Lok Sabha Election; ಸುಮಲತಾ ನಡೆ ಬಗ್ಗೆ ಕುತೂಹಲ
Team Udayavani, Mar 14, 2024, 12:34 AM IST
ಮಂಡ್ಯ: ಲೋಕಸಭೆ ಚುನಾವಣೆಯ ಮೈತ್ರಿ ಅಭ್ಯರ್ಥಿ ಹಾಗೂ ಮಂಡ್ಯ ಕ್ಷೇತ್ರ ಜೆಡಿಎಸ್ ತೆಕ್ಕೆಗೆ ಖಚಿತವಾಗಿದ್ದು, ಸಂಸದೆ ಸುಮಲತಾ ಅವರ ಮುಂದಿನ ನಡೆ ಏನೆಂಬ ಪ್ರಶ್ನೆ ಎದ್ದಿದೆ.
ಕುಮಾರಸ್ವಾಮಿ ಮಂಡ್ಯ, ಹಾಸನ ಹಾಗೂ ತುಮಕೂರು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿ ಗಳು ಸ್ಪರ್ಧಿಸಲಿದ್ದಾರೆಂದು ಹೇಳಿರುವುದು ಮಂಡ್ಯ ಕ್ಷೇತ್ರ ಜೆಡಿಎಸ್‌ಗೆ ಎಂಬುದು ಖಚಿತವಾದಂತಾಗಿದೆ.
ಈ ಬೆನ್ನಲ್ಲೇ, ಜಿಲ್ಲೆಯ ದಳಪತಿಗಳು ಮಾ.15ರಂದು ಮಂಡ್ಯದಲ್ಲಿ ಕಾರ್ಯಕರ್ತರ ಸಭೆ ನಡೆಸಲು ಮುಂದಾಗಿದ್ದಾರೆ.
ಮೊದಲಿನಿಂದಲೂ ಮಂಡ್ಯ ಕ್ಷೇತ್ರ ಬಿಜೆಪಿ ಉಳಿಸಿಕೊಳ್ಳಲಿದ್ದು, ನನಗೆ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸದಿಂದಿದ್ದ ಸಂಸದೆ ಸುಮಲತಾಗೆ ಹಿನ್ನೆಡೆ ಯಾದಂತಾಗಿದೆ. ಅವರ ಮುಂದಿನ ನಡೆಯೇನು ಎಂಬುದು ಚರ್ಚೆಯಾಗುತ್ತಿದೆ. ಕ್ಷೇತ್ರದ ಟಿಕೆಟ್ ಸುಮಲತಾಗೇ ನೀಡಬೇಕು ಎಂದು ಮಾಜಿ ಸಚಿವ ಕೆ.ಸಿ.ನಾರಾಯಣ ಗೌಡ ಹಲವು ಬಾರಿ ಹೇಳಿದ್ದರು. ಈಗ ಕ್ಷೇತ್ರ ಜೆಡಿಎಸ್ ಪಾಲಾಗುವುದರಿಂದ ಅವರು ಪಕ್ಷದಲ್ಲಿ ಉಳಿಯುತ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.