ಚುನಾವಣೆ: ಮದ್ಯ ಮಾರಾಟ ಕುಸಿತ
Team Udayavani, May 22, 2023, 4:51 PM IST
ಮಂಡ್ಯ: ಜಿಲ್ಲೆಯಲ್ಲಿ ಪ್ರತಿ ತಿಂಗಳು ಅತಿ ಹೆಚ್ಚು ಮದ್ಯ ಮಾರಾಟವಾಗುತ್ತಿದ್ದು, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೇ ಅಬಕಾರಿ ಇಲಾಖೆಗೆ ನಷ್ಟ ಸಂಭವಿಸಿದೆ. ಜಿಲ್ಲೆಯಿಂದ ಪ್ರತಿ ತಿಂಗಳು ಕೋಟ್ಯಂತರ ರೂ. ಆದಾಯವಿದೆ. ಆದರೆ, ಈ ಬಾರಿ ನಷ್ಟವಾಗಿದೆ ಎಂದು ಜಿಲ್ಲಾ ಅಬಕಾರಿ ಇಲಾಖೆ ಮಾಹಿತಿ ನೀಡಿದೆ.
ಚುನಾವಣೆ ಸಂದರ್ಭದಲ್ಲಿ ಮದ್ಯ ಮಾರಾಟ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಮೂರು ದಿನ ಒಣ ದಿನಗಳೆಂದು ಘೋಷಣೆ ಮಾಡಿ ಮದ್ಯ ಮಾರಾಟ, ಸಾಗಾಣಿಕೆ ನಿಷೇಧ ಮಾಡಲಾಗಿತ್ತು. ಇದರಿಂದ ಮದ್ಯ ಮಾರಾಟದಲ್ಲಿ ಕುಸಿತ ಕಂಡಿದೆ.
ಶೇ.105ರಷ್ಟು ಮದ್ಯ ಮಾರಾಟ: ಚುನಾವಣೆ ಘೋಷಣೆಯಾದ ಮಾ.29ರಿಂದ 31ರವರೆಗೆ 23,336 ಲೀಟರ್ ಮದ್ಯ ಮಾರಾಟವಾಗಿದೆ. ಕಳೆದ ವರ್ಷ 31,665 ಲೀಟರ್ ಮದ್ಯ ಮಾರಾಟವಾಗಿತ್ತು. ಕಳೆದ ಸಾಲಿಗಿಂತ ಈ ಬಾರಿ 8329 ಲೀಟರ್ ಮದ್ಯ ಮಾರಾಟ ಕುಸಿತವಾಗಿದೆ. ಅದರಂತೆ ಏ.1ರಿಂದ 30ರವರೆಗೆ 1,60,702 ಲೀಟರ್ ಮದ್ಯ ಮಾರಾಟವಾಗಿದೆ. ಕಳೆದ ವರ್ಷ 1,59,540 ಲೀಟರ್ ಮದ್ಯ ಮಾರಾಟವಾಗಿತ್ತು. 1162 ಲೀಟರ್ ಹೆಚ್ಚುವರಿ ಮಾರಾಟವಾಗಿದೆ. ಅದರಂತೆ ಮೇ 1ರಿಂದ 8ರವರೆಗೆ 55,669 ಲೀಟರ್ ಮಾರಾಟವಾಗಿದ್ದರೆ, ಕಳೆದ ವರ್ಷ 35661 ಲೀಟರ್ ಮಾರಾಟವಾಗಿತ್ತು. ಈ ಬಾರಿ 20,008 ಲೀಟರ್ ಮಾರಾಟವಾಗಿದೆ. ಒಟ್ಟಾರೆ ಶೇ.105.66ರಷ್ಟು ಮದ್ಯ ಮಾರಾಟವಾಗಿದೆ.
