ಮೈಷುಗರ್‌ ವ್ಯಾಪ್ತಿ ಕಬ್ಬಿಗೆ ಹೆಚ್ಚಿದ ಬೇಡಿಕೆ

ಕಬ್ಬು ಖರೀದಿಗೆ ಕಾರ್ಖಾನೆಗಳ ಪೈಪೋಟಿ

Team Udayavani, Sep 19, 2020, 4:30 PM IST

ಮೈಷುಗರ್‌ ವ್ಯಾಪ್ತಿ ಕಬ್ಬಿಗೆ ಹೆಚ್ಚಿದ ಬೇಡಿಕೆ

ಮಂಡ್ಯ: ಮೈಷುಗರ್‌ ಕಾರ್ಖಾನೆಗೆ ಆರಂಭಕ್ಕೆ ಸರ್ಕಾರ ಮೀನಾ ಮೇಷ ಎಣಿಸುತ್ತಿದೆ. ಆದರೆ, ಈ ವ್ಯಾಪ್ತಿಯ ಕಬ್ಬಿಗೆ ಬೇಡಿಕೆ ಹೆಚ್ಚಾಗಿದ್ದು, ಕಳೆದ ಬಾರಿಯ ಸಂಕಷ್ಟದಿಂದ ರೈತರು ಪಾರಾಗುವ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಮೈಷುಗರ್‌ ವ್ಯಾಪ್ತಿಯ ಕೂಳೆ ಕಬ್ಬು ಹಾಗೂ 12 ತಿಂಗಳ ಕಬ್ಬು ಬೆಳೆದು ನಿಂತಿದೆ. ಕಬ್ಬು ಬೆಳೆಗಾರರು ತಮಿಳುನಾಡಿನ ಬಣ್ಣಾರಿ ಅಮ್ಮನ್‌, ಭಾರತೀ ನಗರದ ಚಾಂಷು ಗರ್‌ಹಾಗೂಮದ್ದೂರುಕೊಪ್ಪದಎನ್‌ಎಸ್‌ಎಲ್‌ಕಾರ್ಖಾನೆಗಳು ಖರೀದಿಸುತ್ತಿವೆ. ಈಗಾಗಲೇ3 ಲಕ್ಷ ಟನ್‌ಕಬ್ಬನ್ನುಕಾರ್ಖಾನೆಗಳಿಗೆ ಸರಬರಾಜು ಮಾಡಿದ್ದು, ಇನ್ನೂ6 ಲಕ್ಷ ಟನ್‌ಕಬ್ಬು ಲಭ್ಯವಿದೆ.

ಖರೀದಿಗೆ ಪೈಪೋಟಿ: ಇದರ ನಡುವೆ ಪಾಂಡವಪುರ ಸಹಕಾರಿ ಕಾರ್ಖಾನೆಯೂ ಕಬ್ಬು ಅರೆಯಲು ಮುಂದಾಗಿರುವುದರಿಂದ ಕಾರ್ಖಾನೆಗಳು ಕಬ್ಬು ಖರೀದಿಗೆ ಪೈಪೋಟಿಗಿಳಿದಿವೆ. ಕಾರ್ಖಾನೆಯ ಆಡಳಿತ ಮಂಡಳಿಯ ಅಧಿಕಾರಿಗಳೇ ಖುದ್ದಾಗಿ ಕಬ್ಬಿನ ಪ್ಲಾಟ್‌ಗಳಿಗೆ ಭೇಟಿ ನೀಡಿ ಖರೀದಿಸಲು ಮುಂದಾಗಿದ್ದಾರೆ. ಪಾಂಡವಪುರ ಹಾಗೂ ಮಂಡ್ಯ ತಾಲೂಕು ವ್ಯಾಪ್ತಿಯ ಕಬ್ಬನ್ನು ಬೇರೆ ರಾಜ್ಯದ ಕಾರ್ಖಾನೆಗಳು ಸಾಗಿಸುತ್ತಿರುವ ವಿರುದ್ಧ ಪಿಎಸ್‌ ಎಸ್‌ಕೆ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿತ್ತು.

