ಹೆದ್ದಾರಿ ಸೊಬಗು ಹೆಚ್ಚಿಸಿದ ಗುಲ್ಮೊಹರ್ ಹೂವಿನ ಮರಗಳು
Team Udayavani, Jun 3, 2019, 12:50 PM IST
ಮಳವಳ್ಳಿ: ಕೆಂಪು ಹೂವನ್ನು ಒಳಗೊಂಡಿರುವ ಗುಲ್ಮೊಹರ್ ಮರಗಳು ನೋಡಲು ಅತ್ಯಾಕರ್ಷ ಣೀಯ. ಇವುಗಳು ಇರುವೆಡೆ ಸೊಬಗು ತುಂಬಿರುತ್ತದೆ. ಅಂತೆಯೇ ಹಲಗೂರು-ಮಳವಳ್ಳಿಗೆ ಹೋಗುವ ಹೆದ್ದಾರಿಯ ಎಡ ಮತ್ತು ಬಲಭಾಗ ಗಳಲ್ಲಿ ಗುಲ್ ಮೊಹರ್ ಮರಗಳಲ್ಲಿ ನಳನಳಿಸುತ್ತಿರುವ ಕೆಂಪು ಹೂವು ರಸ್ತೆ ಎಲ್ಲರ ಕಣ್ಮನ ಸೆಳೆಯುತ್ತಿದೆ.
ಮದ್ದೂರು ಸರ್ಕಲ್ ಬಳಿ ಇರುವ ಗೌರಿಶಂಕರ ಕಲ್ಯಾಣ ಮಂಟಪದ ಸಮೀಪವಿರುವ ರಸ್ತೆ ಅಕ್ಕ-ಪಕ್ಕದ ಗುಲ್ಮೊಹರ್ ಮರಗಳಲ್ಲಿ ಕೆಂಪು ಹೂವುಗಳು ವಸಂತಕಾಲದಲ್ಲಿ ಹೆಚ್ಚು ಹೂವು ಬಿಟ್ಟಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರಿಗೆ, ಪರಿಸರ ಪ್ರೇಮಿಗಳಿಗೆ ಉತ್ತಮ ಗಾಳಿ, ಹೂವಿನ ಸುವಾಸನೆಯೊಂದಿಗೆ ವಿಶೇಷ ಅನುಭವ ನೀಡುತ್ತಿದೆ.ಈ ಹೂವುಗಳನ್ನು ಗೃಹ ಪ್ರವೇಶ, ಮದುವೆ ಸೇರಿದಂತೆ ಶುಭ- ಸಮಾರಂಭಗಳಿಗೆ ಹೆಚ್ಚು ಬಳಕೆ ಮಾಡಲಾಗುತ್ತದೆ. ಸಮಾರಂಭ ಗಳಿಗೆ ಬರುವ ಗಣ್ಯರಿಗೆ ಕೆಂಪುಬಣ್ಣದ ಹೂವು ಹಾಗೂ ಎಲೆಗಳಿಂದ ಕೂಡಿದ ಕೊಂಬೆಗಳನ್ನು ತಂದು ಅಲಂಕರಿಸಿ ಸ್ವಾಗತಿಸಲಾಗುತ್ತದೆ. ಈ ಹೂವು ಗಳನ್ನು ಗ್ರಾಮಾಂತರ ಪ್ರದೇಶದಲ್ಲಿ ನಡೆಯುವ ಶುಭ ಕಾರ್ಯಗಳಲ್ಲಿ ಈಗಲೂ ಹೆಚ್ಚು ಬಳಸಲಾಗುತ್ತಿದೆ.
ಹಲಗೂರು ಸಮೀಪ ಬೈಪಾಸ್ ರಸ್ತೆಯಲ್ಲಿ ಈ ಮರಗಳು ರಸ್ತೆ ಅಗಲೀಕರಣ ನೆಪದಲ್ಲಿ ಕೊಡಲಿ ಪೆಟ್ಟಿಗೆ ಸಿಗದೆ ಪಾರಾಗಿವೆ. ಅಂತೆಯೇ ರಸ್ತೆಗೂ ವಿಶೇಷ ಸೊಬಗನ್ನು ತಂದುಕೊಟ್ಟು ಪ್ರಯಾಣಿಕರಿಗೂ ಆನಂದ ಉಂಟು ಮಾಡುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.