ಎಳನೀರಿಗೆ ದಾಖಲೆ ಪ್ರಮಾಣ ದರ ನಿಗದಿ
ಬೆಳೆಗಾರರು, ಮಾರಾಟಗಾರನ ಜೇಬು ಭರ್ತಿ ಮದ್ದೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಸೌಲಭ್ಯ ಕೊರತೆ
Team Udayavani, Mar 26, 2021, 3:52 PM IST
ಮದ್ದೂರು: ದಕ್ಷಿಣ ಏಷ್ಯಾದಲ್ಲೇ ಅತಿಹೆಚ್ಚು ಎಳನೀರು ವಹಿವಾಟು ಹೊಂದಿರುವ ಮಾರುಕಟ್ಟೆ ಎಂಬ ಖ್ಯಾತಿ ಪಡೆದ ಮದ್ದೂರು ಎಪಿಎಂಸಿ ಮಾರುಕಟ್ಟೆಯಲ್ಲಿಪ್ರಸಕ್ತ ವರ್ಷ ದಾಖಲೆ ಪ್ರಮಾಣದ ದರ ನಿಗದಿ ಮೂಲಕ ಗಮನ ಸೆಳೆದಿದೆ.
ಪ್ರತಿನಿತ್ಯ 80ಕ್ಕೂ ಹೆಚ್ಚು ಲಾರಿ ಲೋಡ್‌ಗಳಲ್ಲಿ ಇಲ್ಲಿನ ಎಳನೀರುದೇಶದ ವಿವಿಧ ರಾಜ್ಯದ ಮೂಲೆಮೂಲೆಗಳಿಗೆ ರವಾನೆಯಾಗುವ ಮೂಲಕ ಸ್ಥಳೀಯತೆಂಗು ಬೆಳೆಗಾರರೂ ಸೇರಿದಂತೆ ಕಟ್ಟಕಡೆಯ ಎಳನೀರು ಮಾರಾಟಗಾರನ ವರೆಗೂ ಜೇಬು ಭರ್ತಿಯಾಗಿದೆ.
ಬೇಡಿಕೆ ತಕ್ಕಂತೆ ಪೂರೈಕೆ: ಕರ್ನಾಟಕ ಸೇರಿದಂತೆ ನೆರೆಯ ಆಂಧ್ರ, ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಪುಣೆ ಹಾಗೂ ಇನ್ನಿತರೆ ರಾಜ್ಯಗಳಿಗೆ ಈ ಮಾರುಕಟ್ಟೆಯಿಂದಸರಬರಾಜಾಗುವ ಎಳನೀರಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಪ್ರಸಕ್ತ ದಾಖಲೆ ದರ ನಿರ್ಮಾಣಕ್ಕೆ ಕಾರಣವೆನ್ನಲಾಗಿದೆ. ಮಂಡ್ಯ ಜಿಲ್ಲೆ ಸೇರಿದಂತೆ ನೆರೆಯ ಚಾಮರಾಜನಗರ, ಮೈಸೂರು ಹಾಗೂ ರಾಮನಗರ ಜಿಲ್ಲೆಯ ಹಳ್ಳಿಗಳಿಂದ ಪ್ರತಿನಿತ್ಯ ಈ ಮಾರುಕಟ್ಟೆಗೆರೈತರು, ವ್ಯಾಪಾರಸ್ಥರು ಎಳನೀರನ್ನು ತಂದು ಮಾರಾಟಮಾಡುವ ಮೂಲಕ ಹೊರಗಿನ ಖರೀದಿದಾರರ ಬೇಡಿಕೆ ತಕ್ಕಂತೆ ಪೂರೈಕೆ ಸಹ ಮಾಡುತ್ತಾ ಬಂದಿದ್ದಾರೆ.
