ಏಳು ತಿಂಗಳಲ್ಲಿ 269.9 ಮಿ.ಮೀ ಮಳೆ ದಾಖಲು

Team Udayavani, Jul 27, 2023, 3:28 PM IST

ಏಳು ತಿಂಗಳಲ್ಲಿ 269.9 ಮಿ.ಮೀ ಮಳೆ ದಾಖಲು

ಮಂಡ್ಯ: ಜಿಲ್ಲೆಯಲ್ಲಿ ಕಳೆದ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದು ಅವಾಂತರ ಸೃಷ್ಟಿಸಿದ್ದ ಮಳೆ ರಾಯ, ಈ ಬಾರಿ ವಾಡಿಕೆಗಿಂತ ಶೇ.0.2ರಷ್ಟು ಮಾತ್ರ ಹೆಚ್ಚು ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಏಪ್ರಿಲ್‌, ಮೇ ತಿಂಗಳಲ್ಲಿ ಪೂರ್ವ ಮುಂಗಾರು ಮಳೆಯೇ ಬೀಳಲಿಲ್ಲ. ಜೂನ್‌ ತಿಂಗಳಲ್ಲಿ ಮುಂಗಾರು ಮಳೆ ಆರಂಭಗೊಂಡರೂ ಸಮರ್ಪಕ ವಾಗಿ ಸುರಿಯಲಿಲ್ಲ. ಇದೀಗ ಜುಲೈ ಅಂತ್ಯದಲ್ಲಿ ಜಿಟಿಜಿಟಿ ಮಳೆ ನಿರಂತರವಾಗಿ ಸುರಿಯುತ್ತಿದೆ.

269.9 ಮಿ.ಮೀ ಮಳೆ: ಜಿಲ್ಲೆಯಲ್ಲಿ ಏಳು ತಾಲೂಕುಗಳಲ್ಲೂ ಜನವರಿಯಿಂದ ಜು.26ರವರೆಗೆ ಒಟ್ಟು 269.4 ಮಿ.ಮೀ ಸರಾಸರಿ ವಾಡಿಕೆ ಮಳೆಯಾಗಬೇಕಿತ್ತು. ಆದರೆ, 269.9 ಮಿ.ಮೀ ಸರಾಸರಿ ಮಳೆಯಾಗಿರುವ ಬಗ್ಗೆ ದಾಖಲಾಗಿದೆ. ಅಂದರೆ ಶೇ.0.2ರಷ್ಟು ಮಿ.ಮೀ ಮಾತ್ರ ಹೆಚ್ಚು ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಕೆ.ಆರ್‌. ಪೇಟೆ 311.0 ಮಿ.ಮೀ ವಾಡಿಕೆ ಮಳೆ ಪೈಕಿ 253.3 ಮಿ.ಮೀ ಮಳೆಯಾಗಿದ್ದು, ಶೇ.18.6ರಷ್ಟು ಮಳೆ ಕಡಿಮೆಯಾಗಿದೆ. ಮದ್ದೂರು 272.3 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ, 267.5 ಮಿ.ಮೀ ಮಳೆಯಾಗಿದ್ದು, ಶೇ.1.8ರಷ್ಟು ಮಳೆ ಕಡಿಮೆ, ಮಳವಳ್ಳಿ 276.3 ಮಿ.ಮೀ ವಾಡಿಕೆ ಮಳೆಗಿಂತ 296.9 ಮಿ.ಮೀ ಮಳೆಯಾಗಿದ್ದು, ಶೇ.7.5ರಷ್ಟು ಹೆಚ್ಚು ಮಳೆಯಾಗಿದೆ. ಮಂಡ್ಯ 263.5 ಮಿ.ಮೀ ವಾಡಿಕೆ ಮಳೆಗಿಂತ 223.7 ಮಿ.ಮೀ ಮಳೆಯಾಗಿದ್ದು, ಶೇ.15.1ರಷ್ಟು ಕಡಿಮೆ, ನಾಗಮಂಗಲ 276.1 ಮಿ.ಮೀ ವಾಡಿಕೆ ಮಳೆಗಿಂತ 283.4 ಮಿ.ಮೀ ಹೆಚ್ಚು ಅಂದರೆ ಶೇ.2.6ರಷ್ಟು ಮಳೆಯಾಗಿದೆ. ಪಾಂಡವಪುರ 282.7 ಮಿ.ಮೀ ವಾಡಿಕೆಗಿಂತ 285.9 ಮಿ.ಮೀ ಮಳೆಯಾಗಿದ್ದು, ಶೇ.1.1ರಷ್ಟು ಹೆಚ್ಚು ಹಾಗೂ ಶ್ರೀರಂಗಪಟ್ಟಣದಲ್ಲಿ 264.2 ಮಿ.ಮೀ ಮಳೆಗಿಂತ 248.1 ಮಿ.ಮೀ ಮಳೆಯಾಗಿದ್ದು, ಶೇ.6.1ರಷ್ಟು ಸರಾಸರಿ ಮಳೆ ಕಡಿಮೆಯಾಗಿರುವ ಬಗ್ಗೆ ದಾಖಲಾಗಿದೆ.

