ಕೆಆರ್‌ಎಸ್ ಸಂಗೀತ ಕಾರಂಜಿ ಮೇಲ್ದರ್ಜೆಗೆ
Team Udayavani, Feb 12, 2023, 11:17 AM IST
ಶ್ರೀರಂಗಪಟ್ಟಣ: ವಿಶ್ವ ಪ್ರಸಿದ್ಧ ಕೆಆರ್‌ಎಸ್ ಬೃಂದಾವನದಲ್ಲಿರುವ ಸಂಗೀತ ಕಾರಂಜಿಯನ್ನು ಮೇಲ್ದರ್ಜೆಗೇರಿಸಿ, ಈಗಿರುವ ಕಾರಂಜಿಗಿಂತ ಎರಡು ಪಟ್ಟು ಹೆಚ್ಚಿಸಿ ಕಾಮಗಾರಿ ನಡೆಸಲು ಕಾವೇರಿ ನೀರಾವರಿ ನಿಗಮದ ಮುಂದಾಗಿದೆ.
ಪ್ರವಾಸಿಗರ ಮುಖ್ಯ ಆಕರ್ಷಣೆಯಾಗಿದ್ದ ‘ಸಂಗೀತ ನೃತ್ಯ ಕಾರಂಜಿ ಲೇಸರ್ ಪ್ರದರ್ಶನ’ ವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ವಿಶ್ವದ ಗಮನ: ಕೆಆರ್‌ಎಸ್ ಜಲಾಶಯ ಅಣೆಕಟ್ಟೆ ನಿರ್ಮಾಣವಾಗಿ ಇದೀಗ 8 ದಶಕಗಳು ಕಳೆದಿದೆ. ರೈತರ ಜೀವನಾಡಿ ಕೆಆರ್‌ಎಸ್ ಜಲಾಶಯ ನಿರ್ಮಾಣ ವೇಳೆ ಇಲ್ಲಿನ ಪ್ರವಾಸಿ ತಾಣವಾಗಿ ಗುರುತಿ ಸಲು ಹೆಚ್ಚಿನ ಮಹತ್ವ ನೀಡಿದ ಅಂದಿನ ಕೃಷ್ಣರಾಜ ಒಡೆಯರ್ ಹಾಗೂ ಜಲಾಶಯ ವಿನ್ಯಾಸಗೊಳಿಸಿದ ಸರ್‌ಎಂ.ವಿಶ್ವೇಶ್ವರಯ್ಯ ಅವರು ಜಲಾಶಯ ಆರಂಭವಾಗುವ ಸಮಯದಲ್ಲೇ ಅಣೆಕಟ್ಟೆ ಕೆಳಭಾಗವನ್ನು ಜನರ ವೀಕ್ಷಣೆಗೋಸ್ಕರ ಪ್ರಕೃತಿಯನ್ನು ಇನ್ನಷ್ಟು ಸುಂದರಮಯವಾಗಿ ಕಾಣಲು ಬೃಂದಾವನ ನಿರ್ಮಾಣ ಮಾಡಲಾಗಿತ್ತು. ಈ ಬೃಂದಾವನದಲ್ಲಿ ಸಂಗೀತ ಕಾರಂಜಿ ನಿರ್ಮಿಸಿದ್ದು, ಇದೀಗ ವಿಶ್ವ ಪ್ರಸಿದ್ಧಿ ಪಡೆದಿದೆ.
