ಅದ್ವಾನಗೊಂಡ ನಾಲೆಗಳ ಸಂಪರ್ಕ ರಸ್ತೆ
Team Udayavani, Feb 7, 2022, 12:58 PM IST
ಮದ್ದೂರು: ನಾಲೆಗಳ ರಸ್ತೆ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ಬಿಡುಗಡೆಯಾಗಿದ್ದರೂ ಸಮರ್ಪಕವಾಗಿ ರಸ್ತೆ ಕಾಮಗಾರಿಗಳು ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ರೈತರು, ಸಾರ್ವಜನಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕಂಡು ಕಾಣದಂತೆ: ಮದ್ದೂರಮ್ಮ ಕೆರೆಯಿಂದ ನೀರೊದಗಿಸುವ ಕೆಮ್ಮಣ್ಣು ಹಾಗೂ ಭೈರನ್ ನಾಲೆಗಳ ಸಂಪರ್ಕ ರಸ್ತೆಗಳು ಅದ್ವಾನಗೊಂಡಿದ್ದು, ರಸ್ತೆ ಅಭಿವೃದ್ಧಿಗೆ ಬಿಡುಗಡೆಗೊಂಡಿರುವ ಹಣ ಮಂಜೂರಾಗಿ ಕಾಮಗಾರಿ ಆರಂಭಿಸಿದರೂ ಕಳೆದ ಮೂರುವರ್ಷಗಳಿಂದಲೂ ರಸ್ತೆ ಕಾರ್ಯ ಪೂರ್ಣಗೊಳ್ಳದೆ ಹಲವು ಅದ್ವಾನಗಳಿಗೆ ಕಾರಣವಾಗಿದ್ದರೂ ಸ್ಥಳೀಯ ಅಧಿಕಾರಿಗಳು ಕಂಡು ಕಾಣದಂತೆ ಮೌನಕ್ಕೆ ಶರಣಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಜಮೀನಿಗೆ ತೆರಳಲು ಪರದಾಟ: ಮದ್ದೂರು, ಚನ್ನೇಗೌಡನದೊಡ್ಡಿ, ದೇಶಹಳ್ಳಿ, ವಳಗೆರೆಹಳ್ಳಿ ಸಂಪರ್ಕ ಕಲ್ಪಿಸುವ ನಾಲಾ ರಸ್ತೆ ಅಭಿವೃದ್ಧಿಗೆ 30 ಲಕ್ಷ ರೂ. ಹಣ ಬಿಡುಗಡೆಯಾಗಿ ಮೂರು ವರ್ಷ ಕಳೆದಿದ್ದರೂ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ರಸ್ತೆಗೆ ಅಳವಡಿಸಿದ್ದ ಜಲ್ಲಿ, ಮಣ್ಣು, ಕಿತ್ತುನಿಂತು ಸ್ಥಳೀಯ ರೈತರು ತಮ್ಮ ಜಮೀನುಗಳಿಗೆ ತೆರಳಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಈ ಭಾಗದ ರೈತರು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯಧೋರಣೆ ಅನುಸರಿಸುತ್ತಿದ್ದು, ಕಿತ್ತು ನಿಂತಿರುವ ರಸ್ತೆಯಲ್ಲೇ ಭತ್ತ, ಕಬ್ಬ, ರಾಗಿ ಇನ್ನಿತರೆ ಬೇಸಾಯದ ಬೆಳೆಗಳನ್ನು ಸಾಗಿಸಬೇಕಾದ ಅನಿವಾರ್ಯತೆ ಬಂದೊದಗಿದೆ.
ದುರಸ್ತಿಗೆ ಮುಂದಾಗಿಲ್ಲ: ರಸ್ತೆಯ ಎರಡು ಬದಿಯಲ್ಲಿ ಆಳೆತ್ತರದ ಗಿಡಗಳು ಬೆಳೆದುನಿಂತು ಅವ್ಯವಸ್ಥೆಯ ಆಗರವಾಗಿದ್ದು ಕೆಮ್ಮಣ್ಣು ನಾಲೆ, ಭೈರನ್ ನಾಲೆಗಳಲ್ಲಿ ಆಳೆತ್ತರದ ಕಳೆ ಸಸ್ಯೆಗಳು, ಹೂಳು, ತ್ಯಾಜ್ಯ ತುಂಬಿಕೊಂಡು ದುರ್ವಾಸನೆ ಬೀರುತ್ತಿದ್ದು, ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ. ರಸ್ತೆಗಳ ಸಂಪರ್ಕ ಸೇತುವೆಗಳು ಕಿತ್ತು ಹಲವು ವರ್ಷಗಳೇ ಕಳೆದಿದ್ದರೂ ಅದರ ದುರಸ್ತಿ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗದಿರುವುದು ಶೋಚನೀಯವಾಗಿದೆ.
ನಗರಕೆರೆ, ವೈದ್ಯನಾಥಪುರ, ಮಾಲಗಾರ ನಹಳ್ಳಿ, ಚನ್ನಸಂದ್ರ, ಅಜ್ಜಹಳ್ಳಿ, ಚನ್ನೇಗೌಡನದೊಡ್ಡಿ ಹಾಗೂಮದ್ದೂರು ಪಟ್ಟಣ ವ್ಯಾಪ್ತಿಯ ರೈತರಿಗೆ ನೀರುಣಿಸುವನಾಲೆಯು ಹಲವು ಅದ್ವಾನಗಳಿಗೆ ಕಾರಣವಾಗಿದೆ.
