ಉತ್ತಮ ಮಳೆಯಿಂದ ಕೆರೆಕಟ್ಟೆಗಳು ಭರ್ತಿ

ಕೆರೆ ಪ್ರಗತಿಗೆ ಬಳಕೆಯಾಗದ 1.33 ಕೋಟಿ ರೂ. ಅನುದಾನ

Team Udayavani, Oct 19, 2020, 3:45 PM IST

mandya-tdy-1

ಮಂಡ್ಯ: ಜಿಲ್ಲೆಯಲ್ಲಿ ಉತ್ತಮ ಮಳೆಯಿಂದ ಕೆರೆಕಟ್ಟೆಗಳು ಭರ್ತಿಯಾಗಿದ್ದು, ನಳನಳಿಸುತ್ತಿವೆ. ಅಲ್ಲದೆ, ಜಿಲ್ಲೆಯ ಜೀವನಾಡಿಯಾಗಿರುವ ಕೃಷ್ಣರಾಜಸಾಗರಜಲಾಶಯ ತುಂಬಿದ್ದು, ನಾಲೆಗಳ ಮೂಲಕ ಕೆರೆಗಳನ್ನುತುಂಬಿಸಲಾಗಿದೆ. ಆದರೆ, ಕೆರೆ ಅಭಿವೃದ್ಧಿಗೆ ಮೀಸಲಾಗಿರುವ ಹಣ ಮಾತ್ರ ಹಾಗೆಯೇ ಉಳಿದಿದೆ.

848 ಕೆರೆ-ಕಟ್ಟೆಗಳು: ಜಿಲ್ಲೆಯಲ್ಲಿ ಒಟ್ಟು 848 ಕೆರೆ-ಕಟ್ಟೆಗಳಿವೆ. ಜಿಪಂ ವ್ಯಾಪ್ತಿಯಲ್ಲಿ 580 ಕೆರೆ-ಕಟ್ಟೆಗಳು, ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ 48 ಹಾಗೂ ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ220ಕೆರೆಗಳಿವೆ.40 ಹೆಕ್ಟೇರ್‌ ಪ್ರದೇಶದ ಕೆರೆಗಳು ಜಿಪಂ ವ್ಯಾಪ್ತಿಗೆಬರಲಿವೆ. 40 ಹೆಕ್ಟೇರ್‌ಗಿಂತ ಹೆಚ್ಚಿರುವ ಕೆರೆಗಳು ಸಣ್ಣನೀರಾವರಿ ಇಲಾಖೆ ವ್ಯಾಪ್ತಿಗೆ ಬರಲಿದೆ. ಉಳಿದಂತೆ100 ಹೆಕ್ಟೇರ್‌ಗಿಂತ ಹೆಚ್ಚಿರುವ ಕೆರೆಗಳು ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಬರಲಿವೆ. ಜಿಪಂ ವ್ಯಾಪ್ತಿಯ ಕೆರೆಗಳ ಒಟ್ಟು ವಿಸ್ತೀರ್ಣ 5072.90 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶ ಬರಲಿದೆ.

ತಾಲೂಕಿನ ಕೆರೆಗಳು: ಮಂಡ್ಯ 75, ಕೆ.ಆರ್‌.ಪೇಟೆ 169, ಮದ್ದೂರು 83, ಮಳವಳ್ಳಿ 27, ನಾಗಮಂಗಲ104, ಪಾಂಡವಪುರ 82 ಹಾಗೂ ಶ್ರೀರಂಗಪಟ್ಟಣ 40 ಕೆರೆಗಳಿವೆ. ಇವುಗಳಲ್ಲಿ ಶೇ.100ರಷ್ಟು 323 ಕೆರೆಗಳು ಭರ್ತಿಯಾಗಿವೆ. 226 ಕೆರೆಗಳು ಶೇ.80ರಷ್ಟು ತುಂಬಿವೆ. ಕೆ.ಆರ್‌.ಪೇಟೆ, ನಾಗಮಂಗಲ, ಪಾಂಡವಪುರ, ಮಳವಳ್ಳಿ, ಶ್ರೀರಂಗಪಟ್ಟಣದ ಬಹುತೇಕ ಎಲ್ಲ ಕೆರೆಗಳು ಭರ್ತಿಯಾಗಿವೆ. ಇನ್ನುಳಿದಂತೆ ಮದ್ದೂರು 15, ಮಂಡ್ಯ 12, ನಾಗಮಂಗಲ 4 ಕೆರೆಗಳು ಸೇರಿದಂತೆ ಒಟ್ಟು 31 ಕೆರೆಗಳು ನೀರಿಲ್ಲದೆ ಭಣಗುಡುತ್ತಿವೆ.