ಪ್ರತಿ ದಿನ ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸಿ, ವೀಕ್ಷಣೆ ಮಾಡುವುದು ವಿಶ್ವದ ಗಮನ ಸೆಳೆಯಲು ಕಾರಣವಾಗಿತ್ತು. ಕೆಆರ್‌ಎಸ್ ಬೃಂದಾವನ ನಿರ್ಮಾಣದ ಜೊತೆ ಅಣೆಕಟ್ಟೆ ಉತ್ತರ ಭಾಗದಲ್ಲಿ ಸಂಗೀತ ಕಾರಂಜಿಯನ್ನು ನಿರ್ಮಿಸಿದ್ದು, ಕೆಆರ್‌ಎಸ್ ಬೃಂದಾವನಕ್ಕೆ ಬರುವ ಪ್ರವಾಸಿಗರಿಗೆ ಈ ಕಾರಂಜಿ ವೀಕ್ಷಣೆ ಮಾಡದೆ ಹೊರ ಹೋಗುತ್ತಿರಲಿಲ್ಲ. ಬರುವ ಪ್ರವಾಸಿಗರಿಗೆ ಈ ಸಂಗೀತ ನೃತ್ಯ ಕಾರಂಜಿಯನ್ನು ಒಂದು ಬಾರಿ ವೀಕ್ಷಣೆ ಮಾಡಿ, ಅದರಲ್ಲಿನ ಬಣ್ಣ ಬಣ್ಣದ ದೀಪಲಂಕಾರದೊಂದಿಗೆ ಚಿಮ್ಮುತ್ತಿದ್ದ ನೀರಿನ ಸಂಗೀತದೊಂದಿಗೆ ವೀಕ್ಷಣೆ ಮಾಡಿ, ಮನ ಉಲ್ಲಾಸಗೊಳಿಸುವಂತಿದ್ದ ಈ ಕಾರಂಜಿ ಪ್ರತಿಯೊಬ್ಬ ಪ್ರವಾಸಿಗರನ್ನು ತನ್ನ ಕಡೆ ಕೈ ಬೀಸಿ ಕರೆಯುತ್ತಿತ್ತು. ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದಂತ ಕಾರಂಜಿ ಎಲ್ಲರ ಕಣ್ಮನ ಸೆಳೆಯುತ್ತಿತ್ತು.
ಮೇಲ್ದರ್ಜೆಗೆರಿಸಲು ಕಾಮಗಾರಿ: ನೃತ್ಯ ಕಾರಂಜಿ ಇದೀಗ ಅದರ ಮಹತ್ವವನ್ನು ಕಳೆದುಕೊಂಡಿದ್ದು, ಪ್ರತಿ ಬಾರಿ ದುರಸ್ತಿ ಕಾರ್ಯಗಳು ನಡೆಯುತ್ತಿತ್ತು. ಆದರೆ, ನೀರಾವರಿ ನಿಗಮ ಇದೀಗ ನೃತ್ಯ ಕಾರಂಜಿಯನ್ನು ಇನ್ನಷ್ಟು ಹೆಚ್ಚಿನ ತಾಂತ್ರಿಕತೆ ಅಳವಡಿಸಿ, ಕಣ್ಮನ ಸೆಳೆಯುವ ನೃತ್ಯ ಕಾರಂಜಿಯ ವಿವಿಧವಾಗಿ ವಿನ್ಯಾಸ ದಿಂದ ಕಾಣುವಂತೆ ಮಾಡಿ, ಈಗಿರುವ ಕಾರಂಜಿಗಿಂತ ಎರಡು ಪಟ್ಟು ವಿಸ್ತಾರಗೊಳಿಸಲು ಕಾಮಗಾರಿ ನಡೆಸಲಾಗುತ್ತಿದೆ.
ಪ್ರವಾಸಿಗರಿಗೂ ಯಾವುದೇ ತೊಂದರೆ ಯಾಗದಂತೆ 2 ಕೋಟಿ ರೂ. ವೆಚ್ಚದಲ್ಲಿ ಹೊಸ ವಿನ್ಯಾಸದೊಂದಿಗೆ ಈಗಿರುವ ಹಳೆಯ ಕಾರಂಜಿಯ ಪರಿಕರಗಳನ್ನು ತೆಗೆದು, ಹೊಸದಾಗಿ ನ್ಯೂನ್ಯತೆ ಇರುವ ಪರಿಕರಗಳನ್ನು ಅಳವಡಿಸಿ ಕಾಮಗಾರಿ ನಡೆಸಲು ಟೆಂಡರ್ ಪ್ರಕ್ರಿಯೆ ನಡೆದಿದೆ. ಹೆಸರಾಂತ ಬಾಂಬೆ ಕಂಪನಿ ಈ ಕಾಮಗಾರಿ ನಡೆಸಲು 2 ತಿಂಗಳ ಕಾಮಗಾರಿಯನ್ನು ನಡೆಸಲು ನೀರಾವರಿ ನಿಗಮ ಮುಂದಾಗಿದೆ.