ಕ್ರಮಕ್ಕೆ ಮುಂದಾಗಿಲ್ಲ: ನಾಲೆಗಳಿಗೆ ಪುರಸಭೆಯಯುಜಿಡಿ ಸಂಪರ್ಕದ ತ್ಯಾಜ್ಯ ನೀರು ಹಾಗೂ ಇನ್ನಿತರೆಘನ ತ್ಯಾಜ್ಯ ವಸ್ತುಗಳನ್ನು ಸ್ಥಳೀಯರುಬಿಸಾಡುತ್ತಿರುವುದರಿಂದ ನೀರು ಕಲುಷಿತಗೊಂಡುರೈತರಿಗೆ ಚರ್ಮ ವ್ಯಾಧಿ ಕಾಯಿಲೆಗಳು ಕಂಡು ಬರುವ ಜತೆಗೆ ಪಟ್ಟಣ ವ್ಯಾಪ್ತಿಯ ನಾಲಾ ಉದ್ದಗಲಕ್ಕೂ ಚರಂಡಿ ನೀರು ಬಂದು ಸೇರುತ್ತಿದ್ದರೂ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲವೆಂಬುದು ಸ್ಥಳೀಯರ ಆರೋಪ.
ನೀರು ಹರಿಸಲು ಪರದಾಟ: ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ರಸ್ತೆಯ ಎರಡು ಬದಿಯಲ್ಲಿಬೆಳೆದುನಿಂತಿರುವ ಗಿಡಗಳ ತೆರವು ಕಾರ್ಯ, ಹೂಳುತೆಗೆಸಲು ಕ್ರಮ ವಹಿಸದ ಹಿನ್ನೆಲೆಯಲ್ಲಿ ಕೊನೆಯಭಾಗದ ರೈತರು ಜಮೀನುಗಳಿಗೆ ನೀರು ಹರಿಸಲು ಪರದಾಡಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.
ಕಾಮಗಾರಿ ಪೂರ್ಣಗೊಳಿಸಿ : ಪುರಸಭೆ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಯುಜಿಡಿ ಹಾಗೂ ಚರಂಡಿ ತ್ಯಾಜ್ಯ ನೀರು ನಾಲೆಗೆ ಸೇರದಂತೆಪ್ರತ್ಯೇಕ ಯೋಜನೆ ರೂಪಿಸಿ ಈ ಭಾಗದ ರೈತರಿಗೆ ಅನುಕೂಲಕಲ್ಪಿಸುವ ಜತೆಗೆ ಎರಡು ಬದಿಯಲ್ಲಿರುವ ಗಿಡಗಳನ್ನುತೆರವುಗೊಳಿಸಿ, ಅಪೂರ್ಣಗೊಂಡಿರುವ ಕಾಮಗಾರಿಯನ್ನುಪೂರ್ಣಗೊಳಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.
ಬಿಡುಗಡೆಗೊಂಡ ಅನುದಾನ ಸರ್ಕಾರಕ್ಕೆ ವಾಪಸ್ಸಾದಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿದ್ದು, ಈಸಂಬಂಧ ಮೇಲಧಿಕಾರಿಗಳಿಗೆ ಪತ್ರ ವ್ಯವಹಾರ ಕೈಗೊಂಡುಪ್ರಸಕ್ತ ಸಾಲಿನಲ್ಲಿ ಡಿಪಿಆರ್ ಸಿದ್ಧಪಡಿಸಿ ಗಿಡ ತೆರವು ಹಾಗೂನಾಲಾ ಮತ್ತು ರಸ್ತೆ ಅಭಿವೃದ್ಧಿ ಜತೆಗೆ ಪುರಸಭೆಅಧಿಕಾರಿಗಳೊಟ್ಟಿಗೆ ಚರ್ಚಿಸಿ ಹೂಳು ತೆಗೆಸುವ ಕಾರ್ಯಕ್ಕೆ ಕ್ರಮ ವಹಿಸಲಾಗುವುದು. -ತಾರಾ, ಎಇ, ಕಾವೇರಿ ನೀರಾವರಿ ನಿಗಮ ಮದ್ದೂರು
ನಾಲೆಯ ಉದ್ದಗಲಕ್ಕೂ ಗಿಡಗಳು ಬೆಳೆದು ನಿಂತಿರುವ ಜತೆಗೆ ಮೂರು ವರ್ಷಗಳಿಂದಲೂ ಅಪೂರ್ಣಗೊಂಡಿರುವ ಕಾಮಗಾರಿಯಿಂದ ಈ ಭಾಗದರೈತರು, ಸಾರ್ವಜನಿಕರು ಸಂಚರಿಸದಂತಹ ಪರಿಸ್ಥಿತಿನಿರ್ಮಾಣಗೊಂಡಿದ್ದು, ಕಾಮಗಾರಿ ಪೂರ್ಣಗೊಳಿಸಿ ಸ್ಥಳೀಯರಿಗೆ ಅನುಕೂಲ ಕಲ್ಪಿಸಬೇಕಾಗಿದೆ. -ಎನ್.ಪಂಚಲಿಂಗಯ್ಯ, ಎಂಪಿಸಿಎಸ್ ಅಧ್ಯಕ್ಷ, ಚನ್ನೇಗೌಡನದೊಡ್ಡಿ, ಮದ್ದೂರು
-ಎಸ್.ಪುಟ್ಟಸ್ವಾಮಿ, ಮದ್ದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud Case: ಐಶ್ವರ್ಯಗೌಡ ವಂಚನೆ; ಸಂತಸ್ತರಿಗೆ ನ್ಯಾಯದ ಭರವಸೆ ನೀಡಿದ ಎಚ್‌ಡಿಕೆ
Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್”
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.