ಶೇ.98ರಷ್ಟು ಬಿಯರ್ ಮಾರಾಟ: ಮಾ.29ರಿಂದ 31ರವರೆಗೆ 13515 ಲೀಟರ್ ಬಿಯರ್ ಮಾರಾಟ ವಾಗಿದ್ದರೆ, ಕಳೆದ ವರ್ಷ 22427 ಲೀಟರ್ ಬಿಯರ್ ಮಾರಾಟವಾಗಿತ್ತು. ಕಳೆದ ವರ್ಷಕ್ಕಿಂತ 8912 ಲೀಟರ್ ಕಡಿಮೆ ಮಾರಾಟವಾಗಿದೆ. ಏ.1ರಿಂದ 30ರವರೆಗೆ 1,02,148 ಲೀಟರ್ ಮಾರಾಟವಾಗಿದ್ದರೆ, ಕಳೆದ 1,03,083 ಲೀಟರ್ ಮಾರಾಟವಾಗಿತ್ತು. ಈ ಬಾರಿ 935 ಲೀಟರ್ ಕಡಿಮೆ ಮಾರಾಟವಾಗಿದೆ. ಮೇ 1ರಿಂದ 8ರವರೆಗೆ 26010 ಲೀಟರ್ ಮಾರಾಟ ವಾಗಿದ್ದು, ಕಳೆದ ವರ್ಷಕ್ಕಿಂತ 8408 ಲೀಟರ್ ಬಿಯರ್ ಹೆಚ್ಚು ಮಾರಾ ಟವಾಗಿದೆ. ಒಟ್ಟು ಶೇ.98.99ರಷ್ಟು ಬಿಯರ್ ಮಾರಾಟ ವಾಗಿದೆ. ಮದ್ಯ ಮಾರಾಟದಲ್ಲಿ ಚುನಾವಣೆ ಸಂದರ್ಭ ದಲ್ಲಿ ಒಟ್ಟು 12841 ಹೆಚ್ಚು ಮಾರಾಟವಾಗಿದ್ದರೆ, ಬಿಯರ್ 1439 ಲೀಟರ್ ಕಡಿಮೆ ಮಾರಾಟವಾಗಿದೆ.
ಐದಾರು ಕೋಟಿ ರೂ. ನಷ್ಟ: ಪ್ರತಿ ತಿಂಗಳು ಸಹ ಮಂಡ್ಯ ಜಿಲ್ಲೆಯಲ್ಲಿ ಒಟ್ಟು 65ರಿಂದ 67 ಕೋಟಿ ರೂ. ಅಬಕಾರಿ ಇಲಾಖೆಯಿಂದ ಆದಾಯ ಬರುತ್ತಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಮೂರ್‍ನಾಲ್ಕು ದಿನ ಒಣ ದಿನವಾಗಿ ಘೋಷಣೆ ಮಾಡಿದ್ದರಿಂದ ಇಲಾಖೆಗೆ ಐದಾರು ಕೋಟಿ ನಷ್ಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮೂರ್‍ನಾಲ್ಕು ಕೋಟಿ ಇಲಾ ಖೆಗೆ ನಷ್ಟವೇ ಆಗಿದ್ದು, ಒಣದಿನ ಘೋಷಣೆಯಿಂದ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
3.34 ಕೋಟಿ ಮೌಲ್ಯದ ಅಕ್ರಮ ಮದ್ಯ ವಶ: ಮಾ.29ರಿಂದ ಮೇ 15ರವರೆಗೆ ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿ 3,34,22,240 ರೂ. ಮೌಲ್ಯದ ಅಕ್ರಮ ಮದ್ಯ, ಬಿಯರ್ ಗಾಂಜಾ, ಸೇಂದಿ ವಶಪಡಿಸಲಾಗಿದೆ. ಇದರಲ್ಲಿ 1250 ಕಿ.