ಬಿಸಿಯೂಟ ಧಾನ್ಯ ವಿತರಿಸಿಲ್ಲ

1,16 ಲಕ್ಷ ಮಕ್ಕಳು ಯೋಜನೆ ಫ‌ಲಾನುಭವಿಗಳು

Team Udayavani, Nov 4, 2020, 3:46 PM IST

ಬಿಸಿಯೂಟ ಧಾನ್ಯ ವಿತರಿಸಿಲ್ಲ

ಬಿಸಿಯೂಟ ಧಾನ್ಯ ವಿತರಿಸಿಲ್ಲ

ಮಂಡ್ಯ: ಕೋವಿಡ್  ಹಿನ್ನೆಲೆಯಲ್ಲಿ ಶಾಲೆಗಳು ತೆರೆಯದ ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳಿನಿಂದ 1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಬಿಸಿಯೂಟ ಯೋಜನೆಯ ಧಾನ್ಯಗಳನ್ನು ರಾಜ್ಯ ಸರ್ಕಾರದ ಆದೇಶದಂತೆ ವಿತರಿಸಿಲ್ಲ. ಮೇ 31ರವರೆಗೂ ಆಹಾರ ಧಾನ್ಯಗಳನ್ನು ಮಕ್ಕಳ ಮನೆಗಳಿಗೆ ವಿತರಣೆ ಮಾಡಲಾಗಿದೆ.

ಮಾರ್ಚ್‌ವರೆಗೂ ಶಾಲೆಗಳು ನಡೆದಿದ್ದು, ಆ ಸಂದರ್ಭದಲ್ಲಿ ಶಾಲೆಗಳಲ್ಲಿಯೇ ಬಿಸಿ  ಯೂಟ ನೀಡಲಾಗಿದೆ. ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಕೋವಿಡ್   ಹಿನ್ನೆಲೆಯಲ್ಲಿ ಶಾಲೆಗಳನ್ನು ಮುಚ್ಚಿದ್ದ ಪರಿಣಾಮ ಬೇಸಿಗೆ ರಜೆ ಅವಧಿ ಏಪ್ರಿಲ್‌ ಹಾಗೂ ಮೇ ತಿಂಗಳು ಸೇರಿದಂತೆ ಒಟ್ಟು 58 ದಿನಗಳ ಕಾಲ ಆಹಾರ ಧಾನ್ಯಗಳನ್ನು ಮಕ್ಕಳ ಮನೆಗಳಿಗೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ವಿತರಿಸಿವೆ. ಜೂನ್‌ ತಿಂಗಳಿನಿಂದ ಆಹಾರ ಧಾನ್ಯಗಳ ವಿತರಣೆ ನಿಲ್ಲಿಸಲಾಗಿದೆ.

1,16,873 ಮಕ್ಕಳು: ಜಿಲ್ಲೆಯಲ್ಲಿ 1,16,873 ಮಕ್ಕಳು ಬಿಸಿಯೂಟ ಯೋಜನೆಯ ಫ‌ಲಾನು ಭವಿಗಳಾಗಿದ್ದಾರೆ. ಕೆ.ಆರ್‌.ಪೇಟೆ 17667, ಮದ್ದೂರು 17136, ಮಳವಳ್ಳಿ 18765, ಮಂಡ್ಯ 26365, ನಾಗಮಂಗಲ 13558, ಪಾಂಡವಪುರ 13168 ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ 10214 ಮಕ್ಕಳು ಯೋಜನೆಗೆ ಒಳಪಟ್ಟಿದ್ದಾರೆ.

1,05,186 ಮಕ್ಕಳಿಗೆ ಧಾನ್ಯ: ಮೇ 31ರವರೆಗೂ 1,05,186 ಮಕ್ಕಳ ಮನೆಗಳಿಗೆ ಧಾನ್ಯಗಳನ್ನು ವಿತರಿಸಲಾಗಿದೆ. ಕೆ.ಆರ್‌.ಪೇಟೆ 15900, ಮದ್ದೂರು 15422, ಮಳವಳ್ಳಿ 16889, ಮಂಡ್ಯ 23729, ನಾಗಮಂಗಲ 12202, ಪಾಂಡವಪುರ 11851 ಹಾಗೂ ಶ್ರೀರಂಗಪಟ್ಟಣದ 19193 ಮಕ್ಕಳಿಗೆ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ.