ಇಲ್ಲಗಳ ಕಂತೆ, ವೈಫಲ್ಯಕ್ಕೆ ಕನ್ನಡಿ: ದಾಖಲೆ ವಹಿವಾಟು, ದರ ಹಾಗೂ ಇನ್ನಿತರೆ ಖ್ಯಾತಿಗಳಿಂದ ಬೀಗುತ್ತಿರುವ ಮದ್ದೂರು ಎಪಿಎಂಸಿ ಎಳನೀರುಮಾರುಕಟ್ಟೆ ಹತ್ತು ಹಲವು ಇಲ್ಲಗಳ ಕಂತೆಗಳನ್ನೊತ್ತು ಕೊರಗುತ್ತಿರುವುದು ರಾಜ್ಯ ಸರ್ಕಾರ, ಜಿಲ್ಲಾಡಳಿತ ಮತ್ತು ಎಪಿಎಂಸಿ ಆಡಳಿತ ಮಂಡಳಿಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಈ ಮಾರುಕಟ್ಟೆಗೆ ಹೊರಗಿ ನಿಂದ ಬರುವ ವ್ಯಾಪಾರಸ್ಥರ ಅನುಕೂಲಕ್ಕಾಗಿ ಇಲ್ಲವಾಗಿರುವ ಎಟಿಎಂ (ಬ್ಯಾಂಕಿಂಗ್) ವ್ಯವಸ್ಥೆ, ರೈತರ ವಿಶ್ರಾಂ ತಿ ಗೃಹ, ದ್ವಿಚಕ್ರ ವಾಹನ ನಿಲ್ದಾಣ, ಸ್ವಚ್ಛತೆ,ವಿದ್ಯು ತ್, ಹಲವು ಮೂಲ ಸೌಲಭ್ಯಗಳ ಕೊರತೆ ದಿನನಿತ್ಯದ ನರಕಯಾತನೆಗೆ ಸಾಕ್ಷಿಯೆಂಬಂತಿವೆ.
ಪ್ರತಿ ನಿತ್ಯ ಎಪಿಎಂಸಿ ಮಾರುಕಟ್ಟೆಯಲ್ಲಿ 5 ಲಕ್ಷಕ್ಕೂಅಧಿಕ ಎಳನೀರು ಇತರೆ ರಾಜ್ಯಗಳಿಗೆ ಹೊರಹೋಗುತ್ತಿದ್ದು, ಪ್ರತಿ ತಿಂಗಳು ಕೋಟಿಗಟ್ಟಲೆ ವ್ಯಾಪಾರ ವಹಿವಾಟು ಮಾಡುವ ಅಧಿಕಾರಿಗಳುಅಭಿವೃದ್ಧಿಕಾಮಗಾರಿಗೆ ಮುಂದಾಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಇಳಿಮುಖ: ಕಳೆದ 10 ತಿಂಗಳಿಂದ ಕೋವಿಡ್-19 ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿದ್ದ ವರ್ತಕರು, ಹಮಾಲಿಗಳು ಈಗಷ್ಟೇ ಚೇತರಿಕೆ ಕಂಡಿದ್ದು, ಕೇಂದ್ರ ಸರ್ಕಾರಜಾರಿಗೆ ತಂದ ಎಪಿಎಂಸಿ ಕಾಯಿದೆ ತಿದ್ದುಪಡಿಯಿಂದಾಗಿ ಸಾಕಷ್ಟು ವರ್ತಕರು ಮೈಸೂರು, ಬೆಂಗಳೂರು, ಮಳವಳ್ಳಿ-ಮದ್ದೂರು, ಕೊಪ್ಪ-ಮದ್ದೂರು ಮಾರ್ಗ ಗಳಲ್ಲೇ ವ್ಯಾಪಾರ ವಹಿವಾಟು ಕೈಗೊಂಡಿರುವುದರಿಂದ ಮಾರುಕಟೆ rಗೆ ಬರುವ ಎಳನೀರು ಇಳಿಮುಖ ಕಂಡಿದೆ.
ರೈತರು ಮತ್ತು ವರ್ತಕರ ಹಿತದೃಷ್ಟಿಯಿಂದಪ್ರಾಂಗಣದಲ್ಲಿ ಅಗತ್ಯ ಮೂಲ ಸೌಲಭ್ಯಗಳ ವೃದ್ಧಿಗೆ ಎಪಿಎಂಸಿ ಆಡಳಿತ ಮಂಡಳಿ, ಜಿಲ್ಲಾಡಳಿತ ಅಗತ್ಯಕ್ರಮ ಕೈಗೊಳ್ಳುವ ಜತೆಗೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಇಲ್ಲಿನ ಅವ್ಯವಸ್ಥೆಗಳ ಗಮನಹರಿಸಬೇಕೆಂಬುದೇ ಸ್ಥಳೀಯರ ಆಗ್ರಹವಾಗಿದೆ.
