ಬಿಎಂಸಿ ಕೇಂದ್ರದ ಹಾಲು ಅಕ್ರಮ ಸಾಗಾಟ: ಗ್ರಾಮಸ್ಥರ ದಾಳಿ

Team Udayavani, May 23, 2022, 4:33 PM IST

ಬಿಎಂಸಿ ಕೇಂದ್ರದ ಹಾಲು ಅಕ್ರಮ ಸಾಗಾಟ: ಗ್ರಾಮಸ್ಥರ ದಾಳಿ

ನಾಗಮಂಗಲ: ಬಿಎಂಸಿ ಕೇಂದ್ರದಲ್ಲಿ ಶಿಥಲೀಕರಿಸಿದ 120ಲೀಟರ್‌ ಹಾಲನ್ನು ಅಕ್ರಮವಾಗಿ ಕದ್ದು ಬೇರೆಡೆಗೆ ಸಾಗಿಸುತ್ತಿದ್ದ ವೇಳೆ ಸಂಘದ ಕಾರ್ಯದರ್ಶಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿರುವ ಘಟನೆ ತಾಲೂಕಿನ ಬಿಂಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬಿಂಡೇನಹಳ್ಳಿ ಡೇರಿಯಲ್ಲಿ ಕಳೆದ 8 ವರ್ಷದಿಂದ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಬ್ಬಯ್ಯ ಎಂಬವರೇ ಶಿಥಲೀಕರಿಸಿದ್ದ ಹಾಲನ್ನು ಕಳವು ಮಾಡಿ ಗೂಡ್ಸ್‌ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಪೂರೈಕೆ: ಬಿಂಡೇನಹಳ್ಳಿ ಡೇರಿಗೆ ಪ್ರತಿನಿತ್ಯ ಬೆಳಗ್ಗೆಮತ್ತು ಸಂಜೆ ವೇಳೆ ಉತ್ಪಾದಕರಿಂದ ಖರೀದಿಸುತ್ತಿದ್ದ 3 ಸಾವಿರ ಲೀ.ಹಾಲನ್ನು ಸಂಘದಲ್ಲೇ ಇರುವ ಬಿಎಂಸಿ ಕೇಂದ್ರದಲ್ಲಿ ಶಿಥಲೀಕರಣ ಮಾಡಿ ಟ್ಯಾಂಕರ್‌ಮೂಲಕ ಜಿಲ್ಲಾ ಹಾಲು ಒಕ್ಕೂಟಕ್ಕೆ ಪೂರೈಕೆ ಮಾಡಲಾಗುತ್ತಿತ್ತು.

ತರಾಟೆಗೆ ತೆಗೆದುಕೊಂಡರು: ಹಾಲಿನ ಟ್ಯಾಂಕರ್‌ ಬರುವ ಅರ್ಧ ಗಂಟೆಗೂ ಮುನ್ನ ಗೂಡ್ಸ್‌ ವಾಹನ ವೊಂದರಲ್ಲಿ 40 ಲೀ. ಸಾಮರ್ಥ್ಯದ ಮೂರುಕ್ಯಾನ್‌ಗಳಲ್ಲಿ ಶಿಥಲೀಕರಿಸಿದ್ದ 120ಲೀಟರ್‌ ಹಾಲನ್ನು ಬೇರೆಡೆಗೆ ಸಾಗಿಸುತ್ತಿದ್ದನ್ನು ಸೂಕ್ಷ್ಮವಾಗಿಗಮನಿಸಿದ ಗ್ರಾಮಸ್ಥರು, ಹಾಲು ತುಂಬಿದ ಕ್ಯಾನ್‌ ಜತೆಗೆ ಗೂಡ್ಸ್‌ ವಾಹನ ತಡೆದು ಕಾರ್ಯದರ್ಶಿ ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದು ಕೊಂಡರು. ಈ ವೇಳೆ, ತಾಲೂಕಿನ ಬಿಂಡಿಗನವಿಲೆ ಹೋಬಳಿ ಗುಳಕಾಯಿಹೊಸಹಳ್ಳಿ ಗ್ರಾಮದ ವ್ಯಕ್ತಿ ಯೊಬ್ಬರು ಮದುವೆ ಸಮಾರಂಭಕ್ಕೆ ಹಾಲನ್ನುಖರೀದಿಸಿದ್ದು ತೆಗೆದುಕೊಂಡು ಹೋಗುತ್ತಿದ್ದಾರೆಂದು ಕಾರ್ಯದರ್ಶಿ ಸುಬ್ಬಯ್ಯ ಸಬೂಬು ಹೇಳಿದರು.