ಕಟಾವು-ಸಾಗಾಣೆ ವೆಚ್ಚ ರೈತರ ಹೆಗಲಿಗೆ: ಕಾರ್ಖಾನೆಗಳು ಕಬ್ಬು ಕಟಾವು ಮಾಡಿಕೊಳ್ಳಲು ಮುಂದಾಗಿವೆ. ಆದರೆ, ಕಟಾವು ಹಾಗೂ ಸಾಗಣೆ ವೆಚ್ಚವನ್ನು ರೈತರೇ ಭರಿಸಬೇಕಾದ ಅನಿವಾರ್ಯವಿದೆ. ಕಳೆದ ಬಾರಿ ಸಾಗಣೆ ವೆಚ್ಚಕೊಡುತ್ತೇವೆ ಎಂದು ಸರ್ಕಾರ ಹೇಳಿತ್ತು. ನಂತರ 30 ಕಿ.ಮೀ ವ್ಯಾಪ್ತಿಗಿಂತ ಹೆಚ್ಚು ಹೊರಗಡೆ ಹೋದರೆ, ಅದರ ವೆಚ್ಚ ಭರಿಸುವ ಭರವಸೆ ನೀಡಿತ್ತು. ಆದರೆ, ಅದು ಇದುವರಿಗೂ ಈಡೇರಿಲ್ಲ. ಈ ಬಾರಿಯೂ ಅದೇ ರೀತಿ ಮುಂದುವರಿದಿದೆ. ಈಗಾ ಗಲೇ ಕಬ್ಬು ಕಟಾವು ಹಾಗೂ ಸಾಗಣೆ ವೆಚ್ಚ ಸೇರಿದಂತೆ ಒಟ್ಟು800 ರೂ. ರೈತರೇ ಭರಿಸಬೇಕಾಗಿದೆ.ಕಬ್ಬಿನ ಗಿಣ್ಣುಗಳ ಆಧಾರದ ಮೇಲೆ ಖರೀದಿ ಮಾಡ ಲಾಗುತ್ತಿದೆ. 15ಕ್ಕೂ ಹೆಚ್ಚು ಗಿಣ್ಣುಗಳಿರುವಕಬ್ಬಿಗೆ ಹೆಚ್ಚು ಬೇಡಿಕೆ ಇದೆ.

ಎಫ್ಆರ್‌ಪಿ ದರದಲ್ಲಿ ತಾರತಮ್ಯ :  ಕಾರ್ಖಾನೆಗಳು ಸಮನಾದ ಎಫ್ಆರ್‌ಪಿ ದರ ನೀಡುತ್ತಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಒಂದೊಂದು ಕಾರ್ಖಾನೆ ಒಂದೊಂದು ರೀತಿಯ ದರ ನೀಡುತ್ತಿವೆ. ಶೇ.10 ರಷ್ಟು ಇಳುವರಿ ಬರುವಕಬ್ಬಿಗೆಕೇಂದ್ರ ಸರ್ಕಾರದ ನಿಗದಿಯಂತೆ2850 ರೂ. ನೀಡುತ್ತಿವೆ. ಅದಕ್ಕಿಂತಕಡಿಮೆ ಇಳುವರಿ ಬರುವಕಬ್ಬಿಗೆ2675ರಿಂದ2750 ರೂ.ವರೆಗೆ ನೀಡಲಾಗುತ್ತಿದೆ. ಆದರೆ, ಇದರಲ್ಲಿ ರೈತರಕಬ್ಬು ಎಷ್ಟು ಇಳುವರಿಬರಲಿದೆ ಎಂಬುದು ಮಾಹಿತಿ ನೀಡುವುದಿಲ್ಲ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ ಎನ್ನುತ್ತಾರೆ ರೈತ ಸಂಪಳ್ಳಿ ಶಿವಶಂಕರ್‌

ಮೈಷುಗರ್‌ ವ್ಯಾಪ್ತಿಯಕಬ್ಬಿಗೆ ಬೇಡಿಕೆ ಹೆಚ್ಚಾಗಿದೆ. ಕಾರ್ಖಾನೆಗಳ ಆಡಳಿತ ಮಂಡಳಿ ಅಧಿಕಾರಿಗಳೇಕಬ್ಬಿನ ಪ್ಲಾಟ್‌ಗಳಿಗೆ ಭೇಟಿ ನೀಡಿಖರೀದಿಸುತ್ತಿದ್ದಾರೆ. ಇದರಿಂದ ರೈತರಿಗೆ ಅನುಕೂಲವಾಗಿದೆ. ಅಲ್ಲದೆ, ಆಲೆಮನೆಗಳ ಮಾಲೀಕರುಕಟಾವು ಹಾಗೂ ಸಾಗಣೆ ವೆಚ್ಚವನ್ನು ಭರಿಸಿ ಟನ್‌

