ಒಂದೇ ರಾತ್ರಿಗೆ ಕೆಆರ್‌ಎಸ್‌ಗೆ 2 ಅಡಿ ನೀರು
Team Udayavani, Jul 9, 2023, 3:16 PM IST
ಶ್ರೀರಂಗಪಟ್ಟಣ: ಜೂನ್ ತಿಂಗಳಲ್ಲಿ ಮುಂಗಾರು ಮಳೆ ಪ್ರವೇಶವಾದರೂ ವಿಳಂಬದಿಂದ ಬರದ ಆತಂಕ ಎದುರಾಗಿದ್ದ ಜಿಲ್ಲೆಯ ಜನರಿಗೆ ಜುಲೈ ತಿಂಗಳಲ್ಲಿ ವರುಣ ಕೃಪೆ ತೋರಿದ್ದಾನೆ. ಕಳೆದ ಐದಾರು ದಿನಗಳಿಂದ ಕಾವೇರಿ ಕೊಳ್ಳ ಸೇರಿ ಜಿಲ್ಲಾದ್ಯಂತ ಮಳೆ ಆಗುತ್ತಿರುವುದರಿಂದ ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ.
ಇದರಿಂದ ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕಳೆದ ಒಂದು ತಿಂಗಳಿನಿಂದ ಮುಂಗಾರು ಮಳೆ ಬರಲಿದೆ ಎಂದು ಬಿತ್ತನೆಗೆ ಭೂಮಿ ಹದ ಮಾಡಿಕೊಂಡು ಕಾಯುತ್ತಿದ್ದ ರೈತರಿಗೀಗ ಬಿತ್ತನೆ ಮಾಡಲು ಕಾಲ ಕೂಡಿ ಬಂದಂತಾಗಿದೆ. ಜುಲೈ ತಿಂಗಳ ಮೊದಲ ವಾರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಬಿತ್ತನೆಗೆ ಮುಂದಾಗಿದ್ದಾರೆ.
ಕೆಆರ್‌ಎಸ್‌ಗೆ ಒಳಹರಿವು ಹೆಚ್ಚಳ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆಯ ಅಬ್ಬರದಿಂದಾಗಿ ಕಾವೇರಿ ನೀರಿನ ಹೆಚ್ಚಳವಾಗಿ ಕೆಆರ್ ಎಸ್ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, 13 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರು ಹರಿದು ಬರು ತ್ತಿದೆ. ಶುಕ್ರವಾರ ರಾತ್ರಿ 8 ಗಂಟೆ ವೇಳೆಗೆ ಒಳಹರಿವು 7490 ಕ್ಯೂಸೆಕ್ ಇತ್ತು. ರಾತ್ರಿ ಕಳೆಯುವುದರೊಳಗೆ ಅದು 15,436 ಕ್ಯೂಸೆಕ್‌ಗೆ ಏರಿಕೆ ಕಂಡಿದೆ.
ಒಂದೇ ರಾತ್ರಿಗೆ ಎರಡು ಅಡಿ ನೀರು: ಶುಕ್ರವಾರ ರಾತ್ರಿ 124.80 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ 80.40 ಅಡಿ ನೀರಿತ್ತು. ಒಂದೇ ರಾತ್ರಿಯಲ್ಲಿ ಎರಡು ಅಡಿ ನೀರು ಸಂಗ್ರಹವಾಗುವ ಮೂಲಕ ಶನಿವಾರ ಬೆಳಗ್ಗೆ 8 ಗಂಟೆ ವೇಳೆಗೆ 82 ಅಡಿಗೇರಿದೆ. ಜುಲೈನಲ್ಲಿ ಕೆಆರ್‌ಎಸ್ ಜಲಾಶಯಕ್ಕೆ ದಾಖಲೆಯ ಒಳಹರಿವು ಬಂದಿರುವ ಹಿನ್ನೆಲೆ ಒಂದೇ ದಿನದಲ್ಲಿ ಜಲಾಶಯದಲ್ಲಿ ಎರಡು ಅಡಿ ನೀರು ಹೆಚ್ಚಳ ಕಂಡು ಬಂದಿದೆ. ಜೂನ್ ತಿಂಗಳಲ್ಲಿ ಆರಂಭವಾಗಬೇಕಿದ್ದ ಮುಂಗಾರು ಮಳೆ ವಿಳಂಬದಿಂದ ಜಿಲ್ಲೆಯಲ್ಲಿ ಬರದ ಛಾಯೆ ಎದುರಾಗಿತ್ತು. ಆದರೆ, ಬಿಪರ್‌ಜಾಯ್ ಚಂಡಮಾರುತದ ಪರಿಣಾಮ ಅಲ್ಲಲ್ಲಿ ಚದುರಿದಂತೆ ಮಳೆಯಾಗಿತ್ತು. ಇದೀಗ ಮಂಡ್ಯ, ಕೊಡಗು ಸೇರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ.