ಅನುಮಾನಕ್ಕೆಡೆ: ಶಿಥಲೀಕರಿಸಿದ ಹಾಲನ್ನು ಒಕ್ಕೂಟದ ಟ್ಯಾಂಕರ್‌ಗೆ ಪೂರೈಸಬೇಕಿರುವ ಹಾಲನ್ನು ಮಾರಾಟ ಮಾಡುವಂತಿಲ್ಲ. ಬಿಂಡೇನಹಳ್ಳಿಯಿಂದಸುಮಾರು 25ಕಿ.ಮೀ. ದೂರವಿರುವ ಗುಳಕಾಯಿಹೊಸಹಳ್ಳಿ ಆಸುಪಾಸಿನಲ್ಲಿಯೇ ಹಲವಾರು ಡೇರಿಬಿಎಂಸಿ ಕೇಂದ್ರಗಳಿವೆ. ಆದರೆ ಇಷ್ಟು ದೂರದಿಂದ120ಲೀ. ಹಾಲು ತೆಗೆದುಕೊಂಡು ಹೋಗುವಅವಶ್ಯಕತೆಯಿಲ್ಲ. ಟ್ಯಾಂಕರ್‌ ಚಾಲಕನೇ ಖಾಸಗಿ ಗೂಡ್ಸ್‌ನಲ್ಲಿ ಬಂದು ಕಳವು ಮಾಡಿರುವ ಈಹಾಲನ್ನು ತೆಗೆದುಕೊಂಡು ಹೋಗುತ್ತಿರುವುದುಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಶಿಸ್ತು ಕ್ರಮಕ್ಕೆ ಪಟ್ಟು: ಸಂಘದ ಕಾರ್ಯದರ್ಶಿ ಸುಬ್ಬಯ್ಯ ಈ ಹಿಂದೆ ಸಂಘದ 7ಲಕ್ಷಕ್ಕೂ ಹೆಚ್ಚುಹಣ ಲಪಟಾಯಿಸಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದರು.ಮಾನವೀಯತೆ ದೃಷ್ಟಿಯಿಂದ ತಿಳಿವಳಿಕೆ ನೀಡಲಾಗಿತ್ತು. ಆದರೆ, ಆಗಿಂದಾಗ್ಗೆ ಹಾಲನ್ನು ಕದ್ದುಮಾರಾಟ ಮಾಡುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲಿಸಿ ಕಾರ್ಯದರ್ಶಿವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅಲ್ಲಿಯವರೆಗೆ ಹಾಲಿನ ಟ್ಯಾಂಕರ್‌ ಕಳುಹಿಸುವುದಿಲ್ಲ ಎಂದು ಪಟ್ಟುಹಿಡಿದರು.

ಹಾಲು ಮಾರಾಟ ಇಲ್ಲ: ಮನ್‌ಮುಲ್‌ ಅಧಿಕಾರಿಗಳು ಪರಿಶೀಲನೆ ನಡೆಸಿ ನಡೆದಿರುವ ಲೋಪ ದೋಷಗಳ ಕುರಿತು ಹಿರಿಯ ಅಧಿಕಾರಿಗಳಿಗೆವರದಿ ನೀಡಲಾಗುವುದು ಎಂದು ಗ್ರಾಮಸ್ಥರಮನವೊಲಿಸಿದರು. ಪಟ್ಟುಬಿಡದ ಗ್ರಾಮಸ್ಥರು ಸಂಘದ ಕಾರ್ಯದರ್ಶಿ ಸುಬ್ಬಯ್ಯ ಮತ್ತು ಸಿಬ್ಬಂದಿಯನ್ನು ಕರ್ತವ್ಯದಿಂದ ಹೊರಗಿಟ್ಟು ಪಾರದರ್ಶಕತನಿಖೆ ನಡೆಸಬೇಕು. ತನಿಖೆ ಪೂರ್ಣಗೊಳ್ಳುವವರೆಗೂ ತಾತ್ಕಾಲಿಕ ಸಿಬ್ಬಂದಿ ನೇಮಕ ಮಾಡಿಕೊಳ್ಬೇಕು. ಇಲ್ಲದಿದ್ದರೆ ಹಾಲು ಮಾರಾಟ ಮಾಡುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಪ್ರತಿಭಟನೆ ಕೈಬಿಟ್ಟರು.

ಗ್ರಾಮದ ಮುಖಂಡರಾದ ಜಯರಾಮು, ಪಟೇಲ್‌ ರವೀಶ್‌ಗೌಡ, ಕೃಷ್ಣೇಗೌಡ, ಬಿ.ಎಸ್‌. ಅಶೋಕ, ರಮೇಶ, ನಾರಾಯಣ, ಸೀತೇಗೌಡ, ಕೆಂಪೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ

Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ

Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ

13-bng

Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

12-muniratna

Bengaluru: ಶಾಸಕ ಮುನಿರತ್ನ ಕೇಸ್‌: ವಿಕಾಸಸೌಧದಲ್ಲಿ ಸ್ಥಳ ಮಹಜರು

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ashok-Mandya

Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್‌. ಅಶೋಕ್‌ ಆಗ್ರಹ

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

2047ಕ್ಕೆ ವಿಕಸಿತ ಭಾರತ ನಿರ್ಮಾಣ: ಉಪರಾಷ್ಟ್ರಪತಿ

Vice President: 2047ಕ್ಕೆ ವಿಕಸಿತ ಭಾರತ ನಿರ್ಮಾಣ: ಜಗದೀಪ್‌ ಧನಕರ್‌

20-mandya

Mahadevapura: ಲಿಫ್ಟ್ ಗುಂಡಿಗೆ ಬಿದ್ದ ಬಾಲಕ ಸಾವು

Mandya: ದೇಶದ ಮೊದಲ “ರೈತರ ಶಾಲೆ’ ಶೀಘ್ರ ಆರಂಭ

Mandya: ದೇಶದ ಮೊದಲ “ರೈತರ ಶಾಲೆ’ ಶೀಘ್ರ ಆರಂಭ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ

Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ

3

Udupi: ಭತ್ತದ ಕಟಾವು ಚುರುಕು; ದ್ವಿದಳ ಧಾನ್ಯ ಬಿತ್ತನೆಗೆ ಸಿದ್ಧತೆ

15-bishop

Bengaluru: ಬಿಷಪ್‌ ಕಾಟನ್‌ ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ ಇ-ಮೇಲ್‌: ಆತಂಕ

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ

Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.