ಹಳ್ಳಕ್ಕೆ ಮೇಲ್ಸೇತುವೆ ಇಲ್ಲ; ಸಮಸ್ಯೆಗೆ ಸ್ಪಂದಿಸೋರಿಲ್ಲ
Team Udayavani, Dec 19, 2021, 1:30 PM IST
ಕೆ.ಆರ್.ಪೇಟೆ: ಹಲವಾರು ಗ್ರಾಮಗಳಿಗೆ ಈ ಹಳ್ಳದ ಮೂಲಕವೇ ಸಾಗಬೇಕು. ಮಳೆ ಬಂದರಂತೂ ಇಲ್ಲಿನ ನಾಗರಿಕರಿಗೆ ದಿಕ್ಕೇ ತೋಚದಂತಾಗುತ್ತದೆ. ಹೀಗೊಮ್ಮೆಬೈಕ್ ಮೂಲಕ ಹಳ್ಳ ದಾಟಲು ಹೋದ ಸವಾರ ಬೈಕ್‌ಸಮೇತ ಕೊಚ್ಚಿಹೋಗಿ ಮೃತಪಟ್ಟಿದ್ದ. ಈ ವಿಚಾರಜನಪ್ರತಿನಿಧಿಗಳಿಗೆ ಗೊತ್ತಿದ್ದರೂ ಮೌನಕ್ಕೆ ಶರಣಾಗಿದ್ದಾರೆ.
ಹೌದು, ತಾಲೂಕಿನ ಸಾರಂಗಿ ಗ್ರಾಮದ ಬಳಿ ಹರಿಯುವ ಹಳ್ಳಕ್ಕೆ ಮೇಲ್ಸೇತುವೆ ಇಲ್ಲ. ನಿತ್ಯ ನೂರಾರು ಜನ ಜೀವ ಕೈಯಲ್ಲಿಡಿದು ಹಳ್ಳದ ರಸ್ತೆಯಲ್ಲಿ ಹಾದುಹೋಗುವ ಸ್ಥಿತಿ ಇದೆ. ತಾಲೂಕಿನಸಂತೇಬಾಚಹಳ್ಳಿ ಹೋಬಳಿಗೆ ಸೇರಿದ ಸಾರಂಗಿ ಗ್ರಾಮದ ಬಳಿ ದೊಡ್ಡ ಹಳ್ಳವೊಂದಿದೆ. ಹಳ್ಳದ ಮೇಲ್ಭಾಗದಲ್ಲಿ ಹೇಮಾವತಿ ಯೋಜನೆ ಮುಖ್ಯ ಕಾಲುವೆಗೆ ಮೇಲ್ಗಾಲುವೆ ನಿರ್ಮಿಸಲಾಗಿದೆ. ಈಮೇಲ್ಗಾಲುವೆ ಕೆಳಗೆ ಹಳ್ಳದ ನೀರು ಹರಿಯುತ್ತದೆ. ಹಳ್ಳದ ನೀರು ಹರಿದು ಹೋಗುವ ಮಾರ್ಗದಲ್ಲಿಯೇ ಪ್ರಮುಖವಾದ ಗ್ರಾಮೀಣ ರಸ್ತೆಯಿದ್ದು ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ, ಹಳ್ಳ ಹರಿದರೆ ಜನತೆ ಸಂಕಷ್ಟ ಎದುರಾಗುತ್ತದೆ.
ಸವಾರ ಕೊಚ್ಚಿ ಹೋಗಿದ್ದ: 2004ರ ಅಕ್ಟೋಬರ್‌ನಲ್ಲಿ ಬಿದ್ದ ಭಾರೀ ಮಳೆಗೆ ಹಳ್ಳದ ಮೇಲ್ಭಾಗದಲ್ಲಿನ ಹೇಮಾವತಿ ಕಾಲುವೆಯ ಮಣ್ಣಿನ ಏರಿ ಕೊಚ್ಚಿಹೋಗಿತ್ತು. ಕಾಲುವೆ ಏರಿ ಪುನರ್ ನಿರ್ಮಾಣ ಸಂದರ್ಭದಲ್ಲಿಯಾದರೂ ನೀರಾವರಿ ಇಲಾಖೆ ತನ್ನ ಕಾಳಜಿ ಪ್ರದರ್ಶಿಸಿ ಹಳ್ಳದ ಸೇತುವೆ ಎತ್ತರಿಸುವ ಕೆಲಸ ಮಾಡಲಿಲ್ಲ. ಈಗಲೂ ನೀರಾವರಿ ಇಲಾಖೆ 4ಜಿ ಹೆಸರಿನಲ್ಲಿ ಅನಗತ್ಯ ಕಾಮಗಾರಿ ಯೋಜನೆ ರೂಪಿಸಿದೆ. ಆದರೆ, ಸಾರಂಗಿ ಹಳ್ಳಕ್ಕೊಂದು ಮೇಲ್ಸೇತುವೆ ನಿರ್ಮಿಸಬೇಕೆನ್ನುವ ಆಲೋಚನೆ ನೀರಾವರಿ ಇಲಾಖೆಗಾಗಲೀ, ಲೋಕೋಪಯೋಗಿ ಇಲಾಖೆಗಾಗಲಿ ಬಂದಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.
