ಸರಬರಾಜಾಗದ ಹಸಿರು ಪಟಾಕಿ; ಗೊಂದಲ

ಸಾಮಾನ್ಯ ಪಟಾಕಿಗಳನ್ನೇ ಮಾರಾಟಕ್ಕಿಟ್ಟ ವರ್ತಕರು

Team Udayavani, Nov 13, 2020, 7:39 PM IST

ಸರಬರಾಜಾಗದ ಹಸಿರು ಪಟಾಕಿ; ಗೊಂದಲ

ಮಂಡ್ಯ: ಸರ್ಕಾರ ಕೈಗೊಂಡ ನಿರ್ಧಾರದ ಗೊಂದಲ ಹಾಗೂ ಕೋವಿಡ್ ದಿಂದ ಪಟಾಕಿ ಮಾರಾಟದಲ್ಲಿ ಕುಸಿತ ಕಂಡಿದ್ದು, ಲಕ್ಷಾಂತರ ರೂ. ಬಂಡವಾಳ ಹಾಕಿದ್ದ ಪಟಾಕಿ ವರ್ತಕರು ನಷ್ಟದ ಆತಂಕದಲ್ಲಿದ್ದಾರೆ.

ನಗರದ ಸರ್‌ಎಂವಿ ಒಳಾಂಗಣ ಕ್ರೀಡಾಂಗಣದಲ್ಲಿ ಸುಮಾರು 10ಕ್ಕೂ ಹೆಚ್ಚು ಪಟಾಕಿ ಮಳಿಗೆಗಳನ್ನು ತೆರೆಯಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಗ್ರಾಹಕರು ಪಟಾಕಿ ಖರೀದಿಗೆ ಮುಂದಾಗುತ್ತಿಲ್ಲ. ಇದರಿಂದ ಗ್ರಾಹಕರ ಸಂಖ್ಯೆ ಇಳಿಮುಖವಾಗಿದೆ.

ಹೆಚ್ಚು ಹೊಗೆ ಸೂಸುವ ಪಟಾಕಿ ಮಾರಾಟ: ಸರ್ಕಾರ ಕೊನೇ ಕ್ಷಣದಲ್ಲಿ ಹಸಿರು ಪಟಾಕಿ ಬಳಸಿ ಎಂದು ಆದೇಶ ನೀಡಿದೆ. ಆದರೆ, ಕಾರ್ಖಾನೆಗಳಲ್ಲೇ ಅಗತ್ಯದಷ್ಟು ಹಸಿರು ಪಟಾಕಿ ಉತ್ಪಾದನೆಯಾಗುತ್ತಿಲ್ಲ. ಇದರಿಂದ ಹಸಿರು ಪಟಾಕಿಗಳು ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ. ಒಂದೆರಡು ಮಾದರಿಯ ಹಸಿರು ಪಟಾಕಿಗಳು ಹೊರತುಪಡಿಸಿದರೆ ಉಳಿದೆಲ್ಲವೂ ಸಾಮಾನ್ಯ ರಸಾಯನಿಕಯುಕ್ತ ಪಟಾಕಿಗಳನ್ನೇ ಮಾರಾಟ ಮಾಡಲಾಗುತ್ತಿದೆ.

ಪರವಾನಗಿ ವಿಳಂಬ: ಹಿಂದೆ ಪಟಾಕಿ ಮಾರಾಟಕ್ಕೆ ಒಂದು ತಿಂಗಳು ಮುಂಚಿತವಾಗಿಯೇ ಅನುಮತಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ಸರ್ಕಾರದ ಗೊಂದಲದಿಂದ ನಗರಸಭೆ ಬುಧವಾರ ಅನುಮತಿ ನೀಡಿರುವುದರಿಂದ ಪಟಾಕಿ ಮಳಿಗೆಗಳನ್ನು ತೆರೆಯಲು ವಿಳಂಬವಾಗಿರುವುದರಿಂದ ವ್ಯಾಪಾರವೂಕುಂಠಿತವಾಗಿದೆ.

