Shakti Scheme: ಶಕ್ತಿ ಯೋಜನೆಯಿಂದ ಆದಾಯ ಹೆಚ್ಚಳ
Team Udayavani, Aug 27, 2023, 4:24 PM IST
ಮಂಡ್ಯ: ಶಕ್ತಿ ಯೋಜನೆಯಿಂದ ಕೆಎಸ್‌ಆರ್‌ಟಿಸಿಗೆ ಜಿಲ್ಲೆಯಿಂದ ನಿತ್ಯ 23 ಲಕ್ಷ ರೂ. ಆದಾ ಯದ ಜೊತೆ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾ ಗಿದ್ದು, ಹೆಚ್ಚುವರಿ ಬಸ್‌ಗಳ ಅವಶ್ಯಕತೆ ಇದೆ.
“ಶಕ್ತಿ ಯೋಜನೆ’ ಜಾರಿ ಬಳಿಕ 6 ಘಟಕಗಳ ವ್ಯಾಪ್ತಿಯಲ್ಲಿ ಶೇ.39.4ರಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ನಿತ್ಯ 23 ಲಕ್ಷ ರೂ. ಆದಾಯ ಸಂಸ್ಥೆಯ ಬೊಕ್ಕಸ ಸೇರುತ್ತಿದೆ. ಯೋಜನೆ ಪೂರ್ವದಲ್ಲಿ 2,08,605 ನಿತ್ಯ ಸರಾಸರಿ ಪ್ರಯಾಣಿಕರ ಸಂಖ್ಯೆ ಇತ್ತು. ಈಗ 2,90,701ಕ್ಕೆ ಹೆಚ್ಚಿದೆ. ಅಂದರೆ 82,096 ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಅದರಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ 1,69,363 ಇದೆ. ಅಂದರೆ ಶೇ.58.3 ಪ್ರಯಾಣಿಕರ ಪಾಲು ಸ್ತ್ರೀ ಶಕ್ತಿಯದ್ದಾಗಿದೆ.
23,46,731 ರೂ. ಆದಾಯ: ಇನ್ನೂ ಶಕ್ತಿ ಯೋಜನೆ ಪೂರ್ವದಲ್ಲಿ 46,27,521 ರೂ. ಇದ್ದ ದೈನಂದಿನ ಆದಾಯ ಯೋಜನೆ ಜಾರಿ
ಬಳಿಕ 69,74,252 ರೂ.ಗೆ ಏರಿಕೆ ಕಂಡಿದೆ. ಪ್ರತಿದಿನ ಸರಾಸರಿ 23,46,731 ರೂ. ಹೆಚ್ಚುವರಿ ಆದಾಯ ಸೃಷ್ಟಿಯಾಗಿ ಶೇ.50.7 ಶಕ್ತಿಗೆ ಫಲ ಸಿಕ್ಕಿದೆ.
ಹೆಚ್ಚುವರಿ ಬಸ್‌ಗಳು ಅವಶ್ಯಕ: ಶಕ್ತಿ ಯೋಜನೆ ಜಾರಿ ಬಳಿಕ ಜಿಲ್ಲೆಯ 6 ಕೆಎಸ್‌ಆರ್‌ಟಿಸಿ ಘಟಕಗಳ ವ್ಯಾಪ್ತಿಯಲ್ಲಿ 86,36,958 ಮಹಿಳಾ ಪ್ರಯಾಣಿಕರು ಪ್ರಯಾಣಿಸಿ ಪ್ರಯೋಜನ ಪಡೆಯುವ ಜೊತೆಗೆ ರಾಜ್ಯ ಸಾರಿಗೆಗೆ ಶಕ್ತಿ ತುಂಬಿದ್ದಾರೆ. ಶಕ್ತಿ ಯೋಜನೆ ಜಾರಿಯಾದಾಗಿನಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಒಂದು ಮಾರ್ಗದಲ್ಲಿ ಒಂದು ಬಸ್‌ನಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿಸಿಕೊಳ್ಳಲಾಗುತ್ತಿದೆ. ಇದರಿಂದ ಸಾಕಷ್ಟು ಇಕ್ಕಟ್ಟಿನಲ್ಲಿ ಸಂಚರಿಸ ಬೇಕಾಗಿದೆ. ಅಲ್ಲದೆ, ವಿಶೇಷ ದಿನಗಳಲ್ಲಿ ಪ್ರಯಾ ಣಿಕರ ಸಂಖ್ಯೆ ದುಪ್ಪಟ್ಟು ಆಗುತ್ತಿರುವುದರಿಂದ ಹೆಚ್ಚುವರಿ ಬಸ್‌ಗಳ ಅಗತ್ಯವಿದೆ.