ಎಲ್ಲೆಲ್ಲಿಗೆ ಸಂಪರ್ಕ?: ತಾಲೂಕಿನ ಗೊರವಿ, ಹೆತ್ತಗೋನಹಳ್ಳಿ, ಮಲ್ಲೇನಹಳ್ಳಿ, ಶ್ಯಾರಹಳ್ಳಿ ಕಡೆಯಿಂದ ಸಾರಂಗಿ, ಕೈಗೋನಹಳ್ಳಿ ಮಾರ್ಗವಾಗಿ ಕೆ.ಆರ್.ಪೇಟೆಪಟ್ಟಣವನ್ನು ಈ ಗ್ರಾಮೀಣ ರಸ್ತೆ ಸಂಪರ್ಕಿಸುತ್ತದೆ. ಗೊರವಿ ಭಾಗದಿಂದ ಗ್ರಾಮೀಣ ವಿದ್ಯಾರ್ಥಿಗಳು ಸೇರಿದಂತೆ ನಿತ್ಯ ನೂರಾರು ಜನ ಈ ಹಳ್ಳ ದಾಟಿ ಕೆ.ಆರ್.ಪೇಟೆ ಪಟ್ಟಣಕ್ಕೆ ಬರುತ್ತಾರೆ. ಈ ಮಾರ್ಗದಲ್ಲಿ ಸಂಚರಿಸುವ ಬಸ್, ಖಾಸಗಿ ವಾಹನ,ಪ್ರಯಾಣಿಕರನ್ನು ತುಂಬಿಕೊಂಡು ಬರುವ ಆಟೋನಿತ್ಯ ಈ ಹಳ್ಳದ ಮೇಲೆ ಸಂಚರಿಸುತ್ತವೆ. ಹಳ್ಳದ ಮೇಲ್ಭಾಗದಲ್ಲಿ ಸ್ವಲ್ಪ ಮಳೆಯಾದರೆ ಸಾಕು ಕೆಳಭಾಗದಜನರ ಅರಿವಿಗೆ ಬರದೆ ಹಳ್ಳದಲ್ಲಿ ನೀರಿನ ಹರಿಯುವಿಕೆ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ. ಹಳ್ಳದ ಮೇಲೆಮೇಲ್ಗಾಲುವೆ ನಿರ್ಮಿಸಿದ ನೀರಾವರಿ ಇಲಾಖೆಗೆ ಹಳ್ಳಕ್ಕೆ ಸಮಾನಾಂತರವಾಗಿರುವ ರಸ್ತೆಯ ಸೇತುವೆ ಎತ್ತರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆನ್ನುವ ಕನಿಷ್ಠ ಪ್ರಜ್ಞೆ ಮೂಡಲಿಲ.
ಚಿವರು ಸಾರಂಗಿ ಪಕ್ಕದ ಕೈಗೋನಹಳ್ಳಿ ಗ್ರಾಮದವರು :
ಸಚಿವ ನಾರಾಯಣಗೌಡ ಸಾರಂಗಿ ಪಕ್ಕದ ಕೈಗೋನಹಳ್ಳಿ ಗ್ರಾಮದವರು. ಕಳೆದ ಎಂಟೂವರೆ ವರ್ಷದಿಂದ ಕ್ಷೇತ್ರದ ಶಾಸಕರಾಗಿದ್ದಾರೆ. ಇದೀಗರಾಜ್ಯದ ಪ್ರಭಾವಿ ಸಚಿವರೂ ಆಗಿದ್ದಾರೆ. ಕಳೆದ ಡಿ.4ರಂದು ಸಚಿವ ನಾರಾಯಣಗೌಡರ ಸ್ವಗ್ರಾಮಕೈಗೋನಹಳ್ಳಿಯ ಯುವಕ ಉದಯಕುಮಾರ್‌ದಿಢೀರ್ ಸುರಿದ ಮಳೆಯಿಂದಾಗಿ ನೀರಿನ ರಭಸ ಹೆಚ್ಚಾದ ಪರಿಣಾಮ ಇದೇ ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿಹೋಗಿ ಮೃತಪಟ್ಟಿರುವ ದುರ್ಘಟನೆಯೂ ನಡೆದಿದೆ. ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ನಾರಾಯಣಗೌಡ ಅವರು ಕೂಡಲೇ ಇತ್ತ ಗಮನ ಹರಿಸಿ ಹಳ್ಳದ ಸಮಾನಾಂತರ ಸೇತುವೆ ಎತ್ತರಿಸಿ ತಮ್ಮ ಭಾಗದ ಗ್ರಾಮೀಣ ಜನರ ದೈನಂದಿನ ಬವಣೆ ನೀಗಿಸಲುಮುಂದಾಗಬೇಕಾಗಿದೆ ಎಂದು ಮಲ್ಲೇನಹಳ್ಳಿ ನಂಜಪ್ಪ ಆಗ್ರಹಿಸಿದ್ದಾರೆ.
ಸಾರಂಗಿ ಹಳ್ಳಕ್ಕೆ ಮೇಲು ಸೇತುವೆ ಇಲ್ಲದ ಕಾರಣ ಜನ ಹಳ್ಳದ ನೀರಿನ ನಡುವೆಯೇ ಜೀವ ಭಯದಲ್ಲಿ ಸಂಚರಿಸುತ್ತಿದ್ದಾರೆ. ಕಳೆದ 4ದಶಕಗಳಿಂದ ಈ ಭಾಗದ ಜನ ಹಳ್ಳಕ್ಕೆ ಎತ್ತರದ ಸೇತುವೆ ನಿರ್ಮಿಸುವಂತೆ ಒತ್ತಾಯಿಸುತ್ತಿದ್ದರೂ ಯಾವುದೇ ಜನಪ್ರತಿನಿಧಿಗಳು ನಮ್ಮ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ. -ಕೈಗೋನಹಳ್ಳಿ ರಮೇಶ್, ಸಾರಂಗಿ ಗ್ರಾಪಂ ಸದಸ್ಯ
-ಅಪ್ಪನಹಳ್ಳಿ ಅರುಣ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.