ಕನಕದಾಸರ ಚಿಂತನೆ ಅಳವಡಿಸಿಕೊಳ್ಳಿ
Team Udayavani, Nov 16, 2019, 3:41 PM IST
ಕೆ.ಆರ್.ಪೇಟೆ: ಸಮ ಸಮಾಜ ನಿರ್ಮಾಣಕ್ಕೆ ಕೀರ್ತನೆಗಳಿಂದ ಹೋರಾಡಿದ ಕನಕದಾಸರ ಸಂದೇಶ ಗಳು ಎಲ್ಲರೂ ಜೀವನದಲ್ಲಿ ಅಳವಡಿಸಿ ಕೊಂಡರೆ ಉತ್ತಮ ಸಮಾಜ ನಿರ್ಮಾಣ ಮಾಡಬ ಹುದು ಎಂದು ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ರಾಮಮಂದಿರದಲ್ಲಿ ಕನಕದಾಸ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿದ್ದ ಜಾತಿ, ಮೇಲು, ಕೀಳು, ಬಡವ, ಬಲ್ಲಿದ ಎಂಬ ಬೇಧಭಾವ ದೂರ ಮಾಡಿ ಸಮ ಸಮಾಜ ನಿರ್ಮಿಸಲು ತಮ್ಮ ಕೀರ್ತನೆಗಳ ಮೂಲಕ ಹೋರಾಡಿದ ಕನಕ ದಾಸರ ಚಿಂತನೆಗಳನ್ನು ತಮ್ಮ ಬದುಕಿನಲ್ಲಿ ಎಲ್ಲರೂ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಿಸಬಹುದಾಗಿದೆ ಎಂದು ಹೇಳಿದರು.
ಸಮಾಜದ ಅಂಕುಡೊಂಕುಗಳನ್ನು ತಮ್ಮ ಕೀರ್ತನೆಗಳ ಮೂಲಕ ತಿದ್ದಲು ಅವಿರತವಾಗಿ ಶ್ರಮಿಸಿದ ಕನಕದಾಸರು ಕುಲ ಕುಲವೆಂದು ಬಡಿದಾಡಬೇಡಿ ಎಂದು ಅಂದೇ ಸಾರಿ ಹೇಳಿದ್ದರು. ಬುದ್ಧ, ಬಸವ, ಕನಕದಾಸ, ಅಂಬೇಡ್ಕರ್ ಹಾಗೂ ಕುವೆಂಪು ಆಶಯ ಮತ್ತು ಗುರಿ ಒಂದೇ ಆಗಿತ್ತು. ಅದು ಜಾತಿ ರಹಿತ ಸಮಾನತೆಯ ಸಮಾಜ ನಿರ್ಮಿಸುವುದು. ಹಾಗಾಗಿ ಪ್ರತಿಯೊಬ್ಬರೂ ಕನಕದಾಸರ ಆದರ್ಶ ಪಾಲಿಸಬೇಕು. ಆ ಮೂಲಕ ಸಮಾನತೆಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ತಾಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಪಿ.ಜೆ.ಕುಮಾರ್ ಕನಕದಾಸರ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದಕೆ.ಸಿ.ಮಂಜುನಾಥ್, ಪ್ರಮೋದ್ ಕುಮಾರ್, ಸುಗುಣರಮೇಶ್, ರವೀಂದ್ರ ಬಾಬು, ಕಸಬಾ ಸೊಸೈಟಿ ಅಧ್ಯಕ್ಷ ಪುರುಗೋತ್ತಮ್, ಶ್ರೀ ಕನಕದಾಸ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಗ್ರಹಾರ ಕುಮಾರ್,ಉಪಾಧ್ಯಕ್ಷ ರಾಜೇಗೌಡ ಖಜಾಂಚಿ ಸಂದೀಪ್, ಕಾರ್ಯದರ್ಶಿ ವಿಶ್ವನಾಥ್, ನಿರ್ದೇಶಕರಾದ ಕೃಷ್ಣೇಗೌಡ, ಮಂಜುನಾಥ್, ಬಸವರಾಜು, ಶಿವು, ಯೋಗಣ್ಣ, ನಾಗಣ್ಣ, ಚಂದ್ರಪ್ಪ, ಶಿವಣ್ಣ, ಮುತ್ತುರಾಜ್ ಮತ್ತಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.