ಮುಖ್ಯಮಂತ್ರಿಗೆ ಸದ್ಯಕ್ಕಿಲ್ಲ ಬಾಗಿನ ಭಾಗ್ಯ?

ನದಿಗೆ ನೀರು ಬಿಡದಿದ್ದರೆ ಜಲಾಶಯ ಇಷ್ಟೊತ್ತಿಗೆ ಭರ್ತಿ; ಆಗಸ್ಟ್‌ ಬಳಿಕ ಅಣೆಕಟ್ಟೆ ತುಂಬಿದ್ದು ವಿರಳ

Team Udayavani, Sep 8, 2021, 4:42 PM IST

ಮುಖ್ಯಮಂತ್ರಿಗೆ ಸದ್ಯಕ್ಕಿಲ್ಲ ಬಾಗಿನ ಭಾಗ್ಯ?

ಮಂಡ್ಯ: ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಅಣೆಕಟ್ಟೆ ಭರ್ತಿಯಾದಾಗ ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವ ಮುಖ್ಯಮಂತ್ರಿ ಸಂಪುಟದ ಸಹೋದ್ಯೋಗಿಗಳೊಂದಿಗೆ ಆಗಮಿಸಿ ಬಾಗಿನ ಅರ್ಪಿಸುವುದು ವಾಡಿಕೆ. ಆದರೆ ಈ ಬಾರಿ ಕೆಆರ್‌ಎಸ್‌ ತುಂಬುವ ಅವಕಾಶವಿದ್ದರೂ ನಿರಂತರ ತಮಿಳುನಾಡಿಗೆ ನೀರು ಹರಿಸಿದ್ದರಿಂದ ಬಾಗಿನ ಅರ್ಪಿಸುವ ಅವಕಾಶ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸದ್ಯಕ್ಕೆ ತಪ್ಪಿದಂತಾಗಿದೆ.

ಆಗಸ್ಟ್‌ ತಿಂಗಳಲ್ಲಿ ಉತ್ತಮ ಮಳೆಯಾಗಿ ಕೆಆರ್‌ ಎಸ್‌ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದಿತ್ತು. ಅಲ್ಲದೆ,124.80 ಅಡಿ ಗರಿಷ್ಠ ಮಟ್ಟದ
ಜಲಾಶಯ ಆಗಸ್ಟ್‌11ರಂದು121 ಅಡಿಗೆ ತಲುಪಿತ್ತು. ಆದರೆ ಜಲಾಶಯದಿಂದ ನದಿಗೆ ನೀರು ಹರಿಸಿದ ಪರಿಣಾಮ5 ಅಡಿ ನೀರುಕುಸಿದು,115.98 ಅಡಿಗೆ ಬಂದು ತಲುಪಿದೆ.

ಸೆಪ್ಟೆಂಬರ್‌ನಲ್ಲಿ ಜಲಾಶಯ ತುಂಬಿದ್ದು ಕಡಿಮೆ: ಜೂನ್‌, ಜುಲೈ, ಆಗಸ್ಟ್‌ನಲ್ಲಿ ಸುರಿಯುವ ಮಳೆಗೆ ಜಲಾಶಯ ತುಂಬಿರುವುದೇ ಹೆಚ್ಚು. ಆದರೆ
ಸೆಪ್ಟಂಬರ್‌ನಲ್ಲಿ ಮಳೆ ಕಡಿಮೆಯಾಗುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ನಲ್ಲಿ ಜಲಾಶಯ ತುಂಬಿದ್ದುಕಡಿಮೆ.ಕಳೆದ 12 ವರ್ಷಗಳ ಜಲಾಶಯ ತುಂಬಿದ
ಮಾಹಿತಿಯಂತೆ2012 ಸೆ.15ರಂದು110.63 ಅಡಿ ತುಂಬಿತ್ತು. ನಂತರ 2015ರ ನವೆಂಬರ್‌15ರಂದು111 ಅಡಿ ನೀರು ಸಂಗ್ರಹವಾಗಿದ್ದು, ಬಿಟ್ಟರೆ ಸೆಪ್ಟಂಬರ್‌ನಲ್ಲಿ ಇದುವರೆಗೂ ಜಲಾಶಯ ತುಂಬಿಲ್ಲ.