402.90 ಕ್ವಿಂಟಾಲ್‌ ಅಕ್ಕಿ: ಜಿಲ್ಲೆಯಾದ್ಯಂತ 37 ದಿನಗಳಿಗೆ 402.90 ಕ್ವಿಂಟಾಲ್‌ ಅಕ್ಕಿ ವಿತರಿಸಲಾಗಿದೆ. ಇದರ ಜೊತೆಗೆ 67.15 ಕ್ವಿಂಟಾಲ್‌ಗೆ ಗೋಧಿ, 24845.63 ಕೆ.ಜಿ. ಎಣ್ಣೆ, 99.38 ಕ್ವಿಂಟಾಲ್‌ ತೊಗರಿ ಬೆಳೆ ಹಾಗೂ 54486 ಕೆ.ಜಿ. ಹಾಲಿನ ಪುಡಿಯನ್ನು ವಿತರಣೆ ಮಾಡಲಾಗಿದೆ.

13765.98 ಕ್ವಿಂಟಾಲ್‌ ಧಾನ್ಯ ಬಾಕಿ: ಪ್ರಸ್ತುತ ಜೂನ್‌ ತಿಂಗಳಿನಿಂದ ವಿತರಣೆಯಾಗದೆ ಗೋದಾಮುಗಳಲ್ಲಿ 13765.98 ಕ್ವಿಂಟಾಲ್‌ ಧಾನ್ಯ ಸಂಗ್ರಹವಿದೆ. ಅಕ್ಕಿ 11383.92 ಕ್ವಿಂಟಾಲ್‌, ಗೋಧಿ 1306 ಕ್ವಿಂಟಾಲ್‌ ಹಾಗೂ 1076.06 ಕ್ವಿಂಟಾಲ್‌ ಬೇಳೆ ಸಂಗ್ರಹವಿದ್ದು, ಎಣ್ಣೆ, ಹಾಲಿನಪುಡಿ ಸಂಪೂರ್ಣ ವಿತರಿಸಲಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ಪ್ರತಿ ಕುಟುಂಬಕ್ಕೂ ಧಾನ್ಯ ವಿತರಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶ ನೀಡಿದ ಹಿನ್ನೆಲೆಯಲ್ಲಿ ಪಡಿತರ ಅಂಗಡಿಗಳಲ್ಲೂ ಮಕ್ಕಳಿಗೂ ಧಾನ್ಯ ವಿತರಿಸಲಾಗುತ್ತಿತ್ತು. ಆದ್ದರಿಂದ ಶಾಲೆ ಮಕ್ಕಳಿಗೆ ವಿತರಿಸಲಾಗುತ್ತಿದ್ದ ಧಾನ್ಯವನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿದೆ. ಮೇವರೆಗೂ 58 ದಿನಗಳ ಕಾಲ ವಿತರಿಸಲಾಗಿದ್ದು, ಜೂನ್‌ನಿಂದ ಸ್ಥಗಿತಗೊಳಿಸಲಾಗಿದೆ.  ಶಾಲೆಗಳು ಆರಂಭಗೊಂಡ ನಂತರ ಸರ್ಕಾರದ ಆದೇಶದಂತೆ ವಿತರಿಸಲಾಗುವುದು. ಶಿವಕುಮಾರ್‌, ಪ್ರಭಾರ ಶಿಕ್ಷಣಾಧಿಕಾರಿ, ಅಕ್ಷರ ದಾಸೋಹ

ಶಾಲೆಗಳು ಆರಂಭವಾಗದಿರುವುದರಿಂದ ಬಿಸಿಯೂಟ ಯೋಜನೆಯನ್ನು ಸ್ಥಗಿತಗೊಳಿಸಿ, ವಿದ್ಯಾರ್ಥಿಗಳ ಮನೆ ಮನೆಗೆ ಧಾನ್ಯಗಳನ್ನು ತಲುಪಿಸಲಾಗುತ್ತಿತ್ತು. ಆದರೆ ಕಳೆದ 5 ತಿಂಗಳಿನಿಂದ ರಾಜ್ಯ ಸರ್ಕಾರದ ಆದೇಶದಂತೆ ನಿಲ್ಲಿಸಲಾ ಗಿದೆ. ಶಾಲೆಗಳು ಪ್ರಾರಂಭಗೊಂಡ ನಂತರ ಸರ್ಕಾರದ ಆದೇಶದಂತೆ ಆ ತಿಂಗಳ ಧಾನ್ಯವನ್ನು ವಿತರಿಸಲಿದ್ದಾರೆ. ರಘುನಂದನ್‌, ಡಿಡಿಪಿಐ, ಮಂಡ್ಯ

 

ಎಚ್‌.ಶಿವರಾಜು

ಟಾಪ್ ನ್ಯೂಸ್

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

14

Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ

Suicide 3

Maddur; ಕೆಲಸದ ಒತ್ತಡ: ಎಂಜಿನಿಯರ್‌ ಆತ್ಮಹ*ತ್ಯೆ

Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ

Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ

13

Mandya: ಬಹುಮಾನ ಗೆದ್ದ ಹಳ್ಳಿಕಾರ್‌ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.