20 ಕೈದಿಗಳಿಗೆ ಮಧ್ಯಂತರ ಜಾಮೀನು
Team Udayavani, May 28, 2021, 7:00 PM IST
ಮಂಡ್ಯ: ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಏಳು ವರ್ಷ ದೊಳಗಿನಕಾರಾಗೃಹ ಶಿಕ್ಷೆಯಾಗುವ ನ್ಯಾಯಾಂಗ ಬಂಧಿತರನ್ನು ಜಾಮೀನಿನ ಮೇಲೆ ಬಿಡುಗಡೆಮಾಡುವಂತೆ ಸುಪ್ರೀಂ ಕೋರ್ಟ್ ಹಾಗೂಹೈಕೋರ್ಟ್‌ನ ನಿರ್ದೇಶನ ಮೇರೆಗೆ ಜಿಲ್ಲಾಕಾರಾಗೃಹದಿಂದ 20 ಮಂದಿ ಕೈದಿಗಳನ್ನುಬಿಡುಗಡೆ ಮಾಡಲಾಗಿದೆ.
20 ಮಧ್ಯಂತರ ಜಾಮೀನು: ಪ್ರಸ್ತುತ ಮಂಡ್ಯಜಿಲ್ಲಾ ಕಾರಾಗೃಹದಲ್ಲಿದ್ದ 20 ಮಂದಿನ್ಯಾಯಾಂಗ ಬಂಧಿತ ಜೈಲು ಹಕ್ಕಿಗಳಿಗೆ 45ದಿನಗಳ ಮಧ್ಯಂತರ ಜಾಮೀನು ದೊರಕಿದೆ.
ಇನ್ನೂ ಕೆಲವರು ನ್ಯಾಯಾಂಗ ನಿಯಮಾವಳಿಪೂರೈಸಿ ಬಿಡುಗಡೆಯಾಗುವಹೊಸ್ತಿಲಲ್ಲಿದ್ದಾರೆ.7 ವರ್ಷದೊಳಗಿನ ನ್ಯಾಯಾಂಗ ಬಂಧನಆರೋಪಿಗಳು: ಕೊರೊನಾ ಸೋಂಕುನಿಮಿತ್ತ ಕೊಲೆ, ದರೋಡೆ, ಸಣ್ಣಪುಟ್ಟಪ್ರಕರಣಗಳು ಸೇರಿದಂತೆ 7 ವರ್ಷ ಮೇಲ್ಮಟ್ಟಶಿಕ್ಷೆಯಾಗುವ ಬಂಧಿತರನ್ನು ಹೊರತುಪಡಿಸಿ7 ವರ್ಷದೊಳಗಿನ ಕಾರಾಗೃಹ ಶಿಕ್ಷೆಯಾಗುವ ನ್ಯಾಯಾಂಗ ಬಂಧಿತರಿಗೆ ಮಧ್ಯಂತರ ಜಾಮೀನು ನೀಡಲು ಸುಪ್ರಿಂಕೋರ್ಟ್‌ಹಾಗೂ ಹೈಕೋರ್ಟ್ ನಿರ್ದೇಶನ ನೀಡಿದೆ.
ಆಮೇರೆಗೆ ಬಂಧಿತರು ಜಿಲ್ಲಾ ಕಾನೂನುಸೇವೆಗಳ ಪ್ರಾ ಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು.ಪ್ರಾ ಧಿಕಾರದ ಸಮಿತಿ ಅರ್ಜಿ ಪರಿಶೀಲಿಸಿಜಾಮೀನು ಮಂಜೂರು ಮಾಡುತ್ತದೆ.
263 ಜೈಲು ಹಕ್ಕಿಗಳು: ಸದ್ಯ ಮಂಡ್ಯಕಾರಾಗೃಹದಲ್ಲಿ 5 ಮಂದಿ ಅಪರಾ ಧಿಗಳು,248 ಮಂದಿ ಪುರುಷರು 15 ಮಹಿಳೆಯರುಸೇರಿದಂತೆ 263 ಬಂಧಿತರಿದ್ದಾರೆ. ಇದರಲ್ಲಿಈಗಾಗಲೇ 20 ಮಂದಿ ಮಧ್ಯಂತರಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.
ಸೋಂಕು ಮುಕ್ತ ಜೈಲು: ಕೊರೊನಾ ಮೊದಲಅಲೆಯಲ್ಲಿ ಕಾರಾಗೃಹದಲ್ಲಿದ್ದ 20 ಮಂದಿಗೆಸೋಂಕು ಹರಡಿತ್ತು. ಎರಡನೇ ಅಲೆಯಲ್ಲಿಇಬ್ಬರಿಗೆ ಆವರಿಸಿತ್ತು. ಜೈಲು ಅ ಧಿಕಾರಿಗಳುಕೈಗೊಂಡ ಮುಂಜಾಗ್ರತೆ ಕ್ರಮದಿಂದಸೋಂಕು ಮುಕ್ತ ಜೈಲಾಗಿ ಮಾರ್ಪಟ್ಟಿದೆ.ಮುಂಜಾಗ್ರತೆ ಕ್ರಮ: ಇನ್ನೂ ಮಂಡ್ಯಕಾರಾಗೃಹದಲ್ಲಿನ ಬಂಧಿತರಿಗೆ ಸೋಂಕುಹರಡದಂತೆ ಅಗತ್ಯ ಮುಂಜಾಗ್ರತೆ ಕ್ರಮಕೈಗೊಳ್ಳಲಾಗಿದೆ. ಬಂಧಿತರ ಸಂದರ್ಶನಕ್ಕೆನಿರ್ಬಂಧ ಹೇರಲಾಗಿದೆ.
ಕಾರಾಗೃಹ ಆವರಣವನ್ನು ನಿತ್ಯ ರಸಾಯನಿಕ ದ್ರಾವಣ ಸಿಂಪಡಿಸಿ ಶುಚಿಗೊಳಿಸಲಾಗುತ್ತಿದೆ. ಕುಡಿಯಲುಬಿಸಿ ನೀರು, ಬಿಸಿಯೂಟ ನೀಡಲಾಗುತ್ತಿದೆ.ಜ್ವರ ಬಂದರೆ ಕಾರಾಗೃಹದ ಐಸೋಲೇಷನ್‌ಸೆಲ್‌ನಲ್ಲಿ ಚಿಕಿತ್ಸೆ ನೀಡಲಾಗುವುದು.ವಾರಕ್ಕೊಮ್ಮೆ ಮಿಮ್ಸ್ ವೈದ್ಯರು ನಿಯಮಿತವಾಗಿ ಭೇಟಿ ನೀಡಿ ಪರೀಕ್ಷೆ ನಡೆಸಲಿದ್ದು,ಮಾನಸಿಕ ತಜ್ಞರಿಂದಲ್ಲೂ ಆಪ್ತ ಸಮಾಲೋಚನೆನಡೆಯುತ್ತಿದೆ. ಯಾರಿಗಾದರೂ ಸೋಂಕುದೃಢಪಟ್ಟರೆ ಕೂಡಲೇ ಚಿಕಿತ್ಸೆ ನೀಡಲು ಎಲ್ಲರೀತಿಯ ಕ್ರಮ ವಹಿಸಲಾಗುತ್ತಿದೆ.
ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mandya; ಭೀಕರ ಅಪಘಾ*ತದಲ್ಲಿ ಮೂವರು ವಿದ್ಯಾರ್ಥಿಗಳು ಮೃ*ತ್ಯು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.