ನಿಖೀಲ್ ಗೆಲುವಿಗಾಗಿ ಮೇಕೆ ಬಲಿ, ಉರುಳು ಸೇವೆ
Team Udayavani, May 22, 2019, 9:26 AM IST
ಆರತಿ ಉಕ್ಕಡದ ಅಹಲ್ಯಾದೇವಿ ದೇವಸ್ಥಾನದಲ್ಲಿ ನಿಖೀಲ್ ಗೆಲುವಿಗೆ ಪ್ರಾರ್ಥಿಸಿ ಜೆಡಿಎಸ್ ಮುಖಂಡರು ಉರುಳು ಸೇವೆ ಸಲ್ಲಿಸಿದರು.
ಶ್ರೀರಂಗಪಟ್ಟಣ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ ಗೆಲುವು ಶತಃಸಿದ್ಧ ಎಂದು ಜೆಡಿಎಸ್ ರಾಜ್ಯ ರೈತ ಘಟಕದ ಉಪಾಧ್ಯಕ್ಷ ಕೆ.ಪಿ.ಗವಿಗೌಡ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಆರತಿ ಉಕ್ಕಡದ ಅಹಲ್ಯಾದೇವಿ ದೇವಸ್ಥಾನದಲ್ಲಿ ನಿಖೀಲ್ ಕುಮಾರಸ್ವಾಮಿ ಗೆಲುವಿಗೆ ಪ್ರಾರ್ಥಿಸಿ ಜೆಡಿಎಸ್ ಮುಖಂಡರೊಂದಿಗೆ ಉರುಳು ಸೇವೆ ಹಾಗೂ ಹರಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉರುಳು ಸೇವೆಗೂ ಮುನ್ನ ಅಹಲ್ಯಾದೇವಿಯ ಹರಕೆ ನೀಡಲು ಮೇಕೆ ಮರಿಗೆ ಪೂಜೆ ಸಲ್ಲಿಸಿದರು.
ಗೆಲುವು ನಿಶ್ಚಿತ: ಪೂಜಾರಿ ತೀರ್ಥ ಹಾಕಿದ ಕೂಡಲೇ ಮೇಕೆ ತಲೆ ಒದರಿದ್ದನ್ನೇ ಗೆಲುವಿನ ಮುನ್ಸೂಚನೆ ಎಂದು ನಂಬಿರುವ ಜೆಡಿಎಸ್ ಕಾರ್ಯಕರ್ತರು ತಾಯಿ ಅಹಲ್ಯಾದೇವಿ ಆಶೀರ್ವಾದ ನಿಖೀಲ್ ಕುಮಾರಸ್ವಾಮಿ ಮೇಲಿದೆ. ಮೇಕೆ ತಲೆ ಒದರಿದ್ದರಿಂದ ನಿಖೀಲ್ ಕುಮಾರಸ್ವಾಮಿ ಗೆಲುವು ನಿಶ್ಚಿತ ಎಂದು ಹರ್ಷ ವ್ಯಕ್ತಪಡಿಸಿದರು.
ದೃಶ್ಯ ಮಾಧ್ಯಮಗಳಲ್ಲಿ ಸುಮಲತಾ ಗೆಲ್ಲುತ್ತಾರೆಂಬ ವಿಷಯ ನಂಬಿ ಜೆಡಿಎಸ್ ಕಾರ್ಯಕರ್ತರು ಆತಂಕ ಪಡಬಾರದು. ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಜಿಲ್ಲೆಗೆ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ನಿಖೀಲ್ ಕುಮಾರಸ್ವಾಮಿ ಕೈಹಿಡಿಯಲಿವೆ. ಸಚಿವರಾದ ಪುಟ್ಟರಾಜು, ಡಿ.ಸಿ.ತಮ್ಮಣ್ಣ ಹಾಗೂ ಶಾಸಕರ ಸಹಕಾರದಿಂದ ನಿಖೀಲ್ ಗೆಲುವು ಸಾಧಿಸುತ್ತಾರೆ ಎಂದರು.
ಉರುಳು ಸೇವೆ: ನಿಖೀಲ್ ಗೆಲುವು ಸಾಧಿಸಿದ ಬಳಿಕ ಅವರೊಂದಿಗೆ ಬಂದು ಅಹಲ್ಯಾ ದೇವಿಗೆ ಪೂಜೆ ಸಲ್ಲಿಸುತ್ತೇವೆಂದು ಜೆಡಿಎಸ್ ಕಾರ್ಯಕರ್ತ ರಾದ ನಂದೀಶ್, ರವಿ ಕುಮಾರ್, ವೆಂಕಟೇಶ್, ಗುಡ್ಡ ಹೇಮಂತ್, ರವೀಂದ್ರ, ದಯಾನಂದ್, ರೇವಣ್ಣ, ಉರುಳು ಸೇವೆ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.