ಪ್ರಯಾಣಿಕರು, ಆದಾಯದ ವಿವರ:
ಜೂ.11ರಿಂದ ಪೂರ್ತಿ ತಿಂಗಳು 28,91,572 ಪ್ರಯಾಣಿಕರು ಸಂಚರಿಸಿದ್ದು, 7,34,00,969 ರೂ., ಜುಲೈ ತಿಂಗಳಲ್ಲಿ 57,45,386 ಪ್ರಯಾಣಿಕರು ಸಂಚರಿಸಿದ್ದು, 13,97,77,654 ರೂ. ಸೇರಿದಂತೆ ಒಟ್ಟು ಜೂನ್ ಹಾಗೂ ತಿಂಗಳಲ್ಲಿ 86,36,948 ಪ್ರಯಾಣಿಕರು ಸಂಚರಿಸಿದ್ದು, ಒಟ್ಟು 13,97,77,654 ರೂ. ಆಗಿದೆ.
ಶಕ್ತಿ ಯೋಜನೆಗಾಗಿ ಬಸ್‌ಗಳ ದುರಸ್ತಿ:
ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಮಂಡ್ಯ ಜಿಲ್ಲೆಯ ಸಾರಿಗೆ ಘಟಕದ 36 ಬಸ್‌ಗಳನ್ನು ಚಾರ್ಸಿ ಉಳಿಸಿಕೊಂಡು ಕವಚ ಪುನಶ್ಚೇತನಗೊಳಿಸಿ ಬಳಸಲಾಗುತ್ತಿದೆ. ದುರಸ್ತಿಯಾಗುವ ಬಸ್‌ಗಳ ಸುಸ್ಥಿತಿಗೊಳಿಸುವ ಭಾಗವಾಗಿ ಉತ್ತಮ ಬೆಳವಣಿಗೆಯಾಗಿದೆ. ಇದರಿಂದ ಮಾರ್ಗಗಳ ಬಸ್‌ಗಳ ಕೊರತೆ ನೀಗಿಸಲು ಸಾರಿಗೆ ಇಲಾಖೆ ಕ್ರಮ ವಹಿಸಿದೆ.
849 ಮಾರ್ಗಗಳಲ್ಲಿ ಸಂಚಾರ:
ಮಂಡ್ಯ ವಿಭಾಗದಲ್ಲಿ 6 ಘಟಕಗಳಿದ್ದು, 18 ಬಸ್ ನಿಲ್ದಾಣಗಳಿವೆ. 1972 ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. 443 ವಾಹನ ಬಲದೊಂದಿಗೆ 425 ಅನುಸೂಚಿಗಳಲ್ಲಿ 849 ಮಾರ್ಗಗಳಲ್ಲಿ ಒಟ್ಟು 1,56,501 ಕಿ.ಮೀ ಕಾರ್ಯಾಚರಣೆ ಮಾಡಿ ಪ್ರಯಾಣಿಕರ ಸೇವೆ ಮಾಡುತ್ತಿದೆ. ಮಂಡ್ಯ ಸಾರಿಗೆ ಘಟಕದಲ್ಲಿ 106 ವಾಹನ, ಮದ್ದೂರು 80, ಮಳವಳ್ಳಿ 75, ನಾಗಮಂಗಲ 61, ಕೆ.ಆರ್.ಪೇಟೆ 61 ಹಾಗೂ ಪಾಂಡವಪುರದಲ್ಲಿ 60 ವಾಹನ ಸೇರಿ ಒಟ್ಟು 443 ಬಸ್‌ಗಳಿದ್ದು, ಹೆಚ್ಚುವರಿ 40 ಬಸ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದು ಶೀಘ್ರದಲ್ಲಿಯೇ ಬರುವ ಸಾಧ್ಯತೆ ಇದೆ.
ಮಾರ್ಗಗಳಲ್ಲಿ ಬಸ್‌ಗಳ ಕೊರತೆ: ಆರೋಪ;
ಶಕ್ತಿ ಯೋಜನೆಯಿಂದ ಜಿಲ್ಲೆಯ ವಿವಿಧ ಮಾರ್ಗಗಳಲ್ಲಿ ಬಸ್‌ಗಳ ಕೊರತೆ ಹೆಚ್ಚಾಗಿದೆ ಎಂಬ ಆರೋಪಗಳು ಪ್ರಯಾಣಿಕರಿಂದ ಕೇಳಿ ಬರುತ್ತಿವೆ. ಶಕ್ತಿ ಯೋಜನೆಗಿಂತ ಮೊದಲು ಸಂಜೆ ವೇಳೆ 4.30ರಿಂದ 7.30ರವರೆಗೆ ಮಂಡ್ಯ- ಮೇಲುಕೋಟೆ -ಪಾಂಡವಪುರ, ಕೆ.ಆರ್.ಪೇಟೆ, ನಾಗಮಂಗಲ ಸೇರಿ ವಿವಿಧ ಮಾರ್ಗಗಳಲ್ಲಿ 15ರಿಂದ 30 ನಿಮಿಷಕ್ಕೆ ಬಸ್ ಸಿಗುತ್ತಿತ್ತು. ಆದರೆ, ಈಗ ಗಂಟೆಗಟ್ಟಲೇ ಕಾದರೂ ಬಸ್ ಬರುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು, ನೌಕರರು, ಸರ್ಕಾರಿ ಅಧಿಕಾರಿಗಳು ನಿಗದಿನ ಅವಧಿಯೊಳಗೆ ಊರುಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
– ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.