ಗ್ರಾಪಂ ಗದ್ದುಗೆ: ಮೀಸಲಾತಿಯತ್ತ ಕಣ್ಣು
ಮೊದಲ ಅಧಿಕಾರಾವಧಿ 30 ತಿಂಗಳಿಗೆ ಮೊಟಕು ,ಮಹಿಳೆಯರಿಗೆ 50 ರಷ್ಟು ಸ್ಥಾನ ಮೀಸಲು
Team Udayavani, Jan 4, 2021, 2:36 PM IST
ಮಂಡ್ಯ: ಗ್ರಾಮ ಪಂಚಾಯಿತಿ ಚುನಾವಣೆಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣೆಗೆಚುನಾವಣಾ ಆಯೋಗ ಮೀಸಲಾತಿ ಪ್ರಕಟಿಸಿರುವುದರಿಂದ ರಾಜಕೀಯ ಚಟುವಟಿಕೆ ಗರಿಗೆದರಿದೆ.
ಜಿಲ್ಲೆಯಲ್ಲಿ ಮೂರು ಪಕ್ಷಗಳು ಗ್ರಾಪಂ ಗದ್ದುಗೆ ಹಿಡಿಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ.ಚುನಾವಣೆ ಆಯೋಗ ಅಧ್ಯಕ್ಷ ಹಾಗೂ ಉಪಾಧ್ಯಕ್ಷಸ್ಥಾನಗಳಿಗೆ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ(ಅ), ಹಿಂದುಳಿದ ವರ್ಗ(ಬಿ) ಹಾಗೂಸಾಮಾನ್ಯ ವರ್ಗಗಳಿಗೆ ಹಂಚಿಕೆ ಮಾಡಿದೆ.
ಅಭ್ಯರ್ಥಿಗಳ ಆಯ್ಕೆ ಕಸರತ್ತು: ಜಿಲ್ಲೆಯಲ್ಲಿ 230 ಗ್ರಾಮ ಪಂಚಾಯಿತಿಗಳಲ್ಲಿ ಗೆಲುವು ಸಾಧಿಸಿರುವ ತಮ್ಮ ಬೆಂಬಲಿತ ಸದಸ್ಯರಲ್ಲಿ ಮೀಸಲಾತಿಯಂತೆ ಅಧ್ಯಕ್ಷ-ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮುಂದಾಗಿವೆ. ಅಧಿಕಾರ ಹಿಡಿಯಲು ಮೀಸಲಾತಿ ಯಂತೆ ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಈಗಾಗಲೇ ಪಕ್ಷದ ಬೆಂಬಲಿತರಾಗಿ ಗೆಲುವು ಸಾಧಿಸಿರುವ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಮೂರು ಪಕ್ಷಗಳು ಅಲರ್ಟ್ ಆಗಿವೆ.
ಮೂರು ಪಕ್ಷಗಳಿಂದ ಸದಸ್ಯರಿಗೆ ಅಭಿನಂದನೆ: ಈಗಾಗಲೇ ಮೂರು ಪಕ್ಷಗಳು ತಮ್ಮ ಬೆಂಬಲಿತ ಸದಸ್ಯರಿಗೆ ಅಭಿನಂದನೆ, ಸನ್ಮಾನಮಾಡುವ ಮೂಲಕ ಸದಸ್ಯ ಸಂಖ್ಯೆ ಹೆಚ್ಚಿಸಿಕೊಳ್ಳಲುಮುಂದಾಗಿವೆ. ಅದರಂತೆ ಪ್ರತಿನಿತ್ಯ ಜಿಲ್ಲೆಯಲ್ಲಿಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳಮುಖಂಡರು ಸಮಾರಂಭ ಏರ್ಪಡಿಸಿ ಸದಸ್ಯರನ್ನುಕರೆಸಿ, ಅಭಿನಂದನೆ ಸಲ್ಲಿಸುವ ಮೂಲಕ ತಮ್ಮ ಪಕ್ಷದ ಬೆಂಬಲಿ ತರಾಗಿ ಉಳಿಯುವಂತೆ ನೋಡಿ ಕೊಳ್ಳುತ್ತಿದ್ದಾರೆ.
ಸದಸ್ಯರು ವಲಸೆ ಹೋಗದಂತೆ ನಿಗಾ: ಹೆಚ್ಚು ಗ್ರಾಮ ಪಂಚಾಯಿತಿಗಳಆಡಳಿತ ಮಂಡಳಿಯನ್ನು ತಮ್ಮತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿರುವ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳಮುಖಂಡರು ಸದಸ್ಯರನ್ನು ಹಿಡಿದಿಟ್ಟುಕೊಳ್ಳಲುಯೋಜನೆ ರೂಪಿಸುತ್ತಿದ್ದಾರೆ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಡೆದು ಚುನಾವಣೆ ನಿಗದಿಯಾದರೆ ಸದಸ್ಯರು ಬೇರೆ ಪಕ್ಷಗಳಿಗೆ ವಲಸೆ ಹೋಗದಂತೆ ನೋಡಿಕೊಳ್ಳಲು ಪ್ರವಾಸದಂತಮಾರ್ಗ ಅನುಸರಿಸಲು ಸಿದ್ಧತೆಗಳು ನಡೆಯುತ್ತಿವೆ.
