆರೆ ಮತ್ತು ನಾಲೆ ಅಭಿವೃದ್ಧಿಗೆ ಮುಂದಾಗಬೇಕು. ಇಲ್ಲದಿದ್ದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಗುರುದೇವರಹಳ್ಳಿ ಅರವಿಂದ್, ಎಇಇ ಪ್ರಶಾಂತ್, ಎಇ ಅವಿನಾಶ್, ಶೀಲ, ಮುಖಂಡರಾದ ಎಂ.ಕೆ. ವೀರಯ್ಯ, ಎಂ.ಕೆ.ಚಂದ್ರಶೇಖರ್, ಎಂ.ಸಿ.ವೀರಯ್ಯ, ಎಂ.ಸಿ.ಚಂದ್ರಶೇಖರ್, ಯತೀಶ, ಎಂ.ಡಿ.ನಾಗರಾಜು, ಪ್ರಶಾಂತ್, ಯಜಮಾನ್ ಪುಟ್ಟಸ್ವಾಮಿ, ಶಿವಲಿಂಗ, ರವಿ. ಶಿವಕುಮಾರ್, ಕಿಶೋರ್, ಪುಟ್ಟಸ್ವಾಮಿ, ಸಣ್ಣೇಗೌಡ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.