ನಿಧನವಾಗಿ ಏರುತ್ತಿರುವ ಒಳಹರಿವು: ಪ್ರಸ್ತುತ ವರ್ಷ 2023ನೇ ಸಾಲಿನಲ್ಲಿ ಇದೇ ಮೊದಲ ಬಾರಿಗೆ ಅ ಧಿಕ ಪ್ರಮಾಣದ ಒಳಹರಿವು ಹರಿದು ಬರುತ್ತಿದೆ ಎನ್ನಲಾಗಿದೆ. ವರ್ಷದ ಮಾರ್ಚ್‌ನಿಂದಲೂ ಮಳೆಯಾಗದೆ ಏಪ್ರಿಲ್, ಮೇ ತಿಂಗಳು ಸೇರಿ ಜೂನ್‌ವರೆಗೂ ಮಳೆಯ ವಾತಾವರಣ ಇರಲಿಲ್ಲ. ರೈತರು ಕೂಡ ಮಳೆ ಯನ್ನೇ ನಂಬಿ ಬಿತ್ತನೆಗೆ ಭೂಮಿ ಹದ ಮಾಡಿಕೊಂಡಿದ್ದರು. ಆದರೆ, ಮಳೆ ಬಾರದ ಹಿನ್ನೆಲೆ ಬಿತ್ತನೆ ಮಾಡಲು ಹಿಂದೇಟು ಹಾಕಿದ್ದರು. ಅಲ್ಲದೆ, ಕಾವೇರಿ ನೀರಾವರಿ ನಿಗಮವು ಸಹ ಬೆಳೆ ಬಿತ್ತನೆ ಮಾಡದಂತೆ ಮನವಿ ಮಾಡಿತ್ತು. ಆದರೆ, ಈಗ ಮಳೆಯಾಗುತ್ತಿದ್ದು, ಜಲಾಶಯದಲ್ಲಿ ನಿಧಾನವಾಗಿ ಒಳಹರಿವು ಹೆಚ್ಚಾಗಿದೆ.
ತಳ ಸೇರಿದ್ದ ನೀರಿನಮಟ್ಟ: ಕೆಆರ್‌ಎಸ್ ಜಲಾ ಶಯ ದಲ್ಲಿ ಕಳೆದ ಮಾರ್ಚ್‌ನಿಂದ ಬಿಸಿಲ ಬೇಗೆಗೆ ಜಲಾಶಯದಲ್ಲಿ ನೀರು ಕಡಿಮೆಯಾಗಿತ್ತು. 78 ಅಡಿಗೆ ಇಳಿ ಯುವ ಮೂಲಕ ಜಲಾಶಯದಲ್ಲಿರುವ ವೇಣು ಗೋಪಾಲಸ್ವಾಮಿಯ ಗೋಪುರ ಕಾಣುವಂತಾಗಿತ್ತು. ಅಲ್ಲದೆ, ಸಂಪೂರ್ಣ ತಳಮಟ್ಟಕ್ಕಿಳಿದು ಬರಡಾ ದಂತಾಗಿತ್ತು. ಇಂಥ ಸಂದರ್ಭದಲ್ಲೂ ಬೇಸಿಗೆಯ ಬೆಳೆಗೆ ನೀರು ಹರಿಸಲಾಗಿತ್ತು. ಅಲ್ಲದೆ, ಹೇಮಾವತಿ ಜಲಾಶಯದಿಂದ ನೀರು ಹರಿಸಿದ ಪರಿಣಾಮ ಕೆಆರ್‌ಎಸ್ ಜಲಾಶಯಕ್ಕೆ ಕೊಂಚ ಪ್ರಮಾಣದಲ್ಲಿ ನೀರು ಹರಿದು ಬಂದಿತ್ತು.