ತಂದೆಗೂ ತಪ್ಪಿದ್ದ ಅವಕಾಶ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್‌.ಆರ್‌.ಬೊಮ್ಮಾಯಿ ಅವರು ಸಹ ಮುಖ್ಯ
ಮಂತ್ರಿಯಾಗಿದ್ದ ವೇಳೆಕೆಆರ್‌ಎಸ್‌ಗೆ ಬಾಗಿನ ಅರ್ಪಿಸುವ ಅವಕಾಶದಿಂದ ವಂಚಿತರಾಗಿದ್ದರು.1988ರಲ್ಲಿಕೆಆರ್‌ಎಸ್‌ ಜಲಾಶಯ ತುಂಬಿತ್ತು. ಆದರೆ ಅಂದು ಕಾರಣಾಂತರಗಳಿಂದ ಬಾಗಿನ ಅರ್ಪಿಸಲು ಸಾಧ್ಯವಾಗಿಲ್ಲ. ಆದರೆ ಅಂದಿನ ರಾಜ್ಯಪಾಲರಾಗಿದ್ದ ಪಿ.ವೆಂಕಟಸುಬ್ಬಯ್ಯ ಅವರು ಬಾಗಿನ ಅರ್ಪಿಸಿದ್ದರು.

ನಂತರ 1989 ರಲ್ಲಿ ಸರ್ಕಾರದ ಬದಲಾವಣೆಯಿಂದ ವಿರೇಂದ್ರ ಪಾಟೀಲ್‌ ಅವರು ಮುಖ್ಯಮಂತ್ರಿಯಾಗಿದ್ದರು. ಈ ಮಧ್ಯೆ 12 ಬಾರಿ ನಾನಾ
ಕಾರಣಗಳಿಂದ ಹಾಗೂ ಅಣೆಕಟ್ಟೆ ತುಂಬದ ಪರಿಣಾಮ ಡ್ಯಾಂಗೆ ಬಾಗಿನ ಅರ್ಪಿಸುವಕಾರ್ಯ ನಡೆದಿಲ್ಲ.1979ರಿಂದ ಮುಖ್ಯಮಂತ್ರಿಯಾದವರ
ಪೈಕಿ ಎಸ್‌.ಆರ್‌.ಬೊಮ್ಮಾಯಿ ಹಾಗೂ ಜಗದೀಶ್‌ಶೆಟ್ಟರ್‌ಗೆ ಬಾಗಿನ ಅರ್ಪಿಸುವ ಅವಕಾಶಕೈತಪ್ಪಿದೆ. 120 ಅಡಿಗಿಂತ ಹೆಚ್ಚಿದ್ದರೆ ತುಂಬುವ ಸಾಧ್ಯತೆ:ಕೆಆರ್‌ಎಸ್‌ನ ನೀರಾವರಿ ಅಧಿಕಾರಿಗಳ ಮಾಹಿತಿ ಪ್ರಕಾರಕೆಆರ್‌ಎಸ್‌ ತುಂಬುವುದು ಜುಲೈ ಮತ್ತು ಆಗಸ್ಟ್‌ ವೇಳೆಗೆ ಮಾತ್ರ. ಒಂದೆರಡು ಬಾರಿ ಸೆಪ್ಟೆಂಬರ್‌ ಅಂತ್ಯ ಅಥವಾ ಅಕ್ಟೋಬರ್‌ ಆರಂಭದಲ್ಲಿ ಭರ್ತಿಯಾಗಿದೆ. ಆದರೆ ಸೆಪ್ಟೆಂಬರ್‌ ಅಂತ್ಯದಲ್ಲಿ ಭರ್ತಿಯಾಗ ಬೇಕೆಂದರೆ ಅಣೆಕಟ್ಟೆಯಲ್ಲಿ ನೀರಿನ ಮಟ್ಟ120 ಅಡಿಗಿಂತ ಮೇಲಿರಬೇಕು. ಈಗ ನೀರಿನ ಮಟ್ಟ115.98 ಅಡಿಗೆಕುಸಿದಿರುವುದರಿಂದ ಅಣೆಕಟ್ಟೆ ಭರ್ತಿ ಕಷ್ಟಸಾಧ್ಯ ಎನ್ನುತ್ತಾರೆ.

ಇದನ್ನೂ ಓದಿ:ಕೋವಿಡ್ : ಮನೆಮನೆಗೆ ತೆರಳಿ ಲಸಿಕೆ ನೀಡಿಯೆಂದು ಆದೇಶಿಸಲು ಸಾಧ್ಯವಿಲ್ಲ : ಸುಪ್ರೀಂ ಅಭಿಪ್ರಾಯ

