ಗ್ರಾಪಂ: ಇನ್ನೇನಿದ್ದರೂ ಫಲಿತಾಂಶದತ್ತ ಎಲ್ಲರ ಚಿತ್ತ
Team Udayavani, Dec 28, 2020, 6:02 PM IST
ಮಂಡ್ಯ: ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ರಾಜಕೀಯ ಗರಿಗೆದರಿತ್ತು. ಗ್ರಾಮ ಪಂಚಾಯಿತಿ ಚುನಾವಣೆ ಡಿ.1ರಂದು ಘೋಷಣೆಯಾಗುತ್ತಿದ್ದಂತೆರಾಜಕೀಯ ಪಕ್ಷಗಳ ಮುಖಂಡರು, ಆಕಾಂಕ್ಷಿಗಳುಇನ್ನಿಲ್ಲದಂತೆ ಚುನಾವಣೆಗೆ ತಯಾರಿಯಲ್ಲಿ ತೊಡಗಿದ್ದರು. ಆದರೆ, ಈಗ ಅದು ಮುಗಿದಿದ್ದು, ಫಲಿತಾಂಶದತ್ತ ಚಿತ್ತ ನೆಟ್ಟಿದ್ದಾರೆ.
ಜಿಲ್ಲೆಯ ಪ್ರತೀ ಗ್ರಾಮಗಳಲ್ಲೂಚುನಾವಣೆ ಹಬ್ಬದ ವಾತಾವರಣನಿರ್ಮಾಣವಾಗಿತ್ತು. ಚುನಾವಣೆ ಸ್ಪರ್ಧೆಗೆಆಕಾಂಕ್ಷಿಗಳು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಗ್ರಾಮದಲ್ಲಿ ಓಡಾಡಿದರು. ಸ್ಪರ್ಧೆಗೆ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದರು. ಅಲ್ಲದೆ,
ಎದುರಾಳಿ, ಪ್ರತಿಸ್ಪರ್ಧಿಗಳ ಮನವೊಲಿಕೆಗಳು, ರಾಜಿ ಸಂಧಾನ, ಪಂಚಾಯಿತಿಗಳು ನಡೆಯುತ್ತಿದ್ದವು. ನಂತರ ಕೆಲವೊಂದು ಕಡೆ ಸದಸ್ಯಸ್ಥಾನಗಳ ಹರಾಜುಗಳು ನಡೆದವು. ಮತ್ತೆಕೆಲವು ಗ್ರಾಮಗಳಲ್ಲಿ ದೇಗುಲ ಅಭಿವೃದ್ಧಿಗೆ ಹಣ ನೀಡುವ ಭರವಸೆ ಮೇಲೆ ಅವಿರೋಧಆಯ್ಕೆ ನಡೆದರೆ, ಕೆಲವು ಕಡೆ ಯಾವುದೇ ಅಭ್ಯರ್ಥಿಗಳಿಲ್ಲದೆ ಅವಿರೋಧ ನಡೆದವು. ಈ ನಡುವೆ ಸ್ಪರ್ಧಿಗಿಳಿದ ಅಭ್ಯರ್ಥಿಗಳು ಗೆಲ್ಲಲೇಬೇಕು ಎಂಬ ಹಠದಲ್ಲಿ ತೀವ್ರ ಜಿದ್ದಾಜಿದ್ದಿ ನಿಂದ ಕಣಕ್ಕಿಳಿದಿದ್ದರು. ಪ್ರತಿದಿನ ಗ್ರಾಮದ ಮುಖಂಡರು, ಮತದಾರರಿಗೆ ಹಣದ ಹೊಳೆ,ಬಾಡೂಟ, ಮದ್ಯವನ್ನೇ ಹರಿಸಿದರು. ಗ್ರಾಮ ಮಟ್ಟದಲ್ಲಿ ನಡೆಯುವ ಚುನಾವಣೆಯಾಗಿದ್ದು, ಸ್ಥಳೀಯ ಮುಖಂಡರೇ ಸ್ಪರ್ಧಿಸಿದ್ದರಿಂದ ಚುನಾವಣೆಗೆ ಕಳೆ ಬಂದಿತ್ತು. ಯಾವವಿಧಾನಸಭೆ, ಲೋಕಸಭೆ ಚುನಾವಣೆಗಳು ನಡೆಯದ ರೀತಿಯಲ್ಲಿ ಚುನಾವಣೆ ನಡೆಯಿತು.