ಪ್ರವಾಸಿಗರಿಗೆ ಉದ್ಯಾನವನ ವೀಕ್ಷಣೆಗೆ ಮಾತ್ರ ಅವಕಾಶವಿದ್ದು, ನೃತ್ಯ ಕಾರಂಜಿ ಕಾಮಗಾರಿ ನಡೆಯು ತ್ತಿರುವುದರಿಂದ ಆ ಪ್ರದೇಶಕ್ಕೆ ನಿಷೇಧ ಹಾಕಲಾಗಿದೆ.
ತಾತ್ಕಾಲಿಕವಾಗಿ ಕಾರಂಜಿಗೆ ನಿಷೇಧ: ಫೆ.15ರಿಂದ ನೃತ್ಯ ಕಾರಂಜಿಯ ಕಾಮಗಾರಿ ನಡೆಯುವುದರಿಂದ ಈಗಾಗಲೇ ಕಾವೇರಿ ನೀರಾವರಿ ನಿಗಮದ ವತಿ ಯಿಂದ ಪ್ರಕಟಣೆ ಹೊರಡಿಸಲಾಗಿದ್ದು, ಪ್ರತಿ ದಿನ ಬೃಂದಾವನ ವೀಕ್ಷಣೆಗೆ ಅವಕಾಶವಿದ್ದರೂ ಬೃಂದಾವ ನದ ಉತ್ತರ ಭಾಗದಲ್ಲಿದ್ದ ನೃತ್ಯ ಕಾರಂಜಿಗೆ ಪ್ರವೇಶವನ್ನು ನಿಷೇಧ ಮಾಡಿ ಆದೇಶ ಹೊರಡಿಸಲಾಗಿದೆ. ಫೆ.15ರಿಂದ ವಿಶ್ವ ಪ್ರಸಿದ್ಧ ನೃತ್ಯ ಕಾರಂಜಿ ಪ್ರದರ್ಶನ ಬಂದ್ ಮಾಡುತ್ತಿದ್ದು, ಕೃಷ್ಣರಾಜಸಾಗರದ ಕಾರ್ಯ ಪಾಲಕ ಎಂಜಿನಿಯರ್ ಈ ಮಾಹಿತಿ ನೀಡಿದ್ದಾರೆ.
ಕೃಷ್ಣರಾಜಸಾಗರ ಉತ್ತರ ಬೃದಾವನದಲ್ಲಿರುವ ನೃತ್ಯ ಕಾರಂಜಿಯ ನವೀಕರಣ ಕಾಮಗಾರಿಯ ನಡೆಯಲಿದೆ. ಹೀಗಾಗಿ 2023 ಫೆ.15ರಿಂದ ಮುಂದಿನ ಆದೇಶದವರೆಗೆ ನೃತ್ಯ ಕಾರಂಜಿ ಪ್ರದರ್ಶನ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೃತ್ಯ ಕಾರಂಜಿ ಕಾಮಗಾರಿ ಹಿನ್ನಲೆಯಲ್ಲಿ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಆ ಭಾಗವನ್ನು ಬಂದ್ ಮಾಡಿದ್ದರಿಂದ ಬೇಸರ ಉಂಟಾಗುವುದಂತು ಸತ್ಯ. ಇದರಿಂದ ತ್ವರಿತವಾಗಿ ಕಾಮಗಾರಿ ನಡೆಸಿ, ಪ್ರವಾಸಿಗರಿಗೆ ಮತ್ತೆ ನೃತ್ಯಕಾರಂಜಿಯ ವೀಕ್ಷಣೆ ಅನುಮಾಡಲು ಪ್ರವಾಸಿಗರ ಒತ್ತಾಯವಾಗಿದೆ.
