ಹಾಪ್‌ಕಾಮ್ಸ್: 4 ಲಕ್ಷ ರೂ. ಹಣ್ಣು ಮಾರಾಟ
Team Udayavani, Apr 3, 2020, 11:21 AM IST
ಮಂಡ್ಯ: ಕೋವಿಡ್ 19 ನಿಯಂತ್ರಣದ ದೇಶ ಲಾಕ್‌ಡೌನ್ ಆಗಿರುವ ಕಾರಣ ತೋಟಗಾರಿಕೆ ಇಲಾಖೆ ತೆರೆದಿರುವ ಹಾಪ್ ಕಾಮ್ಸ್ ಮಳಿಗೆಗ ಳಲ್ಲಿ ನಿತ್ಯ 4 ಲಕ್ಷ ರೂ. ವಹಿವಾಟು ಭರ್ಜರಿ ವಹಿವಾಟು ನಡೆಯುತ್ತಿರುವುದಾಗಿ ವರದಿಯಾಗಿದೆ.
ಲಾಕ್‌ಡೌನ್ ಕಾರಣದಿಂದ ತರಕಾರಿ ಮಾರುಕಟ್ಟೆ ವ್ಯಾಪಾರ ಸ್ಥಗಿತಗೊಂಡಿದೆ. ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವ್ಯಾಪಾರ ಕೆಲವೇ ಗಂಟೆಗಳಿಗೆ ಸೀಮಿತವಾಗಿದೆ. ಹಾಪ್‌ಕಾಮ್ಸ್ ಮಳಿಗೆಗಳು ಎಲ್ಲಾ ಕಾಲದಲ್ಲೂ ಮುಕ್ತವಾಗಿ ತೆರೆದು ವ್ಯಾಪಾರಕ್ಕಿಳಿದಿರುವುದರಿಂದ ವಹಿವಾಟು ಜೋರಾಗಿಯೇ ನಡೆಯುತ್ತಿದೆ.
ಹಣ್ಣಿನ ಬೇಡಿಕೆಯೇ ಅಧಿಕ: ತರಕಾರಿಗಿಂತ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾ ಗಿದೆ. ಅದರಲ್ಲೂ ಖಬೂìಜ, ಕಲ್ಲಂಗಡಿ, ದ್ರಾಕ್ಷಿ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದೆ. ಇದರ ಜೊತೆಗೆ ಬೇರೆ ಹಣ್ಣು ಮಾರಾಟ ವಾಗುತ್ತಿವೆ. ತರಕಾರಿಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ತರಕಾರಿಗಳನ್ನು ಕೊಳ್ಳಲು ಗ್ರಾಹಕರು ಮುಂದಾಗುತ್ತಿಲ್ಲ ಎಂದು ಹಾಪ್‌ಕಾಮ್ಸ್ ಸಿಬ್ಬಂದಿ ಹೇಳುವ ಮಾತಾಗಿದೆ.
ರೈತರಿಂದ ಹಣ್ಣ, ತರಕಾರಿ ಖರೀದಿ: ಜಿಲ್ಲಾಧಿಕಾರಿ ಆದೇಶದಂತೆ ಗುರುವಾರ (ಏ.2)ದಿಂದ ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ರೈತರಿಂದ ಹಣ್ಣು-ತರಕಾರಿ ಖರೀದಿ ಪ್ರಕ್ರಿಯೆ ಶುರುವಾಗಿದೆ. ಕಲ್ಲಂಗಡಿ ಹಣ್ಣನ್ನು ರೈತರಿಂದ ಪ್ರತಿ ಕೆಜಿಗೆ 8 ರೂ.ನಂತೆ ಖರೀದಿ ಮಾಡಿ 12 ರೂ. ನಂತೆ ಮಾರಾಟ ಮಾಡಲಾಗುತ್ತಿದೆ.
250 ಗ್ರೀನ್ ಪಾಸ್: ಕೃಷಿ ಉತ್ಪನ್ನಗಳ ಖರೀದಿಗೆ ಅನುಕೂಲವಾಗುವಂತೆ ಇದುವರೆಗೆ ಜಿಲ್ಲೆಯಲ್ಲಿ 250 ಗ್ರೀನ್ ಪಾಸ್‌ಗಳನ್ನು ವಿತರಣೆಮಾಡಲಾಗಿದೆ. ಗ್ರೀನ್ ಪಾಸ್ ಹೊಂದಿರುವ ರೈತರು ತರಕಾರಿ ಮತ್ತು ಹಣ್ಣುಗಳನ್ನು ಹಾಪ್ ಕಾಮ್ಸ್‌ಗೆ ತರುತ್ತಿರುವುದು ಕಂಡುಬಂದಿದೆ.
ಇತರೆಡೆಗೆ ರವಾನೆ: ಕೋಲಾರ, ರಾಮನಗರದಿಂದಲೂ ಹಲವು ತರಕಾರಿ, ಹಣ್ಣು ಮಂಡ್ಯ ಮಾರುಕಟ್ಟೆ ಸೇರುತ್ತಿದ್ದು, ಇಲ್ಲಿಂದಲೂ ಹೊರ ಜಿಲ್ಲೆಗಳಿಗೆ ತರಕಾರಿ- ಹಣ್ಣುಗಳನ್ನು ರವಾನಿಸಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಜು ತಿಳಿಸಿದರು.
ರೈತರೇ ನೇರವಾಗಿ ಮಾರಾಟ ಮಾಡಿ : ತರಕಾರಿ, ಸೊಪ್ಪು ಬೆಳೆ ದಲ್ಲಾಳಿಗಳಿಗೆ ನೀಡುತ್ತಿದ್ದಾರೆ. ವಾಹನಗಳ ಮೂಲಕ ತರಕಾರಿ ಮಾರುಕಟ್ಟೆ ಸೇರುತ್ತಿದ್ದು ರೈತರಿಗೆ ಅಗತ್ಯ ಕ್ರಮ ವಹಿಸಲಾಗಿದೆ ಎಂದು ನಗರಸಭೆ ಆಯುಕ್ತ ಲೋಕೇಶ್ ಹೇಳಿದ್ದಾರೆ.ಬೇಸಿಗೆ ಸಮಯ ವಾದ್ದರಿಂದ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇದ್ದು ವ್ಯಾಪಾರ-ವಹಿವಾಟು ಬಿರುಸಿ ನಿಂದ ನಡೆಯುತ್ತಿದೆ. ತರಕಾರಿ ವ್ಯಾಪಾರವೂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜೋರಾಗಿಯೇ ಸಾಗಿದೆ. ಗ್ರಾಹಕರು ಮಾರುಕಟ್ಟೆ ಸಮಯದಲ್ಲಿ ಆಗಮಿಸಿ ಅಗತ್ಯ ವಸ್ತುಗಳನ್ನು ಖರೀದಿಸಿಕೊಂಡು ಹೋಗುತ್ತಿರುವುದರಿಂದ ರೈತರಿಗೆ ಯಾವುದೇ ಅನನುಕೂಲವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ
Maddur; ಕೆಲಸದ ಒತ್ತಡ: ಎಂಜಿನಿಯರ್ ಆತ್ಮಹ*ತ್ಯೆ
Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
MUST WATCH
ಹೊಸ ಸೇರ್ಪಡೆ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.