ಆಲೆಮನೆಗಳಿಂದ ಹೆಚ್ಚುಬೇಡಿಕೆ : ನಿಂತಿದ್ದ ಆಲೆಮನೆಗಳು ಮತ್ತೆ ಬೆಲ್ಲ ತಯಾರಿಸಲು ಮುಂದಾಗಿರುವುದರಿಂದಕಬ್ಬಿಗೆ ಹೆಚ್ಚು ಬೇಡಿಕೆ ಬಂದಿದೆ. ಆಲೆಮನೆಗಳ ಮಾಲೀಕರು ಖುದ್ದಾಗಿ ಕಟಾವು ಹಾಗೂ ಸಾಗಣೆ ವೆಚ್ಚವನ್ನು ತಾವೇ ಭರಿಸಿ ಕಬ್ಬು ಖರೀದಿಸುತ್ತಿದ್ದಾರೆ. ಇದರಿಂದ ರೈತರಿಗೆ ಹೊರೆ ತಪ್ಪಿದೆ. ಆಲೆಮನೆಯವರು ಟನ್‌ಕಬ್ಬಿಗೆ1950 ರೂ. ನೀಡುತ್ತಿದ್ದಾರೆ. ಇದು ರೈತರಿಗೆ ತುಸು ನೆಮ್ಮದಿ ತಂದಿದೆ.ಕಾರ್ಖಾನೆಗಳಿಗೆ ಸಾಗಿಸಬೇಕಾದರೆ ಕಟಾವು ಹಾಗೂ ಸಾಗಣೆ ವೆಚ್ಚ ಭರಿಸಬೇಕಾಗಿರುವುದರಿಂದ ಆಲೆಮನೆಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.

ಮೈಷುಗರ್‌ಆರಂಭದ ಬಗ್ಗೆ ಸ್ಪಷ್ಟತೆ ಇಲ್ಲ :  ಮೈಷುಗರ್‌ ಕಾರ್ಖಾನೆಯನ್ನು ಆರಂಭಿಸುವಬಗ್ಗೆ ಗೊಂದಲಮುಂದುವರಿದಿದೆ. ಜಿಲ್ಲೆಯ ಹೋರಾಟಗಾರರಲ್ಲಿ ಒಮ್ಮತ ಇಲ್ಲದ  ಕಾರಣಸರ್ಕಾರವೂ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಒಂದು ಗುಂಪು ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಸಬೇಕು ಎಂದು ಒತ್ತಾಯಿಸಿದರೆ, ಮತ್ತೂಂದು ಗುಂಪು ಸರ್ಕಾರಿ ಸ್ವಾಮ್ಯದಲ್ಲಿಯೇ ಒ ಅಂಡ್‌ ಎಂ ಆಧಾರದಲ್ಲಿ ನಡೆಸಬೇಕು ಎಂದು ಪಟ್ಟು ಹಿಡಿದಿವೆ. ಆದರೆ, ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಇನ್ನೂಸ್ಪಷ್ಟವಾಗಿಲ್ಲ. ಆದರೆ, ಮೈಷುಗರ್‌ ವ್ಯಾಪ್ತಿಯ ಕಬ್ಬುಬೆಳೆಗಾರರು ಮಾತ್ರಬೇಗಕಾರ್ಖಾನೆ ಆರಂಭವಾಗಲಿಎಂಬ ಪ್ರಾರ್ಥಿಸುತ್ತಿದ್ದಾರೆ.

ಎಫ್ಆರ್‌ಪಿ ದರದಲ್ಲಿ ತಾರತಮ್ಯ : ಕಾರ್ಖಾನೆಗಳು ಸಮನಾದ ಎಫ್ಆರ್‌ಪಿ ದರ ನೀಡುತ್ತಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಒಂದೊಂದು ಕಾರ್ಖಾನೆ ಒಂದೊಂದು ರೀತಿಯ ದರ ನೀಡುತ್ತಿವೆ. ಶೇ.10ರಷ್ಟು ಇಳುವರಿ ಬರುವಕಬ್ಬಿಗೆಕೇಂದ್ರ ಸರ್ಕಾರದನಿಗದಿಯಂತೆ2850 ರೂ. ನೀಡುತ್ತಿವೆ. ಅದಕ್ಕಿಂತಕಡಿಮೆ ಇಳುವರಿ ಬರುವಕಬ್ಬಿಗೆ2675ರಿಂದ2750 ರೂ.ವರೆಗೆ ನೀಡಲಾಗುತ್ತಿದೆ. ಆದರೆ, ಇದರಲ್ಲಿ ರೈತರಕಬ್ಬು ಎಷ್ಟು ಇಳುವರಿ ಬರಲಿದೆ ಎಂಬುದು ಮಾಹಿತಿ ನೀಡುವುದಿಲ್ಲ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ ಎನ್ನುತ್ತಾರೆ ರೈತ ಸಂಪಳ್ಳಿ ಶಿವಶಂಕರ್‌.

