ಮನ್‌ಮುಲ್ನಲ್ಲಿ ಜೆಡಿಎಸ್ ಪಾರುಪತ್ಯ
8 ಸ್ಥಾನಗಳಲ್ಲಿ ಜಯಭೇರಿ, 3 ಸ್ಥಾನಕ್ಕೆ ಕುಸಿದ ಕಾಂಗ್ರೆಸ್ • ಮೊದಲ ಬಾರಿಗೆ ಒಂದು ಸ್ಥಾನ ಗೆದ್ದ ಬಿಜೆಪಿ
Team Udayavani, Sep 9, 2019, 12:28 PM IST
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೆಡಿಎಸ್ ಅಭ್ಯರ್ಥಿಗಳು ಬೆಂಬಲಿಗರೊಂದಿಗೆ ವಿಜಯದ ನಗೆ ಬೀರಿದರು.
ಮಂಡ್ಯ: ಲೋಕಸಭಾ ಚುನಾವಣಾ ಸೋಲು ಮತ್ತು ಜೆಡಿಎಸ್ ನಾಯಕತ್ವದ ಮೈತ್ರಿ ಸರ್ಕಾರದ ಪತನದಿಂದ ಕಂಗೆಟ್ಟುಹೋಗಿದ್ದ ಜೆಡಿಎಸ್‌ಗೆ ಇದೀಗ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಗೆಲುವು ರಾಜಕೀಯ ಜೀವದಾನ ನೀಡಿದಂತಾಗಿದೆ.
ಸ್ಥಳೀಯವಾಗಿ ಬಹುತೇಕ ಸ್ಥಳೀಯ ಸಂಸ್ಥೆಗಳು ಜೆಡಿಎಸ್ ಪಾಲಾಗಿದ್ದು ಇದೀಗ ಮನ್‌ಮುಲ್ನಲ್ಲಿ ಅಧಿಕಾರ ಹಿಡಿಯುವ ಸ್ಪಷ್ಟ ಸಾಧ್ಯತೆಗಳಿರುವುದರಿಂದ ಜೆಡಿಎಸ್ ತನ್ನ ಬೇರುಗಳನ್ನು ಗಟ್ಟಿಯಾಗಿ ಉಳಿಸಿಕೊಂಡಿದೆ.
ಮನ್‌ಮುಲ್ನ 12 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ ಕಾಂಗ್ರೆಸ್ 3 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಬಿಜೆಪಿ 1 ಸ್ಥಾನದಲ್ಲಿ ಗೆಲುವು ಸಾಧಿಸುವುದರೊಂದಿಗೆ ಮನ್‌ಮುಲ್ಗೆ ಪ್ರವೇಶ ಪಡೆದಿದೆ.
ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಮಳವಳ್ಳಿಯ ವಿ.ಎಂ.ವಿಶ್ವನಾಥ್, ಪಾಂಡವಪುರದ ರಾಮಚಂದ್ರು, ನಾಗಮಂಗಲದಿಂದ ನೆಲ್ಲೀಗೆರೆ ಬಾಲು, ರವಿ ಗೆಲುವು ಸಾಧಿಸಿದ್ದಾರೆ. ಮದ್ದೂರಿನಿಂದ ಎಸ್.ಪಿ. ಸ್ವಾಮಿ, ಕೆ.ಆರ್.ಪೇಟೆಯಿಂದ ಹೆಚ್.ಟಿ.ಮಂಜು, ಮಂಡ್ಯದಿಂದ ರಾಮಚಂದ್ರ ಹಾಗೂ ರಘುನಂದನ್ ಆಯ್ಕೆಯಾಗಿದ್ದಾರೆ.
ಶ್ರೀರಂಗಪಟ್ಟಣದಿಂದ ಬೋರೇಗೌಡ, ಕೆ.ಆರ್.ಪೇಟೆಯಿಂದ ಕೆ.ರವಿ, ಮಂಡ್ಯದಿಂದ ಯು.ಸಿ.ಶಿವಕುಮಾರ್ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಗೆಲುವು ಸಾಧಿಸಿದ್ದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಮದ್ದೂರು ತಾಲೂಕಿನಿಂದ ಎಂ.ರೂಪಾ ಆಯ್ಕೆಯಾಗಿದ್ದಾರೆ.
ಹಿಂದಿನ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರಾಗಿದ್ದ ಕದಲೂರು ರಾಮಕೃಷ್ಣ ಈ ಬಾರಿ ಪರಾಭವಗೊಂಡಿದ್ದಾರೆ. ನಿರ್ದೇಶಕರಾಗಿದ್ದ ಶೀಳನೆರೆ ಅಂಬರೀಶ್, ಮಂಡ್ಯದ ಬಿಳಿದೇಗಲು ಚಂದ್ರ ಸೋಲನ್ನಪ್ಪಿದ್ದರೆ, ಕೆ.ಆರ್.ಪೇಟೆಯ ಕೆ.ರವಿ, ಶ್ರೀರಂಗಪಟ್ಟಣದ ಬೋರೇಗೌಡ, ಮಳವಳ್ಳಿ ವಿ.ಎಂ.ವಿಶ್ವನಾಥ್, ಮಂಡ್ಯದಿಂದ ಯು.ಸಿ.ಶಿವಕುಮಾರ್‌ಅವರು ಮತ್ತೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಸ್.ಎನ್.ಲಕ್ಷ್ಮೀನಾರಾಯಣ ಕೇವಲ 2 ಮತಗಳ ಅಂತರದಿಂದ ಸೋಲನುಭವಿಸಿದ್ದರೆ, ಮದ್ದೂರಿನಿಂದ ಸ್ಪರ್ಧಿಸಿದ್ದ ಕದಲೂರು ರಾಮಕೃಷ್ಣ 5 ಮತ ಹಾಗೂ ಮಂಡ್ಯ ತಾಲೂಕಿನಿಂದ ಸ್ಪರ್ಧಿಸಿದ್ದ ಕಾಳೇಗೌಡ 6 ಮತಗಳ ಅಂತರದಿಂದ ಪರಾಭವಗೊಂಡಿರುವುದು ವಿಶೇಷ. ಕಳೆದ ಬಾರಿ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದ ಮನ್‌ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್ ಸಹ ಪರಾಭವಗೊಂಡಿದ್ದಾರೆ.
ಹಿಂದಿನ ಆಡಳಿತ ಮಂಡಳಿ ಚುನಾವಣೆಯಲ್ಲಿ 7 ಸ್ಥಾನಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ಕಾಂಗ್ರೆಸ್ ಪಾರುಪತ್ಯ ಸಾಧಿಸಿತ್ತು. ಜೆಡಿಎಸ್ ಕೇವಲ 5 ಸ್ಥಾನಗಳಲ್ಲಷ್ಟೇ ಗೆದ್ದಿತ್ತು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಎನ್.ಚಲುವರಾಯಸ್ವಾಮಿ ಹಾಗೂ ರಮೇಶ್ ಬಂಡಿಸಿದ್ದೇಗೌಡ ಕಾಂಗ್ರೆಸ್ ಸೇರಿದ್ದರಿಂದ ಮೂವರು ನಿರ್ದೇಶಕರು ಜೆಡಿಎಸ್ ತೊರೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.