ಗ್ರಾಂ ಒಣ ಗಾಂಜಾ, 12 ಗಾಂಜಾ ಗಿಡ, 30 ಲೀಟರ್ ಸೇಂದಿ, 21144 ಲೀಟರ್ ಮದ್ಯ ಹಾಗೂ 88827 ಲೀಟರ್ ಬಿಯರ್ ಸೇರಿ ಒಟ್ಟು 1350 ಪ್ರಕರಣಗಳನ್ನು ದಾಖಲಿಸಿ 1106 ಮಂದಿ ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸಲಾಗುತ್ತಿದೆ ರಿದಲ್ಲಿ 126 ದ್ವಿಚಕ್ರ ವಾಹನ, 5 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ 210 ಗಂಭೀರ ಪ್ರಕರಣದಲ್ಲಿ ಹಲವರನ್ನು ಬಂಧಿಸಿದ್ದು, 172 ಪ್ರಕರಣದಲ್ಲಿ ವೈನ್ ಸ್ಟೋರ್‌ಗಳ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜೊತೆಗೆ 1284 ಕಿರಾಣಿ ಅಂಗಡಿಗಳ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ನಕಲಿ ಮದ್ಯ ನಿಯಂತ್ರಣಕ್ಕೆ ಕ್ರಮ: ಡಾ.ಮಹಾದೇವಿ: ಪ್ರಸ್ತುತ ನಡೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಒಟ್ಟು 3.34 ಕೋಟಿ ರೂ. ಮೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಫೆಬ್ರವರಿ 18ರಿಂದಲೇ ಅಕ್ರಮ ಮದ್ಯ ಸಾಗಾಣಿಕೆ ಹಾಗೂ ಮಾರಾಟದ ಬಗ್ಗೆ ಗಮನ ಹರಿಸುವಂತೆ ರಾಜ್ಯ ಅಬಕಾರಿ ಆಯುಕ್ತರಿಂದ ಸೂಚನೆ ಬಂದ ಹಿನ್ನಲೆಯಲ್ಲಿ ಫೆ.18ರಿಂದ ಮೇ 15ರವರೆಗೆ ಜಿಲ್ಲೆಯಲ್ಲಿ ಅಕ್ರಮ ಮದ್ಯ ಸಾಗಾಣಿಕೆ, ಮಾರಾಟದ ಮೇಲೆ ಇಲಾಖೆಯ ಅಧಿಕಾರಿಗಳು ಕಣ್ಣಿಟ್ಟಿದ್ದರು. ಜಿಲ್ಲೆಯಲ್ಲಿ ನಕಲಿ ಮದ್ಯ ಹಾವಳಿ ಇಲ್ಲ. ನಕಲಿ ಮದ್ಯ ತಡೆಗೆ ನಮ್ಮ ತಂಡ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಒಂದು ವೇಳೆ ನಕಲಿ ಮದ್ಯ ಕಂಡು ಬಂದರೆ, ಬಾರ್ ಅಥವಾ ವೈನ್ ಸ್ಟೋರ್ ಮಾಲೀಕರ ಮೇಲೆ ನಿರ್ಧಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುವುದು. ಕೆಲವೆಡೆ ದುಬಾರಿ ದರದ ಮದ್ಯಕ್ಕೆ ಕಡಿಮೆ ದರದ ಮದ್ಯ ಮಿಶ್ರಣದ ಬಗ್ಗೆ ಈ ಹಿಂದೆ ಆರೋಪಗಳು ಕೇಳಿ ಬಂದಿದ್ದವು. ಇದೀಗ ಆ ತರಹದ ಘಟನೆ ಯಾವುದು ಇಲ್ಲ. ಹಾಗೊಂದು ವೇಳೆ ನಡೆಯುತ್ತಿದ್ದರೆ ನಮಗೆ ದೂರು ಬಂದಲ್ಲಿ ಆ ಮದ್ಯಗಳನ್ನು ಲ್ಯಾಬ್‌ಗ ತಪಾಸಣೆಗೆ ಕಳುಹಿಸಿ, ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಉಪ ಆಯುಕ್ತೆ ಡಾ.ಮಹಾದೇವಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.