ಕಟಾವು ಹಾಗೂ ಸಾಗಣೆ ವೆಚ್ಚವನ್ನು ರೈತರೇಭರಿಸಬೇಕಾಗಿರುವುದರಿಂದ ಖರ್ಚು ಹೆಚ್ಚಾಗುತ್ತಿದೆ. ಆದ್ದರಿಂದ ಸರ್ಕಾರ ಸಾಗಣೆ ವೆಚ್ಚ ಭರಿಸಬೇಕು. ಅಲ್ಲದೆ, ಎಲ್ಲ ಕಾರ್ಖಾನೆಗಳುಕೇಂದ್ರ ಸರ್ಕಾರದ ಎಫ್ಆರ್‌ಪಿಯಂತೆ ದರ ನೀಡಬೇಕು.-ವೇಣುಗೋಪಾಲ್‌ ಸಾತನೂರು,ಅಧ್ಯಕ್ಷ, ಮೈಷುಗರ್‌ ಕಬ್ಬು ಬೆಳೆಗಾರರ ಒಕ್ಕೂಟ

ಕಬ್ಬಿಗೆ 1950 ರೂ. ನೀಡುತ್ತಿದೆ. ಇದರಿಂದ ರೈತರು ಈ ಬಾರಿ ಬಚಾವಾಗಿದ್ದಾರೆ.ಕೂಡಲೇ ಮೈಷುಗರ್‌ಕಾರ್ಖಾನೆಯನ್ನು ಆರಂಭಿಸಿದರೆ ಇನ್ನೂ ಅನುಕೂಲವಾಗಲಿದೆ. – ಸಂಪಳ್ಳಿ ಶಿವಶಂಕರ್‌, ಕಬ್ಬು ಬೆಳೆಗಾರ

 

ಎಚ್‌.ಶಿವರಾಜು

ಟಾಪ್ ನ್ಯೂಸ್

Odisha: ಸಗಣಿ ರಾಶಿಯಲ್ಲಿ ಸಿಕ್ಕಿತು 20 ಲಕ್ಷ ರೂ. ಮೊತ್ತ!

Odisha: ಸಗಣಿ ರಾಶಿಯಲ್ಲಿ ಸಿಕ್ಕಿತು 20 ಲಕ್ಷ ರೂ. ಮೊತ್ತ!

Lashkar-e-Taiba; ಹೆಸರಲ್ಲಿ ಹಾಡು ಹಾಡಿ ಆರ್‌ಬಿಐ ಕಚೇರಿಗೆ ಬೆದರಿಕೆ!

Lashkar-e-Taiba; ಹೆಸರಲ್ಲಿ ಹಾಡು ಹಾಡಿ ಆರ್‌ಬಿಐ ಕಚೇರಿಗೆ ಬೆದರಿಕೆ!

CM-ibrahim

HDK ವಿರುದ್ಧ ಜಮೀರ್‌ ಹೇಳಿಕೆ ತಪ್ಪು: ಸಿ.ಎಂ. ಇಬ್ರಾಹಿಂ

Sidda Speach

B.Z. Zameer Ahmed Khan ‘ಕರಿಯ’ ಎನ್ನಬಾರದಿತ್ತು: ಸಿಎಂ ಸಿದ್ದರಾಮಯ್ಯ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

rai

BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya-Temple

Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

Ashok-Mandya

Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್‌. ಅಶೋಕ್‌ ಆಗ್ರಹ

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

renukaacharya

Waq ಹೋರಾಟಕ್ಕೆ ವಿಜಯೇಂದ್ರ ತಂಡಗಳೇ ಅಧಿಕೃತ: ರೇಣುಕಾಚಾರ್ಯ

Odisha: ಸಗಣಿ ರಾಶಿಯಲ್ಲಿ ಸಿಕ್ಕಿತು 20 ಲಕ್ಷ ರೂ. ಮೊತ್ತ!

Odisha: ಸಗಣಿ ರಾಶಿಯಲ್ಲಿ ಸಿಕ್ಕಿತು 20 ಲಕ್ಷ ರೂ. ಮೊತ್ತ!

accident

Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು

Lashkar-e-Taiba; ಹೆಸರಲ್ಲಿ ಹಾಡು ಹಾಡಿ ಆರ್‌ಬಿಐ ಕಚೇರಿಗೆ ಬೆದರಿಕೆ!

Lashkar-e-Taiba; ಹೆಸರಲ್ಲಿ ಹಾಡು ಹಾಡಿ ಆರ್‌ಬಿಐ ಕಚೇರಿಗೆ ಬೆದರಿಕೆ!

CM-ibrahim

HDK ವಿರುದ್ಧ ಜಮೀರ್‌ ಹೇಳಿಕೆ ತಪ್ಪು: ಸಿ.ಎಂ. ಇಬ್ರಾಹಿಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.