ಹೊರ ಹರಿವು ಹೆಚ್ಚಳ
ಆಗಸ್ಟ್‌ 24ರವರೆಗೂ121 ಅಡಿಯಷ್ಟಿದ್ದ ಕೆಆರ್‌ಎಸ್‌ನ ನೀರಿನ ಮಟ್ಟ ಆಗಸ್ಟ್‌ 28ರ ಬಳಿಕ ಕ್ರಮೇಣಕುಸಿಯುತ್ತಾಬಂತು. ಪ್ರಸ್ತುತ ಕಳೆದ ಮೂರ್‍ನಾಲ್ಕು ದಿನಗಳಿಂದ ಕಾವೇರಿಕೊಳ್ಳದಲ್ಲಿ ಮಳೆಯಾಗುತ್ತಿರುವುದರಿಂದ ಜಲಾಶಯದ ಒಳಹರಿವಿನಲ್ಲಿ ಕೊಂಚ ಏರಿಕೆ ಕಂಡಿದೆ. 3 ಸಾವಿರ ಕ್ಯುಸೆಕ್‌ ಇದ್ದಒಳಹರಿವು ಮಂಗಳವಾರ ಸಂಜೆ ವೇಳೆಗೆ 10479 ಸಾವಿರ ಕ್ಯುಸೆಕ್‌ಗೆ ಏರಿದೆ. ಆದರೆ ಅದಕ್ಕಿಂತ ಹೆಚ್ಚು 10786 ಕ್ಯುಸೆಕ್‌ ನೀರು ನದಿಗೆ ಹಾಗೂನಾಲೆಗೆ ಹರಿಸಲಾಗುತ್ತಿದೆ. ನದಿಗೆ 9569 ಕ್ಯುಸೆಕ್‌, ನಾಲೆಗೆ 609 ಕ್ಯುಸೆಕ್‌ ಹರಿಸಲಾಗುತ್ತಿದೆ. ಇದರಿಂದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ 7 ಟಿಎಂಸಿ ನೀರು ತಮಿಳುನಾಡಿಗೆ ಹರಿಸಲಾಗುತ್ತಿದೆಯೇ ಎಂಬಅನುಮಾನಗಳು ಹೆಚ್ಚಾಗಿದೆ. ಪ್ರಸ್ತುತ ಕೆಆರ್‌ಎಸ್‌ ಅಣೆಕಟ್ಟೆಯ ನೀರಿನ ಮಟ್ಟ 115.98 ಅಡಿ ಇದೆ.

ತಮಿಳುನಾಡಿಗೆ ನೀರು ಹರಿಸುವ ಅನಿವಾರ್ಯ
ತಮಿಳುನಾಡಿಗೆ ಸೆಪ್ಟೆಂಬರ್‌ ತಿಂಗಳಲ್ಲಿ ಆರರಿಂದ ಏಳುಟಿಎಂಸಿ ನೀರುಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಆದೇಶಿಸಿದೆ. ಆದರೆಈ ಆದೇಶವನ್ನು ಪಾಲಿಸಲು ಸಾಧ್ಯವಿಲ್ಲ ಎಂದು ಪ್ರಾಧಿಕಾರಕ್ಕೆ ಕರ್ನಾಟಕ ಹೇಳಿದರಾದರೂ ಪ್ರಾಧಿಕಾರದಿಂದ ಒತ್ತಡ ಹೆಚ್ಚಾದರೆ ನೀರು ಬಿಡಬೇಕಾದ ಸಂದರ್ಭ ಅನಿವಾರ್ಯವಾಗಬಹುದು. ಒಟ್ಟಾರೆ ಅಣೆಕಟ್ಟೆಭರ್ತಿಯಾಗುವ ಸಂದರ್ಭದಲ್ಲಿ ದಿಢೀರನೇ 121 ಅಡಿಯಿಂದ 5 ಅಡಿ ನೀರು ಅಣೆಕಟ್ಟೆಯಲ್ಲಿ ಕುಸಿತಗೊಂಡಿದೆ.

ಜುಲೈ-ಆಗಸ್ಟ್‌ನಲ್ಲೇ ಜಲಾಶಯಭರ್ತಿ
ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಮಳೆಯಾದಾಗ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣತಾಲೂಕಿನ ಕೆಆರ್‌ಎಸ್‌ ಅಣೆಕಟ್ಟೆ ಭರ್ತಿ ಯಾಗುವುದು ವಾಡಿಕೆ. ಜುಲೈ ಹಾಗೂಆಗಸ್ಟ್‌ ತಿಂಗಳ ವೇಳೆಗೆ ಅಣೆಕಟ್ಟೆಭರ್ತಿಯಾಗಿ ಮುಖ್ಯಮಂತ್ರಿಗಳು ಆಗಮಿಸಿ ಕಾವೇರಿ ಮಾತೆಗೆ ಪೂಜೆ ಸಲ್ಲಿಕೆ ಮಾಡಿಬಾಗಿನ ಅರ್ಪಿಸುತ್ತಾರೆ.ಆಗಸ್ಟ್‌ ನಂತರ ಮಡಿಕೇರಿ ಭಾಗದಲ್ಲೂ ಮಳೆ ಕಡಿಮೆಯಾಗುವುದರಿಂದ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ನಲ್ಲಿ ಒಂದೆರಡುಬಾರಿ ಅಣೆಕಟ್ಟೆ ಭರ್ತಿಯಾಗಿರುವ ಉದಾಹರಣೆಬಿಟ್ಟರೆಜುಲೈ ಮತ್ತು ಆಗಸ್ಟ್‌ ತಿಂಗಳಲ್ಲೇ ಹೆಚ್ಚುಬಾರಿ ಅಣೆಕಟ್ಟೆ ಭರ್ತಿಯಾಗಿದೆ.