ಗ್ರಾಮ ಪಂಚಾಯಿತಿ ಚುನಾವಣೆಯಿಂದ ಈಗಾಗಲೇ ಗ್ರಾಮಗಳಲ್ಲಿ ರಾಜಕೀಯದ್ವೇಷಗಳು ಹುಟ್ಟಿಕೊಂಡರೆ, ಕೆಲವೆಡೆ ದೂರವಾಗಿದ್ದ ಸಂಬಂಧಗಳು ಚುನಾವಣೆ ದೃಷ್ಟಿ ಯಿಂದಹತ್ತಿರವಾಗಿದ್ದಾರೆ. ಸ್ನೇಹದಲ್ಲಿ ಬಿರುಕು ಬಿಟ್ಟಿದೆ. ಸಂಬಂಧಿಕರಲ್ಲಿ ಮನಸ್ತಾಪ ಉಂಟಾಗಿದೆ. ಕೆಲವು ಗ್ರಾಮಗಳಲ್ಲಿ ಅಣ್ಣ, ತಮ್ಮಂದಿರು, ಅತ್ತೆ ಸೊಸೆಯಂದಿರು ಹೀಗೆ ಸಾಲು ಸಾಲು ಸಂಬಂಧಗಳಿಗೆ ಚುನಾವಣೆಯಿಂದ ಭಿನ್ನಮತ ಹುಟ್ಟು ಹಾಕಿದೆ.
ನೀರವ ಮೌನ: ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಗ್ರಾಮಗಳಲ್ಲಿ ನೀರವ ಮೌನ ಆವರಿಸಿದೆ. ಜಿಲ್ಲೆಯ 7 ತಾಲೂಕುಗಳ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿಚುನಾವಣೆ ಹಬ್ಬದ ಸಂಭ್ರಮವಿಲ್ಲದಂತಾಗಿದೆ.ಪ್ರತಿದಿನ ಬೆಳಗ್ಗೆ, ರಾತ್ರಿ ಕಾರ್ಯಕರ್ತರು,ಅಭ್ಯರ್ತಿಗಳಿಂದ ಗಿಜಿಗುಡುತ್ತಿದ್ದ ಗ್ರಾಮದ ಬೀದಿಗಳು ಮೌನವಾಗಿವೆ.
ಲಕ್ಷಾಂತರ ರೂ. ಖರ್ಚು: ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಅಭ್ಯರ್ಥಿಗಳು ಗೆಲುವಿಗಾಗಿ ಲಕ್ಷಾಂತರ ರೂ. ಹಣ ಖರ್ಚು ಮಾಡಿದ್ದಾರೆ. ತೀವ್ರ ಪೈಪೋಟಿ ಇರುವ ಕೆಲವೊಂದು ಗ್ರಾಮಗಳಲ್ಲಿ 5ರಿಂದ 10 ಲಕ್ಷ ರೂ.ವರೆಗೂ ಹಣ ಖರ್ಚು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಗ್ರಾಮ ಪಂಚಾಯಿತಿ ಚುನಾವಣೆಗೆ ಈ ರೀತಿಯಲ್ಲಿ ಅಭ್ಯರ್ಥಿಗಳು ಹಣ ಖರ್ಚುಮಾಡುತ್ತಿದ್ದಾರೆ. ಇನ್ನು ಮುಂದಿನ ತಾಪಂ, ಜಿಪಂ ಚುನಾವಣೆಗಳು ಬರಲಿದ್ದು, ಯಾವ ಮಟ್ಟಿಗೆ ಅಭ್ಯರ್ಥಿಗಳು ಹಣ ಖರ್ಚು ಮಾಡಲಿದ್ದಾರೆ ಎಂಬ ಚರ್ಚೆಗಳು ಗ್ರಾಮಗಳಲ್ಲಿ ನಡೆಯುತ್ತಿದೆ.