ಜಲಾಶಯ ತುಂಬುವ ಭರವಸೆ ನೀಡಿದ ಒಳಹರಿವು : ಜು.3ರವರೆಗೆ ಒಂದು ಸಾವಿರಕ್ಕೂ ಕಡಿಮೆ ಕ್ಯೂಸೆಕ್ ಇದ್ದ ಜಲಾಶಯದಲ್ಲಿ ನಿಧಾನವಾಗಿ ಒಳಹರಿವು ಹೆಚ್ಚಾಗಿದೆ. ಜು.3ರಂದು 859 ಕ್ಯೂಸೆಕ್ ಇತ್ತು. ಸಂಜೆ ವೇಳೆಗೆ 1054 ಕ್ಯೂಸೆಕ್‌ಗೆ ಏರಿತ್ತು. 4ರಂದು 1151 ಕ್ಯೂಸೆಕ್‌ಗೆ ಏರಿತು. 5ರ ಸಂಜೆ ವೇಳೆಗೆ 1347 ಕ್ಯೂಸೆಕ್, 6ರ ಸಂಜೆಗೆ 2520 ಕ್ಯೂಸೆಕ್, 7ರ ಸಂಜೆಗೆ 7490 ಕ್ಯೂಸೆಕ್‌ಗೆ ಏರಿತ್ತು. ನಂತರ 8ರ ಬೆಳಿಗ್ಗೆ 13449 ಕ್ಯೂಸೆಕ್ ತಲುಪುವ ಮೂಲಕ ಜಲಾಶಯ ತುಂಬುವ ಭರವಸೆ ಮೂಡಿದೆ. ಪ್ರಸ್ತುತ ಜಲಾಶಯದಲ್ಲಿ ಒಟ್ಟು 11.695 ಟಿಎಂಸಿ ನೀರು ಸಂಗ್ರಹವಾಗಿದ್ದು, ಹೊರಹರಿವು 339 ಕ್ಯೂಸೆಕ್ ಇದೆ. ಕಳೆದ ವರ್ಷ ಇದೇ ಅವ ಧಿಯಲ್ಲಿ 119.44 ಅಡಿ ಇತ್ತು. ಒಳಹರಿವು 38858 ಕ್ಯೂಸೆಕ್ ಇದ್ದರೆ, ಹೊರಹರಿವು 3453 ಕ್ಯೂಸೆಕ್ ಇತ್ತು. ಜಲಾಶಯದಲ್ಲಿ ಒಟ್ಟು 42.341 ಟಿಎಂಸಿ ನೀರು ಸಂಗ್ರಹವಾಗಿತ್ತು.
ಮಳೆಗಾಗಿ ವಿವಿಧ ರೀತಿಯಲ್ಲಿ ಪ್ರಾರ್ಥನೆ ಮಾಡಿದ್ದ ರೈತರು : ಮಳೆಯಾಗಲಿ ಎಂದು ಜಿಲ್ಲಾದ್ಯಂತ ರೈತರು ಪ್ರಾರ್ಥನೆ ಸಲ್ಲಿಸಿದ್ದರು. ಅಲ್ಲದೆ, ವಿವಿಧ ಗ್ರಾಮಗಳಲ್ಲಿ ವರುಣದೇವನ ಒಲಿಸಿಕೊಳ್ಳಲು ವಿವಿಧ ವಿಭಿನ್ನ ಆಚರಣೆಗಳನ್ನು ಮಾಡಿದ್ದರು. ಅದರ ಫಲವೋ ಅಥವಾ ಕಾಕತಾಳೀಯ ಎಂಬಂತೆ ಜುಲೈನಲ್ಲಿ ವರುಣ ಕೃಪೆ ತೋರಿದ್ದು, ಉತ್ತಮ ಮಳೆಯಾಗುತ್ತಿದೆ. ಇದರಿಂದ ರೈತರು ಬಿತ್ತನೆ ಮಾಡಲು ಮುಂದಾಗಿದ್ದಾರೆ.