ಕೋವಿಡ್ ದಿಂದ ಆರ್ಥಿಕ ಸಂಕಷ್ಟ: ಕಳೆದ 7-8 ತಿಂಗಳಿನಿಂದ ದೇಶದಲ್ಲಿ ಕೋವಿಡ್ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಹೇರಲಾಗಿತ್ತು. ಇದರಿಂದ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡರು. ಸಾಮಾನ್ಯ ಹಾಗೂ ಬಡ ವರ್ಗದ ಜನರು ಆರ್ಥಿಕ ಸಂಕಷ್ಟಕ್ಕೊಳಗಾಗಿರುವುದರಿಂದ ಪಟಾಕಿ ಖರೀದಿಗೆ ಮುಂದಾಗದಿರುವುದು ಸಹ ಪಟಾಕಿ ಮಾರಾಟ ಕುಸಿತಕ್ಕೆಕಾರಣವಾಗಿದೆ.

ಪಟಾಕಿ ಹೊಡೆಯದಂತೆ ಜಾಗೃತಿ: ಈಗಾಗಲೇ ಕೋವಿಡ್ ಇರುವುದರಿಂದ ಪಟಾಕಿ ಹೊಡೆಯದಂತೆ ಜಾಗೃತಿ ಮೂಡಿಸಲಾಗುತ್ತಿದೆ. ಪಟಾಕಿ ಹೊಡೆದರೆ ಕೋವಿಡ್ ಹೆಚ್ಚಾಗಬಹುದು. ಈಗಾಗಲೇ ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಂದಿದೆ. ಹಬ್ಬದ ಸಂಭ್ರಮದಲ್ಲಿ ಒಂದೆಡೆ ಸೇರುವುದರಿಂದ ಸೋಂಕು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ. ಪಟಾಕಿ ಬದಲು ಮರಗಿಡ ನೆಡುವ ಮೂಲಕ ಪರಿಸರ ಕಾಪಾಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ.

 ಬಗೆಹರಿಯದ ಗೊಂದಲ :  ಹಸಿರು ಪಟಾಕಿ ಮಾರಾಟ ಮಾಡುವಂತೆ ಅನುಮತಿ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ವರ್ತಕರು ಹೇಳುವುದೇ ಬೇರೆ. ತಿಂಗಳ ಮುಂಚಿತವಾಗಿ ಹಸಿರು ಪಟಾಕಿ ಮಾರಾಟಮಾಡುವಂತೆ ಸೂಚಿಸಬೇಕಿತ್ತು.ಕೊನೇ ಕ್ಷಣದಲ್ಲಿ ಹೇಳಿದ್ದರಿಂದಕಾರ್ಖಾನೆ ಗಳು ಸರಬರಾಜು ಮಾಡುತ್ತಿಲ್ಲ. ಅಲ್ಲದೆ, ಈಗಾಗಲೇ ಸಾಮಾನ್ಯಪಟಾಕಿಗಳಿಗೆ ಬಂಡವಾಳ ಹೂಡ ಲಾಗಿದೆ. ಪರವಾನಗಿಯಲ್ಲೂ ಹಸಿರುಪಟಾಕಿಗಳನ್ನೇಕಡ್ಡಾಯವಾಗಿಮಾರಾಟ ಮಾಡುವಂತೆ ಸೂಚನೆ ನೀಡಿಲ್ಲ. ಈಗಾಗಲೇ ಬಂದಿರುವ ಪಟಾಕಿಗಳನ್ನು ವಾಪಸ್‌ ಕೊಡಲು ಸಾಧ್ಯವಿಲ್ಲ.ಇದರಿಂದ ನಷ್ಟ ಉಂಟಾಗುತ್ತದೆ. ‌ ಮುಂದಿನ ವರ್ಷಕ್ಕೆಎಲ್ಲವೂ ಸರಿಹೋಗಲಿದೆ ಎಂಬುದು ವರ್ತಕರ ವಾದ.

ಹಸಿರು ಪಟಾಕಿಗಳನ್ನೇ ಮಾರಾಟ ಮಾಡುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ಹಸಿರು ಪಟಾಕಿಗಳಾದರೂ ಕಡಿಮೆ ಪ್ರಮಾಣದಲ್ಲಿ ಬಳಸಬೇಕು. ಪಾರಂಪರಿಕ ಹಬ್ಬವಾದ ದೀಪಾವಳಿಯನ್ನು ದೀಪಗಳನ್ನು ಹಚ್ಚುವ ಮೂಲಕಕತ್ತಲೆಯಿಂದ ಬೆಳಕಿನೆಡೆಗೆ ಸಾಗಬೇಕು. ಜೊತೆಗೆ ಗಿಡಗಳನ್ನು ನೆಡುವ ಮೂಲಕ ಪರಿಸರವನ್ನುಕಾಪಾಡಬೇಕು. ಡಾ.ಎಂ.ವಿ.ವೆಂಕಟೇಶ್‌, ಜಿಲ್ಲಾಧಿಕಾರಿ, ಮಂಡ್ಯ