ನಿರಾಳದ ನಡುವೆ ಫಲಿತಾಂಶದತ್ತ ಚಿತ್ತ :
ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಅಭ್ಯರ್ಥಿಗಳು ಒಂದು ತಿಂಗಳ ಓಡಾಟಕ್ಕೆ ಬ್ರೇಕ್‌ತೆಗೆದುಕೊಂಡು ನಿರಾಳ ಮನಸ್ಥಿತಿಯಲ್ಲಿದ್ದಾರೆ. ಇದರ ನಡುವೆಫಲಿತಾಂಶ ಏನಾಗಬಹುದು ಎಂಬ ಚರ್ಚೆಯಲ್ಲಿ ತೊಡಗಿದ್ದಾರೆ. ಮತದಾನ ಮುಗಿದು ಮತಪೆಟ್ಟಿಗೆಗಳುಸ್ಟ್ರಾಂಗ್ ರೂಂ ಸೇರಿವೆ. ಗ್ರಾಮದಲ್ಲಿ ಯಾರ್ಯಾರುನಮಗೆ ಮತ ಹಾಕಿದ್ದಾರೆ. ಎಷ್ಟು ಮತಗಳು ಬರಲಿವೆ ಎಂಬ ಲೆಕ್ಕಾಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಬೆಟ್ಟಿಂಗ್ ಭರಾಟೆ ಜೋರು.. : ಜಿದ್ದಾಜಿದ್ದಿನಿಂದ ನಡೆದಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎಂಬ ಅಭ್ಯರ್ಥಿಗಳ ಪರ ಬೆಟ್ಟಿಂಗ್ ಜೋರಾಗಿದೆ. ಗ್ರಾಮ ಮಟ್ಟದಲ್ಲಿ ಯುವಕರು, ಮುಖಂಡರು, ಕಾರ್ಯಕರ್ತರು ತಮ್ಮ ತಮ್ಮ ಅಭ್ಯರ್ಥಿಗಳ ಪರ ಬೆಟ್ಟಿಂಗ್ ಕಟ್ಟಲು ಮುಂದಾಗಿದ್ದಾರೆ. ಈಗಾಗಲೇ ಮೊದಲ ಹಂತದ ಮಂಡ್ಯ, ಮದ್ದೂರು ಹಾಗೂ ಮಳವಳ್ಳಿ ತಾಲೂಕುಗಳಲ್ಲಿ ಬೆಟ್ಟಿಂಗ್ ವಿಷಯಗಳು ಬೆಳಕಿಗೆ ಬರುತ್ತಿವೆ. ಇನ್ನೂ ಎರಡನೇ ಹಂತದ ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ ಹಾಗೂ ನಾಗಮಂಗಲತಾಲೂಕುಗಳಲ್ಲಿ ಮತದಾನ ಮುಗಿದಿದ್ದು, ಅಭ್ಯರ್ಥಿಗಳ ಪರ ಬೆಟ್ಟಿಂಗ್ ಕಟ್ಟಲು ಸಿದ್ಧತೆಗಳು ನಡೆದಿದ್ದು, ಡಿ.30ರಂದು ಎಲ್ಲದಕ್ಕೂ ಮತದಾರರ ಅಂತಿಮ ನಿರ್ಧಾರ ಹೊರ ಬೀಳಲಿದೆ.
ಹೆಚ್ಚು ಸ್ಥಾನದ ನಿರೀಕ್ಷೆಯಲ್ಲಿ ನಾಯಕರು : ಜಿಲ್ಲೆಯ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಾಯಕರು ಹೆಚ್ಚಿನ ಸ್ಥಾನಗಳ ನಿರೀಕ್ಷೆಯ ಲೆಕ್ಕಾಚಾರದಲ್ಲಿದ್ದಾರೆ. ಈಗಾಗಲೇ ಜಿಲ್ಲೆಯಾದ್ಯಂತ ಒಟ್ಟಾರೆಯಾಗಿ 548 ಅವಿರೋಧ ಆಯ್ಕೆ ನಡೆದಿದ್ದು,ಇದರಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ಪಕ್ಷಗಳ ಬೆಂಬಲಿತರು ಇದ್ದಾರೆ. ಇನ್ನೂ ಮತದಾನ ನಡೆದಿದರುವ ಬಗ್ಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ತಾಲೂಕು ಅಧ್ಯಕ್ಷರಿಂದ ಎಷ್ಟು ಸ್ಥಾನ ಗೆಲ್ಲಬಹುದು ಎಂಬ ಮಾಹಿತಿಯನ್ನು ಹಾಲಿ-ಮಾಜಿ ಶಾಸಕರು, ಪಕ್ಷಗಳ ಜಿಲ್ಲಾಧ್ಯಕ್ಷರು ಪಡೆಯುತ್ತಿದ್ದಾರೆ.
– ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.