ಕನ್ನಡ ಚಿತ್ರರಂಗದ ನಟ ಸಾರ್ವಭೌಮನ ಸ್ಮರಣೆ
ಅನ್ಯಭಾಷೆಗಳ ಅವಕಾಶವಿದ್ದರೂ ಕನ್ನಡದಲ್ಲೇ ಉಳಿದ ರಾಜ್ • ಜಿಲ್ಲಾಡಳಿತದಿಂದ ಡಾ.ರಾಜಕುಮಾರ್ ಜಯಂತಿ
Team Udayavani, Apr 25, 2019, 1:32 PM IST
ಮಂಡ್ಯ: ವರನಟ ಡಾ.ರಾಜಕುಮಾರ್ ಗೋಕಾಕ್ ಚಳವಳಿಯ ಮೂಲಕ ಕನ್ನಡದ ಉಳಿವಿಗೆ ಬಹುದೊಡ್ಡ ಕೊಡುಗೆ ನೀಡಿದ್ದರು. ಅವರ ಕನ್ನಡದ ಬದ್ಧತೆಯ ಪರಂಪರೆ ಇಂದಿನ ಕನ್ನಡ ಚಿತ್ರರಂಗದ ನಟ-ನಟಿಯರು ಮುಂದುವರಿಸಬೇಕು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡಾ.ರಾಜಕುಮಾರ್ ಅವರ 91ನೇ ಜನ್ಮ ದಿನೋತ್ಸವದಲ್ಲಿ ಮಾತನಾಡಿದ ಅವರು, ಕನ್ನಡಕ್ಕೆ ಧಕ್ಕೆಯಾದ ಸಂದರ್ಭದಲ್ಲಿ ಡಾ.ರಾಜಕುಮಾರ್ ದಿಟ್ಟತನದಿಂದ ಮುನ್ನುಗ್ಗುವ ಪ್ರವೃತ್ತಿಯನ್ನು ಹೊಂದಿದ್ದರು. ಅದೇ ಕಾರಣಕ್ಕೆ ಅವರು ತೆರೆಯ ಮೇಲೆ ನಾಯಕನಾಗಿ ಉಳಿಯದೆ ಜನಸಾಮಾನ್ಯರ ಬದುಕಿನಲ್ಲೂ ಹೀರೋ ಆಗಿ ವಿಜೃಂಭಿಸಿದರು ಎಂದು ಬಣ್ಣಿಸಿದರು.
ಸಜ್ಜನ ಸರಳ ವ್ಯಕ್ತಿತ್ವ: ಕನ್ನಡ ಚಿತ್ರರಂಗಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡ ಡಾ.ರಾಜಕುಮಾರ್ ದಕ್ಷಿಣ ಭಾರತದಲ್ಲಿ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸುವಲ್ಲಿ ಅವರ ಪಾತ್ರ ಮಹತ್ವವಾದುದು. ರಾಜಕುಮಾರ್ ಕನ್ನಡ ಚಿತ್ರರಂಗದ ಧ್ರುವತಾರೆಯಾಗಿ ಮೆರೆದರು. ಅನ್ಯಭಾಷೆಗಳಿಂದ ಅವಕಾಶಗಳು ಬಂದರೂ, ಅವೆಲ್ಲವನ್ನೂ ವಿನಯದಿಂದಲೇ ತಿರಸ್ಕರಿಸಿ ಕನ್ನಡದಲ್ಲೇ ಉಳಿದುಕೊಂಡರು. ಕಲೆಯ ಮೂಲಕ ಮೇರು ಸಾಧನೆ ಮಾಡಿದ್ದರೂ ಸರಳತೆ, ಸಜ್ಜನಿಕೆ ಹಾಗೂ ಸಹಜವಾದ ಬದುಕಿನ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಅವರ ಬದುಕು ಆದರ್ಶನೀಯ ಎಂದು ಹೇಳಿದರು.
ಭಾರತ ರತ್ನ ನೀಡಿ: ಡಾ.ರಾಜಕುಮಾರ್ ಜೀವನದುದ್ದಕ್ಕೂ ಸಾರ್ಥಕತೆ ಮೆರೆದಿದ್ದರು. ಸಾವಿನ ಸಂದರ್ಭದಲ್ಲೂ ಕೂಡ ನೇತ್ರದಾನ ಮಾಡುವ ಮೂಲಕ ಸಮಾಜಕ್ಕೆ ಬೆಳಕಾಗುವ ಸಂದೇಶವನ್ನು ಕೊಟ್ಟ ಅವರ ಸಮಗ್ರ ಬದುಕು, ಸಾಧನೆ ಮತ್ತು ಪ್ರತಿಭೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರದಿಂದ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿದರು.
ಸದಭಿರುಚಿಯ ಚಿತ್ರಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ಮುಂದಾದ ಡಾ.ರಾಜಕುಮಾರ್ ಅವರು ಐತಿಹಾಸಿಕ ಪಾತ್ರಗಳಿಗೆ ಜೀವ ತುಂಬುವ ಕಾರ್ಯವನ್ನು ಅತ್ಯಂತ ನಿಷ್ಠೆಯಿಂದ ಮಾಡಿದರು. ನಮ್ಮೆದುರು ಕನಕದಾಸ, ಪುರಂದರದಾಸರು, ಶ್ರೀ ಕೃಷ್ಣದೇವರಾಯರಂತಹ ಮಹನೀಯರನ್ನು ನೇರವಾಗಿ ನೋಡಿಲ್ಲದಿದ್ದರೂ ರಾಜಕುಮಾರ್ ಅಭಿನಯದ ಮೂಲಕ ಅವರೆಲ್ಲರನ್ನೂ ಜನರಿಗೆ ಸಾಕ್ಷಾತ್ ದರ್ಶನ ಮಾಡಿಸಿದರು.
ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ಉದ್ಘಾಟಿಸಿ, ಡಾ.ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಪ ವಿಭಾಗಾಧಿಕಾರಿ ರಾಜೇಶ್, ವಾರ್ತಾ ಮತ್ತು ಪ್ರಚಾರ ಇಲಾಖೆ ಸಹಾಯಕ ನಿರ್ದೇಶಕ ಹರೀಶ್, ಮುಖಂಡರಾದ ಮಹಮದ್ ಜಬೀವುಲ್ಲಾ, ಸಿದ್ದಶೆಟ್ಟಿ, ಎಸ್.ರಾಜೇಂದ್ರ ಇತರರಿದ್ದರು. ಕಲಾವಿದರಾದ ಸ್ವಾಮಿ, ಬಸವರಾಜು, ಶೇಖರ್ ಅವರಿಂದ ಡಾ.ರಾಜಕುಮಾರ್ ಗೀತ ಗಾಯನ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ
Maddur; ಕೆಲಸದ ಒತ್ತಡ: ಎಂಜಿನಿಯರ್ ಆತ್ಮಹ*ತ್ಯೆ
Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
MUST WATCH
ಹೊಸ ಸೇರ್ಪಡೆ
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.