ಈಗಾಗಲೇ ಜಿಲ್ಲೆಯ 7 ತಾಲೂಕುಗಳಹಾಲಿ ಹಾಗೂ ಮಾಜಿ ಶಾಸಕರುತಮ್ಮ ಪಕ್ಷಗಳ ಬೆಂಬಲಿತಸದಸ್ಯರು ಹೆಚ್ಚು ಗೆಲುವು ಸಾಧಿಸಿದ್ದು, ಹೆಚ್ಚುಗ್ರಾಪಂಗಳ ಅಧಿಕಾರ ಹಿಡಿಯಲಿದ್ದೇವೆ ಎಂದು ಪೈಪೋಟಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಸದಸ್ಯರ ಸೆಳೆಯಲು ಕಮಲ ಕಸರತ್ತು: ಕೆ.ಆರ್ .ಪೇಟೆ ತಾಲೂಕಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವಕೆ.ಸಿ.ನಾರಾಯಣಗೌಡರಿಗೆ ಪ್ರತಿಷ್ಠೆಯಾಗಿದ್ದು, ಅತಿಹೆಚ್ಚು ಗ್ರಾಮ ಪಂಚಾಯಿತಿಗಳನ್ನು ತಮ್ಮ ಬೆಂಬಲಿತಸದಸ್ಯರ ಮೂಲಕ ಅಧಿಕಾರ ಹಿಡಿಯುವುದು ಅನಿವಾರ್ಯವಾಗಿದೆ. ಆ ನಿಟ್ಟಿನಲ್ಲಿ ಸದಸ್ಯರಸೆಳೆಯುವ ಕಸರತ್ತು ಜೋರಾಗಿದೆ. ಈಗಾಗಲೇ ಹಲವು ಸದಸ್ಯರು ಬೆಂಬಲ ಸೂಚಿಸಿದ್ದಾರೆನ್ನಲಾಗಿದೆ. ಅದರಂತೆಮದ್ದೂರಿನಲ್ಲೂ ಕೆಲವು ಗ್ರಾಮಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದರಿಂದ ಸದಸ್ಯರ ಆಪರೇಷನ್‌ನಡೆಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ನಾಗಮಂಗಲ, ಶ್ರೀರಂಗಪಟ್ಟಣದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮಬಲ ಸಾಧಿಸಿದ್ದು,ಆಡಳಿತ ಮಂಡಳಿ ರಚನೆಗೆ ಕಸರತ್ತು ನಡೆಸಿವೆ. ಇನ್ನುಳಿದಂತೆ ಪಾಂಡವಪುರದಲ್ಲಿ ಜೆಡಿಎಸ್ ಹಾಗೂ ಮಳವಳ್ಳಿಯಲ್ಲಿ ಕಾಂಗ್ರೆಸ್ ಮುನ್ನಡೆ ಸಾ ಸಿದ್ದು, ಗದ್ದುಗೆ ಹಿಡಿಯುವ ನಿರೀಕ್ಷೆಯಲ್ಲಿವೆ.
ಮಹಿಳೆಯರಿಗೆ ಸೀಮಿತ : ಜಿಲ್ಲೆಯ 7 ತಾಲೂಕುಗಳ 230 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಲ್ಲಿ ಅರ್ಧದಷ್ಟು ಮಹಿಳೆಯರಿಗೆಮೀಸಲಿಡಲಾಗಿದೆ. ಅದರಲ್ಲಿ ಈ ಹಿಂದೆಮಹಿಳೆಯರಿಗೆ ಮೀಸಲಾಗಿದ್ದರೆ, ಅಂಥ ಗ್ರಾಮಪಂಚಾಯಿತಿಗಳನ್ನು ಗುರುತಿಸಿ ಆದ್ಯತೆ ಮೇರೆಗೆ ಮೀಸಲಾತಿ ಅನುಗುಣವಾಗಿ ಆಯ್ಕೆ ಮಾಡಬೇಕುಎಂದು ಸೂಚಿಸಿದೆ. ಈ ಬಾರಿಗೆ ಐದು ವರ್ಷಗಳಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಅವಧಿಯನ್ನ ಮೊಟಕುಗೊಳಿಸಿ, ಮೊದಲ ಅವಧಿ 30 ತಿಂಗಳಿಗೆ ಸೀಮಿತಗೊಳಿಸಲಾಗಿದೆ. ಜಿಲ್ಲೆಯಲ್ಲಿಯೂ ಅತಿಹೆಚ್ಚುಮಹಿಳಾ ಸದಸ್ಯರು ಆಯ್ಕೆಯಾಗಿದ್ದಾರೆ. ಈಹಿನ್ನೆಲೆಯಲ್ಲಿ ಮೂರು ಪಕ್ಷಗಳು ಅಭ್ಯರ್ಥಿಗಳ ಆಯ್ಕೆಗೆ ಕಸರಸ್ತು ಆರಂಭಿಸಿವೆ.
ಜಿಲ್ಲಾಧಿಕಾರಿಯತ್ತ ಪಕ್ಷಗಳ ಚಿತ್ತ : ಚುನಾವಣೆ ಆಯೋಗದಂತೆಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ಜಿಲ್ಲಾ ಚುನಾವಣಾ ಧಿಕಾರಿಯಾಗಿರುವ ಜಿಲ್ಲಾಧಿಕಾರಿಗೆ ನೀಡಿರುವುದರಿಂದ ರಾಜಕೀಯ ಪಕ್ಷಗಳ ನಾಯಕರು,ಮುಖಂಡರು ಜಿಲ್ಲಾಧಿಕಾರಿ ನಿಗದಿಪಡಿಸುವ ಮೀಸಲಾತಿಯತ್ತಚಿತ್ತ ಹರಿಸಿದ್ದಾರೆ. ಚುನಾವಣೆಆಯೋಗದಂತೆ ಮೀಸಲಾತಿನಡೆಯಬೇಕು ಎಂಬ ನಿಟ್ಟಿನಲ್ಲಿ ನಿಗಾವಹಿಸುತ್ತಿದ್ದಾರೆ.
–ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.