ಅಂಬರೀಶ್ ರಸ್ತೆ ನಾಮಫಲಕಕ್ಕೆ ಚಾಲನೆ
Team Udayavani, May 30, 2020, 5:14 AM IST
ಭಾರತೀನಗರ: ಜಿಲ್ಲೆಯ ಜನತೆ ಅಂಬರೀಶ್ ಮೇಲಿಟ್ಟಿರುವ ಅಭಿಮಾನವೇ ಇಂದು ನನ್ನನ್ನು ಸಂಸದೆಯನ್ನಾಗಿ ಮಾಡಿದೆ ಎಂದು ಸಂಸದೆ ಸುಮಲತಾ ತಿಳಿಸಿದರು. ಹೋಬಳಿಯ ಮದ್ದೂರು-ಮಳವಳ್ಳಿ ಹೆದ್ದಾರಿಯ ಮುಟ್ಟನಹಳ್ಳಿ ಗೇಟ್‌ನಲ್ಲಿ ರಸ್ತೆಗೆ ಅಂಬರೀಶ್ ನಾಮಫಲಕವನ್ನು ಉದ್ಘಾಟಿಸಿ ಮಾತನಾಡಿ, ಮಂಡ್ಯ ಜಿಲ್ಲೆಯ ಜನತೆಯ ಋಣವನ್ನು ನಾನೆಂದಿಗೂ ಮರೆಯುವುದಿಲ್ಲ ಎಂದರು.
ಮುಟ್ಟನಹಳ್ಳಿ ಗ್ರಾಮದ ಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಅಂಬರೀಶ್ ಹುಟ್ಟುಹಬ್ಬದ ಅಂಗವಾಗಿ ರೈತರಿಗೆ ಸಸಿ ವಿತರಿಸಲಾಯಿತು. ಈ ವೇಳೆ ಚಿತ್ರನಟ ದೊಡ್ಡಣ್ಣ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಪುತ್ರ ಅಭಿಷೇಕ್‌ಗೌಡ, ಜಿಪಂ ಸದಸ್ಯ ರಾಜೀವ್, ಬೇಲೂರು ಸೋಮಶೇಖರ್, ಮುಟ್ಟನಹಳ್ಳಿ ಮಹೇಂದ್ರ, ಚಂದ್ರಶೇಖರ್, ಕುಮಾರ್, ಚಂದ್ರಶೇಖರ್, ಶಿವಣ್ಣ ಇತರರಿದ್ದರು.
ಅಂಬಿ ಸ್ಮಾರಕಕ್ಕೆ ಪೂಜೆ: ಸಮೀಪದ ದೊಡ್ಡರಸಿನಕೆರೆಯಲ್ಲಿ ಅಭಿಮಾನಿಗಳು ನಿರ್ಮಿಸಿರುವ ಅಂಬರೀಶ್ ಸ್ಮಾರಕಕ್ಕೆ ಸಂಸದೆ ಸುಮಲತಾ ಮತ್ತು ಪುತ್ರ ಅಭಿಷೇಕ್‌ಗೌಡ ಭೇಟಿ ನೀಡಿ ಪೂಜೆ ಸಲ್ಲಿಸಿ ಕೆಲ ಕ್ಷಣ ಭಾವುಕರಾದರು. ಅಭಿಮಾನಿಗಳ ಒತ್ತಾಯದ ಮೇರೆಗೆ ಅಂಬಿ ಸರ್ಕಲ್‌ಗೆ ಭೇಟಿ ನೀಡಿ ಅಂಬರೀಶ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಬಳಿಕ ಇತ್ತೀಚೆಗೆ ನಿಧನ ಹೊಂದಿದ ಚಿಕ್ಕರಸಿನಕೆರೆ ಶ್ರೀಕಾಲಭೈರವೇಶ್ವರ ಟ್ರಸ್ಟ್ ಅಧ್ಯಕ್ಷ ಜೋಗಿಗೌಡ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ದೇವಸ್ಥಾನದ ಅತಿಥಿ ಗೃಹದಲ್ಲಿ ಉಪಹಾರ ಸೇವಿಸಿದರು. ದೊಡ್ಡರಸಿನಕೆರೆ ಗ್ರಾಮದ ರಘು, ರಮೇಶ್, ಡೈರಿ ಶಿವು, ಹುಚ್ಚೇಗೌಡ, ಸಿದ್ದೇಗೌಡ, ಜ್ಯೋತಿಕುಮಾರ್, ಚಿಕ್ಕರಸಿನಕೆರೆ ಶಿವಲಿಂಗೇಗೌಡ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.