ಸರ್ಕಾರಕೈಗೊಂಡ ಗೊಂದಲದಿಂದ ಮಳಿಗೆಗಳನ್ನು ಬೇಗ ತೆರೆಯಲು ಸಾಧ್ಯವಾಗಿಲ್ಲ. ಇಷ್ಟೊತ್ತಿಗೆ ಅರ್ಧದಷ್ಟು ಮಾರಾಟವಾಗುತ್ತಿತ್ತು. ಆದರೆ, ಈ ಬಾರಿ ವಿಳಂಬವಾಗಿ ಅನುಮತಿ ನೀಡಿರುವುದರಿಂದ ವ್ಯಾಪಾರ ಕುಸಿತವಾಗಿದೆ. ಅಲ್ಲದೆ, ಹಸಿರುಪಟಾಕಿಗಳು ಸಮರ್ಪಕವಾಗಿ ಸರಬರಾಜು ಮಾಡುತ್ತಿಲ್ಲ.ಕಾರ್ಖಾನೆಗಳಿಗೆ ಮೊದಲೇ ಸರ್ಕಾರ ಹಸಿರು ಪಟಾಕಿ ತಯಾರಿಕೆಗೆ ಸೂಚನೆ ನೀಡಿದ್ದರೆ, ಪೂರೈಕೆಯಾಗುವಷ್ಟು ಹಸಿರು ಪಟಾಕಿ ಸಿಗುತ್ತಿದ್ದವು. ಆದರೆ ನಿಧಾನವಾಗಿ ಕೈಗೊಂಡ ನಿರ್ಧಾರದಿಂದ ವರ್ತಕರು ನಷ್ಟ ಅನುಭವಿಸಬೇಕಾಗಿದೆ. ರಾಘವೇಂದ್ರ, ಪಟಾಕಿ ವರ್ತಕ

ಹಸಿರು ಪಟಾಕಿಗಳನ್ನು ಮಾರಾಟ ಮಾಡುವಂತೆ ಸೂಚಿಸಲಾಗಿದೆ. ಅದಾಗ್ಯೂ ಸಾಮಾನ್ಯ ಪಟಾಕಿಗಳ ಮಾರಾಟ ಕಂಡು ಬಂದರೆ ಅಧಿಕಾರಿಗಳುಕ್ರಮಕೈಗೊಳ್ಳಲಿದ್ದಾರೆ. ಈಗಾಗಲೇ ಎಲ್ಲರಿಗೂ ಇದರ ಬಗ್ಗೆ ಸೂಚನೆ ನೀಡಲಾಗಿದೆ. ಲೋಕೇಶ್‌, ಪೌರಾಯುಕ್ತ, ನಗರಸಭೆ, ಮಂಡ್ಯ

 

ಎಚ್‌.ಶಿವರಾಜು

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

2047ಕ್ಕೆ ವಿಕಸಿತ ಭಾರತ ನಿರ್ಮಾಣ: ಉಪರಾಷ್ಟ್ರಪತಿ

Vice President: 2047ಕ್ಕೆ ವಿಕಸಿತ ಭಾರತ ನಿರ್ಮಾಣ: ಜಗದೀಪ್‌ ಧನಕರ್‌

20-mandya

Mahadevapura: ಲಿಫ್ಟ್ ಗುಂಡಿಗೆ ಬಿದ್ದ ಬಾಲಕ ಸಾವು

Mandya: ದೇಶದ ಮೊದಲ “ರೈತರ ಶಾಲೆ’ ಶೀಘ್ರ ಆರಂಭ

Mandya: ದೇಶದ ಮೊದಲ “ರೈತರ ಶಾಲೆ’ ಶೀಘ್ರ ಆರಂಭ

Mandya1

Mandya: ಸಾಹಿತ್ಯ ಸಮ್ಮೇಳನ ಸಂಭ್ರಮಕ್ಕೆ ಕೊರತೆಯಾಗದಂತೆ ಮಿತಿಯಲ್ಲಿ ಖರ್ಚು ಮಾಡಿ: ಸಚಿವ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.