5.1ರಷ್ಟು ಹೆಚ್ಚು ಮಳೆ: ಕಳೆದ ಜು.1ರಿಂದ 26ರವರೆಗೆ ಜಿಲ್ಲೆಯಲ್ಲಿ ಶೇ.5.1ರಷ್ಟು ಹೆಚ್ಚು ಮಳೆ ಬಿದ್ದಿರುವ ವರದಿಯಾಗಿದೆ. ವಾಡಿಕೆ ಮಳೆ 46.7 ಮಿ.ಮೀ ಇದ್ದು, ಪ್ರಸ್ತುತ 49.1 ಮಿ.ಮೀ ಮಳೆಯಾಗಿದೆ. ಕೆ.ಆರ್‌.ಪೇಟೆ 67.9 ಮಿ.ಮೀ, ಮದ್ದೂರು 45.2 ಮಿ.ಮೀ, ಮಳವಳ್ಳಿ 28.1 ಮಿ.ಮೀ, ಮಂಡ್ಯ 43.2 ಮಿ.ಮೀ, ನಾಗಮಂಗಲ 63.0 ಮಿ.ಮೀ, ಪಾಂಡವಪುರ 47.2 ಮಿ.ಮೀ ಹಾಗೂ ಶ್ರೀರಂಗಪಟ್ಟಣ 32.2 ಮಿ.ಮೀ ಸರಾಸರಿ ಮಳೆಯಾಗಿದೆ.

ಶೇ.8.3ರಷ್ಟು ಕಡಿಮೆ ಮಳೆ: ಜೂನ್‌ನಿಂದ ಜುಲೈ 26ರವರೆಗೆ ಶೇ.8.3ರಷ್ಟು ಕಡಿಮೆ ಮಳೆಯಾಗಿದೆ. 103.2 ಮಿ.ಮೀ ಸರಾಸರಿ ವಾಡಿಕೆ ಮಳೆ ಇದ್ದು, ಆದರೆ, 94.6 ಮಿ.ಮೀ ಮಾತ್ರ ಮಳೆಯಾಗಿದೆ. ಕೆ.ಆರ್‌.ಪೇಟೆ 117.6 ಮಿ.ಮೀ, ಮದ್ದೂರು 105.4 ಮಿ.ಮೀ, ಮಳವಳ್ಳಿ 85.9 ಮಿ.ಮೀ, ಮಂಡ್ಯ 74.4 ಮಿ.ಮೀ, ನಾಗಮಂಗಲ 108.9 ಮಿ.ಮೀ, ಪಾಂಡವ ಪುರ 79.0 ಮಿ.ಮೀ ಹಾಗೂ ಶ್ರೀರಂಗಪಟ್ಟಣ 61.5 ಮಿ.ಮೀ ಸರಾಸರಿ ಮಳೆ ದಾಖಲಾಗಿದೆ. ಏಳು ದಿನಗಳಲ್ಲಿ ಶೇ.113.8ರಷ್ಟು ಹೆಚ್ಚು ಮಳೆ: ಜು.20ರಿಂದ 26ರವರೆಗೆ ಜಿಲ್ಲೆಯಲ್ಲಿ ಶೇ.113.8ರಷ್ಟು ಸರಾಸರಿ ಮಳೆ ದಾಖಲಾಗಿದೆ. ಕೆ.ಆರ್‌.ಪೇಟೆ 48.9 ಮಿ.ಮೀ, ಮದ್ದೂರು 22.0 ಮಿ.ಮೀ, ಮಳವಳ್ಳಿ 15.1 ಮಿ.ಮೀ, ಮಂಡ್ಯ 27.3 ಮಿ.ಮೀ, ನಾಗಮಂಗಲ 33.4 ಮಿ.ಮೀ, ಪಾಂಡವಪುರ 30.7 ಮಿ.ಮೀ ಹಾಗೂ ಶ್ರೀರಂಗ ಪಟ್ಟಣ 18.1 ಮಿ.ಮೀ ಮಳೆ ಸುರಿದಿದೆ.

ಜಿಲ್ಲೆಯಲ್ಲಿ ಜಿಟಿಜಿಟಿ ಮಳೆ: ಪ್ರಸ್ತುತ ಜಿಲ್ಲೆಯಲ್ಲಿ ಜಿಟಿಜಿಟಿ ಮಳೆ ಸುರಿಯು ತ್ತಿದೆ. ಕಳೆದ 24 ಗಂಟೆಗಳ ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಜಿಲ್ಲೆಯಲ್ಲಿ 9.1 ಮಿ.ಮೀ ಸರಾಸರಿ ಮಳೆ ದಾಖಲಾಗಿದೆ. ವಾಡಿಕೆ 1.3 ಮಿ.ಮೀ ಮಳೆ ಇದ್ದು, ಶೇ. 600 ರಷ್ಟು ಹೆಚ್ಚು ಮಳೆಯಾಗಿದೆ. ಕೆ.ಆರ್‌.ಪೇಟೆ 11.5 ಮಿ.ಮೀ, ಮದ್ದೂರು 9.4 ಮಿ.ಮೀ, ಮಳವಳ್ಳಿ 4.4 ಮಿ.ಮೀ, ಮಂಡ್ಯ 11.2 ಮಿ.ಮೀ, ನಾಗಮಂಗಲ 11.6 ಮಿ.ಮೀ, ಪಾಂಡವಪುರ 7.8 ಮಿ.ಮೀ ಹಾಗೂ ಶ್ರೀರಂಗಪಟ್ಟಣ 4.3 ಮಿ.ಮೀ ಸರಾಸರಿ ಮಳೆ ಬಿದ್ದಿರುವ ಬಗ್ಗೆ ದಾಖಲಾಗಿದೆ.

ಟಾಪ್ ನ್ಯೂಸ್

Laxmi-Heebalakar1

ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್‌ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

byndoor

Siddapura: ಪಾದಚಾರಿಗೆ ಪಿಕಪ್‌ ವಾಹನ ಢಿಕ್ಕಿ; ಗಂಭೀರ

Laxmi-Heebalakar1

ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್‌ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ

6

Bantwal: ತುಂಬೆ ಜಂಕ್ಷನ್‌; ಸರಣಿ ಅಪಘಾತ

Untitled-1

Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು

Brahmavar

Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.