ಆತಂಕ ಮೂಡಿಸಿದ್ದ ಮುಂಗಾರು ಮಳ ವಿಳಂಬ : ಈ ಬಾರಿ ಹಿಂಗಾರು ಮಾರುತುಗಳು ವಿಳಂಬವಾದ ಹಿನ್ನೆಲೆಯಲ್ಲಿ ಜಲಾಶಯದ ನೀರು ಸಹ ಬಾರಿ ಕುಸಿತ ಕಂಡಿತ್ತು. ಜಲಾಶಯದಲ್ಲಿ ನೀರಿನ ಮಟ್ಟ ಕುಸಿಯುತ್ತಿದಂತೆ ನೀರಾವರಿ ಅ ಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸಿ ಜಲಾಶಯದಲ್ಲಿ ಇರುವ ನೀರನ್ನು ಕುಡಿಯಲು ಮಾತ್ರ ಬಳಸಲು ಮುಂದಾಗಿದ್ದರು. ಅತ್ತ ತಮಿಳುನಾಡು ಸಹ ಕಾವೇರಿ ನದಿ ನೀರು ನಿರ್ವಹಣಾ ಪ್ರಾ ಧಿಕಾರ ಮುಂದೆ ನೀರು ಬಿಡುವಂತೆ ವಾದ ಮಂಡಿಸಿದ್ದಲ್ಲದೆ, ತಮಿಳುನಾಡು ಸರ್ಕಾರ ಪ್ರಾ ಧಿಕಾರಕ್ಕೆ ಪತ್ರ ಬರೆದಿತ್ತು. ಇದರಿಂದ ಕರ್ನಾಟಕ ಕಾವೇರಿ ಕೊಳ್ಳದಲ್ಲಿ ಮಳೆಯಾಗದ ಪರಿಣಾಮ ನೀರು ಬಿಡಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಇದರಿಂದ ಕಾವೇರಿ ನೀರು ಹಂಚಿಕೆ ವಿವಾದ ಭುಗಿಲೇಳುವ ಮುನ್ನವೇ ವರುಣದೇವ ಕೃಪೆ ತೋರಿರುವುದು ಸಂತಸ ತಂದಿದೆ.
ಸತತ 5 ವರ್ಷ ತುಂಬಿ ದಾಖಲೆ ಬರೆದಿದ್ದ ಜಲಾಶಯ : ಕಳೆದ 5 ವರ್ಷಗಳಿಂದ ಭರ್ತಿಯಾಗಿದ್ದ ಜಲಾಶಯ ಪ್ರಸ್ತುತ ವರ್ಷ ಮಳೆಯಾಗದೆ ಖಾಲಿಯಾಗಿತ್ತು. 2018 ರಿಂದ ಸತತವಾಗಿ ಗರಿಷ್ಠ ಮಟ್ಟ ತಲುಪಿದ್ದ ಜಲಾಶಯದಲ್ಲಿ ಈ ಬಾರಿ ಮಳೆ ಇಲ್ಲದೆ, ಸಂಪೂರ್ಣ ಖಾಲಿ ಯಾಗುವ ಸಂಭವ ಎದುರಾಗಿತ್ತು. ಕಳೆದ ವರ್ಷ ಜು.11ರಂದು ಜಲಾಶಯ ಗರಿಷ್ಠ ತಲುಪುವ ಮೂಲ ಕ ಕಳೆದ 15 ವರ್ಷಗಳ ಜಲಾಶಯದ ಇತಿಹಾಸದಲ್ಲಿ ಸತತ ಐದು ವರ್ಷ ತುಂಬಿದ ದಾಖಲೆ ಬರೆದಿತ್ತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.