ಕುಡಿವ ನೀರಿಗೆ ಪರದಾಡುವ ಸ್ಥಿತಿ :
ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ವಿವಿಧ ಸಮಸ್ಯೆಗಳಿದ್ದು, ಮುಖ್ಯವಾಗಿ ಕುಡಿ ಯುವನೀರು, ಶೌಚಾಲಯ ಹಾಗೂ ಪ್ರಾಂಗಣದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನಘಟಕವನ್ನು ದುರಸ್ತಿಗೊಳಿಸದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಪರಿಣಾಮ ರೈತರು,ಹಮಾಲಿಗಳು, ವರ್ತಕರು ಕುಡಿಯುವ ನೀರಿಗೆ ಪರದಾಡಬೇಕಾದ ಸ್ಥಿತಿ ಬಂದೊದಗಿದೆ.
100 ಎಳನೀರಿಗೆ 2 ಸಾವಿರ ರೂ.ವರೆಗೆ :
ಪ್ರಸಕ್ತ ವರ್ಷದ ಆರಂಭದಿಂದಲೂ ಎಳನೀರುದರದಲ್ಲಿ ಏರಿಕೆ ಕಂಡುಬಂದಿದ್ದು, ಹಿಂದಿನಸಾಲುಗಳಿಗಿಂತ ಪ್ರಸಕ್ತ ವರ್ಷ ಅಧಿಕ ದರದಾಖಲಾಗುವ ಮೂಲಕ ರೈತರ ಮೊಗದಲ್ಲಿಹರ್ಷದ ಗೆರೆ ಮೂಡಿದೆ. ಈ ಹಿಂದೆ 100ಎಳನೀರಿಗೆ ಸಾವಿರ ರೂ.ಗಳಿಗಿಂತ ಕೆಳಗಿದ್ದಧಾರಣೆ ಈ ವರ್ಷ 2 ಸಾವಿರ ರೂ.ವರೆಗೂ ತಲುಪಿದ್ದು, ತಲಾಒಂದು ಎಳನೀರು 20 ರೂ.ಗಳಿಗೆ ಮಾರಾಟವಾಗುವಮೂಲಕ ರೈತರ ಜೇಬುತುಂಬಿಸಿದ್ದು,ಮುಂದಿನ ದಿನಗಳಲ್ಲಿಬೇಸಿಗೆ ಬಿಸಿಲು ಹೆಚ್ಚಿದಂತೆಲ್ಲಾ ಎಳನೀರುಬೆಲೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.
ಬೇಸಿಗೆ ಸಮೀಪಿಸಿರುವುದರಿಂದ ಎಳನೀರಿಗೆ ಸಾಕಷ್ಟು ಬೇಡಿಕೆಬಂದಿದ್ದು, ಹೊರ ರಾಜ್ಯಗಳಿಂದ ಹಾಗೂಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸುವರೈತರು, ವ್ಯಾಪಾರಸ್ಥರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿದೆ. ಆವರಣದಲ್ಲಿರುವಅವ್ಯವಸ್ಥೆ ಸಂಬಂಧ ಈಗಷ್ಟೇ ತಮ್ಮಗಮನಕ್ಕೆ ಬಂದಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು. –ತಾಸೀನ್, ಎಪಿಎಂಸಿ ಕಾರ್ಯದರ್ಶಿ, ಮದ್ದೂರು
ಎಪಿಎಂಸಿ ಎಳನೀರು ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಕೋಟ್ಯಂತರ ರೂ.ವ್ಯಾಪಾರ ವಹಿವಾಟು ನಡೆಯುತ್ತಿದ್ದರೂಅಶುಚಿತ್ವ ತಾಂಡವವಾಡುತ್ತಿದ್ದು, ಎಳ ನೀರುತರುವ ರೈತರಿಗೆ ಅಗತ್ಯ ಸೌಲಭ್ಯ ಕಲ್ಪಿಸುವಜತೆಗೆ ಶುಚಿತ್ವಕ್ಕೆ ಒತ್ತು ನೀಡಿ ಅಗತ್ಯವಿರುವೆಡೆಶೌಚಾಲಯಗಳನ್ನು ನಿರ್ಮಿಸಲು ಅಧಿಕಾರಿಗಳು ಕ್ರಮ ವಹಿಸಬೇಕಿದೆ. – ಶಿವಣ್ಣ, ಎಪಿಎಂಸಿ ಮಾಜಿ ನಿರ್ದೇಶಕ, ಮದ್ದೂರು
– ಎಸ್.ಪುಟ್ಟಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mandya; ಭೀಕರ ಅಪಘಾ*ತದಲ್ಲಿ ಮೂವರು ವಿದ್ಯಾರ್ಥಿಗಳು ಮೃ*ತ್ಯು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.