Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Team Udayavani, Nov 28, 2024, 6:40 PM IST
ಮಂಡ್ಯ: ರೇಸ್‌ನಲ್ಲಿ ಬೈಕ್ ಸೇರಿ 26 ಬಹುಮಾನ ಗೆದ್ದಿರುವ ಎ1 ಟೈಗರ್ ಎಂಬ ಹಳ್ಳಿಕಾರ್ ಎತ್ತು ದಾಖಲೆಯ ಬರೋಬ್ಬರಿ 13.05 ಲಕ್ಷ ರೂ.ಗೆ ಮಾರಾಟವಾಗಿದೆ. ನಗರದ ತಾವರಗೆರೆ ನಿವಾಸಿ ಕಾಂತರಾಜು ಅವರು ಸಾಕಿದ ಹಳ್ಳಿಕಾರ್ ತಳಿಯ ಎ1 ಟೈಗರ್ ಎಂದೇ ಪ್ರಖ್ಯಾತಿ ಪಡೆದಿತ್ತು. ಇದುವರೆಗೂ ಎತ್ತು 1 ಬೈಕ್ ಸೇರಿ ಸುಮಾರು 26 ಬಹುಮಾನ ಪಡೆದಿದೆ.
ಬಹುಮಾನ: ರಾಜ್ಯದ ವಿವಿಧೆಡೆ ನಡೆದ ಓಟದ ಸ್ಪರ್ಧೆಗಳಲ್ಲಿ 9 ಬಾರಿ ಪ್ರಥಮ, 9 ಬಾರಿ ದ್ವಿತೀಯ, 4 ಬಾರಿ ತೃತೀಯ, 3 ಬಾರಿ 4ನೇ ಸ್ಥಾನ ಪಡೆದಿತ್ತು. ತಮಿಳುನಾಡಿನಲ್ಲೂ ನಡೆದ 300 ಮೀಟರ್ ಓಟದ ಸ್ಪರ್ಧೆಯಲ್ಲಿ 3ನೇ ಬಹುಮಾನ ಪಡೆದಿತ್ತು. ನಂತರ ಮತ್ತೆ ನಡೆದ 300 ಮೀಟರ್ ಓಟದ ಸ್ಪರ್ಧೆಯಲ್ಲಿ 4ನೇ ಬಹುಮಾನ ಪಡೆದಿದೆ.
ದುಃಖ: ಎತ್ತಿನ ಓಟ ಕಂಡು ಇಷ್ಟಪಟ್ಟ ತಮಿ ಳುನಾಡು ಮೂಲದ ಎಸ್.ವಿ.ರಾಜನ್ ಮಂಡ್ಯಕ್ಕೆ ಆಗಮಿಸಿ ಸುಮಾರು 13.05 ಲಕ್ಷ ರೂ.ಭಾರೀ ಮೊತ್ತ ನೀಡಿ ಖರೀದಿಸಿದರು. ಕಾಂತರಾಜು ಅವರು ಎತ್ತು ಮಾರುವಾಗ ಬಹಳ ದುಃಖದಿಂದಲೇ ಮಾರಾಟ ಮಾಡಿ ದರು. ನಂತರ ಖರೀದಿಸಿದ ರಾಜನ್‌ರನ್ನು ಅಭಿನಂದಿಸ ಲಾಯಿತು. ಈ ಸಂದರ್ಭದಲ್ಲಿ ತಾವರೆ ಗೆರೆಯ ಮಂಜು ಲಾರ, ಚಿಕ್ಕಾಡೆ ಮಾಯಿ, ವರುಣ್, ಪ್ರಮೋದ್, ಗೌತು, ಶಂಭು, ಸಂಜು ಮತ್ತಿತರರಿದ್ದರು.
ನಾನು ಮಹಾರಾಷ್ಟ್ರದಿಂದ 2 ಹಲ್ಲು ಹೊಂದಿದ ಚಿಕ್ಕ ಮರಿಯಲ್ಲಿಯೇ ಖರೀದಿಸಿ ತಂದಿದ್ದೆ. ಚೆನ್ನಾಗಿ ಆರೈಕೆ ಮಾಡಿ ರಾಜ್ಯದ ವಿವಿಧೆಡೆ ನಡೆಯುತ್ತಿದ್ದ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಸುಮಾರು 26 ಬಹುಮಾನ ಗೆದ್ದಿದೆ. ಇದರಲ್ಲಿ ಒಂದು ಬೈಕ್ ಅನ್ನು ಗೆದ್ದಿದೆ. ತಮಿಳುನಾಡಿನಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ ರಾಜನ್ ಎಂಬವರು ಇಷ್ಟಪಟ್ಟು ಎತ್ತನ್ನು ಖರೀದಿಸಿದ್ದಾರೆ. ●ಕಾಂತರಾಜು, ಎ1 ಟೈಗರ್ ಎತ್ತಿನ ಮಾಲಿಕ, ಮಂಡ್ಯ
ತಮಿಳುನಾಡಿನಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ 3ನೇ ಬಹುಮಾನ ಪಡೆದಿತ್ತು. ನಂತರ ನಡೆದ ಸ್ಪರ್ಧೆಯಲ್ಲೂ 4ನೇ ಸ್ಥಾನ ಪಡೆಯಿತು. ಇದನ್ನು ನೋಡಿದಾಗ ನನಗೆ ತುಂಬಾ ಇಷ್ಟವಾಯಿತು. ಅದಕ್ಕಾಗಿಯೇ ಖರೀದಿಸಿದೆ. ●ಎಸ್.ವಿ.ರಾಜನ್, ಖರೀದಿದಾರ, ತಮಿಳುನಾಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್”
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
America: ಎಚ್-1ಬಿ ವೀಸಾ ವ್ಯವಸ್ಥೆ ಸುಧಾರಣೆ ಬೇಕು: ಒಂದೇ ದಿನದಲ್ಲಿ ಮಸ್ಕ್ ಉಲ್ಟಾ!
Authortiy: ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಿದ ಕೆಇಎ
ಫ್ರಾನ್ಸ್ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್ ಫಿಲಿಯೋಜಾ ನಿಧನ
ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್
Mangaluru; ಪ್ರತ್ಯೇಕ ಚೆಕ್‌ಬೌನ್ಸ್ ಪ್ರಕರಣ: ಇಬ್ಬರು ಖುಲಾಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.