ಕೋಟೆಯಲ್ಲಿ ಮರ್ಯಾದಾ ಹತ್ಯೆ
Team Udayavani, Mar 2, 2018, 8:15 AM IST
ಎಚ್.ಡಿ.ಕೋಟೆ: ಪರಿಶಿಷ್ಟ ಜಾತಿಯ ಯುವಕನನ್ನು ತಮ್ಮ ಮಗಳು ಪ್ರೀತಿಸಿ ಮದುವೆಯಾಗುತ್ತಾಳೆಂದು ಅರಿತ ಯುವ ತಿಯ
ಪಾಲಕರು ಆಕೆಯನ್ನು ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆಯ ಗೊಲ್ಲನಬೀಡು ಗ್ರಾಮದಲ್ಲಿ ನಡೆದಿದೆ.
ಸುಶ್ಮಿತಾ(20) ಮೃತ ದುರ್ದೈವಿ. ಪ್ರಕರಣಕ್ಕೆ ಸಂಬಂಧಿಸಿ ಯುವತಿಯ ತಂದೆ ಕುಮಾರ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ
ಒಪ್ಪಿಸಲಾಗಿದೆ. ಉಳಿದವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಗೊಲ್ಲನಬೀಡಿನ ಒಕ್ಕಲಿಗ ಜನಾಂಗದ ಸುಶ್ಮಿತಾ (20) ಮತ್ತು ಹಲನಹಳ್ಳಿಯ ದಲಿತ ಉಮೇಶ್ (22) ಪರಸ್ಪರ ಪ್ರೀತಿ ಸಿದ್ದರು. ಹೆತ್ತವರ ವಿರೋ ಧದ ನಡುವೆಯೂ ಮದುವೆಗೆ ಮುಂದಾ ಗಿದ್ದರಿಂದ ಹತ್ಯೆ ನಡೆಸಿದ್ದಾಗಿ ಯುವತಿ ತಂದೆ ಕುಮಾರ್ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ: ಸುಶ್ಮಿತಾ ಹಲನಹಳ್ಳಿ ಕಾಲೇಜಿಗೆ ಹೋಗುತ್ತಿದ್ದ ಸಂದರ್ಭ ಅದೇ ಗ್ರಾಮದ ಉಮೇಶ್ ಪರಿಚಯವಾಗಿ ಪ್ರೀತಿಸುತ್ತಿದ್ದರು. ಮದುವೆಗೆ ಪೋಷಕರ ವಿರೋಧ ಬರಬಹುದೆಂದು ತಿಳಿದು ಇಬ್ಬರೂ ಮನೆ ತೊರೆದಿದ್ದರು ಎನ್ನಲಾಗಿದೆ. ಗ್ರಾಮದ ಕೆಲ ಮುಖಂಡರು ಸೇರಿ ಪಂಚಾಯಿತಿ ಮಾಡಿ ಯುವಕ-ಯುವತಿಯನ್ನು ಬೇರೆ ಮಾಡಿದ್ದರೆಂದು ಹೇಳಲಾಗುತ್ತಿದೆ. ಇತ್ತೀಚೆಗೆ ಪಾಲಕರು ಯುವತಿಗೆ ಬೇರೆ ಯುವಕನೊಂದಿಗೆ ಮದುವೆ ಮಾಡಲು ಮುಂದಾದಾಗ ಯುವತಿ ವಿರೋಧ ವ್ಯಕ್ತಪಡಿಸಿ, ಉಮೇಶ್‌ನನ್ನೇ
ಮುದುವೆಯಾಗುವುದಾಗಿ ಹಠ ಹಿಡಿದಿದ್ದಳು ಎನ್ನಲಾಗಿದೆ. ತಮ್ಮ ಮಗಳು ಪರಿಶಿಷ್ಟ ಜಾತಿ ಹುಡುಗನನ್ನು ಮದುವೆಯಾಗುತ್ತಾಳೆಂದು ಪಾಲಕರು ಮತ್ತು ಸಂಬಂಧಿಯೋರ್ವ ಸೇರಿ ಕಳೆದ ಫೆ.21ರ ರಾತ್ರಿ ತಮ್ಮ ತೋಟದ ಮನೆಯಲ್ಲಿ ಯುವತಿಗೆ ವಿಷ ಕುಡಿಸಿ ನೇಣು
ಬಿಗಿದು ಕೊಲೆ ಮಾಡಿ ಬಳಿಕ ಸುಟ್ಟು ಹಾಕಿದ್ದರು ಎಂದು ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆಂದು ತಿಳಿದು ಬಂದಿದೆ.
ವಿಷ ಕುಡಿಸಿದ ಆರೋಪ: ತಮ್ಮ ಮಗಳು ಅನ್ಯ ಜಾತಿ ಹುಡುಗನ್ನು ಪ್ರೀತಿಸಿದ ತಪ್ಪಿಗೆ ಮೊದಲೇ ಮಗಳಿಂದ ಆದ ಇಷ್ಟೆಲ್ಲಾ ಘಟನೆಯಿಂದ ಮನನೊಂದಿದ್ದ ಪೋಷಕರು, ಸಂಬಂಧಿಯೋರ್ವ ಕಳೆದ ಫೆ.21ರ ರಾತ್ರಿ ಗೊಲ್ಲನಬಿಡು ಗ್ರಾಮದಲ್ಲಿರುವ ತಮ್ಮ ತೋಟದ ಮನೆಯಲ್ಲಿ ಯುವತಿಗೆ ವಿಷ ಕುಡಿಸಿದ್ದರು. ಆಗಲೂ ಸಾವನ್ನಪ್ಪದಿದ್ದಾಗ, ಆಕೆಯನ್ನು ನೇಣು ಬಿಗಿದು ಕೊಲೆ ಮಾಡಿ ತೋಟದ ಮನೆ ಸಮೀಪದಲ್ಲೇ ಶವ ಸುಟ್ಟು ಹಾಕಲಾಗಿತ್ತು ಎಂದು ಆರೋಪಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 8 ತಿಂಗಳ ಹಿಂದಷ್ಟೇ ತಾಲೂಕಿನ ದಡದಹಳ್ಳಿ ಗ್ರಾಮದಲ್ಲಿ ಯುವತಿಯೋರ್ವಳು ಅನ್ಯ ಜಾತಿಯ ಹುಡುಗನನ್ನು ಪ್ರೀತಿಸಿ ಮದುವೆಯಾಗಲು ಮುಂದಾಗಿ ದ್ದನ್ನು ತಿಳಿದ ಯುವತಿ ಪೋಷಕರು ಮತ್ತು ಸಂಬಂಧಿಕ ರಿಂದಲೇ ಮರ್ಯಾದಾ ಹತ್ಯೆ ನಡೆದಿತ್ತು. ಈ ಘಟನೆ ಮಾಸುವ
ಮುನ್ನವೇ ಮತ್ತೂಂದು ಮರ್ಯಾದಾ ಹತ್ಯೆ ಘಟನೆ ತಾಲೂಕಿನಲ್ಲಿ ಮರುಕಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.