ಸಣ್ಣ ನೀರಾವರಿ ಇಲಾಖೆ ಕೆರೆಗಳು: ಮದ್ದೂರು 10,ಮಳವಳ್ಳಿ 7, ಕೆ.ಆರ್‌.ಪೇಟೆ 8, ನಾಗಮಂಗಲ 20ಹಾಗೂ ಪಾಂಡವಪುರದ 3 ಕೆರೆಗಳು ಬರಲಿದ್ದು, ಬಹುತೇಕ ಎಲ್ಲ ಕೆರೆಗಳು ಶೇ.80ರಷ್ಟು ತುಂಬಿವೆ.ಆದರೆ, ಮಂಡ್ಯ ಹಾಗೂ ಶ್ರೀರಂಗಪಟ್ಟಣತಾಲೂಕುಗಳಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳಿಲ್ಲ.

ಕೆರೆಗಳು ಸಂಪೂರ್ಣ ಭರ್ತಿ: ಮಂಡ್ಯ, ಮದ್ದೂರು, ಮಳವಳ್ಳಿ, ಪಾಂಡವಪುರ, ಕೆ.ಆರ್‌.ಪೇಟೆ,ನಾಗಮಂಗಲ ಹಾಗೂ ಶ್ರೀರಂಗಪಟ್ಟಣ ಸೇರಿದಂತೆ 220ಕ್ಕೂ ಹೆಚ್ಚು ಕೆರೆಗಳು ಬರಲಿದ್ದು, ಎಲ್ಲ ಕೆರೆಗಳನ್ನು ಕೃಷ್ಣರಾಜಸಾಗರ ಜಲಾಶಯ ಹಾಗೂ ಹೇಮಾವತಿನಾಲೆಗಳಿಂದ ನೀರು ಹರಿಸಲಾಗಿದ್ದು, ಸಂಪೂರ್ಣ ಭರ್ತಿಯಾಗಿವೆ.

ಬಳಕೆಯಾಗದ ಅನುದಾನ: ಕಳೆದ ಒಂದು ವರ್ಷದಿಂದ ಜಿಪಂ ಹಣಕಾಸು ಸ್ಥಾಯಿ ಸಮಿತಿ ಹಾಗೂ ಸಾಮಾನ್ಯ ಸಭೆಗಳು ನಡೆಯದ ಪರಿಣಾಮಕೆರೆಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ 1.33 ಕೋಟಿ ರೂ. ಅನುದಾನ ಬಳಕೆಯಾಗದೆ ಉಳಿದಿದೆ. ಈವರ್ಷ ಉತ್ತಮ ಮಳೆಯಾಗಿದ್ದು, ಕೆರೆ-ಕಟ್ಟೆಗಳುತುಂಬಿವೆ. ಆದರೆ ಕೆರೆಗಳನ್ನು ಅಭಿವೃದ್ಧಿಪಡಿಸಲು ಅನುದಾನ ಹಂಚಿಕೆಯಾಗದ ಹಿನ್ನೆಲೆಯಲ್ಲಿ ಅನುದಾನ ಬಳಕೆಯಾಗಿಲ್ಲ. ಇದರಿಂದ ಕೆರೆ-ಕಟ್ಟೆಗಳು ಅಭಿವೃದ್ಧಿಯಾಗಿಲ್ಲ.

