ಅಕ್ರಮ ಕಲ್ಲು ಗಣಿಗಾರಿಕೆಗೆ ಕುಮ್ಮಕ್ಕು
Team Udayavani, Feb 5, 2018, 4:28 PM IST
ಮಾಲೂರು: ಬಳ್ಳಾರಿ ಅಕ್ರಮ ಗಣಿಗಾರಿಕೆಯ ಭ್ರಷ್ಟಾಚಾರದ ಕೂಪವನ್ನು ಬಯಲಿಗೆಳೆಯುವ ಉದ್ದೇಶದಿಂದ ಪಾದಯಾತ್ರೆ ನಡೆಸಿದ ಕಾಂಗ್ರೆಸ್ ಸರಕಾರ, ಪ್ರಸ್ತುತ ಕೋಲಾರ ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗೆ ಕುಮ್ಮಕ್ಕು ನೀಡುವ ಮೂಲಕ ಭ್ರಷ್ಟಾಚಾರಕ್ಕೆ ಶ್ರೀರಕ್ಷೆಯಾಗಿ ನಿಂತಿದೆ ಎಂದು ಶಾಸಕ ಕೆ.ಎಸ್.ಮಂಜುನಾಥಗೌಡ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಾರ್ಡ್ ಸಂಖ್ಯೆ 22 ರ ಹಲವು ಯುವಕರನ್ನು ಜೆಡಿಎಸ್ ಪಕ್ಷಕ್ಕೆ ಸ್ವಾಗತಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ಅಕ್ರಮ ಕಲ್ಲು ಗಣಿಗಾರಿಕೆ ಬೆಂಬಲ: ಜಿಲ್ಲೆಯಲ್ಲಿಯೇ ಅತ್ಯಂತ ಬೃಹತ್ ಪ್ರಮಾಣದ ಅಕ್ರಮ ಕಲ್ಲು ಗಣಿಗಾರಿಕೆಯ ಭ್ರಷ್ಟಾಚಾರ ಟೇಕಲ್ ಹೋಬಳಿಯಲ್ಲಿ ನಡೆಯುತ್ತಿದೆ. ಇದನ್ನು ತಡೆಯಬೇಕಾದ ಸರಕಾರವೇ ಅಕ್ರಮ ಕಲ್ಲು ಗಣಿಗಾರಿಕೆ ಬೆಂಬಲಕ್ಕೆ ನಿಂತಿದೆ.
ಸರಕಾರದ 48 ಎಕರೆ ಭೂಮಿ ಅತಿಕ್ರಮಣ, 38 ಎಕರೆ ಅರಣ್ಯ ಭೂಮಿ ಒತ್ತುವರಿ, ಗಣಿಗಾರಿಕೆ ನಿಯಮ ಉಲ್ಲಂಘನೆ ಸೇರಿದಂತೆ ಅನೇಕ ಭ್ರಷ್ಟಾಚಾರಗಳ ಬಗ್ಗೆ ಸರಕಾರದ ಅಧಿಕಾರಿಗಳೇ ಸದನ ಸಮಿತಿಗೆ ವರದಿ ನೀಡಿದ್ದಾರೆ. ಆದರೆ, ಇಲ್ಲಿಯವರೆಗೂ ಭ್ರಷ್ಟಾಚಾರಿಗಳ ಮೇಲೆ ಕ್ರಮ ಜರುಗಿಸಿಲ್ಲ. ಹೀಗಾದರೆ, ಕಲ್ಲು ಗಣಿಗಾರಿಕೆ ಅಕ್ರಮಗಳ ಸರಕಾರ ವಿಧಿಸಿರುವ 98 ಕೋಟಿ ರೂ. ದಂಡವನ್ನು ವಸೂಲಿ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಜಲ್ಲಿ ಕ್ರಷರ್ ಧೂಳಿನಿಂದ ಸಂಕಷ್ಟ: ಕಳೆದ 10 ದಿನಗಳಿಂದ ತಾಲೂಕಿನ ಟೇಕಲ್ ಹೋಬಳಿಯ ಅನೇಕ ಜಲ್ಲಿ ಕ್ರಷರ್‌ಗಳಿಗೆ ಬೀಗ ಹಾಕಲಾಗಿರುವುದರಿಂದ ಈ ಭಾಗದ ಜನರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತಿದೆ. ಕೃಷಿ ಭೂಮಿಯಲ್ಲಿ ಬೆಳೆ ಬೆಳೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದ ಇಲ್ಲಿನ ರೈತರು ಹಾಗೂ ನಾಗರಿಕರು, ಕುಡಿಯುವ ನೀರು ಹಾಗೂ ಆಹಾರದಲ್ಲಿ ಜಲ್ಲಿ ಕ್ರಷರ್‌ಗಳ ಧೂಳನ್ನು ಸೇವಿಸುವಂತಾಗಿತ್ತು ಎಂದರು.
