ಗ್ರಾಮಗಳಲ್ಲಿ ಸಾರಿಗೆ ಸೌಲಭ್ಯದ ಕೊರತೆ
Team Udayavani, Jul 15, 2023, 4:21 PM IST
ಮದ್ದೂರು: ತಾಲೂಕಿನ ಕೆಲ ಗ್ರಾಮೀಣ ಪ್ರದೇಶದಲ್ಲಿ ಸಾರಿಗೆ ಸೌಲಭ್ಯ ಇಲ್ಲದ ಕಾರಣ, ಸಾರ್ವಜನಿಕರು, ಗ್ರಾಮಸ್ಥರು ಪ್ಯಾಸೆಂಜರ್ ಆಟೋಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ಕಂಡು ಕಾಣದಂತೆ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮದ್ದೂರು- ಚನ್ನಪಟ್ಟಣ ಮಾರ್ಗದ ಹೆದ್ದಾರಿ ಮಾರ್ಗದ ಸರ್ವಿಸ್ ರಸ್ತೆಯಲ್ಲಿ ಪ್ಯಾಸೆಂಜರ್ ಆಟೋಗಳನ್ನೇ ಸಾರ್ವಜನಿಕರು ಅವಲಂಬಿ ಸಬೇಕಾದ ಅನಿವಾರ್ಯತೆ ಕಂಡುಬಂದಿದೆ. ಚನ್ನಪಟ್ಟಣ ಮತ್ತು ಮದ್ದೂರು ಮಾರ್ಗದ ಗ್ರಾಮೀಣ ಭಾಗದ ಸಾರ್ವಜನಿಕರು ತೆರಳಲು ದಿನನಿತ್ಯ ಪರ ದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕು ಕೇಂದ್ರಕ್ಕೆ ತೆರಳಲು ಹರಸಾಹಸ: ದಿನ ನಿತ್ಯ ಮದ್ದೂರು-ಚನ್ನ ಪಟ್ಟಣದ ತಾಲೂಕು ಕೇಂದ್ರಗಳಿಗೆ ಗ್ರಾಮೀಣ ಪ್ರದೇಶದ ರೈತರು ತಮ್ಮ ಗ್ರಾಮಗಳಿಂದ ತಾಲೂಕು ಕೇಂದ್ರಕ್ಕೆ ತೆರಳುವುದೇ ಕಷ್ಟವಾಗಿದೆ. ಕೇವಲ 18 ಕಿ.ಮೀ ಕ್ರಮಿಸಲು ಪ್ರಯಾಣಿಕರೂ ಸೇರಿದಂತೆ ಸ್ಥಳೀಯರು ಹರಸಾಹಸ ಪಡಬೇಕಾದ ಪರಿಸ್ಥಿತಿ ಎಲ್ಲೆಡೆ ಕಂಡುಬರುತ್ತಿದೆ. ಗ್ರಾಮಾಂತರದಲ್ಲಿ ಸಮರ್ಪಕವಾಗಿ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಈ ಭಾಗದ ಜನರು ಆಟೋಗಳನ್ನೇ ಅವಲಂಬಿಸ ಬೇಕಾದ ಪರಿಸ್ಥಿತಿ ಹಲವು ವರ್ಷಗಳಿಂದಲೂ ನಡೆದುಬಂದಿದೆ. ಹೆಚ್ಚು ವೆಚ್ಚ, ಅಸುರಕ್ಷಿತ ಪ್ರಯಾಣ, ನಿಗದಿಗಿಂತ ಹೆಚ್ಚು ಪ್ರಯಾಣಿ ಕರನ್ನು ಕೊಂಡೋಯ್ಯುವ ಆಟೋಗಳಲ್ಲಿ ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಸಂಚರಿಸಿ, ತಮ್ಮ ಗ್ರಾಮಗಳನ್ನು ತಲುಪುವ ಸ್ಥಿತಿ ನಿರ್ಮಾಣಗೊಂಡಿದೆ.