ನೀರು ಬಳಕೆದಾರರ ಸಂಘದ ಬಲವರ್ಧನೆಗೆ ಅಡ್ಡಿ : ಕೆಆರ್‌ಎಸ್‌ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳ ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿದೆ. ಈ ಸಹಕಾರ ಸಂಘವು ನೀರಾವರಿಕಾಯ್ದೆ2000ರ ತಿದ್ದುಪಡಿಕಾಯ್ದೆಯಂತೆ ನಾಲೆ ಹಾಗೂ ವಿತರಣೆ ನಾಲೆಗಳ ಮೂಲಕ  ಹರಿಯುವ ನೀರನ್ನು ಕೊನೇ ಭಾಗದ ರೈತರಿಗೂ ನೀರು ಹಂಚಿಕೆ ಮಾಡುವ ಮೂಲಕ ತಲುಪಿಸುವ ಕೆಲಸ ಮಾಡಲಾಗುತ್ತದೆ. ಒಳಗಾಲುವೆ, ವಿತರಣೆ ನಾಲೆಗಳ ನಿರ್ವಹಣೆ ಮಾಡುವ ಮೂಲಕ ರೈತರ ಜಮೀನುಗಳಿಗೆ ನೀರು ಹರಿಸಿ ಬಹುಬೆಳೆಗಳ ಬೆಳೆಯುವಂತೆ ನೋಡಿಕೊಳ್ಳುತ್ತದೆ. ಹಿಂದೆ ನೀರು ಹಂಚಿಕೆಗಾಗಿ ಕೊಲೆ, ಗಲಾಟೆ,ಜಗಳಗಳು ರೈತರನಡುವೆ ನಡೆಯುತ್ತಿದ್ದವು. ಆ ಘಟನೆಗಳನ್ನು ತಡೆಗಟ್ಟಲು ಸಹಕಾರ ಮಹಾಮಂಡಳ ರಚನೆಯಾಗಿದ್ದು, ಇದರ ವ್ಯಾಪ್ತಿಗೆ ಕಾಡಾ, ಕಾವೇರಿ ನೀರಾವರಿ ನಿಗಮ, ಸಹಕಾರ ಇಲಾಖೆಗಳು ಬರಲಿದೆ. ಆದರೆ ಕೆಲವುತಾಂತ್ರಿಕ ಅಧಿಕಾರಿಗಳುಸಂಘದ ಬಲವರ್ಧನೆ ಮಾಡಲು ಬಿಡುತ್ತಿಲ್ಲ. ಪ್ರತೀ ವರ್ಷ ವಿತರಣೆ ನಾಲೆ ಹಾಗೂ ಒಳಗಾಲುವೆಗಳ ನಿರ್ವಹಣೆಗೆ 5 ಲಕ್ಷ ರೂ. ಬರಲಿದೆ. ಆದರೆ ಅದನ್ನು ಅಧಿಕಾರಿಗಳೇ ನಿರ್ವಹಿಸುತ್ತಾರೆ. ನೀರು ಬಳಕೆದಾರರಸಹಕಾರಸಂಘಕಾರ್ಯನಿರ್ವಹಿಸಲು ಬಿಡುವುದಿಲ್ಲ ಎಂದು ಸಂಘದ ಉಪಾಧ್ಯಕ್ಷ ಮಂಗಲ ಯೋಗೇಶ್‌ ಹೇಳಿದರು.

ಒತ್ತುವರಿಗಿಲ್ಲಕ್ರಮ :  ಜಿಲ್ಲೆಯಲ್ಲಿ ಸಾಕಷ್ಟು ಕೆರೆಗಳು ಒತ್ತುವರಿಯಾಗಿವೆ. ಆದರೆ, ಒತ್ತುವರಿ ತೆರವು ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಂಡರೂ ಸಂಪೂರ್ಣವಾಗಿ ಕೆರೆಗಳನ್ನು ಒತ್ತುವರಿ ತೆರವು ಮಾಡಲು ಸಾಧ್ಯವಾಗಿಲ್ಲ. ಜಿಲ್ಲಾಡಳಿತಕ್ರಮ ಪರಿಣಾಮಕಾರಿ ಯಾಗಿಆಗುತ್ತಿಲ್ಲ.ಅಲ್ಲಿನಗ್ರಾಮಸ್ಥರ ಅಸಹಕಾರ ಒತ್ತುವರಿ ತೆರವಿಗೆ ತೊಡಕಾಗಿ ಪರಿಣಮಿಸಿದೆ. ಈಗಾಗಲೇಕೆಲವು ಕೆರೆಗಳ ಒತ್ತುವರಿಯನ್ನು ಗ್ರಾಮಸ್ಥರ ಮನವೊಲಿಸಿ ತೆರವುಗೊಳಿಸಲಾಗಿದೆ.ಇನ್ನೂ ಸಾಕಷ್ಟು ಕೆರೆಗಳು ಒತ್ತುವರಿಯಾಗಿದ್ದು, ವರ್ಷದಿಂದ ವರ್ಷಕ್ಕೆ ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ. ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗದಿಂದ ಸುಮಾರು35ಕೆರೆಗಳ ಒತ್ತುವರಿ ಸರ್ವೆ ನಡೆಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಕೃಷಿ, ಜಾನುವಾರುಗಳಿಗೆ ಅನುಕೂಲ :  ಮಂಡ್ಯ, ಪಾಂಡವಪುರ, ನಾಗಮಂಗಲ, ಮಳವಳ್ಳಿ ಹಾಗೂ ಕೆ.ಆರ್‌.ಪೇಟೆ ತಾಲ್ಲೂಕುಗಳಲ್ಲಿ ಬಹುತೇಕಕೆರೆಗಳು ಭರ್ತಿಯಾಗಿದ್ದು, ರೈತರಕೃಷಿ ಚಟುವಟಿಕೆಗಳಿಗೆ ಹಾಗೂ ಜಾನುವಾರುಗಳ ಕುಡಿಯುವ ನೀರಿಗೆ ಅನುಕೂಲವಾಗಿದೆ. ಇಲ್ಲಿನ ಶಾಸಕರ ನಿರಂತರ ಶ್ರಮದಿಂದಕಾವೇರಿ ಹಾಗೂ ಹೇಮಾವತಿ ನಾಲೆಗಳಿಂದಕೆರೆಗಳು ಭರ್ತಿಯಾಗಿವೆ