ನೃತ್ಯ ಕಾರಂಜಿಗೆ ಹೊಸ ವಿನ್ಯಾಸ : ಕೆಆರ್‌ಎಸ್ ಜಲಾಶಯ ನಿರ್ಮಾಣ ಮಾಡುವಾಗಲೇ ಕಾರಂಜಿಯ ಕಾಮಗಾರಿ ನಡೆದಿತ್ತು. ನಂತರ ಕೆಟ್ಟು ನಿಂತ ವೇಳೆಯಲ್ಲಿ ದುರಸ್ತಿ ಕಾರ್ಯ ಮಾಡಲಾಗುತ್ತಿತ್ತು. ನಂತರ ಕಳೆದ 20 ವರ್ಷಗಳ ಹಿಂದೆ ಬೃಂದಾವನ ನೃತ್ಯ ಕಾರಂಜಿಯ ದುರಸ್ತಿ ಕಾರ್ಯ ನಡೆದಿತ್ತು. ಆದರೆ, ಅಲ್ಲಿಂದಲೂ ಕೆಲವು ತಾಂತ್ರಿಕ ದೋಷಗಳು ಕಂಡು ಬರುತ್ತಿತ್ತು. ಇದರಿಂದ ವೀಕ್ಷಣೆಗೆ ಬರುವ ಪ್ರವಾಸಿಗರಿಗೂ ಕಸಿವಿಸಿಯಾಗುತ್ತಿತ್ತು. ಈ ಬಗ್ಗೆ ಸರ್ಕಾರಕ್ಕೆ ವರದಿ ಮೂಲಕ ಮನವಿ ಮಾಡಲಾಗಿತ್ತು. ಇದೀಗ ಎರಡು ಕೋಟಿ ಹಣ ಬಿಡುಗಡೆ ಯಾಗಿ ಟೆಂಡರ್ ಪ್ರಕ್ರಿಯೆ ನಡೆದು, ಹಳೆಯ ಪರಿಕರಗಳನ್ನು ತೆಗೆದು ಹೊಸ ವಿನ್ಯಾಸದೊಂದಿಗೆ ಹೊಸದಾಗಿ ನೃತ್ಯ ಕಾರಂಜಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆದಷ್ಟು ಬೇಗ ಪ್ರವಾಸಿಗರಿಗೆ ನೃತ್ಯ ಕಾರಂಜಿಯ ಹೊಸ ವಿನ್ಯಾಸದ ವೀಕ್ಷಣೆಗೆ ತರುವ ಕೆಲಸ ಮಾಡುತ್ತೇವೆ ಎಂದು ಕೆಆರ್‌ಎಸ್ ಬೃಂದಾವನ ಕಾರ್ಯಪಾಲಕ ಅಭಿಯಂತರ ಮಹಮದ್ ಅಬು ತಿಳಿಸಿದ್ದಾರೆ.
– ಗಂಜಾಂ ಮಂಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
3rd ODI ವನಿತಾ ಏಕದಿನ: ವಿಂಡೀಸ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್‌ಗೆ ಭಾರತ ಸಜ್ಜು
Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!
Mangaluru: ಹೊಸ ವರ್ಷದ ಪಾರ್ಟಿಗಳಿಗೆ ನಿರ್ಬಂಧ ಹೇರಲು ವಿಹಿಂಪ, ಬಜರಂಗದಳ ಆಗ್ರಹ
B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು
ದೇಶದ ಆರ್ಥಿಕತೆಗೆ ಹೊಸ ಭಾಷ್ಯ ಬರೆದ ಡಾ. ಮನಮೋಹನ್ ಸಿಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.