ಹದಗೆಟ್ಟಿದೆ ಸಂಚಾರ ವ್ಯವಸ್ಥೆ: ಈ ಹಿಂದೆ ರಸ್ತೆಯಲ್ಲಿ ಉಂಟಾಗುತ್ತಿದ್ದ ಅಪಘಾತಗಳನ್ನು ಮನಗಂಡು ಅಂದಿನ ಸರ್ಕಾರ ಕೈ ತೋರಿದಲ್ಲಿ ನಿಲ್ಲುವ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಜತೆಗೆ ರಾಮನಗರ ಡಿಪೋದಿಂದ ರಾಮನಗರ, ಮಂಡ್ಯ ಮತ್ತು ಗ್ರಾಮೀಣ ಸಾರಿಗೆ ಹೆಸರಿನಲ್ಲಿ ಮಂಡ್ಯದಿಂದ ಚನ್ನ ಪಟ್ಟಣ, ರಾಮನಗರಕ್ಕೆ ಚಲಿಸುತ್ತಿದ್ದ ಬಸ್‌ಗಳು ಇಲ್ಲದಂತಾಗಿದೆ. ಇದರಿಂದಾಗಿ ಸಂಚಾರ ವ್ಯವಸ್ಥೆ ಹದಗೆಟ್ಟಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಶೈಕ್ಷಣಿಕ ಪ್ರಗತಿ ಕುಂಠಿತ: ಕೈ ತೋರಿದಲ್ಲಿ ನಿಲುಗಡೆ ಮಾಡು ತ್ತಿದ್ದ ಸಾರಿಗೆ ವ್ಯವಸ್ಥೆ ಮಾರ್ಗದ ಸಾರ್ವಜನಿಕರಿಗೆ ಉಪಯುಕ್ತ ವಾಗುವ ಜತೆಗೆ ಹಲವು ಅನುಕೂಲಗಳು ಲಭಿಸುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಸೇವೆ ನಿಲುಗಡೆಗೊಂಡಿದೆ. ಆದ್ದರಿಂದ ಈ ಭಾಗದ ಜನರು ಭವಣೆಪಡುವಂತಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ತರಗತಿಗಳಿಗೆ ಹಾಜರಾಗದೆ ಶೈಕ್ಷಣಿಕ ಪ್ರಗತಿ ಕುಂಠಿತಗೊಳ್ಳಲು ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರಿಗೆ ಅವ್ಯವಸ್ಥೆ ಸರಿಪಡಿಸಿ: ಮದ್ದೂರು ಹಾಗೂ ಚನ್ನಪಟ್ಟಣ, ರಾಮನಗರ ಜಿಲ್ಲಾ ಕೇಂದ್ರ ಮತ್ತು ಇನ್ನಿತರೆ ಕೆಲಸ ಕಾರ್ಯಗಳಿಗೆ ತೆರಳಲು ಸಾರಿಗೆ ಬಸ್‌ಗಳ ಅವಶ್ಯಕತೆಯಿದೆ. ಅಲ್ಲದೆ, ಸಾರಿಗೆ ಸೌಲಭ್ಯದಿಂದ ಶಾಲೆ- ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದನ್ನು ಮನಗಂಡು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ಹಾಳಾಗಿರುವ ಸಾರಿಗೆ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಗ್ರಾಮೀಣ ಜನರು ಆಗ್ರಹಿಸಿದ್ದಾರೆ.
ಮದ್ದೂರಿನಿಂದ ಚನ್ನಪಟ್ಟಣ, ರಾಮನಗರ ಇನ್ನಿತರ ಗ್ರಾಮಗಳಿಗೆ ನಿತ್ಯ ನೂರಾರು ಜನರ ಸಂಚಾರಕ್ಕೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕಿದೆ. ಈ ಭಾಗದ ಜನರಿಗೆ ಅನುಕೂಲ ಕಲ್ಪಿಸುವ ಜತೆಗೆ ಈ ಮಾರ್ಗದಲ್ಲಿ ಕಂಡುಬಂದಿರುವ ಹಲವು ಅವ್ಯವಸ್ಥೆಗಳನ್ನು ಸರಿಪಡಿಸಿ, ಸುಗಮ ಸಂಚಾರಕ್ಕೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅಗತ್ಯ ಕ್ರಮವಹಿಸಬೇಕಿದೆ. ● ಬೋರಯ್ಯ, ಗೊರವನಹಳ್ಳಿ, ಮದ್ದೂರು ತಾಲೂಕು
ಎಸ್. ಪುಟ್ಟಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.