ಉದ್ಯೋಗ ಖಾತ್ರಿಯಡಿ ಅಭಿವೃದ್ಧಿ : ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗದಿಂದಕೆರೆಗಳ ಅಭಿವೃದ್ಧಿಗೆಕ್ರಮಕೈಗೊಳ್ಳಲಾಗಿದೆ.ಕೆರೆ ಹೂಳೆತ್ತಿಸುವುದು, ನೀರಿನ ಸಂಗ್ರಹಹೆಚ್ಚಿಸುವುದು, ಗಿಡಗಂಟೆಗಳ ತೆರವು ಮಾಡಿ ಮಳೆ ನೀರು ಸಂಗ್ರಹವಾಗಲು ಅನುಕೂಲ ಮಾಡಲಾಗುವುದು. ಇದರಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಜನರಿಗೆ ಉದ್ಯೋಗ ನೀಡಲಾಗುತ್ತದೆ.ಕೋವಿಡ್ ದಿಂದ ಈಗಾಗಲೇ ಜಿಲ್ಲೆಗೆ ವಲಸಿಗರು ಆಗಮಿಸಿದ್ದು, ಬಹುತೇಕರಿಗೆ ಉದ್ಯೋಗಖಾತ್ರಿ ಯೋಜನೆಯಡಿ ಉದ್ಯೋಗ ದೊರೆತಿದೆ. ಅದಕ್ಕಾಗಿ ಸರ್ಕಾರದ ಅನುದಾನ ಬರಬೇಕಾಗಿದೆ

ಕೆರೆಗಳ ಅಭಿವೃದ್ಧಿಗೆಕ್ರಮ ವಹಿಸಲಾಗಿದೆ. ಉದ್ಯೋಗಖಾತ್ರಿ ಯೋಜನೆಯಡಿ ಕೆರೆಗಳ ಹೂಳೆತ್ತಿ, ಗಿಡಗಂಟಿಗಳನ್ನು ತೆರವುಗೊಳಿಸಿ ನೀರು ಸಂಗ್ರಹ ಹೆಚ್ಚಳ ಮಾಡಲುಕ್ರಮವಹಿಸಲಾಗಿದೆ. ಅದರಂತೆಕೆರೆಗಳ ಒತ್ತುವರಿ ಬಗ್ಗೆ ಸರ್ವೆ ನಡೆಸಿ ಸರ್ಕಾರಕ್ಕೆಕಳುಹಿಸಲಾಗಿದೆ. ಎಸ್‌.ವಿ.ಪದ್ಮನಾಭ, ಕಾರ್ಯಪಾಲಕ ಅಭಿಯಂತರರು, ಪಂಚಾಯತ್‌ರಾಜ್‌ ಇಂಜಿನಿಯರಿಂಗ್‌ ವಿಭಾಗ, ಮಂಡ್ಯ

ಜಿಲ್ಲೆಯಲ್ಲಿರುವ ನಾಲಾ ವ್ಯಾಪ್ತಿಗೆ ಬರುವ 220 ಕೆರೆಗಳನ್ನು ಸಂಪೂರ್ಣವಾಗಿ ತುಂಬಿಸಲಾಗಿದೆ. ಇದರಿಂದ ಆ ಭಾಗದ ಕೃಷಿ ಚಟುವಟಿಕೆಗಳಿಗೆ, ಜನ-ಜಾನುವಾರುಗಳಕುಡಿಯುವ ನೀರಿಗೆ ತೊಂದರೆಯಾಗದಂತೆಕ್ರಮ ವಹಿಸಲಾಗಿದೆ. -ವಿಜಯ್‌ಕುಮಾರ್‌, ಅಧೀಕ್ಷಕ ಇಂಜಿನಿಯರ್‌, ಕಾವೇರಿ ನೀರಾವರಿ ನಿಗಮ, ಮಂಡ್ಯ

 

-ಎಚ್‌.ಶಿವರಾಜು

ಟಾಪ್ ನ್ಯೂಸ್

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ

Suicide 3

Maddur; ಕೆಲಸದ ಒತ್ತಡ: ಎಂಜಿನಿಯರ್‌ ಆತ್ಮಹ*ತ್ಯೆ

Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ

Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ

13

Mandya: ಬಹುಮಾನ ಗೆದ್ದ ಹಳ್ಳಿಕಾರ್‌ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!

Pandavapura: A cow gave birth to three calves

Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.