ಸಿಎಂ ಬಾಗಿನ ಅರ್ಪಣೆಗೆ ನಡೆದಿತ್ತು ಸಿದ್ಧತೆ
ವಾಡಿಕೆಯಂತೆ ನದಿಗೆ ನೀರುಬಿಟ್ಟ ಪರಿಣಾಮ ನೀರಿನ ಸಂಗ್ರಹದಲ್ಲಿ ಕಡಿಮೆಯಾಗಿದೆ. ಆಗಸ್ಟ್‌ನಲ್ಲಿ ಕನಿಷ್ಠ 5 ದಿನ ನದಿಗೆ ನೀರು ಬಿಡುವುದನ್ನು ತಡೆದಿದ್ದರೆ ಅಣೆಕಟ್ಟೆ ಭರ್ತಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬಾಗಿನ ಅರ್ಪಿಸುವ ಅವಕಾಶವಿತ್ತು. ಅದಕ್ಕಾಗಿ ಎಲ್ಲ ಸಿದ್ಧತೆಗಳು ಸಹ ನಡೆದಿದ್ದವು. ಆದರೆ ಸದ್ಯಕ್ಕೆ ಸಿಎಂಗೆಬಾಗಿನ ಅರ್ಪಿಸುವ ಅವಕಾಶ ತಪ್ಪಿದೆ.

12ಬಾರಿ ಜಲಾಶಯಕ್ಕೆ ಬಾಗಿನ ಪೂಜೆ ಇಲ್ಲ
ಇದುವರೆಗೂ ಜಲಾಶಯಕ್ಕೆ12 ವರ್ಷ ಮಳೆಕೊರತೆ ಸೇರಿದಂತೆ ವಿವಿಧಕಾರಣಗಳಿಂದ ಬಾಗಿನ ಪೂಜೆ ನಡೆದಿಲ್ಲ. 1985, 1986, 1987, 1997, 1998,2001,2002,2003, 2012,2015,2016,2017ರಲ್ಲಿ ಮ ಳೆಕೊರತೆಯಿಂದ ಜಲಾಶಯ ತುಂಬಿಲ್ಲ.

-ಎಚ್‌.ಶಿವರಾಜ

ಟಾಪ್ ನ್ಯೂಸ್

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

1-sindu

Badminton; ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌: ಸಿಂಧು, ಸೆನ್‌ ಕ್ವಾರ್ಟರ್‌ಫೈನಲಿಗೆ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

1-pak

ODI; ಜಿಂಬಾಬ್ವೆ ಎದುರು ಪಾಕ್‌ಗೆ 2-1 ಸರಣಿ

1-wqewqe

Pro Kabaddi:ಯುಪಿ, ತೆಲುಗು ಜಯಭೇರಿ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Mandya: ಬಹುಮಾನ ಗೆದ್ದ ಹಳ್ಳಿಕಾರ್‌ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!

Pandavapura: A cow gave birth to three calves

Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು

Mandya: ಕದ್ದ ಚಿನ್ನ ಮನೆ ಮುಂದೆ ಇಟ್ಟು ಹೋದ ಕಳ್ಳರು!

Mandya: ಕದ್ದ ಚಿನ್ನ ಮನೆ ಮುಂದೆ ಇಟ್ಟು ಹೋದ ಕಳ್ಳರು!

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

Cheluvaraya-swamy

By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

1-sindu

Badminton; ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌: ಸಿಂಧು, ಸೆನ್‌ ಕ್ವಾರ್ಟರ್‌ಫೈನಲಿಗೆ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

1-skk

Cricket; ವೇಗಿ ಸಿದ್ದಾರ್ಥ್ ಕೌಲ್‌ ನಿವೃತ್ತಿ

ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.