ಅಭಿವೃದ್ಧಿ ಸಹಿಸದ ಸ್ಥಳೀಯ ಮುಖಂಡರು: ಭೂ ಅಕ್ರಮ, ಕಲ್ಲು ಗಣಿಗಾರಿಕೆ ಅಕ್ರಮಗಳನ್ನು ಪ್ರಶ್ನಿಸುವ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವ ಸ್ಥಳೀಯ ರಾಜಕಾರಣಿಗಳು ಅಭಿವೃದ್ಧಿಯನ್ನು ಎಂದಿಗೂ ಸಹಿಸುತ್ತಿಲ್ಲ. ಹೊಂಡಾ ಕಂಪನಿ ಸಹಕಾರದಿಂದ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಸಿಸಿ ಕ್ಯಾಮರಾಗಳನ್ನು ಕಳವು ಮಾಡಿಸಿ, ಅಲ್ಲಿನ ಅನೇಕ ವಸ್ತುಗಳನ್ನು ಹಾಳು ಮಾಡಿಸಿದ್ದಾರೆ. ಕ್ರೀಡಾಂಗಣದ ನಿರ್ವಹಣೆ ಉದ್ದೇಶದಿಂದ ನಿರ್ಮಿಸಿರುವ ಅಂಗಡಿ, ಮಳಿಗೆಗಳ ಹರಾಜು ಪ್ರಕ್ರಿಯೆಗೆ ತಡೆ ಹಾಕಿದ್ದಾರೆ. ಇಲ್ಲಿನ ರಾಜಕಾರಣಿಗಳಿಗೆ ಅಭಿವೃದ್ಧಿಗಿಂತ ರಾಜಕೀಯವೇ ಮುಖ್ಯವಾಗಿದೆ ಎಂದು ಕಿಡಿಕಾರಿದರು.
ಅನುದಾನ ವಿತರಣೆಯಲ್ಲೂ ಮೀನಮೇಷ: ತಾಲೂಕಿಗೆ ಅನುದಾನಗಳನ್ನು ನೀಡುವುದರಲ್ಲೂ ಮೀನಮೇಷ ಎಣಿಸಿರುವ ಸರಕಾರ ಜಿಲ್ಲೆಯ ಬಂಗಾರಪೇಟೆ ಮಾತ್ತು ಶ್ರೀನಿವಾಸಪುರ ಕ್ಷೇತ್ರಗಳಿಗೆ ನೀಡಿದ ಅನುದಾನದ ಅರ್ಧ ಭಾಗವನ್ನೂ ಮಾಲೂರು ಕ್ಷೇತ್ರಕ್ಕೆ ನೀಡಿಲ್ಲ ಎಂದು ಆರೋಪಿಸಿದರು.
ವಿಧಾನಸಭೆಯಲ್ಲೂ ವಿಷಯ ಪ್ರಸ್ತಾಪಿಸುವೆ: ತಾಲೂಕಿನ ಎಲ್ಲಾ ವಿಚಾರಗಳನ್ನು ಕೋಲಾರ ಜಿಪಂ ಕೆಡಿಪಿ ಸಭೆಯಲ್ಲಿ ಮಂಡಿಸಿದ್ದು, ಮುಂದಿನ ವಿಧಾನಸಭಾ ಅಧಿವೇಶನದಲ್ಲೂ ವಿಷಯವನ್ನು ಪ್ರಸ್ತಾಪಿಸುವ ಜೊತೆಗೆ ಸದನದ ಬಾವಿಗಿಳಿದು ಹೋರಾಟ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಾರ್ಡ್ ಸಂಖ್ಯೆ 22ರ ಅಪ್ಪಿ, ಕೆಂಚ, ಯಾರಬ್, ರಜನಿಕಾಂತ್, ವೆಂಕಟೇಶ್, ಮಧು, ಹರೀಶ್, ಶ್ರೀನಿವಾಸ್, ಚೇತನ್ ಸೇರಿದಂತೆ 30ಕ್ಕೂ ಹೆಚ್ಚು ಮಂದಿ ಜೆಡಿಎಸ್ ಸೇರಿದರು. ಕಾರ್ಯಕ್ರಮದಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಟಿ.ರಾಮಚಂದ್ರ, ಪುರಸಭಾ ಸದಸ್ಯ ಆಲೂ ಮಂಜು, ಮುರಳೀಧರ, ಪಚ್ಚಪ್ಪ, ಮುಖಂಡರಾದ ರಾಜು, ರವಿ ಚೌಡರೆಡ್ಡಿ, ಶ್ರೀನಿವಾಸ್ ಮತ್ತಿರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.